ಟೀಮ್ ಇಂಡಿಯಾದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಅವರು ಆಸ್ಟ್ರಲಿಯಾ ಪ್ರವಾಸದ ಬಳಿಕ ಏಕದಿನ ಫಾರ್ಮೆಟ್‌ಗೆ ವಿದಾಯ ಹೇಳುತ್ತಾರೆ ಎಂ ಚರ್ಚೆಗಳು ಆರಂಭವಾಗಿವೆ. ಈ ಇಬ್ಬರೂ ಸೂಪರ್ ಸ್ಟಾರ್ ಆಟಗಾರರು ಮುಂದಿನ ಏಕದಿನ ವಿಶ್ವಕಪ್ ಆಡುವುದಿಲ್ಲವೇ ಎಂಬ ಪ್ರಶ್ನೆ ಎದುರಾಗಿದೆ. ಇದಕ್ಕೆ ಸಂಬಧಿಸಿದಂತೆ ಹಲವು ಮಾಜಿ ಆಟಗಾರರು ತಮ್ಮ ತಮ್ಮ ಅಭಿಪ್ರಾಯ ನೀಡಿದ್ದಾರೆ. ಈಗ ಬಿಸಿಸಿಐ ಈ ಬಗ್ಗೆ ತನ್ನ ನಿಲುವನ್ನು ಸ್ಪಷ್ಟ ಪಡಿಸಿದೆ.
ಆಸ್ಟ್ರೇಲಯಾ ಪ್ರವಾಸವೇ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಅವರಿಗೆ ಕೊನೆಯ ಏಕದಿನ ಸರಣಿ ಆಗಬಹುದು ಎಂದು ದೈನಿಕ್ ಜಾಗರಣ್ ವರದಿ ಮಾಡಿದ ಬಳಿಕ ಈ ಬಗ್ಗೆ ಚರ್ಚೆಗಳು ಆರಂಭವಾದವು. ವಿರಾಟ್ ಹಾಗೂ ರೋಹಿತ್ ಈಗಾಗಲೇ ಟಿ20 ಹಾಗೂ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ.ಇನ್ನು ಈ ನಡುವೆ ಇನ್ನೊಂದು ಸುದ್ದಿ ಬರುತ್ತಿದೆ. ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಅಂತಾರಾಷ್ಟ್ರೀಯ ಏಕದಿನ ಪಂದ್ಯಗಳನ್ನು ಆಡುವ ಮನಸ್ಸು ಹೊಂದಿದ್ದರೆ ಅವರಿಬ್ಬರೂ,ದೇಶೀಯ ಏಕದಿನ ಟೂರ್ನಿಯಾದ ವಿಜಯ್ ಹಜಾರೆಯಲ್ಲಿ ಆಡಬೇಕು ಎಂದು ವರದಿಗಳು ಮುಂದೆ ಬಂದಿವೆ.

ಇನ್ನು ಈ ಬಗ್ಗೆ ಬಿಸಿಸಿಐ ಮಾಜಿ ಅಧ್ಯಕ್ಷ ಸೌರವ್ ಗಂಗೂಲಿ ಮಾತನಾಡಿದ್ದಾರೆ. ಇವರು ವಿರಾಟ್ ಹಾಗೂ ರೋಹಿತ್ ಶರ್ಮಾ ಏಕದಿನ ಫಾರ್ಮೆಟ್‌ನ ಸ್ಟಾರ್ ಆಟಗಾರರು. ಅವರ ಫಾರ್ಮ್ ಉತ್ತಮವಾಗಿದ್ದರೆ, ಅವರು ಮುಂದಿನ ವಿಶ್ವಕಪ್ ವರೆಗೂ ಆಡಬಹುದು ಎಂದು ತಿಳಿಸಿದ್ದಾರೆ. ಈಗ ಇದೇ ವಿಷಯಕ್ಕೆ ಸಂಬಂಧಿಸಿದಂತೆ ಬಿಸಿಸಿಐ ಸಹ ತುಟಿ ಬಿಚ್ಚಿದೆ.
ಸದ್ಯ ಬಿಸಿಸಿಐ ಈ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿಲ್ಲ. ಸದ್ಯ ಈ ನಮ್ಮ ಚಿತ್ತ ಸೆಪ್ಟೆಂಬರ್‌ನಲ್ಲಿ ನಡೆಯಲಿರುವ 2025 ರ ಏಷ್ಯಾ ಕಪ್ ಮತ್ತು ಮುಂದಿನ ವರ್ಷ ನಡೆಯಲಿರುವ ಟಿ 20 ವಿಶ್ವಕಪ್ ಮೇಲೆ ಇದೆ ಎಂದು ಬಿಸಿಸಿಐ ಮೂಲಗಳು ಸ್ಪಷ್ಟ ಪಡಿಸಿವೆ. ಸದ್ಯ ಬಿಸಿಸಿಐ ಮುಂದಿನ ವರ್ಷದ ಟಿ20 ವಿಶ್ವಕಪ್‌ನತ್ತ ಹೆಚ್ಚಿನ ಚಿತ್ತ ನೆಟ್ಟಿದೆ. ಇನ್ನು ಸದ್ಯ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಅವರ ಬಗ್ಗೆ ಯೋಚನೆ ಇಲ್ಲ ತಿಳಿಸಿದೆ.

ಇನ್ನು ಪಿಟಿಐ ವರದಿಯಂತೆ ಬಿಸಿಸಿಐ ಯಾವಾಗಲೂ ಸ್ಟಾರ್ ಆಟಗಾರರ ಬಗ್ಗೆ ಈ ರೀತಿ ತರಾತುರಿಯಲ್ಲಿ ನಿರ್ಧಾರ ಕೈಗೊಳ್ಳುವುದಿಲ್ಲ ಎಂದು ತಿಳಿಸಿದೆ. ಇನ್ನು ಈ ಸ್ಟಾರ್ ಆಟಗಾರರು ಇಷ್ಟು ಜನಪ್ರೀಯರಾಗಿದ್ದರೆ ಅವರ ನಿವೃತ್ತಿ ನಿರ್ಧಾರವನ್ನು ಬಿಸಿಸಿಐ ಬೇಗ ಮಾಡುವುದಿಲ್ಲ. ಇನ್ನ ಅಕ್ಟೋಬರ್ 25 ರಂದು ಸಿಡ್ನಿಯಲ್ಲಿ ನಡೆಯಲಿರುವ ಏಕದಿನ ಪಂದ್ಯ ಸ್ಟಾರ್ ಆಟಗಾರರಿಗೆ ಕೊನೆಯ ಪಂದ್ಯವಾಗಿರಲಿದೆ ಎಂಬ ವದಂತಿಗೂ ಬಿಸಿಸಿಐ ತೆರೆ ಎಳೆದದ್ದು, ಇದು ಸತ್ಯಕ್ಕೆ ದೂರವಾದ ಅಂಶ ಎಂದು ತಿಳಿಸಿದೆ.