ಟಿ20 ವಿಶ್ವಕಪ್ ಚಾಂಪಿಯನ್ ಆಗಲು ಏನು ಕಾರಣ? ರೋಹಿತ್ ಬಿಚ್ಚಿಟ್ಟ ಸತ್ಯ: ಈ ಪ್ಲೇಯರ್‌ಗೆ ಗೆಲುವಿನ ರುವಾರಿ
ವೆಸ್ಟ್‌ಇಂಡೀಸ್ ಬಾರ್ಬಡೋಸ್‌ನಲ್ಲಿ ಟೀಮ್ ಇಂಡಿಯಾದ ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಮಣಿಸಿ, ಚಾಂಪಿಯನ್ ಪಟ್ಟವನ್ನು ಅಲಂಕರಿಸಿತು. ಈ ಪಂದ್ಯದಲ್ಲಿ ಎಲ್ಲರ ಚಿತ್ತವನ್ನು ಕದ್ದಿದ್ದು, ಸೂರ್ಯಕುಮಾರ್ ಯಾದವ್ ಅವರ ಆ ಒಂದು ಕ್ಯಾಚ್. ಆದರೆ ಈ ಪಂದ್ಯದ ಗೆಲುವಿಗೆ ಹಲವು ಕಾರಣಗಳು ಸಿಗುತ್ತಿವೆ. ಆದರೆ ಈಗ ಟೀಮ್ ಇಂಡಿಯಾದ ನಾಯಕ ರೋಹಿತ್ ಶರ್ಮಾ ಟಿ20 ವಿಶ್ವಕಪ್ ಗೆಲುವಿಗೆ ದೊಡ್ಡ ಕಾರಣ ಏನು ಎಂಬುದನ್ನು ಬಹಿರಂಗ ಪಡಿಸಿದ್ದಾರೆ.
ಬಾರ್ಬಡೋಸ್‌ನ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ, ಗೆಲುವಿನ ಹತ್ತಿರ ಹೋಗುತ್ತಿತ್ತು. ಹರಿಣಗಳ ತಂಡದ ಆಟಗಾರರು ಅಮೋಘ ಬ್ಯಾಟಿಂಗ್ ನಡೆಸಿದ್ದರು. ಬೌಲ್ ಹಾಗೂ ಬೇಕಿದ್ದ ರನ್‌ಗಳು ಸಮಾನಾಂತರವಾಗಿ ಇದ್ದವು. ಆ ವೇಳೆ ಆ ಪ್ಲೇಯರ್ ಮಾಡಿದ ಪ್ಲ್ಯಾನ್ ಟೀಮ್ ಇಂಡಿಯಾ ಗೆಲುವಿನ ಆಶಯನ್ನು ಹೆಚ್ಚಿಸಿತು ಎಂದು ತಿಳಿಸಿದ್ದಾರೆ. ದಿ ಗ್ರೇಟ್ ಇಂಡಿಯನ್ ಕಪಿಲ್ ಶೋದಲ್ಲಿ ರೋಹಿತ್ ದೊಡ್ಡ ಸತ್ಯ ಬಹಿರಂಗ ಪಡಿಸಿದ್ದಾರೆ.

ಆ ಪ್ಲೇಯರ್ ಯಾರ?
ಈ ವೇಳೆ ಕೊನೆಯ ಓವರ್‌ನಲ್ಲಿ ಡೇವಿಡ್ ಮಿಲ್ಲರ್ ಅವರ ಕ್ಯಾಚ್‌ನ್ನು ಬೌಂಡರಿ ಲೈನ್‌ನಲ್ಲಿ ಅಮೋಘವಾಗಿ ಹಿಡಿದ ಸೂರ್ಯಕುಮಾರ್ ಯಾದವ್ ಪಂದ್ಯದ ಗತಿಯನ್ನೇ ಚೇಂಜ್ ಮಾಡಿದರು. ಆದರೆ ಟೀಮ್ ಇಂಡಿಯಾದ ಗೆಲುವಿನ ಅಸಲಿ ಕಹಾನಿಯನ್ನು ರೋಹಿತ್ ಶರ್ಮಾ ಶೋದಲ್ಲಿ ಬಹಿರಂಗ ಪಡಿಸಿದ್ದಾರೆ. ಟೀಮ್ ಇಂಡಿಯಾ ಗೆಲುವಿನಲ್ಲಿ ರಿಷಭ್ ಪಂತ್ ಪಾತ್ರ ಇದೆ ಎಂದು ತಿಳಿಸಿದ್ದಾರೆ.
ಟಿ20 ವಿಶ್ವಕಪ್‌ನಲ್ಲಿ ರಿಷಭ್ ಪಂತ್ ಅಮೋಘ ಬ್ಯಾಟಿಂಗ್ ನಡೆಸಿ ತಂಡಕ್ಕೆ ನೆರವಾಗಿದ್ದರು. ಆದರೆ ಫೈನಲ್‌ನಲ್ಲಿ ಅವರು ತಂಡಕ್ಕೆ ದೊಡ್ಡ ಕಾಣಿಕೆ ನೀಡಿರಲಿಲ್ಲ. ಅದು ಹೇಗೆ ಪಂದ್ಯ ಗೆಲ್ಲಲು ರಿಷಭ್ ಕಾರಣ ಎಂದು ನೀವು ಯೋಚಿಸಿದ್ದರೆ, ರೋಹಿತ್ ಹೇಳುವ ಮಾತನ್ನು ಕೇಳಿದರೆ ಅರ್ಥವಾಗುತ್ತದೆ.
ಪಂತ್ ಮಾಡಿದ ಪ್ಲ್ಯಾನ್ ಏನು?
ಎಲ್ಲವೂ ದಕ್ಷಿಣ ಆಫ್ರಿಕಾ ಅಂದು ಕೊಂಡತೆ ನಡೆಯುತ್ತಿತ್ತು. ಇವರ ಯೋಜನೆಗೆ ಬ್ರೇಕ್ ಹಾಕಲು ರಿಷಭ್ ಪಂತ್ ಪ್ಲ್ಯಾನ್ ಮಾಡಿಕೊಂಡರು. ಪಂದ್ಯ ರನ್ ಎ ಬೌಲ್ ನಲ್ಲಿ ಸಾಗುತ್ತಿತ್ತು. ಆಗ ರಿಷಭ್ ಮಾಡಿದ ಪ್ಲ್ಯಾನ್ ವರ್ಕ್ ಔಟ್ ಆಯಿತು. ಅವರು ಕಾರ್ಯತಂತ್ರ ನಮ್ಮ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿತು ಎಂದು ರೋಹಿತ್ ಶರ್ಮಾ ಹೇಳಿದ್ದಾರೆ. ದಕ್ಷಿಣ ಆಫ್ರಿಕಾಕ್ಕೆ 24 ಎಸೆತಗಳಲ್ಲಿ 26 ರನ್ ಅಗತ್ಯವಿದ್ದಾಗ, ಪಂದ್ಯವನ್ನು ಕೆಲವು ಕ್ಷಣಗಳಿಗೆ ನಿಲ್ಲಿಸಲಾಯಿತು. ಪಂತ್ ಅವರು ಆ ಸಮಯವನ್ನು ಅದ್ಭುತವಾಗಿ ಬಳಸಿದರು. ಆ ಕ್ಷಣದ ನಂತರ ರಿಷಭ್ ಗಾಯಗೊಂಡಂತೆ ನಟಿಸಿದರು. ಪಂದ್ಯ ತುಂಬಾ ನಿಧಾನವಾಯಿತು ಎಂದಿದ್ದಾರೆ.

ಒಂದು ಸಮಯದಲ್ಲಿ ದಕ್ಷಿಣ ಆಫ್ರಿಕಾ 13 ಓವರ್‌ಗಳಲ್ಲಿ 109 ರನ್ ಗಳಿಸಿತ್ತು. ಆಫ್ರಿಕಾ ತಂಡಕ್ಕೆ 7 ಓವರ್‌ಗಳಲ್ಲಿ 69 ರನ್‌ಗಳ ಅಗತ್ಯವಿತ್ತು. ನಂತರ 14ನೇ ಓವರ್ ನಲ್ಲಿ ಕುಲದೀಪ್ ಯಾದವ್ 14 ರನ್ ನೀಡಿದರೆ, 15 ಓವರ್‌ನಲ್ಲಿ ಅಕ್ಷರ್ ಪಟೇಲ್ 24 ರನ್ ನೀಡಿ ಕೈ ಸುಟ್ಟುಕೊಂಡರು. ಆಗ ಜಯ ದಕ್ಷಿಣ ಆಫ್ರಿಕಾ ಪರ ವಾಲುವಂತಿತ್ತು. ಪಂತ್ ಈ ವೇಳೆ ತಲೆ ಉಪಯೋಗಿಸಿ ಬ್ರೇಕ್ ತೆಗೆದುಕೊಂಡರು. ಪಂದ್ಯದ ಗತಿ ಬದಲಾಯಿತು ಎಂದು ಟೀಮ್ ಇಂಡಿಯಾದ ನಾಯಕ ರೋಹಿತ್ ಶರ್ಮಾ ತಿಳಿಸಿದ್ದಾರೆ.
ಈ ವೇಳೆ ನಾನು ಫೀಲ್ಡ್ ಸೆಟ್ ಮಾಡುತ್ತಿದೆ. ಬ್ಯಾಟರ್‌ಗಳು ಕ್ರೀಸ್‌ನಲ್ಲಿ ನಿಂತಿದ್ದರು. ಆದರೆ ಅಲ್ಲಿ ಪಂತ್ ನೆಲಕ್ಕೆ ಬಿದ್ದಿದ್ದರು. ತಂಡದ ಫೀಜಿಯೋ ಬಂದು ಅವರಿಗೆ ಟ್ರಿಟ್ ಮೆಂಟ್ ನೀಡುತ್ತಿದ್ದರು. ಆಗ ಪಂದ್ಯ ಕೆಲಕಾಲ ನಿಂತಿತ್ತು ಎಂದು ರೋಹಿತ್ ನೆನಪಿಸಿಕೊಂಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications