Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ರೋಹಿತ್‌ ಬ್ಯಾಟಿಂಗ್‌ ಕುರಿತಾಗಿ ಮಾತನಾಡಿದ ವಿರಾಟ್‌ ಕೊಹ್ಲಿ

ICC World Cup 2019 : ರೋಹಿತ್ ಶರ್ಮಾ ನನ್ನು ಕೊಂಡಾಡಿದ ವಿರಾಟ್ ಕೊಹ್ಲಿ..! | Virat Kohli
Rohit is the best one-day player: Virat Kohli

ಬರ್ಮಿಂಗ್‌ಹ್ಯಾಮ್‌, ಜುಲೂ 03: ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಅದ್ಭುತ ಶತಕ ದಾಖಲಿಸಿ ಟೀಮ್‌ ಇಂಡಿಯಾಗೆ ಜಯ ತಂದುಕೊಟ್ಟ ರೋಹಿತ್‌ ಶರ್ಮಾ ಅವರನ್ನು 'ಏಕದಿನ ಕ್ರಿಕೆಟ್‌ನ ಅತ್ಯುತ್ತಮ ಆಟಗಾರ' ಎಂದು ನಾಯಕ ವಿರಾಟ್‌ ಕೊಹ್ಲಿ ಗುಣಗಾನ ಮಾಡಿದ್ದಾರೆ.

ವಿಶ್ವಕಪ್‌ ವೇಳಾಪಟ್ಟಿ / ಮುಖಾಮುಖಿ ದಾಖಲೆಗಳು / ಅಂಕಪಟ್ಟಿ

ಮಂಗಳವಾರ ನಡೆದ ಬಾಂಗ್ಲಾದೇಶ ವಿರುದ್ಧದ ವಿಶ್ವಕಪ್‌ ಲೀಗ್‌ ಪಂದ್ಯದಲ್ಲಿ ರೋಹಿತ್‌ (104) ಟೂರ್ನಿಯ ನಾಲ್ಕನೇ ಶತಕ ಸಿಡಿಸಿ ತಂಡಕ್ಕೆ 50 ಓವರ್‌ಗಳಲ್ಲಿ 314/9 ರನ್‌ಗಳ ಬೃಹತ್‌ ಮೊತ್ತ ತಂದುಕೊಟ್ಟರು. ಬಳಿಕ ಉತ್ತಮ ಬೌಲಿಂಗ್‌ ಸಂಘಟಿಸಿ 28 ರನ್‌ಗಳಿಂದ ಗೆದ್ದ ಭಾರತ ಸೆಮಿಫೈನಲ್ಸ್‌ಗೆ ಮುನ್ನಡೆಯಿತು.

ಒಂದೇ ವಿಶ್ವಕಪ್‌ ಟೂರ್ನಿಯಲ್ಲಿ ನಾಲ್ಕು ಶತಕಗಳನ್ನು ಸಿಡಿಸಿದ ಭಾರತದ ಮೊದಲ ಹಾಗೂ ವಿಶ್ವದ ಎರಡನೇ ಆಟಗಾರ ಎನಿಸಿದ ರೋಹಿತ್‌ ಶರ್ಮಾ, ಈ ಮೂಲಕ ಶ್ರೀಲಂಕಾದ ಬ್ಯಾಟಿಂಗ್‌ ದಿಗ್ಗಜ ಕುಮಾರ ಸಂಗಕ್ಕಾರ ಅವರ ದಾಖಲೆಯನ್ನು ಸರಿಗಟ್ಟಿದರು. ಸಂಗಕ್ಕಾರ, 2015ರ ವಿಶ್ವಕಪ್‌ನಲ್ಲಿ ನಾಲ್ಕು ಶತಕ ಬಾರಿಸಿ ವಿಶ್ವ ದಾಖಲೆ ಬರೆದಿದ್ದರು.

"ಹಲವು ವರ್ಷಗಳಿಂದ ರೋಹಿತ್‌ ಅವರ ಬ್ಯಾಟಿಂಗ್‌ ವೀಕ್ಷಿಸುತ್ತಿದ್ದೇನೆ. ನನ್ನ ಪ್ರಕಾರ ರೋಹಿತ್‌ ಏಕದಿನ ಕ್ರಿಕೆಟ್‌ನ ಅತ್ಯುತ್ತಮ ಆಟಗಾರ. ಅವರು ಆಡಿದಾಗಲೆಲ್ಲಾ ನಮ್ಮ ತಂಡ ಬೃಹತ್‌ ಮೊತ್ತದ ಕಡೆಗೆ ಮುನ್ನುಗ್ಗುತ್ತದೆ. ಅವರ ಪ್ರದರ್ಶನ ನನಗೆ ಬಹಳ ಸಂತಸ ನೀಡಿದೆ,'' ಎಂದು ಪಂದ್ಯದ ಬಳಿಕ ನಡೆದ ಪತ್ರಿಕಾಗೋಷ್ಠಿಯಲ್ಲಿ ಭಾರತ ತಂಡದ ಪುನಾಯಕ ರೋಹಿತ್‌ ಅವರನ್ನು ಕ್ಯಾಪ್ಟನ್‌ ಕೊಹ್ಲಿ ಮುಕ್ತಕಂಠದಿಂದ ಹೊಗಳಿದ್ದಾರೆ.

ಈಗಾಗಲೇ ಸೆಮಿಫೈನಲ್ಸ್‌ ಅರ್ಹತೆ ಪಡೆದುಕೊಂಡಿರುವ ಟೀಮ್‌ ಇಂಡಿಯಾ ಮುಂದಿನ ಶನಿವಾರ ಲೀಡ್ಸ್‌ನಲ್ಲಿ ತನ್ನ ಕೊನೆಯ ಲೀಗ್‌ ಪಂದ್ಯವನ್ನು ಆಡಲಿದ್ದು, ಈಗಾಗಲೇ ಸ್ಪರ್ಧೆಯಿಂದ ಹೊರಬಿದ್ದಿರುವ ಶ್ರೀಲಂಕಾ ವಿರುದ್ಧ ಪೈಪೋಟಿ ನಡೆಸಲಿದೆ. ಇಲ್ಲಿ ಜಯ ಪ್ರಾಪ್ತಿಯಾದರೆ ಭಾರತಕ್ಕೆ ಅಂಕಪಟ್ಟಿಯ ಅಗ್ರಸ್ಥಾನಕ್ಕೇರುವ ಉತ್ತಮ ಅವಕಾಶವಿದೆ.

Story first published: Wednesday, July 3, 2019, 23:44 [IST]
Other articles published on Jul 3, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+