Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಪ್ಲೇ ಆಫ್‌ನಲ್ಲಿ ಕಳಪೆಯಾಟ, ರೋಹಿತ್ ಶೂನ್ಯ ಸುತ್ತಿದರೂ ದಾಖಲೆ

Rohit poor show in Play-offs continuous equals most ducks in IPL

ಐಪಿಎಲ್ 2020ರಲ್ಲಿ ತಮ್ಮ ಲಯ ಕಂಡುಕೊಳ್ಳಲು ಆಗದೆ ತಿಣುಕಾಟ ನಡೆಸಿದ ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮ ಅವರು ಕಳಪೆಯಾಟವನ್ನು ಮುಂದುವರೆಸಿದ್ದಾರೆ. ಸ್ನಾಯುಸೆಳೆತಕ್ಕೊಳಗಾಗಿ ಚೇತರಿಕೆ ಕಾಣುತ್ತಿರುವ ರೋಹಿತ್ ಶರ್ಮ ಅವರನ್ನು ಆಸ್ಟ್ರೇಲಿಯಾ ಸರಣಿಗೆ ಆಯ್ಕೆ ಮಾಡಲಾಗಿಲ್ಲ. ಐಪಿಎಲ್ ನಲ್ಲೂ ಉತ್ತಮ ಆಟ ಬರುತ್ತಿಲ್ಲ

ಗಾಯದಿಂದ ಚೇತರಿಸಿಕೊಂಡು ಕೊನೆ ಲೀಗ್ ಪಂದ್ಯದಲ್ಲಿ ಆಡಿದ್ದ ರೋಹಿತ್ ಅವರು ಟೀಂ ಇಂಡಿಯಾಕ್ಕೆ ಆಯ್ಕೆಯಾಗುವುದಕ್ಕಿಂತ ಫ್ರಾಂಚೈಸಿ ಪರ ಆಡುವುದೇ ಮುಖ್ಯವಾಗಿದೆ ಎಂಬ ಅಪವಾದವೂ ಕೇಳಿ ಬಂದಿತ್ತು. ಇದೆಲ್ಲದ್ದಕ್ಕೆ ಬ್ಯಾಟಿಂಗ್ ಮೂಲಕವೇ ಹಿಟ್ ಮ್ಯಾನ್ ಉತ್ತರ ನೀಡಲಿದ್ದಾರೆ ಎಂಬ ನಿರೀಕ್ಷೆಯಲ್ಲಿದ್ದ ಅಭಿಮಾನಿಗಳಿಗೆ ನಿರಾಶೆಯಾಗಿದೆ.

ನವೆಂಬರ್ 5ರಂದು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ನಡೆದಿರುವ ಕ್ವಾಲಿಫೈಯರ್ 1 ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡುವ ಅವಕಾಶ ಸಿಕ್ಕರೂ ರೋಹಿತ್ ಕೈ ಚೆಲ್ಲಿದರು. ಡಿಕಾಕ್ ಜೊತೆ ಆರಂಭಿಕ ಆಟಗಾರರಾಗಿ ಕಣಕ್ಕಿಳಿಸಿದ ರೋಹಿತ್ ಶರ್ಮ ಅವರು ಒಂದೇ ಒಂದು ಎಸೆತ ಎದುರಿಸಿ ಎಲ್ ಬಿ ಬಲೆಗೆ ಬಿದ್ದರು. ಅಶ್ವಿನ್ ಅವರಿಗೆ ವಿಕೆಟ್ ಒಪ್ಪಿಸಿದ ರೋಹಿತ್ ಅವರು ಐಪಿಎಲ್ ನಲ್ಲಿ ಮತ್ತೊಮ್ಮೆ ಶೂನ್ಯ ಸುತ್ತಿದರು. ಒಟ್ಟಾರೆ 13 ಬಾರಿ ಸೊನ್ನೆಗೆ ಔಟ್ ಆಗಿರುವ ಹಿಟ್ ಮ್ಯಾನ್ ಈಗ ಐಪಿಎಲ್ ನಲ್ಲಿ ಅತಿ ಹೆಚ್ಚು ಬಾರಿ ಸೊನ್ನೆಗೆ ಔಟಾದ ಆಟಗಾರರ ಪಟ್ಟಿ ಸೇರಿದ್ದಾರೆ.

ಅತಿ ಹೆಚ್ಚುಬಾರಿ ಡಕೌಟ್
13: ರೋಹಿತ್ ಶರ್ಮ
13: ಹರ್ಭಜನ್ ಸಿಂಗ್
13: ಪಾರ್ಥೀವ್ ಪಟೇಲ್.

ಇದಲ್ಲದೆ ಪ್ಲೇ ಆಫ್, ನಾಕೌಟ್ ಹಂತದಲ್ಲಿ ರೋಹಿತ್ ಶರ್ಮ ಸಾಧನೆ ಎಂದಿಗೂ ಉತ್ತಮವಾಗಿಲ್ಲ. ಒಟ್ಟಾರೆ 19 ಇನ್ನಿಂಗ್ಸ್ ಗಳಲ್ಲಿ 229ರನ್ ಮಾತ್ರ ಕಲೆ ಹಾಕಿದ್ದಾರೆ. 101.32 ಸ್ಟ್ರೈಕ್ ರೇಟ್ ನಂತೆ 12.72ರನ್ ಸರಾಸರಿ ಮಾತ್ರ ಹೊಂದಿದ್ದಾರೆ. ಇಂದಿನ ಪಂದ್ಯ ಸೇರಿದಂತೆ 3 ಬಾರಿ ಡಕೌಟ್ ಆಗಿದ್ದಾರೆ.

Story first published: Thursday, November 5, 2020, 21:00 [IST]
Other articles published on Nov 5, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+