Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Rohit Sharma: ಗಂಗೂಲಿ, ದ್ರಾವಿಡ್‌ ದಾಖಲೆಯ ಮೇಲೆ ಹಿಟ್‌ಮ್ಯಾನ್‌ ಕಣ್ಣು

ಭಾರತ ಹಾಗೂ ಅಫ್ಘಾನಿಸ್ತಾನ ವಿರುದ್ಧದ ಏಕೈಕ ಟೆಸ್ಟ್‌ ಪಂದ್ಯ ಮುಕ್ತಾಯವಾಗಿದೆ. ಈ ಪಂದ್ಯದಲ್ಲಿ ಭಾರತ ಇನಿಂಗ್ಸ್‌ ಹಾಗೂ 300 ರನ್‌ಗಳಿಂದ ಅಫ್ಘಾನಿಸ್ತಾನ್ ವಿರುದ್ಧ ಜಯ ಸಾಧಿಸಿದೆ. ಇನ್ನು ಶನಿವಾರದಿಂದ ಅಫ್ಘಾನಿಸ್ತಾನ್ ವಿರುದ್ಧ ಏಕದಿನ ಸರಣಿಯನ್ನು ಆಡಲು ಸಿದ್ಧತೆಗಳು ನಡೆದಿವೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾದ ಸೂಪರ್ ಸ್ಟಾರ್ ಆಟಗಾರ ರೋಹಿತ್ ಶರ್ಮಾ ಕಣಕ್ಕೆ ಇಳಿಯಲಿದ್ದಾರೆ. ಈ ವೇಳೆ ಎಲ್ಲರ ಕಣ್ಣುಗಳು ಅವರ ಆಟದ ಮೇಲೆ ನೆಟ್ಟಿರಲಿವೆ.

ಮಾಜಿ ನಾಯಕ ರೋಹಿತ್ ಶರ್ಮಾ ಸುಮಾರು 5 ತಿಂಗಳ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಮರಳುತ್ತಿದ್ದಾರೆ. ವರ್ಷದ ಆರಂಭದಲ್ಲಿ ರೋಹಿತ್ ಶರ್ಮಾ ನ್ಯೂಜಿಲೆಂಡ್ ವಿರುದ್ಧ ಏಕದಿನ ಪಂದ್ಯವನ್ನು ಆಡಿದ್ದರು. ಆ ಬಳಿಕ ಈಗ ಅಂತಾರಾಷ್ಟ್ರೀಯ ಪಂದ್ಯವನ್ನು ಆಡಲು ಸಿದ್ಧತೆ ನಡೆಸಿದ್ದಾರೆ. ಇಷ್ಟೇ ಅಲ್ಲದೆ ಹಲವು ದಾಖಲೆಗಳ ಮೇಲೆ ರೋಹಿತ್ ಶರ್ಮಾ ಈ ಸರಣಿಯ ವೇಳೆ ಕಣ್ಣು ನೆಟ್ಟಿದ್ದಾರೆ.

Rohit Sharma

ರೋಹಿತ್‌ ಶರ್ಮಾ ಈ ಸರಣಿಯಲ್ಲಿ 50 ರನ್ ಬಾರಿಸುತ್ತಿದ್ದರೆ ಅತಿ ಹೆಚ್ಚು ಅರ್ಧಶತಕಗಳನ್ನು ಬಾರಿಸಿದ ಆಟಗಾರರ ಪಟ್ಟಿಯಲ್ಲಿ ರಾಹುಲ್ ದ್ರಾವಿಡ್ ಮತ್ತು ಸೌರವ್ ಗಂಗೂಲಿ ಅವರನ್ನು ಹಿಂದಿಕ್ಕುವ ಸಾಧ್ಯತೆಯಿದೆ. ರೋಹಿತ್ ಈ ಪಟ್ಟಿಯಲ್ಲಿ ಸೌರವ್ ಗಂಗೂಲಿ ಅವರೊಂದಿಗೆ ಜಂಟಿಯಾಗಿ 8ನೇ ಸ್ಥಾನದಲ್ಲಿದ್ದಾರೆ. ಅವರು ಒಂದು ಅರ್ಧಶತಕ ಅಥವಾ ಅದಕ್ಕಿಂತ ಹೆಚ್ಚಿನ ಸ್ಕೋರ್ ಗಳಿಸಿದರೆ, ಗಂಗೂಲಿ ಅವರನ್ನು ಹಿಂದಿಕ್ಕಿ ರಾಹುಲ್ ದ್ರಾವಿಡ್ ಅವರ ದಾಖಲೆಯನ್ನು ಸರಿಗಟ್ಟುತ್ತಾರೆ.

ಕ್ರಮ ಸಂಖ್ಯೆ ಆಟಗಾರರು (ದೇಶ) ಅತಿ ಹೆಚ್ಚು 50+ ರನ್‌ಗಳ ಇನ್ನಿಂಗ್ಸ್‌ಗಳು
1 ಸಚಿನ್ ತೆಂಡೂಲ್ಕರ್ (ಭಾರತ) 145
2 ವಿರಾಟ್ ಕೊಹ್ಲಿ (ಭಾರತ) 131
3 ಕುಮಾರ್ ಸಂಗಕ್ಕಾರ (ಶ್ರೀಲಂಕಾ) 118
4 ರಿಕಿ ಪಾಂಟಿಂಗ್ (ಆಸ್ಟ್ರೇಲಿಯಾ) 112
5 ಜಾಕ್ ಕಾಲಿಸ್ (ದಕ್ಷಿಣ ಆಫ್ರಿಕಾ) 103
6 ಸನತ್ ಜಯಸೂರ್ಯ (ಶ್ರೀಲಂಕಾ) 96
7 ಮಹೇಲ ಜಯವರ್ಧನೆ (ಶ್ರೀಲಂಕಾ) 96
8 ರಾಹುಲ್ ದ್ರಾವಿಡ್ (ಭಾರತ) 95
9 ಸೌರವ್ ಗಂಗೂಲಿ (ಭಾರತ) 94
10 ರೋಹಿತ್ ಶರ್ಮಾ (ಭಾರತ) 94

ಗಮನಿಸಿ: ಈ ಸರಣಿಯಲ್ಲಿ ರೋಹಿತ್ ಶರ್ಮಾ ಇನ್ನೊಂದು 50+ ರನ್ ಬಾರಿಸಿದರೆ ಸೌರವ್ ಗಂಗೂಲಿ ಅವರನ್ನು ಹಿಂದಿಕ್ಕಲಿದ್ದಾರೆ ಹಾಗೂ ಎರಡು 50+ ರನ್ ಬಾರಿಸಿದರೆ ರಾಹುಲ್ ದ್ರಾವಿಡ್ ಅವರ ದಾಖಲೆಯನ್ನು ಸರಿಗಟ್ಟಲಿದ್ದಾರೆ.

ಅಫ್ಘಾನಿಸ್ತಾನದ ವಿರುದ್ಧದ ಏಕದಿನ ಸರಣಿಯಲ್ಲಿ ಎರಡು ಅರ್ಧಶತಕ ಬಾರಿಸಿದಲ್ಲಿ ರಾಹುಲ್ ದ್ರಾವಿಡ್ ಸಾಧನೆಯನ್ನು ರೋಹಿತ್ ಮೀರಿ ನಿಲ್ಲಬಹುದು. ರೋಹಿತ್ ಶರ್ಮಾ ಇಲ್ಲಿಯವರೆಗೆ ಆಡಿರುವ 282 ಏಕದಿನ ಪಂದ್ಯಗಳ 274 ಇನ್ನಿಂಗ್ಸ್‌ಗಳಲ್ಲಿ 33 ಶತಕ ಮತ್ತು 61 ಅರ್ಧಶತಕಗಳನ್ನು ಸಿಡಿಸಿದ್ದಾರೆ.

ಮತ್ತೊಂದು ದಾಖಲೆಯ ಮೇಲೆ ರೋಹಿತ್ ಕಣ್ಣು

ಇನ್ನು ಇದೇ ಸರಣಿಯಲ್ಲಿ ರೋಹಿತ್ ಶರ್ಮಾ ಮತ್ತೊಂದು ದಾಖಲೆಯನ್ನು ಬರೆಯಬಹುದು. ಸದ್ಯ ರೋಹಿತ್‌ ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಬಾರಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದ್ದಾರೆ. ಅಫ್ಘಾನ್ ವಿರುದ್ಧ ಸರಣಿಯಲ್ಲಿ 3 ರನ್‌ ಬಾರಿಸುತ್ತಿದ್ದಂತೆ ರೋಹಿತ್‌ ಜಾಕ್‌ ಕಾಲಿಸ್ ಅವರ ದಾಖಲೆಯನ್ನು ಅಳಿಸಿ 8ನೇ ಸ್ಥಾನಕ್ಕೆ ಬಡ್ತಿ ಪಡೆಯಬಹುದಾಗಿದೆ. ಒಂದು ವೇಳೆ ಅವರು ಈ ಸರಣಿಯಲ್ಲಿ 163 ರನ್ ಗಳಿಸಿದರೆ, ಸದ್ಯ 7ನೇ ಸ್ಥಾನದಲ್ಲಿರುವ ಪಾಕಿಸ್ತಾನದ ಮಾಜಿ ನಾಯಕ ಇಂಜಮಾಮ್ ಉಲ್ ಹಕ್ (11739 ರನ್) ಅವರನ್ನು ಹಿಂದಿಕ್ಕಬಹುದಾಗಿದೆ.

Rohit Sharma

ಟೀಮ್ ಇಂಡಿಯಾದ ಸೂಪರ್ ಸ್ಟಾರ್ ಆಟಗಾರ ರೋಹಿತ್ ಶರ್ಮಾ ಭಾರತದ ಪರ ಏಕದಿನ ಕ್ರಿಕೆಟ್‌ ಮಾತ್ರ ಆಡುತ್ತಿದ್ದಾರೆ. ಇವರು ಈಗಾಗಲೇ ಟಿ20 ಹಾಗೂ ಟೆಸ್ಟ್‌ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ರೋಹಿತ್‌ ಮುಂದಿನ ವರ್ಷ ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್‌ನಲ್ಲಿ ಆಡುವ ಕನಸು ಕಾಣುತ್ತಿದ್ದಾರೆ. ಹೀಗಾಗಿ ತಮ್ಮ ಫಾರ್ಮ್‌ ಹಾಗೂ ಫಿಟ್ನೆಸ್‌ ಪರೀಕ್ಷಿಸಲು ರೋಹಿತ್ ಅವರಿಗೆ ಇದು ಒಳ್ಳೆಯ ಅವಕಾಶವಾಗಿದೆ.

Story first published: Thursday, June 11, 2026, 8:05 [IST]
Other articles published on Jun 11, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+