Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಅಫ್ಘಾನಿಸ್ತಾನ್‌ ವಿರುದ್ಧದ ಏಕದಿನ ಸರಣಿಗೂ ಮುನ್ನ ಭಾರತಕ್ಕೆ ಗುಡ್‌ ನ್ಯೂಸ್‌

ಶನಿವಾರದಿಂದ ಆರಂಭವಾಗಲಿರುವ ಅಫ್ಘಾನಿಸ್ತಾನ ವಿರುದ್ಧದ ಏಕದಿನ ಸರಣಿಗೆ ಕ್ಷಣಗಣನೆ ಆರಂಭವಾಗಿದೆ. ಧರ್ಮಶಾಲಾದಲ್ಲಿ ನಡೆಯಲಿರುವ ಮೊದಲ ಏಕದಿನ ಪಂದ್ಯದ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಇನ್ನು ಈ ಪಂದ್ಯದಲ್ಲಿ ಸೂಪರ್ ಸ್ಟಾರ್ ಆಟಗಾರ ರೋಹಿತ್ ಶರ್ಮಾ ಹಾಗೂ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಅವರು ಆಡುತ್ತಾರೋ ಇಲ್ಲವೋ ಎನ್ನುವ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ.

ಹಾರ್ದಿಕ್ ಪಾಂಡ್ಯ ಗಾಯದ ಕಾರಣದಿಂದಾಗಿ ಹಲವು ಐಪಿಎಲ್‌ ಪಂದ್ಯಗಳಿಂದ ವಂಚಿತರಾಗಿದ್ದರು. ಇವರು ಫಿಟ್ನೆಸ್‌ ಸಮಸ್ಯೆಯನ್ನು ಎದುರಿಸುತ್ತಿದ್ದರು. ಹೀಗಾಗಿ ಇವರು ಫಿಟ್ನೆಸ್‌ ಪರೀಕ್ಷೆ ನೀಡುವುದು ಅನಿವಾರ್ಯವಾಗಿತ್ತು. ಇನ್ನು ರೋಹಿತ್ ಶರ್ಮಾ ಸ್ನಾಯು ಸೆಳೆತದಿಂದ ಬಳಲುತ್ತಿದ್ದರು. ಇವರು ಸಹ ಅಫ್ಘಾನಿಸ್ತಾನ್ ವಿರುದ್ಧದ ಏಕದಿನ ಸರಣಿಯನ್ನು ಆಡಲು ಸಿಒಇ ಒಪ್ಪಿಗೆ ಬೇಕಿತ್ತು.

Rohit Sharma and Hardik Pandya

ಸ್ಟಾರ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಮತ್ತು ಹಿರಿಯ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ ಅವರನ್ನು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಸೆಂಟರ್ ಆಫ್ ಎಕ್ಸಲೆನ್ಸ್ (ಸಿಒಇ) ಏಕದಿನ ಸರಣಿಯಲ್ಲಿ ಆಡಲು ಅನುಮೋದಿಸಿದೆ.

ಫಿಟ್ನೆಸ್‌ ಪರೀಕ್ಷೆಗೆ ಒಳಪಟ್ಟ ಹಾರ್ದಿಕ್, ರೋಹಿತ್‌

ಹಾರ್ದಿಕ್ ಪಾಂಡ್ಯ ಸಿಒಇಗೆ ಹಾಜರಾಗುವ ಮೊದಲು ರಜೆಯ ಮಜೆಯಲ್ಲಿದ್ದರು. ಇವರು ಬಳಿಕ ತಮ್ಮ ಫಿಟ್ನೆಸ್‌ ಮೇಲೆ ವರ್ಕ್‌ಔಟ್ ಮಾಡಿದ್ದು, ಈಗ ಸಂಪೂರ್ಣ 10 ಓವರ್‌ ಬೌಲಿಂಗ್ ಮಾಡಲು ಫಿಟ್ ಆಗಿದ್ದಾರೆ ಎಂದು ಬಿಸಿಸಿಐ ಮೂಲವೊಂದು ಪಿಟಿಐಗೆ ತಿಳಿಸಿದೆ. ಪಾಂಡ್ಯ ಭಾರತದ ಸೀಮಿತ ಓವರ್‌ಗಳ ತಂಡಕ್ಕೆ ಪ್ರಮುಖ ಆಟಗಾರರಾಗಿದ್ದು, ಡೆತ್ ಓವರ್‌ಗಳಲ್ಲಿ ತಮ್ಮ ವೇಗದ ಬೌಲಿಂಗ್ ಮತ್ತು ಆಕ್ರಮಣಕಾರಿ ಬ್ಯಾಟಿಂಗ್ ಮೂಲಕ ತಂಡಕ್ಕೆ ಸಮತೋಲನ ನೀಡುತ್ತಾರೆ. ಉತ್ತಮ ವಿಷಯ ಅಂದರೆ ಪಾಂಡ್ಯ ತರಬೇತಿ ಅವಧಿಗಳಲ್ಲಿ 10 ಓವರ್‌ಗಳನ್ನು ಬೌಲಿಂಗ್ ಮಾಡಿದ್ದು, ಭರವಸೆಯನ್ನು ಹೆಚ್ಚಿಸಿದ್ದಾರೆ.

ಮಾಜಿ ನಾಯಕ ರೋಹಿತ್ ಶರ್ಮಾ ಕೂಡ ಸ್ನಾಯು ಸೆಳೆತದಿಂದ ಬಳಲುತ್ತಿದ್ದರು. ಹೀಗಾಗಿ ಇವರು ಸಹ ಸಿಒಇಯಲ್ಲಿದ್ದರು ಮತ್ತು ಪರೀಕ್ಷೆಯ ನಂತರ ಆಡಲು ಅನುಮತಿ ಪಡೆದಿದ್ದಾರೆ.

Rohit Sharma and Hardik Pandya

ಸೋಮವಾರ, ಭಾರತದ ಸಹಾಯಕ ಕೋಚ್ ಸೀತಾಂಶು ಕೋಟಕ್, ಪಾಂಡ್ಯ ಅವರ ಫಿಟ್ನೆಸ್ ಬಗ್ಗೆ ಯಾವುದೇ ಅಪ್‌ಡೇಟ್‌ ಇಲ್ಲದೇ ಇದ್ದರೂ ಸಹ, ಇವರಿಬ್ಬರೂ ಫಿಟ್ ಆಗಿದ್ದು ಅಫ್ಘಾನಿಸ್ತಾನ್ ವಿರುದ್ಧದ ಸರಣಿಯಲ್ಲಿ ಆಡಬಹುದು ಎಂದು ತಿಳಿಸಿದ್ದರು.

ವಿರಾಟ್‌ ಅಲಭ್ಯ

ಟೀಮ್ ಇಂಡಿಯಾದ ಸೂಪರ್ ಸ್ಟಾರ್ ಬ್ಯಾಟರ್‌ ವಿರಾಟ್‌ ಕೊಹ್ಲಿ ಸಹ ಗಾಯದ ಕಾರಣದಿಂದಾಗಿ ಅಫ್ಘಾನಿಸ್ತಾನ್ ವಿರುದ್ಧದ ಏಕದಿನ ಸರಣಿಯಿಂದ ಹಿಂದೆ ಸರಿದಿದ್ದಾರೆ. ಹೀಗಾಗಿ ರೋಹಿತ್ ಶರ್ಮಾ, ಹಾರ್ದಿಕ್ ಪಾಂಡ್ಯ ಅವರ ಮೇಲೆ ಎಲ್ಲರ ಚಿತ್ತ ನೆಟ್ಟಿದೆ.

ಭಾರತ ತಂಡ: ಶುಭ್‌ಮನ್ ಗಿಲ್ (ನಾಯಕ), ರೋಹಿತ್ ಶರ್ಮಾ, ಯಶಸ್ವಿ ಜೈಸ್ವಾಲ್, ಶ್ರೇಯಸ್ ಅಯ್ಯರ್ (ಉಪನಾಯಕ), ಕೆ.ಎಲ್. ರಾಹುಲ್ (ವಿಕಿ), ಇಶಾನ್ ಕಿಶನ್ (ವಿಕಿ), ಹಾರ್ದಿಕ್ ಪಾಂಡ್ಯ, ನಿತೀಶ್ ಕುಮಾರ್ ರೆಡ್ಡಿ, ವಾಷಿಂಗ್ಟನ್ ಸುಂದರ್, ಹರ್ಷ್ ದುಬೆ, ಕುಲದೀಪ್ ಯಾದವ್, ಗುರ್ನೂರ್ ಬ್ರಾರ್, ಪ್ರಿನ್ಸ್ ಯಾದವ್, ಅರ್ಶ್‌ದೀಪ್ ಸಿಂಗ್ ಮತ್ತು ಪ್ರಸಿದ್ಧ್ ಕೃಷ್ಣ.

Story first published: Wednesday, June 10, 2026, 11:04 [IST]
Other articles published on Jun 10, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+