ಮುಂಬೈ ಇಂಡಿಯನ್ಸ್ ಗೆಲುವನ್ನು ಖಚಿತ ಪಡಿಸಿದ್ದು ಇವರೇ..
ಮುಂಬೈ ಇಂಡಿಯನ್ಸ್ 19ನೇ ಆವೃತ್ತಿಯ ಐಪಿಎಲ್‌ನ ಮೊದಲ ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ನೀಡಿದೆ. ಮುಂಬೈನ ವಾಂಖೆಡೆ ಅಂಗಳದಲ್ಲಿ ನಡೆದ ಪಂದ್ಯದಲ್ಲಿ ಆತಿಥೇಯ ತಂಡ 6 ವಿಕೆಟ್‌ಗಳಿಂದ ಪಂದ್ಯ ಗೆದ್ದು ಬೀಗಿದೆ. ಈ ಮೂಲಕ 13 ವರ್ಷಗಳಿಂದ ಮೊದಲ ಪಂದ್ಯ ಗೆಲ್ಲದ ದಾಖಲೆಯನ್ನು ಅಳಿಸಿ ಹಾಕಿದೆ. ಈ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಸಂಘಟಿತ ಆಟದ ಪ್ರದರ್ಶನ ನೀಡಿ ಪೂರ್ಣ 2 ಅಂಕವನ್ನು ಕಲೆ ಹಾಕಿದೆ.
ಭಾನುವಾರ ನಡೆದ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಕೆಕೆಆರ್ ತಂಡದ ಆರಂಭ ಭರ್ಜರಿಯಾಗಿತ್ತು. ಆರಂಭಿಕ ಫಿನ್ ಅಲೆನ್ ಹಾಗೂ ನಾಯಕ ಅಜಿಂಕ್ಯ ರಹಾನೆ ಸೊಗಸಾದ ಆರಂಭ ನೀಡಿದರು. ನಾಯಕ ಅಜಿಂಕ್ಯ ರಹಾನೆ ಹಾಗೂ ಅಂಗ್‌ಕ್ರಿಶ್ ರಘುವಂಶಿ ಅರ್ಧಶತಕ ಬಾರಿಸಿ ತಂಡದ ಮೊತ್ತ ಹಿಗ್ಗಿಸಿದರು. 20 ಓವರ್‌ಗಳಲ್ಲಿ 4 ವಿಕೆಟ್‌ಗೆ 220 ರನ್ ಸೇರಿಸಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ ಆರಂಭಿಕರಾದ ರಯಾನ್ ರಿಕಲ್ಟನ್ ಹಾಗೂ ರೋಹಿತ್ ಶರ್ಮಾ ಭರ್ಜರಿ ಅರ್ಧಶತಕ ಬಾರಿಸಿ ಭದ್ರ ಅಡಿಪಾಯ ಹಾಕಿಕೊಟ್ಟರು. ಅಲ್ಲದೆ ತಂಡ 19.1 ಓವರ್‌ಗಳಲ್ಲಿ ಗೆಲುವಿನ ಗೆರೆ ದಾಟಲು ಪ್ರಮುಖ ಪಾತ್ರವನ್ನು ವಹಿಸಿದರು.

19ನೇ ಆವೃತ್ತಿಯ ಎರಡನೇ ಪಂದ್ಯದಲ್ಲಿ ಟರ್ನಿಂಗ್ ಪಾಯಿಂಟ್ ನೋಡಿದಾಗ ಶಾರ್ದೂಲ್ ಠಾಕೂರ್ ಅವರ ನಾಲ್ಕು ಓವರ್‌ಗಳ ಸ್ಪೇಲ್ ಸಹ ನೆನಪಿಗೆ ಬರುತ್ತಿದೆ. ಈ ವೇಳೆ ಅವರು 39 ರನ್ ನೀಡಿ ಅಮೂಲ್ಯ ಮೂರು ವಿಕೆಟ್ ಕಬಳಿಸಿದರು. ಆದರೆ ಇದಕ್ಕಿಂತಲೂ ಪಂದ್ಯದ ಗತಿಯನ್ನೇ ಬದಲಿಸಿದ ಅಂಶ ಬೇರೆಯೇ ಇದೆ.
ಗೆಲುವಿಗೆ ಕಾರಣವಾಗಿದ್ದು ಇದೇ ಅಂಶ
ಮುಂಬೈ ಇಂಡಿಯನ್ಸ್ 221 ರನ್‌ಗಳ ಸವಾಲಿನ ಮೊತ್ತವನ್ನು ಹಿಂಬಾಲಿಸುವಾಗ ಆರಂಭಿಕರು ಭರ್ಜರಿ ಬ್ಯಾಟಿಂಗ್ ನಡೆಸಿದರು. ಮೈಚಳಿ ಬಿಟ್ಟು ಬ್ಯಾಟ್ ಮಾಡಿದ ಇವರು ಕೆಕೆಆರ್ ಬೌಲರ್‌ಗಳನ್ನು ದಂಡಿಸುತ್ತಾ ಸಾಗಿದರು. ಆರಂಭದಲ್ಲಿ ರೋಹಿತ್ ಶರ್ಮಾ ಕೊಂಚ ತಾಳ್ಮೆಯಿಂದ ಬ್ಯಾಟಿಂಗ್ ಮಾಡಿದರು. ಆದರೆ ಸೆಟ್ಲ್ ಆದ ಬಳಿಕ ಇವರು ಸಹ ಅಮೋಘ ಶಾಟ್‌ಗಳನ್ನು ಪ್ರಯೋಗಿಸಿ ರನ್ ವೇಗಕ್ಕೆ ಚುರುಕು ಮುಟ್ಟಿಸಿದರು.

ಇನ್ನೊಂದು ತುದಿಯಲ್ಲಿದ್ದ ರಯಾನ್ ರಿಂಕಲ್ಟನ್ ಸಹ ಕೆಟ್ಟ ಹೊಡೆತಗಳನ್ನು ಪ್ರಯೋಗಿಸಿದರೆ ಸಮಯೋಚಿತ ಬ್ಯಾಟಿಂಗ್ ನಡೆಸಿದರು. ಇವರು 43 ಎಸೆತಗಳಲ್ಲಿ 4 ಬೌಂಡರಿ, 8 ಸಿಕ್ಸರ್ ಸಹಾಯದಿಂದ 81 ರನ್ ಬಾರಿಸಿ ಮಿಂಚಿದರು. ಆದರೆ ಪಂದ್ಯದ ಟರ್ನಿಂಗ್ ಪಾಯಿಂಟ್ ಸವಾಲಿನ ಮೊತ್ತವನ್ನು ಹಿಂಬಾಲಿಸುವ ತಂಡಕ್ಕೆ ಅಗತ್ಯವಿದ್ದ ಆರಂಭವನ್ನ ನೀಡುವಲ್ಲಿ ಆರಂಭಿಕರು ಸಫಲರಾದರು. ರಯಾನ್, ರೋಹಿತ್ ಜೋಡಿ ಮೊದಲ ವಿಕೆಟ್‌ಗೆ 148 ರನ್ ಜೊತೆಯಾಟವನ್ನು ನೀಡಿತು. ಅಲ್ಲದೆ ಈ ಜೋಡಿ ಕೆಕೆಆರ್ ತಂಡದಿಂದ ಪಂದ್ಯವನ್ನು ದೂರ ತೆಗೆದುಕೊಂಡು ಹೋಯಿತು. ಮುಂಬೈ ತಂಡದ ಭರ್ಜರಿ ಆರಂಭವೇ ಪಂದ್ಯದ ಗತಿಯನ್ನೇ ಬದಲಿಸಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications