Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IND vs ENG ODI: ವಿರಾಟ್‌, ರೋಹಿತ್‌ ರನ್‌ ಕಲೆ ಹಾಕುವಲ್ಲಿ ಫೇಲ್‌

ಭಾರತ ಹಾಗೂ ಇಂಗ್ಲೆಂಡ್ ತಂಡಗಳು ಏಕದಿನ ಸರಣಿಯಲ್ಲಿ ಕಾದಾಟ ನಡೆಸುತ್ತಿವೆ. ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯ ಮಂಗಳವಾರ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್‌ 258 ರನ್‌ಗಳಿಗೆ ಆಲೌಟ್ ಆಯಿತು.

ವಿರಾಟ್‌ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಏಕದಿನ ಸರಣಿಯಲ್ಲಿ ಟೀಮ್ ಇಂಡಿಯಾದ ಭಾಗವಾಗಿದ್ದಾರೆ. ಹೀಗಾಗಿ ಎಲ್ಲರ ಕಣ್ಣುಗಳು ಇವರ ಮೇಲೆ ನೆಟ್ಟಿದ್ದವು. ಆದರೆ ಇವರು ತಮ್ಮ ಮೇಲೆ ಅಭಿಮಾನಿಗಳು ಇಟ್ಟ ನಂಬಿಕೆಯನ್ನು ಹುಸಿಯಾಗಿಸಿದರು. 6 ತಿಂಗಳು ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್ ಆಡಿದ ವಿರಾಟ್ ಕೊಹ್ಲಿ ಬಿಗ್ ಇನಿಂಗ್ಸ್ ಕಟ್ಟುವಲ್ಲಿ ವಿಫಲರಾದರು.

Rohit Sharma and Virat Kohli

ಇಂಗ್ಲೆಂಡ್ ನೀಡಿದ್ದ 259 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಟೀಮ್ ಇಂಡಿಯಾ ಆರಂಭ ಸಾಧಾರಣವಾಗಿತ್ತು. ಆರಂಭಿಕ ರೋಹಿತ್ ಶರ್ಮಾ ಹಾಗೂ ನಾಯಕ ಶುಭಮನ್‌ ಗಿಲ್‌ 7.3 ಓವರ್‌ಗಳಲ್ಲಿ 43 ರನ್‌ಗಳ ಜೊತೆಯಾಟದ ಕಾಣಿಕೆ ನೀಡಿದರು. ಈ ಹಂತದಲ್ಲಿ ರೋಹಿತ್ ಶರ್ಮಾ 1 ಬೌಂಡರಿ ನೆರವಿನಿಂದ 11 ರನ್ ಬಾರಿಸಿದ್ದಾಗ ಔಟ್ ಆದರು.

ರನ್‌ ಕಲೆ ಹಾಕುವಲ್ಲಿ ವಿರಾಟ್ ವಿಫಲ

ರೋಹಿತ್ ಶರ್ಮಾ ಔಟ್ ಆಗುತ್ತಿದ್ದಂತೆ ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಲು ಬಂದ ವಿರಾಟ್ ಕೊಹ್ಲಿ ಸಹ ನೀರಸ ಪ್ರದರ್ಶನ ನೀಡಿದರು. ಇವರು 1 ಬೌಂಡರಿ ಸಹಾಯದಿಂದ 5 ರನ್‌ ಸಿಡಿಸಿದ ಜೋಫ್ರಾ ಆರ್ಚರ್ ತೋಡಿದ ಖೆಡ್ಡಾಗೆ ಬಲಿಯಾದರು. ಈ ಮೂಲಕ ಇಂಗ್ಲೆಂಡ್‌ ನೆಲದಲ್ಲಿ ಬಿಗ್ ಇನಿಂಗ್ಸ್‌ ಕಟ್ಟಿ ಅಭಿಮಾನಿಗಳಿಗೆ ಹಬ್ಬದೂಟವನ್ನು ಉಣ ಬಡಿಸುವ ಆಸೆ ಇಟ್ಟುಕೊಂಡಿದ್ದ ಅಭಿಮಾನಿಗಳಿಗೆ ನಿರಾಸೆಯಾಯಿತು.

Wimbledon ಮೈದಾನದಲ್ಲಿ ಭಾರತದ ಕಂಪು; ಟೆನಿಸ್ ತಾರೆಯರ ಮನಗೆದ್ದ ಟವೆಲ್‌ಗಳು!

Wimbledon ಮೈದಾನದಲ್ಲಿ ಭಾರತದ ಕಂಪು; ಟೆನಿಸ್ ತಾರೆಯರ ಮನಗೆದ್ದ ಟವೆಲ್‌ಗಳು!

ಮುಂದಿನ ವರ್ಷ ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್‌ನಲ್ಲಿ ಸ್ಥಾನ ಪಡೆಯುವ ಕನಸು ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಅವರದ್ದಾಗಿದೆ. ಹೀಗಾಗಿ ಈ ಇಬ್ಬರೂ ಆಟಗಾರರಿಗೆ ಈ ಸರಣಿ ಮಹತ್ವದಾಗಿದೆ. ಈ ಸರಣಿಯಲ್ಲಿ ಸ್ಥಿರ ಪ್ರದರ್ಶನ ನೀಡಿ ಏಕದಿನ ವಿಶ್ವಕಪ್‌ಗೆ ತಾವು ಫಿಟ್ ಎಂದು ಸಾಬೀತು ಪಡಿಸುವ ಆಸೆ ಉಭಯ ಆಟಗಾರರಾದ್ದಾಗಿದೆ.

FIFA WC: ಸ್ಪೇನ್‌, ಫ್ರಾನ್ಸ್‌ ಫೈನಲ್‌ಗಾಗಿ ಫೈಟ್‌: ಬೆಂಗಳೂರಿನ ಅಭಿಮಾನಿಗಳಿಗೆ ವಿಶೇಷ ವ್ಯವಸ್ಥೆ

FIFA WC: ಸ್ಪೇನ್‌, ಫ್ರಾನ್ಸ್‌ ಫೈನಲ್‌ಗಾಗಿ ಫೈಟ್‌: ಬೆಂಗಳೂರಿನ ಅಭಿಮಾನಿಗಳಿಗೆ ವಿಶೇಷ ವ್ಯವಸ್ಥೆ

ವಿರಾಟ್‌ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಈಗಾಗಲೇ ಟಿ20 ಹಾಗೂ ಟೆಸ್ಟ್‌ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಹೀಗಾಗಿ ಇವರಿಬ್ಬರೂ ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳನ್ನು ಮಾತ್ರ ಆಡುತ್ತಿದ್ದಾರೆ. ಅದರಲ್ಲೂ ವಿರಾಟ್ ಕೊಹ್ಲಿ ಕಳೆದ ಆರು ತಿಂಗಳುಗಳಿಂದ ಬ್ಲ್ಯೂ ಜೆರ್ಸಿಯಲ್ಲಿ ಕಣಕ್ಕೆ ಇಳಿದಿರಲಿಲ್ಲ. ಅಫ್ಘಾನಿಸ್ತಾನ ವಿರುದ್ಧದ ಏಕದಿನ ಸರಣಿಯ ವೇಳೆ ಗಾಯಕ್ಕೆ ತುತ್ತಾಗಿದ್ದರಿಂದ ಸರಣಿಯಿಂದ ಹೊರನಡೆದಿದ್ದರು. ಹೀಗಾಗಿ ವಿರಾಟ್‌ ಕೊಹ್ಲಿ ಅವರ ಮೇಲೆ ಎಲ್ಲರ ಕಣ್ಣು ನೆಟ್ಟಿತ್ತು. ಆದರೆ ಇಂಗ್ಲೆಂಡ್ ನಡೆದ ಮೊದಲ ಪಂದ್ಯದಲ್ಲಿ ಇವರು ಬಿಗ್ ಇನಿಂಗ್ಸ್ ಕಟ್ಟುವಲ್ಲಿ ವಿಫಲರಾದರು.

Story first published: Tuesday, July 14, 2026, 22:03 [IST]
Other articles published on Jul 14, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+