ವಿರಾಟ್, ರೋಹಿತ್ ನಿವೃತ್ತಿ ಬಗ್ಗೆ ಗೌತಮ್ ಗಂಭೀರ್ ಪ್ರತಿಕ್ರಿಯೆ
ಟೀಮ್ ಇಂಡಿಯಾದ ಸೂಪರ್ ಸ್ಟಾರ್ ಬ್ಯಾಟರ್‌ಗಳು ದಿಢೀರ್ ನಿವೃತ್ತಿ ಪ್ರಕಟಿಸಿದ್ದಾರೆ. ಇಂಗ್ಲೆಂಡ್ ಪ್ರವಾಸಕ್ಕೂ ಮುನ್ನ ನಾಯಕ ರೋಹಿತ್ ಶರ್ಮಾ, ಭರವಸೆಯ ಬ್ಯಾಟರ್ ವಿರಾಟ್ ಕೊಹ್ಲಿ ನಿವೃತ್ತಿ ಪ್ರಕಟಿಸಿದ್ದಾರೆ. ಇವರಿಬ್ಬರ ನಿವೃತ್ತಿಯ ಬಳಿಕ ಹಲವು ಮಾಜಿ ಆಟಗಾರರು ತಮ್ಮ ತಮ್ಮ ಅಭಿಪ್ರಾಯವನ್ನು ತಿಳಿಸಿದ್ದರು. ಆದರೆ ಟೀಮ್ ಇಂಡಿಯಾ ಕೋಚ್ ಗೌತಮ್ ಗಂಭೀರ್ ರಿಯಾಕ್ಷನ್ ನೀಡರಲಿಲ್ಲ. ಈಗ ಅವರ ಪ್ರತಿಕ್ರಿಯೆ ಸಹ ಹೊರ ಬಿದ್ದಿದೆ.
ಭಾರತ ತಂಡದ ಸೂಪರ್ ಸ್ಟಾರ್ ಆಟಗಾರರು ಒಂದೇ ವಾರದ ಅಂತರದಲ್ಲಿ ರೋಹಿತ್, ವಿರಾಟ್ ನಿವೃತ್ತಿಯನ್ನು ಪ್ರಕಟಿಸಿದ್ದಾರೆ. ಇವರಿಬ್ಬರು ಹಠಾತನೆ ವಿದಾಯ ಘೋಷಿಸಿದ್ದು ಟೀಮ್ ಇಂಡಿಯಾಕ್ಕೆ ದೊಡ್ಡ ಪೆಟ್ಟು ಬಿದ್ದಿದೆ. ಮೇ 7 ರಂದು ರೋಹಿತ್ ಶರ್ಮಾ ಟೆಸ್ಟ್‌ಗೆ ಗುಡ್ ಬಾಯ್ ಹೇಳಿದ್ರೆ, ವಿರಾಟ್ ಕೊಹ್ಲಿ ಸಹ ಮೇ 12 ರಂದು ನಿವೃತ್ತಿ ಘೋಷಿಸಿದರು. ಇವರಿಬ್ಬರೂ ಟಿ20 ವಿಶ್ವಕಪ್ ಗೆದ್ದ ಬಳಿಕ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ವಿದಾಯ ಹೇಳಿದ್ದರು. ಈಗ ಟೆಸ್ಟ್‌ಗೂ ನಿವೃತ್ತಿ ಘೋಷಿಸಿದ್ದಾರೆ. ಈ ಇಬ್ಬರ ಆಟ ಇನ್ನು ಬರೀ ಏಕದಿನ ಕ್ರಿಕೆಟ್‌ನಲ್ಲಿ ಮಾತ್ರ ಕಾಣಬಹುದು. ಇವರಿಬ್ಬರ ನಿವೃತ್ತಿಯ ಬಗ್ಗೆ ಕೋಚ್ ಗೌತಮ್ ಗಂಭೀರ್ ಪ್ರತಿಕ್ರಿಯೆ ನೀಡಿದ್ದಾರೆ.

ಕ್ರಿಕೆಟ್ ನೆಕ್ಸಟ್ ಕಾರ್ಯಕ್ರಮದಲ್ಲಿ ಗಂಭೀರ್ ಈ ಇಬ್ಬರೂ ಆಟಗಾರರು ನಿವೃತ್ತಿಯ ಬಗ್ಗೆ ಹೇಳಿಕೆ ನೀಡಿದ್ದಾರೆ. "ಆಟಗಾರ ಆಟವನ್ನು ಆಡಲು ಆರಂಭಿಸಿ, ಆಟದಿಂದ ಹಿಂದೆ ಸರಿದಾಗ, ಅದು ಅವರ ವೈಯಕ್ತಿಕ ನಿರ್ಧಾರವಾಗಿರುತ್ತದೆ. ಇದರಲ್ಲಿ ತಲೆ ತುರಿಸುವ ಹಕ್ಕು ಯಾರಿಗೂ ಇಲ್ಲ. ಕೋಚ್, ಆಯ್ಕೆದಾರರು, ಅಭಿಮಾನಿಗಳು ಯಾರೂ ನಿವೃತ್ತಿಯ ವಿಚಾರದಲ್ಲಿ ಹೇಳುವ ಹಕ್ಕೂ ಇಲ್ಲ. ಅವರ ವೈಯಕ್ತಿಕ ನಿರ್ಧಾರ ಗೌರವಿಸಬೇಕು ಎಂದಿದ್ದಾರೆ.
ಗಂಭೀರ್ ಹೇಳಿದ್ದೇನು?
ಟೀಮ್ ಇಂಡಿಯಾದ ಕೋಚ್ ಗೌತಮ್ ಗಂಭೀರ್, ನಿಶ್ಚಿತವಾಗಿ ಇವರಿಬ್ಬರ ಆಟವನ್ನು ಮಿಸ್ ಮಾಡಿಕೊಳ್ಳಲಿದೆ ಎಂದಿದ್ದಾರೆ. ಹಿರಿಯ ಆಟಗಾರರು ನಿವೃತ್ತಿ ಪಡೆದಿದ್ದರಿಂದ ಯುವ ಆಟಗಾರರಿಗೆ ಅವಕಾಶ ಸಿಗುತ್ತದೆ. ರೋ-ಕೊ ಜೋಡಿ ವಿದಾಯದಿಂದ ತಂಡಕ್ಕೆ ಪೆಟ್ಟು ಬಿದ್ದಿದೆ. ಒಬ್ಬರ ಅನುಪಸ್ಥಿತಿ ಇನ್ನೊಬ್ಬರಿಗೆ ಆಟಕ್ಕೆ ಅವಕಾಶವನ್ನು ಒದಗಿಸುತ್ತದೆ ಎಂದು ಕೋಚ್ ಹೇಳಿದ್ದಾರೆ.

ಚಾಂಪಿಯನ್ಸ್ ಟ್ರೋಫಿಗೂ ಟೀಮ್ ಇಂಡಿಯಾ ಪ್ರವಾಸ ಬೆಳೆಸುತ್ತಿದ್ದಾಗಲೂ ಇದೇ ಪ್ರಶ್ನೆಯನ್ನು ಕೇಳಲಾಗಿತ್ತು. ಈ ವೇಳೆಯೂ ಇದೇ ರೀತಿ ಅವಕಾಶವನ್ನು ಯುವಕರು ಬಳಸಿಕೊಂಡರು. ಹೀಗಾಗಿ ದೇಶಕ್ಕಾಗಿ ವಿಶೇಷ ಸಾಧನೆ ಮಾಡಿದರು ಎಂದು ಗಂಭೀರ್ ತಿಳಿಸಿದ್ದಾರೆ.
ಇಂಗ್ಲೆಂಡ್ ಪ್ರವಾಸಕ್ಕೂ ಮುನ್ನ ಟೀಮ್ ಇಂಡಿಯಾದ ಸ್ಟಾರ್ ಆಟಗಾರರು ನಿವೃತ್ತಿ ಪಡೆದಿದ್ದರಿಂದ ಟೀಮ್ ಇಂಡಿಯಾದ ನಾಯಕ ಯಾರಾಗ್ತಾರೆ ಎಂಬ ಕುತೂಹಲ ಮನೆ ಮಾಡಿದೆ. ಮೇ 24 ರಂದು ಬಿಸಿಸಿಐ ಆಯ್ಕೆ ಸಮಿತಿ ಇಂಗ್ಲೆಂಡ್ ಪ್ರವಾಸಕ್ಕೆ ಭಾರತ ತಂಡವನ್ನು ಪ್ರಕಟಿಸುವ ಸಾಧ್ಯತೆ ಇದೆ. ಈ ವೇಳೆ ಬಿಸಿಸಿಐ ಆಯ್ಕೆ ಸಮಿತಿ ಮುಂದೆ ಸಾಲು ಸಾಲು ಪ್ರಶ್ನೆಗಳು ಉದ್ಭವಿಸಿದ್ದು ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಹುಡುಕುವ ಕಾರ್ಯವನ್ನು ಮಾಡಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications