ಒಂದೇ ಸರಣಿಯಲ್ಲಿ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಮುಖಾಮುಖಿ
ಟೀಮ್ ಇಂಡಿಯಾ ಈಗ ಶ್ರೀಲಂಕಾ ಪ್ರವಾಸವನ್ನು ಮುಗಿಸಿದೆ. ಇನ್ನು ಆಟಗಾರರಿಗೆ ಐದು ವಾರಗಳ ವಿಶ್ರಾಂತಿ ನೀಡಲಾಗಿದೆ. ಈ ಸಮಯವನ್ನು ಸದುಪಯೋಗ ಪಡಿಸಿಕೊಳ್ಳಲು ಟೀಮ್ ಇಂಡಿಯಾ ಆಟಗಾರರು ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಅಂದಹಾಗೆ ಟೀಮ್ ಇಂಡಿಯಾದ ಸ್ಟಾರ್ ಆಟಗಾರರು ಒಂದೇ ಸರಣಿಯಲ್ಲಿ ಮುಖಾಮುಖಿ ಆಗಲಿದ್ದಾರೆ.
ಟೀಮ್ ಇಂಡಿಯಾ ಆಟಗಾರರಿಗೆ ಇದು ರೆಸ್ಟಿಂಗ್ ಟೈಮ್.. ಬಟ್ ಇದ್ದನ್ನು ಸರಿಯಾಗಿ ಸದಪಯೋಗ ಪಡಿಸಿಕೊಳ್ಳಲು ಭರ್ಜರಿ ಪ್ಲ್ಯಾನ್ ಮಾಡಿಕೊಳ್ಳಲಾಗಿದೆ. ಟೀಮ್ ಇಂಡಿಯಾದ ಸ್ಟಾರ್ ಆಟಗಾರರು ಈಗ ದೇಶೀಯ ಟೂರ್ನಿಯನ್ನು ಆಡಲು ಸಿದ್ಧರಾಗುತ್ತಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ. ಸೆಪ್ಟಂಬರ್ 19 ರಿಂದ ಬಾಂಗ್ಲಾ ವಿರುದ್ಧ ಟೆಸ್ಟ್ ಆರಂಭವಾಗಲಿದೆ.

ದುಲೀಪ್ ಟ್ರೋಫಿಯಲ್ಲಿ ಮುಖಾಮುಖಿ
ಟೀಮ್ ಇಂಡಿಯಾದ ಸ್ಟಾರ್ ಆಟಗಾರರಾದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ದುಲೀಪ್ ಟ್ರೋಫಿ ಆಡಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಆದರೆ ಈ ಸ್ಟಾರ್ ಆಟಗಾರು ಯಾವಾಗ ಮೈದಾನ ಪ್ರವೇಶಿಸುತ್ತಾರೆ ಎಂಬ ಬಗ್ಗೆ ಮಾಹಿತಿ ಇಲ್ಲ.
ದುಲೀಪ್ ಟ್ರೋಫಿಗೆ ಎಲ್ಲಾ ಆಟಗಾರರು ಲಭ್ಯರಿರಬೇಕೆಂದು ಭಾರತೀಯ ಆಯ್ಕೆ ಸಮಿತಿ ಬಯಸುತ್ತದೆ. ಸಮಿತಿಯು ಭಾರತ ಎ, ಇಂಡಿಯಾ ಬಿ, ಇಂಡಿಯಾ ಸಿ ಮತ್ತು ಇಂಡಿಯಾ ಡಿ ತಂಡಗಳನ್ನು ಶೀಘ್ರದಲ್ಲೇ ಆಯ್ಕೆ ಮಾಡುತ್ತದೆ.
ಸೆಪ್ಟಂಬರ್ 5 ರಿಂದ ಸರಣಿ
ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಪ್ರಕಾರ, ಸೆಪ್ಟೆಂಬರ್ 5 ರಿಂದ ಆರಂಭವಾಗುವ ಟೂರ್ನಿಯಲ್ಲಿ ಟೀಮ್ ಇಂಡಿಯಾದ ಆಟಗಾರರು ಭಾಗವಹಿಸಬಹುದು. ಕನ್ನಡಿಗ ಕೆ.ಎಲ್ ರಾಹುಲ್, ಶುಭಮನ್ ಗಿಲ್, ಅಕ್ಷರ್ ಪಟೇಲ್, ರವೀಂದ್ರ ಜಡೇಜಾ, ಯಶಸ್ವಿ ಜೈಸ್ವಾಲ್, ಸೂರ್ಯ ಹಾಗೂ ಕುಲ್ದೀಪ್ ಯಾದವ್ ಆಡಬಹುದು ಎಂದು ಹೇಳಲಾಗುತ್ತಿದೆ.

ಬುಮ್ರಾ ಆಡುವುದು ಡೌಟ್?
ಇನ್ನು ಈ ದೇಶೀಯ ಟೂರ್ನಿಯಲ್ಲಿ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಅವರಿಗೆ ವಿಶ್ರಾಂತಿ ನೀಡುವ ಸಾಧ್ಯತೆ ಇದೆ. ಭಾರತ ಇನ್ನು ನಾಲ್ಕು ತಿಂಗಳಲ್ಲಿ 10 ಟೆಸ್ಟ್ ಪಂದ್ಯವನ್ನು ಆಡಲಿದ್ದು ಈ ವೇಳೆ ಬುಮ್ರಾ ಫಿಟ್ನೆಸ್ ಮುಖ್ಯ ಎಂದು ಆಯ್ಕೆದಾರರು ಚಿಂತನೆ ನಡೆಸಿದ್ದಾರೆ. ಇಷ್ಟೇ ಅಲ್ಲದೆ ಬುಮ್ರಾ ಬಾಂಗ್ಲಾದೇಶದ ಸಣಿಯಲ್ಲಿ ತಂಡದ ಭಾಗವಾಗಿರುತ್ತಾರೋ ಇಲ್ಲವೋ ಎಂಬ ಬಗ್ಗೆ ಇನ್ನು ಸ್ಪಷ್ಟ ಮಾಹಿತಿ ಇಲ್ಲ.
ಶಮಿಗೆ ಸಿಗುತ್ತಾ ಚಾನ್ಸ್?
ಈ ಟೂರ್ನಿಯಲ್ಲಿ ಭಾರತದ ಅನುಭವಿ ವೇಗದ ಬೌಲರ್ ಮೊಹಮ್ಮದ್ ಶಮಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಅವರು ಇತ್ತೀಚಿಗೆ ಗಾಯದ ಸಮಸ್ಯೆಯಿಂದ ಚೇತರಿಸಿಕೊಂಡಿದ್ದು, ಎನ್‌ಸಿಎನಲ್ಲಿ ಬೌಲಿಂಗ್ ಅಭ್ಯಾಸವನ್ನು ನಡೆಸುತ್ತಿದ್ದಾರೆ. ದುಲೀಪ್ ಟ್ರೋಫಿಯಲ್ಲಿ 6 ಪಂದ್ಯಗಳು ನಡೆಯಲಿವೆ. ಇದು ಸೆಪ್ಟೆಂಬರ್ 5 ರಿಂದ 24 ರವರೆಗೆ ನಡೆಯಲಿದೆ.
8 ವರ್ಷಗಳ ಬಳಿಕ ದೇಶೀಯ ಟೂರ್ನಿಯಲ್ಲಿ ರೋಹಿತ್
ರೋಹಿತ್ ಶರ್ಮಾ ಸುಮಾರು 8 ವರ್ಷಗಳ ಬಳಿಕ ದೇಶೀಯ ಟೂರ್ನಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಹಿಂದೆ ರೋಹಿತ್ ಶರ್ಮಾ ಗೌತಮ್ ಗಂಭೀರ್ ಅವರ ಕ್ಯಾಪ್ಟನ್ಸಿಯಲ್ಲಿ 2016ರಲ್ಲಿ ಇಂಡಿಯಾ ಬ್ಲ್ಯೂ ತಂಡದ ಪರ ಬ್ಯಾಟ್ ಮಾಡಿದ್ದರು. ಈ ಬಾರಿ ಎಲ್ಲ ಸ್ಟಾರ್ ಆಟಗಾರರು ದೇಶೀಯ ಟೂರ್ನಿಯಲ್ಲಿ ಆಡುವ ಮೂಲಕ ತಂಡದ ಪರ ಮಹತ್ವದ ಪಂದ್ಯಗಳಲ್ಲಿ ಮಿಂಚಲು ಪ್ಲ್ಯಾನ್ ಮಾಡಿಕೊಂಡಿದ್ದಾರೆ. ದೇಶೀಯ ಸರಣಿಯಲ್ಲಿ ಆಟಗಾರರ ಪ್ರದರ್ಶನ ಹೇಗಿರಲಿದೆ ಕಾದು ನೋಡಬೇಕು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications