Rohit Sharma Retirement: ವಿರಾಟ್ ಕೊಹ್ಲಿ ಬಳಿಕ ಟಿ20 ಕ್ರಿಕೆಟ್‌ಗೆ ವಿದಾಯ ಹೇಳಿದ ರೋಹಿತ್ ಶರ್ಮಾ
ಜೂನ್ 30 ಭಾನುವಾರ, 2024ರ ಟಿ20 ವಿಶ್ವಕಪ್ ಗೆಲುವಿನ ಸಂಭ್ರಮದಲ್ಲಿ ಇಡೀ ದೇಶ ಮುಳುಗಿದೆ. ರೋಹಿತ್ ಶರ್ಮಾ ನಾಯಕತ್ವದಲ್ಲಿ ಭಾರತವು 11 ವರ್ಷಗಳ ನಂತರ ಐಸಿಸಿ ಟ್ರೋಫಿಯ ಬರವನ್ನು ಕೊನೆಗೊಳಿಸಿ ಟಿ20 ವಿಶ್ವಕಪ್ ಪ್ರಶಸ್ತಿಯನ್ನು ಗೆದ್ದಿದೆ.
ಈ ಸಂಭ್ರಮದ ನಡುವೆ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಒಂದರ ಹಿಂದೆ ಒಂದರಂತೆ ಎರಡು ಶಾಕ್‌ಗಳು ಎದುರಾಗಿವೆ. ಭಾರತದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಜೊತೆಗೆ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಟಿ20 ಅಂತರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ.

ಈ ಹಿಂದೆ ವಿರಾಟ್ ಕೊಹ್ಲಿ ವಿಶ್ವಕಪ್ ಫೈನಲ್ ಪಂದ್ಯವನ್ನು ತಮ್ಮ ಟಿ20 ವೃತ್ತಿಜೀವನದ ಕೊನೆಯ ಪಂದ್ಯ ಎಂದು ಹೇಳಿ ನಿವೃತ್ತಿ ಸುಳಿಯುವ ನೀಡಿದ್ದರು. ಇದರ ಬೆನ್ನಲ್ಲೇ ರೋಹಿತ್ ಶರ್ಮಾ ಅವರು ಟಿ20 ಕ್ರಿಕೆಟ್‌ಗೆ ಗುಡ್ ಬೈ ಹೇಳಿದ್ದಾರೆ.
ಐಸಿಸಿ ಮತ್ತು ಬಿಸಿಸಿಐ ತಮ್ಮ ಅಧಿಕೃತ ಸಾಮಾಜಿಕ ಮಾಧ್ಯಮ ಖಾತೆ ಎಕ್ಸ್‌ನಲ್ಲಿ ಟಿ20 ಅಂತರಾಷ್ಟ್ರೀಯ ಕ್ರಿಕೆಟ್‌ನಿಂದ ರೋಹಿತ್ ಶರ್ಮಾ ನಿವೃತ್ತಿಯಾದ ಕುರಿತು ಮಾಹಿತಿಯನ್ನು ಹಂಚಿಕೊಂಡಿವೆ.
ಪಂದ್ಯದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರೋಹಿತ್ ಶರ್ಮಾ, 'ಇದು ನನ್ನ ಕೊನೆಯ ಪಂದ್ಯವೂ ಆಗಿತ್ತು. ನಿವೃತ್ತಿಯಾಗಲು ಇದಕ್ಕಿಂತ ಉತ್ತಮ ಸಮಯ ಇರಲಾರದು.
ನಾನು ಟ್ರೋಫಿಯನ್ನು ಕೆಟ್ಟದಾಗಿ ಬಯಸಿದ್ದೆ. ಅದನ್ನು ಪದಗಳಲ್ಲಿ ವಿವರಿಸುವುದು ತುಂಬಾ ಕಷ್ಟ. ಇದು ನನಗೆ ಬೇಕಾಗಿರುವುದು (ಟಿ20 ವಿಶ್ವಕಪ್) ಅದೇ ಸಿಕ್ಕಿದೆ. ನನ್ನ ಜೀವನದಲ್ಲಿ ಇದಕ್ಕಾಗಿ ನಾನು ತುಂಬಾ ಹತಾಶನಾಗಿದ್ದೆ. ಈ ಬಾರಿ ಸಾಧನೆ ಮಾಡಿರುವುದು ಸಂತಸ ತಂದಿದೆ ಎಂದು ಟಿ20 ಕ್ರಿಕೆಟ್ ಗುಡ್ ಬೈ ಹೇಳಿದ್ದಾರೆ.
ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ರೋಹಿತ್ ಶರ್ಮಾ ನಿವೃತ್ತಿ ಕುರಿತು ಟೀಮ್ ಇಂಡಿಯಾ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಪ್ರತಿಕ್ರಿಯಿಸಿ, 'ನಾನು ರೋಹಿತ್ ನನ್ನು ಒಬ್ಬ ವ್ಯಕ್ತಿಯಾಗಿ ಮಿಸ್ ಮಾಡಿಕೊಳ್ಳುತ್ತೇನೆ. ರೋಹಿತ್ ಯಾವ ರೀತಿಯ ವ್ಯಕ್ತಿ ಎಂದರೆ ನನಗೆ ನೀಡಿದ ಗೌರವ, ಕಾಳಜಿ ಮತ್ತು ಬದ್ಧತೆ ನನ್ನನ್ನು ಮೆಚ್ಚಿಸುತ್ತದೆ.
ರೋಹಿತ್ ತಂಡಕ್ಕಾಗಿ ಸಾಕಷ್ಟು ಕೊಡುಗೆ ನೀಡಿದ್ದಾರೆ. ನಾನು ತುಂಬ ಮಿಸ್ ಮಾಡಿಕೊಳ್ಳುವ ವ್ಯಕ್ತಿ ರೋಹಿತ್ ಶರ್ಮಾ ಎಂದು ತಿಳಿಸಿದ್ದಾರೆ.
ರೋಹಿತ್ ಟಿ20 ಕ್ರಿಕೆಟ್ ಪಯಣ
ಆಶ್ಚರ್ಯಕರ ಸಂಗತಿಯೆಂದರೆ, ರೋಹಿತ್ ಶರ್ಮಾ 2007ರ ಟಿ20 ವಿಶ್ವಕಪ್ ಮೂಲಕ ಚುಟುಕು ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು. ಇದೀಗ 2024ರ ಟಿ20 ವಿಶ್ವಕಪ್‌ನಲ್ಲಿ ತಮ್ಮ ಕೊನೆಯ ಪಂದ್ಯವನ್ನು ಆಡಿದ್ದು, ಟ್ರೋಫಿಯೊಂದಿಗೆ ಗೌರವಾನ್ವಿತ ಮತ್ತು ಹೆಮ್ಮೆಯ ವಿದಾಯ ಘೋಷಿಸಿದ್ದಾರೆ.
ರೋಹಿತ್ ಶರ್ಮಾ 2007 ರಿಂದ 2024 ರವರೆಗೆ ನಡೆಯಲಿರುವ ಎಲ್ಲಾ ಟಿ20 ವಿಶ್ವಕಪ್‌ಗಳಲ್ಲಿ ಭಾಗವಹಿಸಿದ್ದಾರೆ. ಬಾಂಗ್ಲಾದೇಶದ ಆಲ್‌ರೌಂಡರ್ ಶಾಕಿಬ್ ಅಲ್ ಹಸನ್ ಕೂಡ ಎಲ್ಲಾ ಆವೃತ್ತಿಗಳಲ್ಲಿ ಕಾಣಿಸಿಕೊಂಡಿದ್ದಾರೆ.
ರೋಹಿತ್ ಶರ್ಮಾ ಅವರ ಟಿ20 ವೃತ್ತಿಜೀವನದ ಬಗ್ಗೆ ನೋಡುವುದಾದರೇ, ಅದ್ಭುತ ದಾಖಲೆಗಳನ್ನು ನಿರ್ಮಿಸಿದ್ದಾರೆ. 151 ಟಿ20 ಪಂದ್ಯಗಳನ್ನು ಆಡಿರುವ ರೋಹಿತ್ ಶರ್ಮಾ 4231 ರನ್ ಗಳಿಸಿದ್ದಾರೆ.
ಟಿ20 ಕ್ರಿಕೆಟ್‌ನಲ್ಲಿ 32.05 ರ ಸರಾಸರಿಯಲ್ಲಿ 5 ಶತಕಗಳು ಮತ್ತು 32 ಅರ್ಧ ಶತಕಗಳನ್ನು ಬಾರಿಸಿದ್ದಾರೆ.
ಈ ವರ್ಷದ ಜನವರಿ ತಿಂಗಳಲ್ಲಿ ನಡೆದ ಅಫ್ಘಾನಿಸ್ತಾನ ವಿರುದ್ಧದ ಟಿ20 ಸರಣಿಯಲ್ಲಿ ರೋಹಿತ್ 140.89ರ ಸ್ಟ್ರೈಕ್ ರೇಟ್‌ನಲ್ಲಿ (121)ಶತಕ ಸಿಡಿಸಿ ಮಿಂಚಿದ್ದರು ಗಳಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications