Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಅನಂತ್‌ ಅಂಬಾನಿ ಮದುವೆಗೆ ಕ್ಯಾಪ್ಟನ್‌ ರೋಹಿತ್‌ ಗೈರು; ವಿಂಬಲ್ಡನ್‌ನಲ್ಲಿ ಕಾಣಿಸಿಕೊಂಡ ಹಿಟ್‌ಮ್ಯಾನ್‌

ಜುಲೈ 12 ಶುಕ್ರವಾರ, ಟೀಮ್‌ ಇಂಡಿಯಾದ ಚಾಂಪಿಯನ್ ನಾಯಕ ರೋಹಿತ್ ಶರ್ಮಾ ಅವರು ಲಂಡನ್‌ನಲ್ಲಿ ನಡೆಯುತ್ತಿರುವ 2024ರ ಪುರುಷರ ವಿಂಬಲ್ಡನ್ ಗ್ರ್ಯಾಂಡ್‌ ಸ್ಲಾಮ್ ಟೆನಿಸ್‌ ಟೂರ್ನಿಯಲ್ಲಿ ಕಾಣಿಸಿಕೊಂಡಿದ್ದಾರೆ.

ಒಂದೆಡೆ ಭಾರತದಲ್ಲಿ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚಂಟ್ ಮದುವೆಯಲ್ಲಿ ಹಲವು ಕ್ರಿಕೆಟಿಗರ ಫೋಟೋಗಳು, ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್‌ ವೈರಲ್‌ ಆಗಿವೆ. ಈ ನಡುವೆ ಕ್ಯಾಪ್ಟನ್‌ ರೋಹಿತ್‌ ಅವರ ವಿಂಬಲ್ಡನ್ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸಿದೆ.

Rohit Sharma appeared in mens Wimbledon

ಸ್ಪೇನ್‌ನ ಕಾರ್ಲೋಸ್ ಅಲ್ಕರಾಜ್ ಮತ್ತು ರಷ್ಯಾದ ಡೇನಿಯಲ್ ಮೆಡ್ವೆಡೆವ್ ನಡುವೆ ನಡೆದ ವಿಂಬಲ್ಡನ್ ಟೆನಿಸ್‌ನ ಪುರುಷರ ಸಿಂಗಲ್ಸ್ ಸೆಮಿಫೈನಲ್‌ ಪಂದ್ಯವನ್ನು ರೋಹಿತ್‌ ಶರ್ಮಾ ವಿಕ್ಷೀಸಿದ್ದಾರೆ.

ವಿಂಬಲ್ಡನ್‌ನಲ್ಲಿ ಶುಕ್ರವಾರ ನಡೆದ ಮೊದಲ ಪುರುಷರ ಸೆಮಿಫೈನಲ್‌ನಲ್ಲಿ ಕಾರ್ಲೋಸ್ ಅಲ್ಕರಾಜ್ 6-7, 6-3, 6-4, 6-4 ಸೆಟ್‌ಗಳಿಂದ ಡೇನಿಯಲ್ ಮೆಡ್ವೆಡೆವ್ ಅವರನ್ನು ಸೋಲಿಸಿದ್ದಾರೆ. ಈ ಮೂಲಕ ವಿಂಬಲ್ಡನ್‌ ಫೈನಲ್‌ಗೆ ಸತತ ಎರಡನೇ ಬಾರಿಗೆ ಕಾರ್ಲೋಸ್ ಅಲ್ಕರಾಜ್ ಎಂಟ್ರಿ ಕೊಟ್ಟಿದ್ದಾರೆ.

ಇತ್ತೀಚೆಗೆ ರೋಹಿತ್ ಶರ್ಮಾ ನಾಯಕತ್ವದಲ್ಲಿ ಟೀಮ್‌ ಇಂಡಿಯಾ ವಿಶ್ವಕಪ್ ಗೆದ್ದು ಇತಿಹಾಸ ನಿರ್ಮಿಸಿತ್ತು. ಹೀಗಾಗಿ ರೋಹಿತ್‌ ಶರ್ಮಾ ಅವರಿಗೆ ಅದ್ಧೂರಿಯಾಗಿ ವಿಂಬಲ್ಡನ್‌ಗೆ ಸ್ವಾಗತಿಸಲಾಗಿದೆ. ರೋಹಿತ್ ಶರ್ಮಾ ಅವರ ಫೋಟೋವನ್ನು ವಿಂಬಲ್ಡನ್ ಅಧಿಕೃತ ಎಕ್ಸ್‌ (ಟ್ವೀಟರ್‌) ಖಾತೆಯಿಂದ ಹಂಚಿಕೊಳ್ಳಲಾಗಿದೆ.

ಅದರಲ್ಲಿ 'ವಿಂಬಲ್ಡನ್ ರೋಹಿತ್ ಶರ್ಮಾಗೆ ಸ್ವಾಗತ' ಎಂದು ಬರೆಯಲಾಗಿದೆ. ರೋಹಿತ್ ಶರ್ಮಾ ಅವರ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ವೈರಲ್ ಆಗುತ್ತಿದೆ. ಫೋಟೋದಲ್ಲಿ ಹಿಟ್‌ಮ್ಯಾನ್ ಕೋಟ್ ಮತ್ತು ಪ್ಯಾಂಟ್ ಜೊತೆಗೆ ಕಪ್ಪು ಕನ್ನಡಕವನ್ನು ಧರಿಸಿದ್ದು, ನಕ್ಷತ್ರದಂತೆ ಹೊಳೆಯುತ್ತಿದ್ದಾರೆ.

ವಿಂಬಲ್ಡನ್‌ನಲ್ಲಿ ರೋಹಿತ್ -ಕಾರ್ತಿಕ್

ಕ್ರಿಕೆಟ್ ಜಗತ್ತಿನ ಕೋಟ್ಯಂತರ ಜನರ ಮನ ಗೆದ್ದ ನಂತರ ರೋಹಿತ್ ಶರ್ಮಾ ಲಂಡನ್‌ಗೆ ವಿಮಾನ ಏರಿದರು. ರೋಹಿತ್ ಶರ್ಮಾ ಅಲ್ಲದೆ ಟೀಮ್‌ ಇಂಡಿಯಾ ಮಾಜಿ ವಿಕೆಟ್‌ಕೀಪರ್‌ ಮತ್ತು ಬ್ಯಾಟರ್‌ ದಿನೇಶ್ ಕಾರ್ತಿಕ್ ಕೂಡ ವಿಂಬಲ್ಡನ್‌ ಸೆಮಿಫೈನಲ್ ಪಂದ್ಯವನ್ನು ಆನಂದಿಸಲು ಬಂದಿದರು.

ದಿನೇಶ್ ಕಾರ್ತಿಕ್ ಅವರೊಂದಿಗೆ ಅವರ ಪತ್ನಿ ದೀಪಿಕಾ ಪಳ್ಳಿಕಲ್ ಕೂಡ ಆಗಮಿಸಿದರು. ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹ ಸಮಾರಂಭದಲ್ಲಿ ಅನೇಕ ಕ್ರಿಕೆಟ್ ತಾರೆಯರು ಭಾಗವಹಿಸಿದರು. ಆದರೆ ದಿನೇಶ್ ಕಾರ್ತಿಕ್ ಮತ್ತು ರೋಹಿತ್ ಶರ್ಮಾ ಅವರು ಅನಂತ್‌ ಅಂಬಾನಿ ಮದುವೆಗೆ ಚಕ್ಕರ್‌ ಹೊಡೆದು ವಿಂಬಲ್ಡನ್‌ ಸೆಮಿಫೈನಲ್‌ ಪಂದ್ಯದ ವೇಳೆ ಕಾಣಿಸಿಕೊಂಡಿದ್ದಾರೆ.

ವಿಂಬಲ್ಡನ್ ಗ್ರ್ಯಾಂಡ್‌ ಸ್ಲಾಮ್ ಟೆನಿಸ್‌ ಟೂರ್ನಿಯನ್ನು ನೋಡಲು ಟೀಮ್‌ ಇಂಡಿಯಾ ಆಟಗಾರರು ಹೋಗಿರುವುದು ಇದೇ ಮೊದಲಲ್ಲ. ಇದಕ್ಕೂ ಮುನ್ನ ಕ್ರಿಕೆಟ್‌ ದೇವರು ಸಚಿನ್‌ ತೆಂಡೂಲ್ಕರ್‌, ಮಾಜಿ ನಾಯಕ ಎಂಎಸ್‌ ಧೋನಿ ಮತ್ತು ಸ್ಟಾರ್‌ ಬ್ಯಾಟರ್‌ ವಿರಾಟ್‌ ಕೊಹ್ಲಿ ಕೂಡ ವಿಂಬಲ್ಡನ್‌ನಲ್ಲಿ ಕಾಣಿಸಿಕೊಂಡು ಸದ್ದು ಮಾಡಿದ್ದಾರೆ.

Story first published: Friday, July 12, 2024, 23:00 [IST]
Other articles published on Jul 12, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+