Rohit Sharma: ಬುಮ್ರಾ, ಕಾನ್‌ಸ್ಟಾಸ್ ವಿವಾದ: ರೋಹಿತ್ ಶರ್ಮಾ ಹೇಳಿದ್ದೇನು?
ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಐದನೇ ಟೆಸ್ಟ್ ಪಂದ್ಯ ಸಿಡ್ನಿಯಲ್ಲಿ ನಡೆಯುತ್ತಿದೆ. ಈ ಪಂದ್ಯದ ಹೈಲೇಟ್ ಎಂದರೆ ಆ ಒಂದು ಘಟನೆ. ಈ ಘಟನೆ ಉಭಯ ತಂಡದ ಆಟಗಾರರ ಚಿತ್ತ ಕದ್ದಿದೆ. ಆಸ್ಟ್ರೇಲಿಯಾ ತಂಡದ ಬ್ಯಾಟಿಂಗ್ ವೇಳೆ ಯುವ ಆಟಗಾರ ಸ್ಯಾಮ್ ಕಾನ್‌ಸ್ಟಾಸ್ ಹಾಗೂ ಟೀಮ್ ಇಂಡಿಯಾದ ನಾಯಕ ಜಸ್ಪ್ರಿತ್ ಬುಮ್ರಾ ಅವರ ನಡುವೆ ವಾಗ್ವಾದ ನಡೆಯಿತು. ಈ ಘಟನೆ ಬಹಳಷ್ಟು ಸುದ್ದಿಯಾಯಿತು. ಈ ಪ್ರಕರಣದ ಬಗ್ಗೆ ಟೀಮ್ ಇಂಡಿಯಾದ ನಾಯಕ ರೋಹಿತ್ ಶರ್ಮಾ ಪ್ರತಿಕ್ರಿಯೇ ನೀಡಿದ್ದಾರೆ.
ರೋಹಿತ್ ಶರ್ಮಾ, ಟೀಮ್ ಇಂಡಿಯಾದ ಆಟಗಾರ ಹಾಗೂ ಹಂಗಾಮಿ ನಾಯಕನ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ. ನಮ್ಮ ಎದುರಾಳಿ ತಂಡದ ಆಟಗಾರರು ತಾಳ್ಮೆ ಕಳೆದುಕೊಂಡರೆ, ನಮ್ಮ ಆಟಗಾರರು ತಾಳ್ಮೆಯಿಂದ ಆಟಗಾರರು ತಮ್ಮ ಕೆಲಸ ಮಾಡುತ್ತಲೇ ಇರುತ್ತಾರೆ ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.

ರೋಹಿತ್ ಶರ್ಮಾ ಹೇಳಿದ್ದೇನು?
ಎದುರಾಳಿ ತಂಡದ ಯಾವುದೇ ಆಟಗಾರ ನಮ್ಮ ತಂಡದ ಆಟಗಾರರನ್ನು ಕೆಣಕಿದರೆ, ಅದನ್ನು ನೋಡಿ ಸುಮ್ಮನೆ ಕುಳಿತು ಕೊಳ್ಳಲು ಸಾಧ್ಯವಿಲ್ಲ. ಕ್ರಿಕೆಟ್ ಆಟದಲ್ಲಿ ನಿಷ್ಪ್ರಯೋಜಕ ಮಾತುಗಳಿಗೆ ಯಾವುದೇ ಆಸ್ಪದವಿಲ್ಲ. ನಮ್ಮ ತಂಡದ ಆಟಗಾರರು ತಮ್ಮ ಕೆಲಸದ ಮೇಲೆ ಯಾವಾಗಲೂ ಏಕಾಗ್ರತೆ ಹೊಂದಿರುತ್ತಾರೆ. ಎದುರಾಳಿ ತಂಡದ ಆಟಗಾರರು ಕೆಣಕಿದರೆ ನಮ್ಮ ಆಟಗಾರರು ಸುಮ್ನೆ ಇರುವ ಪ್ರಶ್ನೆಯೇ ಇಲ್ಲ. ಈ ವಿಚಾರದ ಬಗ್ಗೆ ರೋಹಿತ್ ಶರ್ಮಾ ಚಾನೆಲ್ 7 ಜೊತೆ ತಮ್ಮ ಅನಿಸಿಕೆ ಹಂಚಿಕೊಂಡರು.
ಸ್ಯಾಮ್ ಕಾನ್‌ಸ್ಟಾಸ್ ಅವರ ನಡುವಳಿಕೆಯನ್ನು ಟೀಮ್ ಇಂಡಿಯಾದ ನಾಯಕ ರೋಹಿತ್ ಶರ್ಮಾ ಹಾಗೂ ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ಸ್ಯಾಮ್ ಕಾನ್‌ಸ್ಟಾಸ್ ಅವರ ನಡೆಯನ್ನು ಟೀಕಿಸಿದ್ದಾರೆ. ಸ್ಯಾಮ್ ಕಾನ್‌ಸ್ಟಾಸ್ ಅವರ ನಡುವಳಿಕೆಯನ್ನು ಟೀಕೆಸಿದ್ದಾರೆ.
ಪಾಂಟಿಂಗ್ ಹೇಳಿದ್ದೇನು?
ಟೀಮ್ ಇಂಡಿಯಾದ ಸ್ಟಾರ್ ಆಟಗಾರ ಬುಮ್ರಾ ಅವರಿಗೆ ತೊಂದರೆ ನೀಡಲು ಯಾರು ಬಯಸುವುದಿಲ್ಲ. ಇಡಿ ಸರಣಿಯಲ್ಲಿ ಅವರು ಬೌಲಿಂಗ್ ಮಾಡಿದ ಧಾಟಿಯನ್ನು ಶ್ಲಾಘಿಸಬೇಕು. ಅಲ್ಲದೆ ಉಸ್ಮಾನ್ ಖವಾಜ್ ಅವರನ್ನು ಇದೇ ಸರಣಿಯಲ್ಲಿ ಐದು ಬಾರಿ ಔಟ್ ಮಾಡಿದ ಧಾಟಿ ನಿಜಕ್ಕೂ ಮೆಚ್ಚುಗೆಗೆ ಪಾತ್ರವಾಗಿದೆ. ಇವರನ್ನು ದ್ವೇಷಿಸಲು ಯಾವುದೇ ಕಾರಣವು ಇಲ್ಲವೇ ಇಲ್ಲ. ಉಸ್ಮಾನ್ ಖವಾಜಾ ಹಾಗೂ ಬುಮ್ರಾ ನಡುವೆ ಸ್ಯಾಮ್ ಕಾನ್‌ಸ್ಟಾಸ್ ಮಧ್ಯೆ ಬಂದಿರುವುದು ಸರಿಯಿಲ್ಲ ಎಂದು ರಿಕಿ ಪಾಂಟಿಂಗ್ ತಿಳಿಸಿದ್ದಾರೆ.
ಪಂದ್ಯದ ಚಿತ್ರಣ
ಭಾರತ ಮೊದಲ ಇನಿಂಗ್ಸ್‌ನಲ್ಲಿ 185 ರನ್‌ಗಳಿಗೆ ಆಲೌಟ್ ಆಯಿತು. ಆಸ್ಟ್ರೇಲಿಯಾ ಮೊದಲ ಇನಿಂಗ್ಸ್‌ನಲ್ಲಿ 181 ರನ್‌ಗಳಿಗೆ ಆಲೌಟ್ ಆಯಿತು. ಈ ಮೂಲಕ ಭಾರತ ಇನಿಂಗ್ಸ್‌ನಲ್ಲಿ 4 ರನ್ ಮುನ್ನಡೆ ಸಾಧಿಸಿದೆ. ಭಾರತ ಎರಡನೇ ಇನಿಂಗ್ಸ್‌ನಲ್ಲಿ 6 ವಿಕೆಟ್‌ಗೆ 141 ರನ್ ಸಿಡಿಸಿದೆ. ಟೀಮ್ ಇಂಡಿಯಾದ ಪರ ರವೀಂದ್ರ ಜಡೇಜಾ ಹಾಗೂ ವಾಷಿಂಗ್ಟನ್ ಸುಂದರ್ ಮೂರನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications