ವಿರಾಟ್ ಕೊಹ್ಲಿ ಹಿಂದಿಕ್ಕಿ ಟಿ20ಐ ವಿಶ್ವದಾಖಲೆ ಬರೆದ ರೋಹಿತ್ ಶರ್ಮಾ

ಮೌಂಟ್ ಮೌಂಗನುಯಿ, ಫೆಬ್ರವರಿ 3: ಮೌಂಟ್ ಮೌಂಗನ್ಯುಯಿಯಲ್ಲಿ ಭಾನುವಾರ (ಫೆಬ್ರವರಿ 2) ನಡೆದ ಭಾರತ-ನ್ಯೂಜಿಲೆಂಡ್ ಐದನೇ ಮತ್ತು ಕೊನೆಯ ಟಿ20ಐ ಪಂದ್ಯದಲ್ಲಿ ಟೀಮ್ ಇಂಡಿಯಾ ಉಪನಾಯಕ ರೋಹಿತ್ ಶರ್ಮಾ ವಿಶ್ವದಾಖಲೆಯೊಂದನ್ನು ನಿರ್ಮಿಸಿದ್ದಾರೆ. ಈ ಮೂಲಕ ವಿರಾಟ್ ಕೊಹ್ಲಿ ಹೆಸರಿನಲ್ಲಿದ್ದ ವಿಶ್ವದಾಖಲೆಯನ್ನು ರೋಹಿತ್ ಸರಿಗಟ್ಟಿದ್ದಾರೆ.
ನ್ಯೂಜಿಲೆಂಡ್ ಪ್ರವಾಸದಲ್ಲಿರುವ ಭಾರತ ತಂಡ, ಟಿ20ಐ ಸರಣಿಯ ಎಲ್ಲಾ ಐದೂ ಪಂದ್ಯಗಳನ್ನು ಗೆದ್ದು ಪಾರಮ್ಯ ಮೆರೆದಿದೆ. ಇತ್ತ ಆತಿಥೇಯ ನ್ಯೂಜಿಲೆಂಡ್ 5-0ಯಿಂದ ಸರಣಿ ವೈಟ್‌ವಾಷ್ ಮುಖಭಂಗ ಅನುಭವಿಸುವಂತಾಗಿದೆ.
ಭಾನುವಾರದ ಪಂದ್ಯದಲ್ಲಿ ರೋಹಿತ್, ಸ್ಫೋಟಕ ಅರ್ಧಶತಕ ಬಾರಿಸಿದ್ದರಿಂದ ವಿರಾಟ್ ಕೊಹ್ಲಿ ಹೆಸರಿನಲ್ಲಿದ್ದ ದಾಖಲೆ ಪತನಗೊಂಡಿದೆ.

ರೋಚಕ 7 ರನ್ ಜಯ
ಮೌಂಟ್ ಮೌಂಗನ್ಯುಯಿ ಪಂದ್ಯದಲ್ಲಿ ಎಂದಿನ ನಾಯಕ ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ತಂಡದ ನಾಯಕತ್ವ ವಹಿಸಿಕೊಂಡಿದ್ದ ರೋಹಿತ್ ಶರ್ಮಾ, 41 ಎಸೆತಗಳಿಗೆ 60 ರನ್ ಬಾರಿಸಿದ್ದರು. ಇನ್ನು ಕೆಎಲ್ 45, ಶ್ರೇಯಸ್ ಐಯ್ಯರ್ 33 ರನ್ ಸೇರ್ಪಡೆಯೊಂದಿಗೆ ಭಾರತ 20 ಓವರ್‌ಗೆ 3 ವಿಕೆಟ್ ನಷ್ಟದಲ್ಲಿ 163 ರನ್ ಬಾರಿಸಿತ್ತು. ಕಿವೀಸ್ 156 ರನ್ ಪೇರಿಸಿ 7 ರನ್‌ನಿಂದ ಸೋತಿತು.

ಟಿ20ಐ ವಿಶ್ವದಾಖಲೆ
ಐದನೇ ಟಿ20ಐ ಪಂದ್ಯದಲ್ಲಿ ರೋಹಿತ್ ಶರ್ಮಾ 60 ರನ್ ಪೇರಿಸಿದ್ದರಿಂದ, ಟಿ20ಐನಲ್ಲಿ ಅತ್ಯಧಿಕ ಬಾರಿ 50+ ರನ್ ಬಾರಿಸಿದ ವಿಶ್ವ ದಾಖಲೆಗೆ ಹಿಟ್‌ಮ್ಯಾನ್ ಕಾರಣಾಗಿದ್ದಾರೆ. ಒಟ್ಟು 21 ಅರ್ಧ ಶತಕಗಳು ಮತ್ತು 4 ಶತಕಗಳಿಂದ ರೋಹಿತ್ ಈ ದಾಖಲೆ ನಿರ್ಮಿಸಿದ್ದಾರೆ.

ಕೊಹ್ಲಿ ದಾಖಲೆ ಬದಿಗೆ
ಅಂತಾರಾಷ್ಟ್ರೀಯ ಟಿ20ಯಲ್ಲಿ ವಿರಾಟ್ ಕೊಹ್ಲಿ ಒಟ್ಟಿಗೆ 24 ಅರ್ಧ ಶತಕಗಳ ದಾಖಲೆ ಹೊಂದಿದ್ದಾರೆ. ಕೊಹ್ಲಿ ಒಂದೂ ಶತಕ ಬಾರಿಸಿಲ್ಲ. ಹೀಗಾಗಿ ಟಿ20ಐನಲ್ಲಿ ಅತೀ ಹೆಚ್ಚು ಬಾರಿ 50+ ರನ್ ಸಾಧಕರ ಸಾಲಿನಲ್ಲಿ ಸದ್ಯ ರೋಹಿತ್ ಶರ್ಮಾ ಮೊದಲ ಸ್ಥಾನದಲ್ಲಿದ್ದಾರೆ.

ತೃತೀಯ ಸ್ಥಾನದಲ್ಲಿ ಇಬ್ಬರು
ಟಿ20ಐನಲ್ಲಿ ಅತೀ ಹೆಚ್ಚು ಬಾರಿ 50+ ರನ್ ಬಾರಿಸಿದ ದಾಖಲೆ ಯಾದಿಯಲ್ಲಿ ನ್ಯೂಜಿಲೆಂಡ್‌ನ ಮಾರ್ಟಿನ್ ಗಪ್ಟಿಲ್ ಮತ್ತು ಐರ್ಲೆಂಡ್‌ನ ಪೌಲ್ ಸ್ಟಿರ್ಲಿಂಗ್ ತೃತೀಯ ಸ್ಥಾನದಲ್ಲಿದ್ದಾರೆ. ಇಬ್ಬರೂ 17 ಬಾರಿ 50+ ರನ್ ಗಳಿಸಿದ್ದಾರೆ. ಇನ್ನು ಆಸ್ಟ್ರೇಲಿಯಾ ಸ್ಫೋಟಕ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್ (16 ಬಾರಿ 50+ ರನ್) ಅನಂತರದ ಸ್ಥಾನದಲ್ಲಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications