For Quick Alerts
ALLOW NOTIFICATIONS  
For Daily Alerts
 

IND vs SA: ಧೋನಿ ಬಳಿಕ ದಕ್ಷಿಣ ಆಫ್ರಿಕಾ ನೆಲದಲ್ಲಿ ಈ ಸಾಧನೆ ಮಾಡಿದ ಭಾರತದ 2ನೇ ನಾಯಕ ರೋಹಿತ್ ಶರ್ಮಾ

ಗುರುವಾರ, ಜನವರಿ 4ರಂದು ಕೇಪ್ ಟೌನ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯವನ್ನು ಗೆಲ್ಲುವ ಮೂಲಕ ಭಾರತ ತಂಡ ಐತಿಹಾಸಿಕ ಸಾಧನೆ ಮಾಡಿತು. ಮೊದಲ ಬಾರಿಗೆ ನ್ಯೂಲ್ಯಾಂಡ್ಸ್‌ನಲ್ಲಿ ಟೆಸ್ಟ್ ಪಂದ್ಯ ಗೆದ್ದ ಭಾರತ ತಂಡ, ದಕ್ಷಿಣ ಆಫ್ರಿಕಾ ನೆಲದಲ್ಲಿ ಟೆಸ್ಟ್ ಸರಣಿಯನ್ನು ಎರಡನೇ ಬಾರಿಗೆ ಸಮಬಲಗೊಳಿಸಿತು.

ಭಾರತ ತಂಡದ ನಾಯಕ ರೋಹಿತ್ ಶರ್ಮಾ ಅವರು ಮಾಜಿ ನಾಯಕ ಎಂಎಸ್ ಧೋನಿ ಅವರ ಅಪರೂಪದ ಸಾಧನೆಯನ್ನು ಅನುಕರಿಸಿದರು. ರೋಹಿತ್ ಶರ್ಮಾ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಸರಣಿಯನ್ನು ಡ್ರಾ ಮಾಡಿದ ಭಾರತದ ಎರಡನೇ ನಾಯಕರೆನಿಸಿದರು.

Rohit Sharma Became the 2nd Indian Captain After MS Dhoni To Achieve This Feat in South Africa

ಸೆಂಚುರಿಯನ್‌ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದ ಸೋಲಿನ ನಂತರ, ಭಾರತ ತಂಡ ಬಲವಾಗಿ ಪುನರಾಗಮನ ಮಾಡಿತು ಮತ್ತು ಕಠಿಣ ಕೇಪ್ ಟೌನ್ ಪಿಚ್‌ನಲ್ಲಿ ಆತಿಥೇಯ ದಕ್ಷಿಣ ಆಫ್ರಿಕಾ ತಂಡವನ್ನು 7 ವಿಕೆಟ್‌ಗಳಿಂದ ಸೋಲಿಸಿತು.

ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರತದ ಬೌಲರ್‌ಗಳು ಮುಂಚೂಣಿಯಲ್ಲಿದ್ದರು. ಮೊದಲ ಇನ್ನಿಂಗ್ಸ್‌ನಲ್ಲಿ ದಕ್ಷಿಣ ಆಫ್ರಿಕಾವನ್ನು ಕೇವಲ 55 ರನ್‌ಗಳಿಗೆ ಆಲೌಟ್ ಮಾಡಿದರು. ಮೊಹಮ್ಮದ್ ಸಿರಾಜ್ 6 ವಿಕೆಟ್ ಕಬಳಿಸುವ ಮೂಲಕ ಮೊದಲನೇ ದಿನದ ಮೊದಲ ಸೆಷನ್‌ನೊಳಗೆ ದಕ್ಷಿಣ ಆಫ್ರಿಕಾ ತಂಡವನ್ನು ಆಲೌಟ್ ಮಾಡಿತು.

ನಂತರ ಭಾರತ ಬ್ಯಾಟಿಂಗ್‌ಗೆ ಬಂದ ಭಾರತ ತಂಡ 153 ರನ್‌ಗಳಿಗೆ ಸರ್ವಪತನ ಕಂಡಿತು. ನಾಟಕೀಯ ಕುಸಿತದಲ್ಲಿ ಭಾರತ ತನ್ನ ಕೊನೆಯ 6 ವಿಕೆಟ್‌ಗಳನ್ನು ಶೂನ್ಯ ರನ್‌ಗಳಿಗೆ ಕಳೆದುಕೊಂಡು ಅದೇ ಸ್ಕೋರ್‌ಗೆ ಆಲೌಟ್ ಆಗಿದ್ದು ದಾಖಲೆ ಬರೆಯಿತು.

Rohit Sharma Became the 2nd Indian Captain After MS Dhoni To Achieve This Feat in South Africa

ದಕ್ಷಿಣ ಆಫ್ರಿಕಾ ಎರಡನೇ ಇನ್ನಿಂಗ್ಸ್‌ನಲ್ಲಿ 37 ಓವರ್‌ಗಳಲ್ಲಿ 176 ರನ್ ಗಳಿಸಿತು. ಏಡೆನ್ ಮಾರ್ಕ್ರಾಮ್ ಅವರ ಅಮೋಘ ಶತಕ ಮತ್ತು ಏಕಾಂಗಿ ಹೋರಾಟದಿಂದ ಭಾರತಕ್ಕೆ 79 ರನ್‌ಗಳ ಗುರಿ ನೀಡಿತು.

ಸುಲಭ ಗುರಿ ಬೆನ್ನತ್ತಿದ ಭಾರತ ತಂಡ ಯಾವುದೇ ಸಮಯವನ್ನು ವ್ಯರ್ಥ ಮಾಡದೆ ಕೇವಲ 12 ಓವರ್‌ಗಳಲ್ಲಿ 3 ವಿಕೆಟ್‌ಗಳನ್ನು ಕಳೆದುಕೊಂಡು ಗೆಲುವಿನ ಗಡಿ ತಲುಪಿತು.

ಈ ಮೂಲಕ ರೋಹಿತ್ ಶರ್ಮಾ ಅವರು ಟೆಸ್ಟ್ ತಂಡದ ನಾಯಕರಾಗಿ ದಕ್ಷಿಣ ಆಫ್ರಿಕಾದಲ್ಲಿ ತಮ್ಮ ಮೊದಲ ಸರಣಿಯಲ್ಲಿ ಡ್ರಾ ಸಾಧಿಸಿದರು.

ದಕ್ಷಿಣ ಆಫ್ರಿಕಾದಲ್ಲಿ ಭಾರತದ ಟೆಸ್ಟ್ ಸರಣಿ ಫಲಿತಾಂಶಗಳ ಪಟ್ಟಿ ಇಲ್ಲಿದೆ.

ಮೊಹಮ್ಮದ್ ಅಜರುದ್ದೀನ್ - 1992/93 - 0-1 ಸರಣಿ ಸೋಲು
ಸಚಿನ್ ತೆಂಡೂಲ್ಕರ್ - 1996/97 - 0-2 ಸರಣಿ ಸೋಲು
ಸೌರವ್ ಗಂಗೂಲಿ - 2001/02 - 0-1 ಸರಣಿ ಸೋಲು
ರಾಹುಲ್ ದ್ರಾವಿಡ್ - 2006/07 - 1-2 ಸರಣಿ ಸೋಲು
ಎಂಎಸ್ ಧೋನಿ - 2010/11 - 1-1 ಸರಣಿ ಸಮಬಲ
ಎಂಎಸ್ ಧೋನಿ - 2013/14 - 0-1 ಸರಣಿ ಸೋಲು
ವಿರಾಟ್ ಕೊಹ್ಲಿ - 2017/18 - 1-2 ಸರಣಿ ಸೋಲು
ಕೊಹ್ಲಿ ಮತ್ತು ಕೆಎಲ್ ರಾಹುಲ್ - 2021/22 - 1-2 ಸರಣಿ ಸೋಲು
ರೋಹಿತ್ ಶರ್ಮಾ - 2022/23 - 1-1 ಸರಣಿ ಸಮಬಲ

ಎರಡನೇ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಗೆಲುವಿನ ಮೂಲಕ ಭಾರತವು SENA (ದಕ್ಷಿಣ ಆಫ್ರಿಕಾ, ಇಂಗ್ಲೆಂಡ್, ನ್ಯೂಜಿಲೆಂಡ್, ಆಸ್ಟ್ರೇಲಿಯಾ) ದೇಶಗಳ ವಿರುದ್ಧ ಸತತ ಐದು ಟೆಸ್ಟ್ ಪಂದ್ಯಗಳನ್ನು ಸೋತ ದಾಖಲೆಯನ್ನು ಕಳಚಿತು.

2021/22ರಲ್ಲಿ ಭಾರತ ತಂಡವು ದಕ್ಷಿಣ ಆಫ್ರಿಕಾ ವಿರುದ್ಧ (2 ಸೋಲುಗಳು) ತಮ್ಮ ಸೋಲಿನ ಸರಣಿಯನ್ನು ಪ್ರಾರಂಭಿಸಿತು. ನಂತರ ಭಾರತ ತಂಡವು ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ವಿರುದ್ಧ ತಲಾ ಒಂದು ಪಂದ್ಯವನ್ನು ಸೋತರು. ಸೆಂಚುರಿಯನ್‌ನಲ್ಲಿ ಈ ಸರಣಿಯ ಮೊದಲನೇ ಟೆಸ್ಟ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ತಮ್ಮ ಐದನೇ ಟೆಸ್ಟ್ ಪಂದ್ಯವನ್ನು ಸೋತರು.

Story first published: Thursday, January 4, 2024, 18:25 [IST]
Other articles published on Jan 4, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+