ಗುರುವಾರ, ಜೂನ್ 27ರ ತಡರಾತ್ರಿ ಗಯಾನಾದ ಪ್ರಾವಿಡೆನ್ಸ್ ಸ್ಟೇಡಿಯಂನಲ್ಲಿ ನಡೆದ 2024ರ ಐಸಿಸಿ ಟಿ20 ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ವಿರುದ್ಧ ಗೆಲುವು ಸಾಧಿಸಿದ ಭಾರತ ತಂಡ ಫೈನಲ್‌ಗೆ ಲಗ್ಗೆ ಇಟ್ಟಿದೆ.
ಈ ಮೂಲಕ 10 ವರ್ಷಗಳ ಬಳಿಕ ಟಿ20 ವಿಶ್ವಕಪ್‌ನ ಫೈನಲ್ ತಲುಪಿರುವ ಟೀಮ್ ಇಂಡಿಯಾ, 2007ರ ನಂತರ ಎರಡನೇ ಟಿ20 ವಿಶ್ವಕಪ್ ಚಾಂಪಿಯನ್ ಪಟ್ಟಕ್ಕೇರಲು ಎದುರು ನೋಡುತ್ತಿದೆ. ಶನಿವಾರ, ಜೂನ್ 29ರಂದು ನಡೆಯುವ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಎದುರಿಸಲಿದೆ.

ಇದೇ ವೇಳೆ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಅವರು ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿದ್ದು, ಕಳೆದೆರಡು ಪಂದ್ಯಗಳಲ್ಲಿ ಸತತ ಅರ್ಧಶತಕ ಸಿಡಿಸಿ ಭಾರತ ತಂಡದ ಗೆಲುವಿಗೆ ಕಾರಣರಾಗಿದ್ದಾರೆ.
ಜೂನ್ 24ರಂದು ಆಸ್ಟ್ರೇಲಿಯಾ ವಿರುದ್ಧ ಕೇವಲ 41 ಎಸೆತಗಳಲ್ಲಿ 92 ರನ್ ಗಳಿಸಿದ ನಂತರ ರೋಹಿತ್ ಶರ್ಮಾ ಅವರು 2024ರ ಟಿ20 ವಿಶ್ವಕಪ್‌ನಲ್ಲಿ ಬ್ಯಾಟ್‌ನೊಂದಿಗೆ ತಮ್ಮ ಕಳಪೆ ಫಾರ್ಮ್ ಅನ್ನು ಕೊನೆಗೊಳಿಸಿದರು.

ಗಯಾನಾದ ಪ್ರಾವಿಡೆನ್ಸ್ ಕ್ರೀಡಾಂಗಣದಲ್ಲಿ ಭಾರತ ತಂಡವು ಸೆಮಿಫೈನಲ್ 2ರಲ್ಲಿ ಇಂಗ್ಲೆಂಡ್ ತಂಡವನ್ನು ಎದುರಿಸುತ್ತಿದ್ದಂತೆ, ಅನುಭವಿ ಆರಂಭಿಕ ಬ್ಯಾಟರ್ ರೋಹಿತ್ ಶರ್ಮಾ ಅವರು ಭಾರತೀಯ ನಾಯಕನಾಗಿ ಎಲ್ಲ ಸ್ವರೂಪಗಳಲ್ಲಿ ಅತಿ ಹೆಚ್ಚು ರನ್ ಗಳಿಸಿದ ಭಾರತದ ಮಾಜಿ ನಾಯಕರ ಎಲೈಟ್ ಪಟ್ಟಿಗೆ ಸೇರಿಕೊಂಡರು.
ಮೊದಲ ಇನ್ನಿಂಗ್ಸ್‌ನಲ್ಲಿ ಭಾರತ ತಂಡವು ಆರಂಭಿಕ ಎರಡು ವಿಕೆಟ್‌ಗಳನ್ನು ಕಳೆದುಕೊಂಡಿದ್ದಾಗ ರೋಹಿತ್ ಶರ್ಮಾ ಅವರು ಆಂಗ್ಲ ಬೌಲರ್‌ಗಳ ವಿರುದ್ಧ ತಮ್ಮ ಸ್ಫೋಟಕ ಬ್ಯಾಟಿಂಗ್ ಮುಂದುವರೆಸಿದರು.
9 ರನ್‌ಗಳಿಗೆ ಔಟಾಗುವ ಮೂಲಕ ವಿರಾಟ್ ಕೊಹ್ಲಿ ಪ್ರಸಕ್ತ ಟಿ20 ವಿಶ್ವಕಪ್‌ನಲ್ಲಿ ತಮ್ಮ ಕಳಪೆ ಫಾರ್ಮ್ ಅನ್ನು ಮುಂದುವರೆಸಿದರು ಮತ್ತು ರಿಷಭ್ ಪಂತ್ ಕೇವಲ 4 ರನ್‌ಗಳಿಗೆ ಔಟಾದ ಕಾರಣ ಅವರನ್ನು ಅನುಸರಿಸಿದರು.
ಆದರೆ, ಹಿಟ್‌ಮ್ಯಾನ್ ಖಾತ್ಯಿಯ ರೋಹಿತ್ ಶರ್ಮಾ ತನ್ನ ಹೆಗಲ ಮೇಲೆ ಜವಾಬ್ದಾರಿ ಹೊತ್ತುಕೊಂಡರು ಮತ್ತು ಮಳೆಯು ಆಟವನ್ನು ನಿಲ್ಲಿಸುವ ಮೊದಲು 26 ಎಸೆತಗಳಲ್ಲಿ 37 ರನ್ ಗಳಿಸಿದರು.
ಈ ವೇಳೆ ರೋಹಿತ್ ಶರ್ಮಾ ಅವರು ಭಾರತ ತಂಡದ ನಾಯಕನಾಗಿ 5000 ರನ್‌ಗಳ ಹೆಗ್ಗುರುತನ್ನು ತಲುಪಿದರು ಮತ್ತು ಈ ಸಾಧನೆ ಮಾಡಿದ ಐದನೇ ಭಾರತೀಯ ಕ್ರಿಕೆಟಿಗನಾದರು.
ಭಾರತ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ 12,883 ರನ್‌ಗಳಿಂದ ಅಗ್ರಸ್ಥಾನದಲ್ಲಿದ್ದಾರೆ. ಎರಡನೇ ಸ್ಥಾನದಲ್ಲಿ ಲೆಜೆಂಡ್ ನಾಯಕ ಎಂಎಸ್ ಧೋನಿ 11,207 ಮತ್ತು ಮೂರನೇ ಸ್ಥಾನದಲ್ಲಿ ಮೊಹಮ್ಮದ್ ಅಜರುದ್ದೀನ್ 8095 ರನ್ ಗಳಿಸಿದ್ದಾರೆ. ನಾಲ್ಕನೇ ಸ್ಥಾನವನ್ನು ಕೋಲ್ಕತ್ತಾದ ದಾದಾ ಸೌರವ್ ಗಂಗೂಲಿ ಅವರು ಭಾರತ ತಂಡದ ನಾಯಕನಾಗಿ 7643 ರನ್ ಬಾರಿಸಿದ್ದಾರೆ.
ಗಮನಾರ್ಹ ಸಂಗತಿಯೆಂದರೆ, ರೋಹಿತ್ ಶರ್ಮಾ ಅವರ ಇತರ ನಾಯಕರಿಗೆ ಹೋಲಿಸಿದರೆ ನಾಯಕನಾಗಿ ಕನಿಷ್ಠ ಪಂದ್ಯಗಳಲ್ಲಿ ಈ ರನ್ ಗಳಿಸಿದ್ದಾರೆ.
ಭಾರತ ತಂಡದ ನಾಯಕನಾಗಿ ಟಿ20 ಸ್ವರೂಪದಲ್ಲಿ ರೋಹಿತ್ ಶರ್ಮ ಪ್ರಾಬಲ್ಯ
ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮ ಅವರ ಸಾಧನೆಯ ಬಗ್ಗೆ ಮಾತನಾಡುತ್ತಾ, ಅವರು ಈಗ ನಾಯಕನಾಗಿ ಎಲ್ಲಾ ಸ್ವರೂಪಗಳಲ್ಲಿ 5013 ರನ್ ಗಳಿಸಿದ್ದಾರೆ.
ಪ್ರಮುಖವಾಗಿ, ಆ ರನ್‌ಗಳಲ್ಲಿ 1876 ರನ್‌ಗಳು ಚುಟುಕು ಸ್ವರೂಪದ ಪಂದ್ಯಗಳಲ್ಲಿ ಬಂದಿವೆ. ಬಲಗೈ ಬ್ಯಾಟರ್ ರೋಹಿತ್ ಶರ್ಮಾ 37 ಬಾರಿ ಅಜೇಯರಾಗಿ ಉಳಿದಿದ್ದಾರೆ.
ಇದಲ್ಲದೆ, ರೋಹಿತ್ ಶರ್ಮಾ ಕೇವಲ 16 ಟಿ20 ಪಂದ್ಯಗಳಲ್ಲಿ ಭಾರತ ತಂಡದ ನಾಯಕತ್ವವನ್ನು ವಹಿಸಿದ್ದು, ಅವರ ಸಾಧನೆಯನ್ನು ಕೂಲಂಕಷವಾಗಿ ಪರಿಶೀಲಿಸಲು ಯೋಗ್ಯವಾಗಿದೆ.
ಭಾರತ ತಂಡದ ನಾಯಕ ರೋಹಿತ್ ಶರ್ಮಾ ಟಿ20 ವಿಶ್ವಕಪ್ ನಾಕೌಟ್ ಪಂದ್ಯದಲ್ಲಿ ಅರ್ಧಶತಕ ಗಳಿಸಿದ ಮೊದಲ ಭಾರತೀಯ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾದರು.