ಶಾರ್ಪ್ ಟಿವಿಗೆ ರಾಯಭಾರಿಯಾದ ರೋಹಿತ್ ಶರ್ಮ

ಬೆಂಗಳೂರು, ಜೂನ್ 24: ಜಪಾನ್ನಿನ ನಂ.1 ಬ್ರಾಂಡ್ ಶಾರ್ಪ್ ಸಂಸ್ಥೆ ಜತೆ ಟೀಂ ಇಂಡಿಯಾದ ಪ್ರಮುಖ ಆಟಗಾರ ರೋಹಿತ್ ಶರ್ಮಾ ಅವರು ಸಹಿ ಹಾಕಿದ್ದಾರೆ. ಸಂಸ್ಥೆಯ ಅಂಬಾಸಿಡರ್ ಆಗಿ ರೋಹಿತ್ ಕಾಣಿಸಿಕೊಳ್ಳಲಿದ್ದಾರೆ.
ಜಪಾನ್‍ನ ನಂ.1, ಶಾರ್ಪ್ ಟಿವಿ ಈಗ ಭಾರತದಲ್ಲಿ ಭರ್ಜರಿ ಬಿಡುಗಡೆಗೆ ಸಜ್ಜಾಗಿದೆ ಮತ್ತು ಈ ದೇಶದಲ್ಲಿರುವ ಕ್ರಿಕೆಟ್ ಪ್ರೀತಿಯನ್ನು ಇದಕ್ಕಾಗಿ ಬಳಸಿಕೊಳ್ಳಲಿದೆ. ಕ್ರಿಕೆಟಿಗ ರೋಹಿತ್ ಶರ್ಮಾ ಅವರನ್ನು ತನ್ನ ಬ್ರಾಂಡ್ ಅಂಬಾಸಿಡರ್ ಆಗಿ ಶಾರ್ಪ್ ಒಪ್ಪಂದ ಮಾಡಿಕೊಂಡಿದೆ.
ಮುಂಬರುವ ಬಿಡುಗಡೆಯೊಂದಿಗೆ, ಅತ್ಯಂತ ಭರವಸೆಯ ಅಕ್ವೋಸ್ ಎಲ್‍ಇಡಿ ಟಿವಿಗಳ ಶ್ರೇಣಿಯೊಂದಿಗೆ ಶಾರ್ಪ್, ಟಿವಿ ಕ್ಷೇತ್ರದಲ್ಲಿ ಭಾರತದ ಮುಂಚೂಣಿ ಸಂಸ್ಥೆಯಾಗಲು ಸಜ್ಜಾಗುತ್ತಿದೆ. ಭಾರತೀಯ ಕ್ರಿಕೆಟ್ ತಂಡದ ಟಾಪ್ ಆಟಗಾರರಾಗಿರುವ, ನಿರಂತರವಾಗಿ ಉತ್ತಮ ಪ್ರದರ್ಶನ ನೀಡುತ್ತಾ ಬಂದಿರುವ ಕ್ರೀಡಾಳು ರೋಹಿತ್ ಅವರೊಂದಿಗಿನ ಸಹಭಾಗಿತ್ವದ ಬಗ್ಗೆ ಈ ಬ್ರಾಂಡ್ ಹೆಮ್ಮೆ ಹೊಂದಿದೆ. ಅವರು ಆಟದಲ್ಲಿ ಗರಿಷ್ಠ ಬದ್ಧತೆ ಹಾಗೂ ಕಠಿಣವ ಶ್ರಮ ಹಾಕುವ ವ್ಯಕ್ತಿಯಾಗಿದ್ದಾರೆ.
''ರೋಹಿತ್ ಅವರನ್ನು ಹೊಂದುತ್ತಿರುವುದಕ್ಕೆ ನಮಗೆ ನಿಜಕ್ಕೂ ಖುಷಿಯಾಗುತ್ತಿದೆ. ಆಟದಲ್ಲಿನ ಅವರ ತಾಂತ್ರಿಕ ಪರಿಣತಿ, ಆನ್‍ಫೀಲ್ಡ್ ಮತ್ತು ಆಫ್‍ಫೀಲ್ಡ್ ಎರಡರಲ್ಲಿನ ಸ್ಥಿರತೆ ಮತ್ತು ಸೊಬಗು, ವರ್ಷಗಳ ಜಪಾನಿನ ಸಂಶೋಧನೆ ಮತ್ತು ಅಭಿವೃದ್ಧಿಯ ಮೂಲಕ ಎಲ್‍ಇಡಿ ತಂತ್ರಜ್ಞಾನದ ನಾವೀನ್ಯತೆಯೊಂದಿಗೆ ನಿಂತಿರುವ ನಮ್ಮ ಬ್ರಾಂಡ್‍ನೊಂದಿಗೂ ಅನುರಣಿಸುತ್ತದೆ.
'ಭಾರೀ ಅಭಿಮಾನಿ ಬಳಗ ಹೊಂದಿರುವ ಇವರ ಉಪಸ್ಥಿತಿ ಖಂಡಿತವಾಗಿಯೂ ದೇಶದಲ್ಲಿ ಈ ಬ್ರಾಂಡ್‍ನ ಬಿಡುಗಡೆಗೆ ನಮಗೆ ನೆರವಾಗಲಿದೆ'' ಎಂದು ಶಾರ್ಪ್ ಟಿವಿ ಇಂಡಿಯಾ, ಸೇಲ್ಸ್ ಡೈರೆಕ್ಟರ್, ಜೇಮ್ಸ್ ಯಾಂಗ್ ಹೇಳಿದ್ದಾರೆ.
ಕ್ರಿಕೆಟ್ ಮೇಲೆ ಭಾರತೀಯರಿಗಿರುವ ಪ್ರೀತಿಯನ್ನು ಬಳಸಿಕೊಳ್ಳಲು ಈ ಬ್ರಾಂಡ್ ಉದ್ದೇಶಿಸಿದೆ. ಭಾರತದಾದ್ಯಂತ ಇರುವ ಪ್ರೇಕ್ಷಕರನ್ನು ತಲಪುವ ಮೂಲಕ ಬ್ರಾಂಡ್ ವಿಸ್ತರಿಸಲು ಉದ್ದೇಶಿಸಿದೆ. ಆ ಮೂಲಕ ದೇಶದಲ್ಲಿ ತನ್ನ ಜಾಲ ಬಲಪಡಿಸಲಿದೆ.
ಈ ವೇಳೆ ಮಾತನಾಡಿದ ಅರ್ಜುನ ಪ್ರಶಸ್ತಿ ವಿಜೇತ ರೋಹಿತ್ ಶರ್ಮಾ, 'ಶಾರ್ಪ್‍ನಂತಹ ಬ್ರಾಂಡ್‍ನೊಂದಿಗಿನ ಸಹಭಾಗಿತ್ವಕ್ಕೆ ನನಗೆ ಖುಷಿಯಾಗುತ್ತಿದೆ. ಟೆಕ್ ಉತ್ಸುಕನಾಗಿರುವ ನಾನು ಈ ಬ್ರಾಂಡ್ ಅನ್ನು ಪ್ರೀತಿಸುತ್ತೇನೆ, ಮತ್ತು ಸಿನಿಮಾವೇ ನೋಡಲಿ, ಕ್ರೀಡೆಗಳನ್ನೇ ನೋಡಲಿ, ಯಾವಾಗಲೂ ಬೆಸ್ಟ್ ಸೀನ್ ಆನ್ ಶಾರ್ಪ್'' ಎಂದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications