For Quick Alerts
ALLOW NOTIFICATIONS  
For Daily Alerts
 

Rohit Sharma: ಹುಟ್ಟುಹಬ್ಬದ ಸಂಭ್ರಮದಲ್ಲಿ ಹಿಟ್‌ಮ್ಯಾನ್‌; ಯಾವ ಪಂದ್ಯಕ್ಕೆ ಎಷ್ಟು ಸಂಭಾವನೆ ?

ಏಪ್ರಿಲ್‌ 30 ಮಂಗಳವಾರ, ಭಾರತ ಕ್ರಿಕೆಟ್‌ ತಂಡದ ನಾಯಕ ಹಿಟ್‌ಮ್ಯಾನ್‌ ಖ್ಯಾತಿಯ ರೋಹಿತ್‌ ಶರ್ಮ್‌ ಅವರು ತಮ್ಮ 37ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಹುಟ್ಟುಹಬ್ಬದ ಸಂಭ್ರಮದಲ್ಲಿರುವ ರೋಹಿತ್‌ ಶರ್ಮಾ ಅವರಿಗೆ ಬಿಸಿಸಿಐ,ಮುಂಬೈ ಇಂಡಿಯನ್ಸ್‌ ಸೇರಿದಂತೆ ಅಪಾರ ಸಂಖ್ಯೆಯ ಅಭಿಮಾನಿಗಳು, ಹಾಲಿ ಮತ್ತು ಮಾಜಿ ಕ್ರಿಕೆಟಿಗರು ಸಾಮಾಜಿಕ ಜಾಲತಾಣದಲ್ಲಿ ಶುಭ ಹಾರೈಸುತ್ತಿದ್ದಾರೆ.

ಮಹಾರಾಷ್ಟ್ರ ರಾಜ್ಯದ ನಾಗಪೂರ್‌ ಜಿಲ್ಲೆಯವರಾದ ರೋಹಿತ್‌ ಶರ್ಮಾ ಏಪ್ರಿಲ್‌ 30, 1987ರಲ್ಲಿ ಜನಿಸಿದರು. ಇವರ ಪೂರ್ಣ ಹೆಸರು ರೋಹಿತ್‌ ಗುರುನಾಥ್‌ ಶರ್ಮಾ. ಕ್ರಿಕೆಟ್‌ ಲೋಕದ ದಿಗ್ಗಜ ಬ್ಯಾಟರ್‌ಗಳಲ್ಲಿ ಒಬ್ಬರಾಗಿರುವ ರೋಹಿತ್‌ ಶರ್ಮಾ ಟೀಮ್‌ ಇಂಡಿಯಾಕ್ಕೆ ಅಪಾರ ಕೊಡುಗೆಗಳನ್ನು ನೀಡಿದ್ದಾರೆ.

Rohit Sharma Birthday Do you know how much Rohit Sharma Receives per match

ರೋಹಿತ್‌ ನಾಯಕತ್ವದಲ್ಲಿ ಟೀಮ್‌ ಇಂಡಿಯಾ ಇಲ್ಲಿವರೆಗೂ ಯಾವುದೇ ಐಸಿಸಿ ಪ್ರಶಸ್ತಿಗಳನ್ನು ಗೆಲ್ಲಲು ಸಾಧ್ಯವಾಗಿಲ್ಲ. ಆದರೂ ರೋಹಿತ್‌ ನಾಯಕತ್ವದ ಬಗ್ಗೆ ಇಡೀ ವಿಶ್ವವೇ ಗುಣಗಾನ ಮಾಡುತ್ತಿದೆ. ಅಷ್ಟರ ಮಟ್ಟಿಗೆ ಮೂರು ಮಾದರಿಯ ಕ್ರಿಕೆಟ್‌ನಲ್ಲಿ ರೋಹಿತ್‌ ಶರ್ಮಾ ಮೌಲ್ಯಯುತ ಕೊಡುಗೆಗಳನ್ನು ನೀಡಿದ್ದಾರೆ. ಕೇವಲ ಕೊಡುಗೆಗಳಷ್ಟೆ ಅಲ್ಲದೆ ತಮ್ಮ ಕ್ರಿಕೆಟ್‌ ಪ್ರಯಾಣದಲ್ಲಿ ಹಲವು ದಾಖಲೆಗಳನ್ನು ರೋಹಿತ್‌ ಬರೆದಿದ್ದಾರೆ. ಕೆಲ ದಾಖಲೆಗಳನ್ನು ಇಂದಿಗೂ ಯಾರಿದಂಲೂ ಮುರಿಯಲು ಸಾಧ್ಯವಾಗಿಲ್ಲ ಎಂಬುದು ವಿಶೇಷವಾಗಿದೆ.

Rohit Sharma Birthday Do you know how much Rohit Sharma Receives per match

ಹಿಟ್‌ಮ್ಯಾನ್‌ ಕ್ರಿಕೆಟ್‌ ಜರ್ನಿ:

2007ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ರೋಹಿತ್‌ ಶರ್ಮಾ ಪದಾರ್ಪಣೆ ಮಾಡಿದರು. ಅದೇ ವರ್ಷ ನಡೆದ ಮೊದಲ ಐಸಿಸಿ ಟಿ20 ವಿಶ್ವಕಪ್‌ನಲ್ಲಿ ಎಂ.ಎಸ್‌ ಧೋನಿ ನೇತೃತ್ವದ ಭಾರತ ತಂಡದಲ್ಲಿ ಸ್ಥಾನ ಪಡೆಯುವ ಮೂಲಕ ಮೂರು ಪಂದ್ಯಗಳನ್ನು ಆಡಿದ್ದರು. ಐರ್ಲೆಂಡ್ ವಿರುದ್ಧ ಅರ್ಧಶತಕ, ಪಾಕಿಸ್ತಾನದ ವಿರುದ್ದದ ಪಂದ್ಯದಲ್ಲಿ 30 ರನ್ ಗಳಿಸುವ ಮೂಲಕ ತಂಡಕ್ಕೆ ನೆರವಾಗಿದ್ದರು.

ಬಳಿಕ ಆರು ವರ್ಷಗಳ ಕಾಲ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್‌ ಮಾಡುತ್ತಿದ್ದ ರೋಹಿತ್‌ ಶರ್ಮಾ 2013ರ ಐಸಿಸಿ ಚಾಂಪಿಯನ್ಸ್‌ ಟ್ರೋಫಿಯಲ್ಲಿ ಮೊದಲ ಬಾರಿಗೆ ಶಿಖರ್‌ ಧವನ್‌ ಜೊತೆಗೆ ಆರಂಭಿಕರಾಗಿ ಇನ್ನಿಂಗ್ಸ್‌ ಶುರು ಮಾಡಿದ್ದರು. ಇದೇ ರೋಹಿತ್‌ ಕ್ರಿಕೆಟ್‌ ವೃತ್ತಿ ಜೀವನಕ್ಕೆ ಹೊಸ ತಿರುವನ್ನು ಕೊಟ್ಟಿತು. ಈ ಟೂರ್ನಿಯಲ್ಲಿ ರೋಹಿತ್‌ ಶರ್ಮಾ ಆಡಿದ ಐದು ಇನ್ನಿಂಗ್ಸ್‌ಗಳಲ್ಲಿ ಎರಡು ಅರ್ಧಶತಕಗಳ ನೆರವಿನಿಂದ 177 ರನ್‌ ಗಳಿಸಿದ್ದರು.

Rohit Sharma Birthday Do you know how much Rohit Sharma Receives per match

ಅಂದಿನಿಂದ ಶಿಖರ್‌ ಧವನ್‌ ಜೊತೆಗೂಡಿದ ರೋಹಿತ್‌ ಶರ್ಮಾ ಹಲವು ಅದ್ಭುತ ಇನ್ನಿಂಗ್ಸ್‌ಗಳನ್ನು ಆಡಿದ್ದರು. ಇದರಿಂದ ಬೆಸ್ಟ್‌ ಓಪನರ್ಸ್‌ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದರು. ಈವರೆಗೆ ರೋಹಿತ್‌ 262 ಏಕದಿನ ಪಂದ್ಯಗಳಲ್ಲಿ ಭಾರತದ ಪರ ಕಣಕ್ಕೀಳಿದಿದ್ದು, 49.12ರ ಸರಾಸರಿಯಲ್ಲಿ 10709 ರನ್‌ ಕಲೆ ಹಾಕಿದ್ದಾರೆ. ಇದರಲ್ಲಿ 31 ಶತಕಗಳು ಮತ್ತು 55 ಅರ್ಧಶತಕಗಳ ಕೂಡಿವೆ. 264 ರೋಹಿತ್‌ ಅತ್ಯುತ್ತಮ ಸ್ಕೋರ್‌ ಆಗಿದ್ದು, ಇದು ಏಕದಿನ ಕ್ರಿಕೆಟ್‌ ಇತಿಹಾಸದಲ್ಲಿ ಬ್ಯಾಟರೊಬ್ಬ ಗಳಿಸಿದ ಅತ್ಯಧಿಕ ಸ್ಕೋರ್‌ ಆಗಿದೆ.

ಇದರ ಜೊತೆಗೆ ಎಂಎಸ್ ಧೋನಿ (10599), ರಾಹುಲ್ ದ್ರಾವಿಡ್ (10,768), ಸೌರವ್ ಗಂಗೂಲಿ (11,221), ವಿರಾಟ್ ಕೊಹ್ಲಿ (13848) ಮತ್ತು ಸಚಿನ್ ತೆಂಡೂಲ್ಕರ್ (18426) ನಂತರ ರೋಹಿತ್‌ ಶರ್ಮಾ ಆರನೇ ಅತಿ ಹೆಚ್ಚು ರನ್ ಹೊಡೆದಿರುವ ಭಾರತೀಯ ಆಟಗಾರರಾಗಿದ್ದಾರೆ.

Rohit Sharma Birthday Do you know how much Rohit Sharma Receives per match

ಟೆಸ್ಟ್‌ಗೆ ಪಾದಾರ್ಪಣೆ ಯಾವಾಗ?:

ಆರಂಭದಲ್ಲಿ ಕೇವಲ ಟಿ20 ಮತ್ತು ಏಕದಿನ ಕ್ರಿಕೆಟ್‌ಗೆ ಸೀಮಿತವಾಗಿದ್ದ ರೋಹಿತ್‌ ಬಳಿಕ ನವೆಂಬರ್ 2013 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ಟೆಸ್ಟ್‌ ಕ್ರಿಕೆಟ್‌ ಪಾದಾರ್ಪಣೆ ಮಾಡಿದ್ದರು. ಈ ಟೆಸ್ಟ್ ಪಂದ್ಯ ರೋಹಿತ್‌ ಅವರಿಗೆ ವಿಶೇಷವಾಗಿತ್ತು. ಏಕೆಂದರೆ ಕ್ರಿಕೆಟ್‌ ದೇವರು ಸಚಿನ್ ತೆಂಡೂಲ್ಕರ್ ಅವರ ವಿದಾಯ ಸರಣಿಯ ಸಮಯದಲ್ಲಿ ರೋಹಿತ್‌ ಟೆಸ್ಟ್‌ ಕ್ರಿಕೆಟ್‌ನಲ್ಲಿ ಹೆಜ್ಜೆ ಇಟ್ಟಿದ್ದರು. ರೋಹಿತ್​ ಇದೂವರೆಗೂ 59 ಪಂದ್ಯಗಳು ಮತ್ತು 101 ಇನ್ನಿಂಗ್ಸ್‌ಗಳನ್ನು ಆಡಿದ್ದು 45.46ರ ಸರಾಸರಿಯಲ್ಲಿ 4137 ರನ್ ಗಳಿಸಿದ್ದಾರೆ.

ಬೆಸ್ಟ್‌ ಕ್ಯಾಪ್ಟನ್‌ ಶರ್ಮಾ :

ರೋಹಿತ್‌ ಶರ್ಮಾ ಓರ್ವ ಅದ್ಭುತ ಬ್ಯಾಟರ್‌ ಮಾತ್ರವಲ್ಲದೆ ನಾಯಕನಾಗಿ ಯಶಸ್ಸು ಕಂಡಿದ್ದಾರೆ. ಟಿ20 ಕ್ರಿಕೆಟ್‌ನಲ್ಲಿ ತಮ್ಮ ನಾಯಕತ್ವದ ಕೌಶಲ್ಯದಿಂದ ಪ್ರಭಾವ ಬೀರಿರುವ​ ರೋಹಿತ್‌ ಐಪಿಎಲ್‌ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್‌ ತಂಡವನ್ನು ಇದುವರೆಗೆ 5 ಬಾರಿ ಪ್ರಶಸ್ತಿ (2013, 2015, 2017, 2019 ಮತ್ತು 2020) ಗೆಲ್ಲುವಂತೆ ಮಾಡಿದ್ದಾರೆ.

Rohit Sharma Birthday Do you know how much Rohit Sharma Receives per match

ಐಪಿಎಲ್‌ನಲ್ಲಿ ಬಿರುಸಿನ ಬ್ಯಾಟಿಂಗ್‌ ಮಾಡಿರುವ ರೋಹಿತ್​ 252 ಪಂದ್ಯಗಳಿಂದ ಒಟ್ಟು 6522 ರನ್‌ಗಳಿಸಿದ್ದಾರೆ. ಇದರಲ್ಲಿ ಎರಡು ಶತಕಗಳು ಮತ್ತು 42 ಅರ್ಧ ಶತಕಗಳು ಸೇರಿವೆ. 109 ಅಧಿಕ ಸ್ಕೋರ್‌ ಆಗಿದೆ. ಐಪಿಎಲ್‌ನ ಇತಿಹಾಸದಲ್ಲಿ ನಾಲ್ಕನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎನಿಸಿಕೊಂಡಿದ್ದಾರೆ. ಕಳೆದ ವರ್ಷ ನಡೆದ 2023ರ ಏಕದಿನ ವಿಶ್ವಕಪ್‌ನಲ್ಲಿ ರೋಹಿತ್ ಶರ್ಮಾ 597 ರನ್‌ಗಳನ್ನು ಕಲೆಹಾಕಿ ಎರಡನೇ ಸ್ಥಾನದಲ್ಲಿದ್ದರು.

ಯಾವ ಪಂದ್ಯಕ್ಕೆ ಎಷ್ಟು ಸಂಭಾವನೆ?:

ರೋಹಿತ್‌ ಶರ್ಮಾ ಪ್ರಸ್ತುತ ಬಿಸಿಸಿಐ ಹೊರಡಿಸಿರುವ ವಾರ್ಷಿಕ ಗುತ್ತಿಗೆ ಪಟ್ಟಿಯಲ್ಲಿ ಎ+ ವರ್ಗದಲ್ಲಿದ್ದಾರೆ. ರೋಹಿತ್‌ ಅವರ ನಿವ್ವಳ ಮೌಲ್ಯ ಸುಮಾರು 214 ಕೋಟಿಗಳಿದ್ದು, ವಾರ್ಷಿಕ ಒಪ್ಪಂದ, ಪಂದ್ಯದ ಸಂಭಾವನೆ, ಐಪಿಎಲ್‌ ಮತ್ತು ಜಾಹೀರಾತುಗಳ ಮೂಲಕ ಕೋಟಿ ಕೋಟಿ ರೂ.ಗಳನ್ನು ದುಡಿಯುತ್ತಿದ್ದಾರೆ.

Rohit Sharma Birthday Do you know how much Rohit Sharma Receives per match

ಬಿಸಿಸಿಐ ವಾರ್ಷಿಕ ಒಪ್ಪಂದದಿಂದ ಹಿಟ್‌ಮ್ಯಾನ್‌ 7 ಕೋಟಿ ರೂ.ಗಳನ್ನು ಸಂಭಾವನೆ ಪಡೆಯುತ್ತಿದ್ದಾರೆ. ರೋಹಿತ್‌ ಟೆಸ್ಟ್‌ ಪಂದ್ಯ ಆಡಿದರೆ 15 ಲಕ್ಷ ರೂ. ಪಡೆಯುತ್ತಾರೆ. ಹಾಗೆಯೇ ಒಂದು ಏಕದಿನ ಪಂದ್ಯಕ್ಕೆ 6 ಲಕ್ಷ ರೂ., ಒಂದು ಟಿ20 ಪಂದ್ಯಕ್ಕೆ 3 ಲಕ್ಷ ರೂ. ಗಳನ್ನು ಗಳಿಸುತ್ತಿದ್ದಾರೆ. ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್‌ ಪರ ಆಡುತ್ತಿರುವ ರೋಹಿತ್‌ ಪ್ರತಿ ಆವೃತ್ತಿಗೆ 16 ಕೋಟಿ ರೂ.ಗಳನ್ನು ಪಡೆಯುತ್ತಿದ್ದಾರೆ. ಇದುವರೆಗೆ ಐಪಿಎಲ್‌ನಿಂದ 178 ಕೋಟಿ ರೂ.ಗಳನ್ನು ರೋಹಿತ್‌ ಗಳಿಸಿದ್ದಾರೆ.

Story first published: Tuesday, April 30, 2024, 13:58 [IST]
Other articles published on Apr 30, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+