For Quick Alerts
ALLOW NOTIFICATIONS  
For Daily Alerts
 

ಟಿ20 ಕ್ರಿಕೆಟ್‌ನಲ್ಲಿ ಬಾಬರ್ ಅಜಂ ದಾಖಲೆ ಮುರಿದು ಅತ್ಯಂತ ಯಶಸ್ವಿ ನಾಯಕನಾದ ರೋಹಿತ್ ಶರ್ಮಾ

ಜೂನ್‌ 28 ಶುಕ್ರವಾರ, ಭಾರತ ತಂಡದ ನಾಯಕ ರೋಹಿತ್‌ ಶರ್ಮಾ 2024ರ ಟಿ20 ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್‌ ವಿರುದ್ಧ ಭರ್ಜರಿ ಅರ್ಧಶತಕ ಬಾರಿಸುವ ಮೂಲಕ ತಮ್ಮ ಹೆಸರಿನಲ್ಲಿ ದೊಡ್ಡ ದಾಖಲೆ ನಿರ್ಮಿಸಿದ್ದಾರೆ.

ರೋಹಿತ್ ಅವರು ಚುಟುಕು ಕ್ರಿಕೆಟ್‌ ಸ್ವರೂಪದಲ್ಲಿ ಅತ್ಯಂತ ಯಶಸ್ವಿ ನಾಯಕರಾಗಿದ್ದಾರೆ. ರೋಹಿತ್‌ ಶರ್ಮಾ ನಾಯಕತ್ವದಲ್ಲಿ ಭಾರತ ತಂಡವು 68 ರನ್‌ಗಳಿಂದ ಇಂಗ್ಲೆಂಡ್ ಅನ್ನು ಸೋಲಿಸಿ ಟಿ20 ವಿಶ್ವಕಪ್‌ ಫೈನಲ್‌ಗೆ ಎಂಟ್ರಿ ಕೊಟ್ಟಿದೆ.

Rohit Sharma breaks Babar Azam record in international T20 cricket

ಈ ಮೂಲಕ ರೋಹಿತ್‌ ಶರ್ಮಾ ನಾಯಕನಾಗಿ ಅತಿ ಹೆಚ್ಚು ಟಿ20 ಪಂದ್ಯಗಳನ್ನು ಗೆದ್ದ ಸಾಧನೆಯೊಂದಿಗೆ ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಮ್ ಅವರ ದಾಖಲೆಯನ್ನು ಮುರಿದ್ದಾರೆ. ಇದರೊಂದಿಗೆ ರೋಹಿತ್ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ 5000 ರನ್ ಗಳಿಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ರೋಹಿತ್ ಭಾರತ ತಂಡದ ನಾಯಕನಾಗಿ 49ನೇ ಟಿ20 ಅಂತಾರಾಷ್ಟ್ರೀಯ ಗೆಲುವು ದಾಖಲಿಸಿದ್ದಾರೆ. ಪಾಕಿಸ್ತಾನದ ನಾಯಕ ಬಾಬರ್ ಅಜಮ್ 85 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 48 ಗೆಲುವು ದಾಖಲಿಸಿದ್ದಾರೆ. ಬಾಬರ್ ಗೆಲುವಿನ ಶೇಕಡಾವಾರು 56.47 ಆಗಿದರೆ, ರೋಹಿತ್ ಗೆಲುವಿನ ಶೇಕಡಾವಾರು 78.68 ರಷ್ಟಿದೆ.

2024ರ ಟಿ 20 ವಿಶ್ವಕಪ್‌ನಲ್ಲಿ ಭಾರತ ತಂಡವನ್ನು ರೋಹಿತ್ ಮುನ್ನಡೆಸುತ್ತಿದ್ದಾರೆ. ಗುಂಪು ಹಂತದಿಂದ ಫೈನಲ್‌ಗೆ ಬರುವವರೆಗೂ ಆಡಿರುವ 7 ಇನ್ನಿಂಗ್ಸ್‌ಗಳಲ್ಲಿ 41.33 ಸರಾಸರಿಯಲ್ಲಿ 3 ಅರ್ಧ ಶತಕಗಳ ಸಹಾಯದಿಂದ 248 ರನ್ ಗಳಿಸಿದ್ದಾರೆ. ಇದರೊಂದಿಗೆ ಟೂರ್ನಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಮೂರನೇ ಆಟಗಾರ ಎನಿಸಿಕೊಂಡಿದ್ದಾರೆ.

ಭಾರತ ತಂಡದ ನಾಯಕನಾಗಿ ಎಲ್ಲಾ ಸ್ವರೂಪಗಳಲ್ಲಿ 5000ಕ್ಕೂ ಹೆಚ್ಚು ರನ್ ಗಳಿಸಿದವರು

ವಿರಾಟ್ ಕೊಹ್ಲಿ- 12883 ರನ್
ಎಂಎಸ್ ಧೋನಿ- 11207 ರನ್‌
ಮೊಹಮ್ಮದ್ ಅಜರುದ್ದೀನ್- 8095 ರನ್‌
ಸೌರವ್ ಗಂಗೂಲಿ- 7643 ರನ್‌
ರೋಹಿತ್ ಶರ್ಮಾ- 5013* ರನ್‌

ಟಿ20 ವಿಶ್ವಕಪ್‌ನಲ್ಲಿ ಭಾರತದ ಪರ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್‌ಗಳು

15 - ಅರ್ಷದೀಪ್ ಸಿಂಗ್ (2024)
13 - ಜಸ್ಪ್ರೀತ್ ಬುಮ್ರಾ (2024)
12 - ಆರ್‌ಪಿ ಸಿಂಗ್ (2007)
11 - ರವಿಚಂದ್ರನ್ ಅಶ್ವಿನ್ (2014)

Story first published: Friday, June 28, 2024, 11:58 [IST]
Other articles published on Jun 28, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+