For Quick Alerts
ALLOW NOTIFICATIONS  
For Daily Alerts
 

ದಾಖಲೆಗಳ ಮೇಲೆ ದಾಖಲೆ ಬರೆದ ಹಿಟ್‌ಮ್ಯಾನ್‌ ರೋಹಿತ್‌ ಶರ್ಮಾ!

ICC World Cup 2019 : ಇದು ರೋಹಿತ್ ಆರ್ಭಟ..! | Rohit Sharma | Oneindia Kannada
Rohit Sharma breaks MS Dhonis record for most odi sixes by an Indian

ಬೆಂಗಳೂರು, ಜುಲೈ 02: ಪ್ರಸಕ್ತ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯಲ್ಲಿ ಅದ್ಭುತ ಲಯದಲ್ಲಿರುವ ಟೀಮ್‌ ಇಂಡಿಯಾದ ಆರಂಭಿಕ ಬ್ಯಾಟ್ಸ್‌ಮನ್‌ 'ಹಿಟ್‌ಮ್ಯಾನ್‌' ಖ್ಯಾತಿಯ ರೋಹಿತ್‌ ಶರ್ಮಾ, ಮಂಗಳವಾರ ಬಾಂಗ್ಲಾ ವಿರುದ್ಧದ ಪಂದ್ಯದಲ್ಲಿ ಹಲವು ದಾಖಲೆಗಳನ್ನು ಪುಡಿಗಟ್ಟಿದ್ದಾರೆ.

ವಿಶ್ವಕಪ್‌ ವೇಳಾಪಟ್ಟಿ / ಮುಖಾಮುಖಿ ದಾಖಲೆಗಳು / ಅಂಕಪಟ್ಟಿ

ಪಂದ್ಯದಲ್ಲಿ ತಮ್ಮ ವೃತ್ತಿ ಬದುಕಿನ 26ನೇ ಒಡಿಐ ಶತಕ ಬಾರಿಸಿದ ರೋಹಿತ್‌ ಇದೇ ವೇಳೆ 5 ಭರ್ಜರಿ ಸಿಕ್ಸರ್‌ಗಳನ್ನು ಸಿಡಿಸಿದ್ದರು. ಈ ಮೂಲಕ ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಸಿಡಿಸಿದ ಭಾರತೀಯ ಬ್ಯಾಟ್ಸ್‌ಮನ್‌ ಎಂಬ ದಾಖಲೆ ಬರೆದಿದ್ದರು.

ತಮ್ಮ ನಾಲ್ಕನೇ ಸಿಕ್ಸರ್‌ ಮೂಲಕ ಒಡಿಐನಲ್ಲಿ ಒಟ್ಟು ಸಿಕ್ಸರ್‌ಗಳ ಗಳಿಕೆಯನ್ನು 229ಕ್ಕೆ ವಿಸ್ತರಿಸಿದ 32 ವರ್ಷದ ಅನುಭವಿ ಬ್ಯಾಟ್ಸ್‌ಮನ್‌ ರೋಹಿತ್‌, ಏಕದಿನದಲ್ಲಿ 228 ಸಿಕ್ಸರ್ಗಳನ್ನು ಸಿಡಿಸಿರುವ ಮಾಜಿ ನಾಯಕ ಹಾಗೂ ವಿಕೆಟ್‌ಕೀಪರ್‌ ಬ್ಯಾಟ್ಸ್‌ಮನ್‌ ಎಂ.ಎಸ್‌ ಧೋನಿ ಅವರ ದಾಖಲೆಯನ್ನು ಪುಡಿಗಟ್ಟಿದರು. ಅಷ್ಟೇ ಅಲ್ಲದೆ 5ನೇ ಸಿಕ್ಸರ್‌ ಮೂಲಕ ತಮ್ಮ ಸಿಕ್ಸರ್‌ಗಳ ಗಳಿಕೆಯನ್ನು 230ಕ್ಕೆ ವಿಸ್ತರಿಸಿದರು.

ಒಡಿಐನಲ್ಲಿ ಭಾರತದ ಪರ ಅತಿ ಹೆಚ್ಚು ಸಿಕ್ಸರ್‌ಗಳನ್ನು ಸಿಡಿಸಿದವರು

ಒಡಿಐನಲ್ಲಿ ಭಾರತದ ಪರ ಅತಿ ಹೆಚ್ಚು ಸಿಕ್ಸರ್‌ಗಳನ್ನು ಸಿಡಿಸಿದವರು

ಆಟಗಾರ ಸಿಕ್ಸರ್ಸ್‌
1. ರೋಹಿತ್‌ ಶರ್ಮಾ: 230*
2. ಎಂ.ಎಸ್‌ ಧೋನಿ: 228*
3. ಸಚಿನ್‌ ತೆಂಡೂಲ್ಕರ್‌: 195
4. ಯುವರಾಜ್‌ ಸಿಂಗ್‌: 155
5. ವೀರೇಂದ್ರ ಸೆಹ್ವಾಗ್‌: 138

ಸಂಗಕ್ಕಾರ ದಾಖಲೆ ಸರಿಗಟ್ಟಿದ ರೋಹಿತ್‌

ಸಂಗಕ್ಕಾರ ದಾಖಲೆ ಸರಿಗಟ್ಟಿದ ರೋಹಿತ್‌

ಪ್ರಸಕ್ತ ವಿಶ್ವಕಪ್‌ ಟೂರ್ನಿಯಲ್ಲಿ ನಾಲ್ಕನೇ ಶತಕ ಸಿಡಿಸಿದ ರೋಹಿತ್‌, ಒಂದೇ ಆವೃತ್ತಿಯಲ್ಲಿ ನಾಲ್ಕು ಶತಕಗಳನ್ನು ಸಿಡಿಸಿದ ಎರಡನೇ ಬ್ಯಾಟ್ಸ್‌ಮನ್‌ ಎನಿಸಿಕೊಳ್ಳುವ ಮೂಲಕ ಶ್ರೀಲಂಕಾದ ಮಾಜಿ ಆಟಗಾರ ಕುಮಾರ ಸಂಗಕ್ಕಾರ ಅವರ ದಾಖಲೆಯನ್ನೂ ಸರಿಗಟ್ಟಿದ್ದಾರೆ. 2015ರ ವಿಶ್ವಕಪ್‌ನಲ್ಲಿ ಸಂಗಕ್ಕಾರ 4 ಶತಕಗಳನ್ನು ಬಾರಿಸಿದ್ದರು. ಅಲ್ಲದೆ ವಿಶ್ವಕಪ್‌ನ ಒಂದೇ ಆವೃತ್ತಿಯಲ್ಲಿ 4 ಶತಕ ಬಾರಿಸಿದ ಮೊದಲ ಭಾರತೀಯ ಎಂಬ ಇತಿಹಾಸವನ್ನೂ ರೋಹಿತ್‌ ಬರೆದಿದ್ದಾರೆ. ಇದಕ್ಕೂ ಮೊದಲು ಸೌರವ್‌ ಗಂಗೂಲಿ ಒಂದೇ ಆವೃತ್ತಿಯಲ್ಲಿ 3 ಶತಕ ಬಾರಿಸಿದ್ದ ದಾಖಲೆ ಹೊಂದಿದ್ದರು.

500+ ರನ್‌ ದಾಖಲೆ

500+ ರನ್‌ ದಾಖಲೆ


ಪ್ರಸಕ್ತ ವಿಶ್ವಕಪ್‌ನಲ್ಲಿ ಬೌಲರ್‌ಗಳಿಗೆ ಸಿಂಹ ಸ್ವಪ್ನವಾಗಿರುವ ರೋಹಿತ್‌ ಶರ್ಮಾ, ರನ್‌ ಹೊಳೆಯನ್ನೇ ಹರಿಸಿದ್ದಾರೆ. ಬಾಂಗ್ಲಾ ವಿರುದ್ಧದ ಪಂದ್ಯದಲ್ಲೂ ಶತಕ ಬಾರಿಸುವ ಮೂಲಕ ಟೂರ್ನಿಯಲ್ಲಿ ತಮ್ಮ ಒಟ್ಟು ರನ್‌ಗಳಿಕೆಯನ್ನು 500 ರನ್‌ಗಳ ಗಡಿ ದಾಟಿಸಿ ಅಗ್ರಸ್ಥಾನದಲ್ಲಿದ್ದ ಆಸ್ಟ್ರೇಲಿಯಾದ ಡೇವಿಡ್‌ ವಾರ್ನರ್‌ ಅವರನ್ನು ಹಿಂದಿಕ್ಕಿದ್ದಾರೆ. ರೋಹಿತ್‌ ಆಡಿದ 7 ಪಂದ್ಯಗಳಿಂದ ಒಟ್ಟು 544 ರನ್‌ಗಳನ್ನು ಚೆಚ್ಚಿ ಅಗ್ರಸ್ಥಾನ ಅಲಂಕರಿಸಿದರೆ, ಡೇವಿಡ್‌ ವಾರ್ನರ್‌ 8 ಪಂದ್ಯಗಳಿಂದ 516 ರನ್‌ಗಳನ್ನು ಗಳಿಸಿ 3ನೇ ಸ್ಥಾನದಲ್ಲಿದ್ದಾರೆ. ಆಸೀಸ್‌ ನಾಯಕ ಆರೊನ್‌ ಫಿಂಚ್‌ (8 ಪಂದ್ಯ, 504 ರನ್‌) ಮೂರನೇ ಸ್ಥಾನ ಪಡೆದಿದ್ದಾರೆ.

1000 ರನ್‌ಗಳ ಸರದಾರ

1000 ರನ್‌ಗಳ ಸರದಾರ

ಇದೇ ವೇಳೆ ರೋಹಿತ್‌ 2019ರಲ್ಲಿ ಏಕದಿನ ಕ್ರಿಕೆಟ್‌ನಲ್ಲಿ 1000 ರನ್‌ಗಳನ್ನು ಪೂರೈಸಿದ ಸಾಧನೆಯನ್ನೂ ಮಾಡಿದ್ದಾರೆ. ಬಾಂಗ್ಲಾ ವಿರುದ್ಧದ ಪಂದ್ಯಕ್ಕೂ ಮುನ್ನ ಅವರಿಗೆ ಈ ಸಾಧನೆ ಮಾಡಲು ಇನ್ನೆರಡು ರನ್‌ಗಳ ಅಗತ್ಯವಿತ್ತು. ಇದೀಗ 104 ರನ್‌ಗಳ ಅಮೋಘ ಶತಕದೊಂದಿಗೆ ಒಟ್ಟು ಗಳಿಕೆಯನ್ನು 1102ಕ್ಕೆ ವಿಸ್ತರಿಸಿದ್ದಾರೆ.

Story first published: Tuesday, July 2, 2019, 18:13 [IST]
Other articles published on Jul 2, 2019
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+