Rohit Sharma: ತಮ್ಮ ಸಮಕ್ಕೆ ನಿಂತ ವಿರಾಟ್ ದಾಖಲೆಯನ್ನು 4 ಗಂಟೆಗಳಲ್ಲಿ ಮೀರಿ ನಿಂತ ರೋಹಿತ್ ಶರ್ಮಾ
ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ರೋಚಕ ಘಟ್ಟವನ್ನು ತಲುಪಿದೆ. ಸ್ಟಾರ್ ಆಟಗಾರರು ಲಯಕ್ಕೆ ಮರಳಿರುವುದು ಅಭಿಮಾನಿಗಳಲ್ಲಿ ನವ ಉತ್ಸಾಹ ತುಂಬಿದೆ. ಭಾನುವಾರ ನಿಜಕ್ಕೂ ಅಭಿಮಾನಿಗಳಿಗ ಪಾಲಿಗೆ ಸೂಪರ್ ಧಮಾಕ್ ಆಗಿತ್ತು. ಒಂದೇ ದಿನ ಟೀಮ್ ಇಂಡಿಯಾದ ಮಾಜಿ, ಹಾಲಿ ಹಾಗೂ ಫ್ಯೂಚರ್ ಸೂಪರ್ ಸ್ಟಾರ್‌ಗಳು ಕಣಕ್ಕೆ ಇಳಿದಿದ್ದರು. ಈ ವೇಳೆ ಹಾಲಿ ಸೂಪರ್ ಸ್ಟಾರ್‌ಗಳಾದ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ (Rohit Sharma) ಅರ್ಧಶತಕ ಬಾರಿಸಿ ತಮ್ಮ ತಂಡಗಳಿಗೆ ಆಧಾರವಾದ್ರು.
ನ್ಯೂ ಚಂಡೀಗಡ್ ಮೈದಾನದಲ್ಲಿ ಪಂಜಾಬ್ (PBKS) ನೀಡಿದ್ದ ಸ್ಪರ್ಧಾತ್ಮಕ ಗುರಿಯನ್ನು ಬೆನ್ನಟ್ಟಿದ ವೇಳೆ ಆರ್‌ಸಿಬಿ (RCB) ತಂಡದ ವಿರಾಟ್ ಕೊಹ್ಲಿ ಮನಮೋಹಕ ಬ್ಯಾಟಿಂಗ್ ನಡೆಸಿದರು. ಈ ವರ್ಷ ತವರಿನಾಚೆ ಅದ್ಭುತ ಪ್ರದರ್ಶನ ನೀಡುತ್ತಿರುವ ಆರ್‌ಸಿಬಿ ಮತ್ತೊಂದು ಜಯ ದಾಖಲಿಸಿತು. ಈ ಜಯದಲ್ಲಿ ವಿರಾಟ್ ಕೊಹ್ಲಿ (Virat Kohli) ಮಿಂಚಿದರು. ವಿರಾಟ್ 54 ಎಸೆತಗಳಲ್ಲಿ 7 ಬೌಂಡರಿ, 1 ಸಿಕ್ಸರ್ ಸಹಾಯದಿಂದ ಅಜೇಯ 73 ರನ್ ಸಿಡಿಸಿ ಮಿಂಚಿದರು. ಇವರ ದಾಖಲೆಯ ಆಟಕ್ಕೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಸಹ ಸಂದಿತು. ಈ ಮೂಲಕ ರೋಹಿತ್ ದಾಖಲೆಯನ್ನು ವಿರಾಟ್ ಕೊಹ್ಲಿ ಮೀರಿ ನಿಂತರು.

ಆದರೆ ಈ ದಾಖಲೆ ಇವರ ಹೆಸರಿಗೆ ಹೆಚ್ಚು ಹೊತ್ತು ಉಳಿಯಲೇ ಇಲ್ಲ. ರೋಹಿತ್ ಶರ್ಮಾ ಚೆನ್ನೈ ಸೂಪರ್ ಕಿಂಗ್ಸ್ (CSK) ವಿರುದ್ಧದ ಪಂದ್ಯದಲ್ಲಿ ಮೈಚಳಿ ಬಿಟ್ಟು ಬ್ಯಾಟ್ ಮಾಡಿದರು. ತಮ್ಮ ನೈಜ್ಯ ಆಟವನ್ನು ಆಡಿದ ರೋಹಿತ್ ಬೌಂಡರಿ, ಸಿಕ್ಸರ್‌ಗಳ ಸುರಿಮಳೆ ಸುರಿಸಿದರು. ಈ ಮೂಲಕ ತಮ್ಮ ಅಭಿಮಾನಿಗಳಿಗೆ ರಾತ್ರಿ ಹಬ್ಬದೂಟವನ್ನು ಉಣಬಡಿಸಿದರು. ಚೆನ್ನೈ ನೀಡಿದ್ದ 177 ರನ್‌ಗಳ ಗುರಿಯನ್ನು ಮುಂಬೈ ಇಂಡಿಯನ್ಸ್ (MI) ಮೆಟ್ಟಿ ನಿಲ್ಲುವಲ್ಲಿ ರೋಹಿತ್ ತಮ್ಮದೇ ಕಾಣಿಕೆ ನೀಡಿದರು. ಇಷ್ಟು ದಿನ ಫಾರ್ಮ್‌ಗಾಗಿ ಚಡಪಡಿಸುತ್ತಿದ್ದ ಹಿಟ್ ಮ್ಯಾನ್ ದಾಖಲೆಯ ಇನಿಂಗ್ಸ್ ಕಟ್ಟಿದರು.
ವಿರಾಟ್ ದಾಖಲೆ ಉಡೀಸ್
ಮುಂಬೈ 26 ಎಸೆತಗಳಲ್ಲಿ ಪಂದ್ಯವನ್ನು ಗೆಲ್ಲುವಲ್ಲಿ ರೋಹಿತ್ ಶರ್ಮಾ ತಮ್ಮದೇ ರೀತಿಯಲ್ಲಿ ಕಾಣಿಕೆ ನೀಡಿದರು. ರೋಹಿತ್ ಆಡಿದ 45 ಎಸೆತಗಳಲ್ಲಿ 4 ಬೌಂಡರಿ, 5 ಸಿಕ್ಸರ್ ಸಹಾಯದಿಂದ ಅಜೇಯ 76 ರನ್ ಸಿಡಿಸಿದರು. ಇವರ ಈ ಅಮೋಘ ಆಟಕ್ಕೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಸಹ ಸಂದಿತು. ಈ ಮೂಲಕ ರೋಹಿತ್ ಶರ್ಮಾ ಐಪಿಎಲ್‌ನಲ್ಲಿ ಅತಿ ಹೆಚ್ಚು ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿಯನ್ನು ಪಡೆದ ಆಟಗಾರರ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಅವರನ್ನು ಹಿಂದಿಕ್ಕಿದರು. ರೋಹಿತ್ 20, ವಿರಾಟ್ 19 ಬಾರಿ ಈ ಸಾಧನೆ ಮಾಡಿದ್ದಾರೆ.
ಐಪಿಎಲ್‌ನಲ್ಲಿ ಅತಿ ಹೆಚ್ಚು ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದ ಆಟಗಾರರು
25 - ಎಬಿ ಡಿವಿಲಿಯರ್ಸ್
22 - ಕ್ರಿಸ್ ಗೇಲ್
20 - ರೋಹಿತ್ ಶರ್ಮಾ*
19 - ವಿರಾಟ್ ಕೊಹ್ಲಿ
18 - ಡೇವಿಡ್ ವಾರ್ನರ್
18 - ಎಂಎಸ್ ಧೋನಿ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications