For Quick Alerts
ALLOW NOTIFICATIONS  
For Daily Alerts
 

IND vs SL: ಆರಂಭಿಕನಾಗಿ ಸೆಹ್ವಾಗ್‌-ವಾರ್ನರ್‌ ದಾಖಲೆ ಮುರಿದ ರೋಹಿತ್‌ ಶರ್ಮಾ!

ಆಗಸ್ಟ್ 3 ಶನಿವಾರ, ಶ್ರೀಲಂಕಾ ವಿರುದ್ಧ ಮೊದಲ ಏಕದಿನ ಪಂದ್ಯವನ್ನು ಭಾರತ ಟೈ ಮಾಡಿಕೊಂಡಿದೆ. ಹೀಗಾಗಿ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಯಾವುದೇ ತಂಡ ಮುನ್ನೆಡೆ ಸಾಧಿಸಿಲ್ಲ.

ಟಿ20 ವಿಶ್ವಕಪ್‌ ಗೆಲುವಿನ ಬಳಿಕ ವಿಶ್ರಾಂತಿಯಿಂದ ಏಕದಿನ ಕ್ರಿಕೆಟ್‌ಗೆ ಮರಳಿದ ಟೀಮ್‌ ಇಂಡಿಯಾ ನಾಯಕ ರೋಹಿತ್‌ ಶರ್ಮಾ ಶ್ರೀಲಂಕಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ದೊಡ್ಡ ದಾಖಲೆ ಬರೆದಿದ್ದಾರೆ.

Rohit Sharma broke Virender Sehwag-David Warner record

ವೀರೇಂದ್ರ ಸೆಹ್ವಾಗ್ ಮತ್ತು ಡೇವಿಡ್ ವಾರ್ನರ್ ಅವರಂತಹ ದಿಗ್ಗಜ ಬ್ಯಾಟರ್‌ಗಳ ದಾಖಲೆಯನ್ನು ಮುರಿದಿದ್ದಾರೆ. ಕಡಿಮೆ ಪಂದ್ಯಗಳನ್ನು ಆಡುವ ಮೂಲಕ ರೋಹಿತ್‌ ಶರ್ಮಾ ಈ ಸಾಧನೆಯನ್ನು ಮಾಡಿದ್ದಾರೆ.

ರೋಹಿತ್ ಹೊಸ ಮೈಲಿಗಲ್ಲು

ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ರೋಹಿತ್ ಶರ್ಮಾ 7 ಬೌಂಡರಿ ಮತ್ತು 3 ಸಿಕ್ಸರ್ ನೆರವಿನಿಂದ 58 ರನ್ ಗಳಿಸಿದರು. ಇದರೊಂದಿಗೆ ಆರಂಭಿಕ ಬ್ಯಾಟರ್‌ ಆಗಿ 15000 ರನ್ ಗಳಿಸಿದ ಎರಡನೇ ವೇಗದ ಬ್ಯಾಟರ್‌ ಎನಿಸಿಕೊಂಡಿದ್ದಾರೆ.

ತಮ್ಮ 352ನೇ ಅಂತಾರಾಷ್ಟ್ರೀಯ ಪಂದ್ಯದಲ್ಲಿ ರೋಹಿತ್ ಶರ್ಮಾ ಈ ಮೈಲುಗಲ್ಲು ಸಾಧಿಸಿದ್ದಾರೆ. ಡೇವಿಡ್ ವಾರ್ನರ್ ಮತ್ತು ವೀರೇಂದ್ರ ಸೆಹ್ವಾಗ್ ಅವರಿಗಿಂತ ಕಡಿಮೆ ಪಂದ್ಯಗಳನ್ನು ಆಡುವ ಮೂಲಕ ಅವರು ಈ ದಾಖಲೆಗಳನ್ನು ಮುರಿದು ಮುನ್ನುಗ್ಗಿದ್ದಾರೆ.

ಈಗಾಗಲೇ ಡೇವಿಡ್ ವಾರ್ನರ್ ಮತ್ತು ವೀರೇಂದ್ರ ಸೆಹ್ವಾಗ್ ಕ್ರಿಕೆಟ್‌ ವೃತ್ತಿಜೀವನಕ್ಕೆ ವಿದಾಯ ಹೇಳಿದ್ದಾರೆ. ಸೆಹ್ವಾಗ್ 363 ಪಂದ್ಯಗಳನ್ನು ಆಡುವ ಮೂಲಕ 15000 ಅಂತರಾಷ್ಟ್ರೀಯ ರನ್ ಪೂರೈಸಿದ್ದರೆ, ವಾರ್ನರ್ 361 ಪಂದ್ಯಗಳಲ್ಲಿ ಈ ಸಾಧನೆ ಮಾಡಿದ್ದಾರೆ.

ಆರಂಭಿಕರಾಗಿ ವೇಗವಾಗಿ 15000 ರನ್ ಪೂರೈಸಿದ ಬ್ಯಾಟರ್ಸ್‌

ಸಚಿನ್ ತೆಂಡೂಲ್ಕರ್ - 331 ಪಂದ್ಯಗಳು
ರೋಹಿತ್ ಶರ್ಮಾ - 352 ಪಂದ್ಯಗಳು
ಡೇವಿಡ್ ವಾರ್ನರ್ 361 ಪಂದ್ಯಗಳು
ವೀರೇಂದ್ರ ಸೆಹ್ವಾಗ್ - 363 ಪಂದ್ಯಗಳು
ಗ್ರೇಮ್ ಸ್ಮಿತ್ 368 ಪಂದ್ಯಗಳು
ಅಲಸ್ಟೈರ್ ಕುಕ್ 374 ಪಂದ್ಯಗಳು

ಶ್ರೀಲಂಕಾ ವಿರುದ್ಧ ದಾಖಲೆ ಸಮೀಪ

ಶ್ರೀಲಂಕಾ ವಿರುದ್ಧದ ಏಕದಿನ ಪಂದ್ಯದಲ್ಲಿ ರೋಹಿತ್ ಶರ್ಮಾ 2000 ರನ್ ಪೂರೈಸುವ ಸಮೀಪ ಬಂದಿದ್ದಾರೆ. ರೋಹಿತ್ ಇಲ್ಲಿಯವರೆಗೆ 53 ಪಂದ್ಯಗಳನ್ನು ಆಡಿದ್ದು, 1922 ರನ್ ಗಳಿಸಿದ್ದಾರೆ. 9 ಬಾರಿ ಅಜೇಯರಾಗಿ ಉಳಿದಿದ್ದಾರೆ.

ಈ ಅವಧಿಯಲ್ಲಿ ಹಿಟ್‌ಮ್ಯಾನ್‌ ಬ್ಯಾಟ್‌ನಿಂದ 6 ಶತಕ ಮತ್ತು 8 ಅರ್ಧ ಶತಕಗಳು ಮೂಡಿ ಬಂದಿವೆ. ಖಾತೆ ತೆರೆಯದೇ ಶೂನ್ಯಕ್ಕೆ 5 ಬಾರಿ ಔಟಾಗಿದ್ದಾರೆ. ಶ್ರೀಲಂಕಾ ವಿರುದ್ಧ ರೋಹಿತ್‌ ಶರ್ಮಾ ಉತ್ತಮ ಸ್ಕೋರ್ 264 ರನ್. ಇದು ಏಕದಿನದಲ್ಲಿ ಯಾವುದೇ ಬ್ಯಾಟರ್‌ ಗಳಿಸಿದ ಗರಿಷ್ಠ ಸ್ಕೋರ್ ಆಗಿದೆ.

Story first published: Saturday, August 3, 2024, 7:16 [IST]
Other articles published on Aug 3, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+