For Quick Alerts
ALLOW NOTIFICATIONS  
For Daily Alerts
 

WTC ಫೈನಲ್‌ಗೆ ಮೂರು ಪಂದ್ಯ: ರೋಹಿತ್ ಶರ್ಮಾ ಮನವಿಗೆ ಬೆಂಬಲ ಸೂಚಿಸಿದ ಆಸ್ಟ್ರೇಲಿಯನ್ ಸ್ಟಾರ್

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಮುಕ್ತಾಯವಾಗಿದ್ದು ಆಸ್ಟ್ರೇಲಿಯಾ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಈ ಫೈನಲ್ ಪಂದ್ಯದ ವಿಚಾರವಾಗಿ ಸದ್ಯ ಸಾಕಷ್ಟು ಚರ್ಚೆಗಳು ನಡೆಯುತ್ತಿದೆ. ಅದರಲ್ಲಿ ಒಂದು ಫೈನಲ್ ಪಂದ್ಯದಲ್ಲಿ ಸೋಲು ಅನುಭವಿಸಿದ ಬಳಿಕ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ವ್ಯಕ್ತಪಡಿಸಿರುವ ಒಂದು ಅಭಿಪ್ರಾಯ. ಎರಡು ವರ್ಷಗಳ ಕಾಲ ನಡೆಯುವ ಈ ಸುದೀರ್ಘ ಆವೃತ್ತಿಯ ಚಾಂಪಿಯನ್ ತಂಡವನ್ನು ಒಂದೇ ಪಂದ್ಯದ ಮೂಲಕ ಅಳೆಯುವುದು ಸೂಕ್ತವಲ್ಲ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದ ರೋಹಿತ್ ಶರ್ಮಾ ಮೂರು ಪಂದ್ಯಗಳ ಸರಣಿಯ ಮೂಲಕ ಚಾಂಪಿಯನ್ ತಂಡವನ್ನು ಕಂಡುಕೊಳ್ಳುವಂತಾಗಬೇಕು ಎಂದಿದ್ದರು.

ರೋಹಿತ್ ಶರ್ಮಾ ಈ ಅಭಿಪ್ರಾಯಕ್ಕೆ ತಕ್ಷಣಕ್ಕೆ ಕ್ರಿಕೆಟ್ ವಿಶ್ಲೇಷಕರಿಂದ ಬೆಂಬಲಕ್ಕಿಂತಲೂ ವಿರೋಧಗಳೇ ವ್ಯಕ್ತವಾದಂತೆ ಕಂಡುಬಂದಿತ್ತು. ಸ್ವತಃ ಆಸ್ಟ್ರೇಲಿಯಾದ ನಾಯಕ ಪ್ಯಾಟ್ ಕಮ್ಮಿನ್ಸ್ ಈ ಬಗ್ಗೆ ಕಠಿಣ ಪ್ರತಿಕ್ರಿಯೆ ನೀಡಿದರೆ ಭಾರತದ ಮಾಜಿ ಕ್ರಿಕೆಟಿಗ ದಿಗ್ಗಜ ಆಟಗಾರ ಸುನಿಲ್ ಗವಾಸ್ಕರ್ ನಾಯಕ ರೋಹಿತ್ ಶರ್ಮಾ ಅಭಿಪ್ರಾಯಕ್ಕೆ ಕಟುವಾಗಿ ಟೀಕೆಯನ್ನು ವ್ಯಕ್ತಪಡಿಸಿದರು. ಇನ್ನೂ ಅನೇಕರು ಈ ಅಭಿಪ್ರಾಯಕ್ಕೆ ಅನಿಸಿಕೆಯನ್ಉ ವ್ಯಕ್ತಪಡಿಸುತ್ತಿದ್ದಾರೆ.

Rohit Sharma calls for 3-match WTC Final: Australian star Brad Hogg support to Indian skipper

ಇದೀಗ ಆಸ್ಟ್ರೇಲಿಯಾದ ಮಾಜಿ ಸ್ಪಿನ್ನರ್ ಬ್ರಾಡ್ ಹಾಜ್ ಕೂಡ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಅನಿಸಿಕೆಗೆ ಬೆಂಬಲ ನೀಡಿದ್ದಾರೆ. ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿರುವ ಬ್ರಾಡ್ ಹಾಜ್ ಇದಕ್ಕೆ ತಮ್ಮ ಸಲಹೆಯನ್ನು ಕೂಡ ನೀಡಿದ್ದಾರೆ. ನಾಲ್ಕು ತಂಡಗಳ ಎರಡು ಗುಂಪುಗಳನ್ನು ಮಾಡಿ ಈ ಟೂರ್ನಿಯನ್ನು ಆಯೋಜಿಸಬಹುದು ಎಂದಿದ್ದಾರೆ.

"ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯ ಮೂರು ಪಂದ್ಯಗಳ ಸರಣಿಯಾಗಿರಬೇಕು ಎಂಬ ರೋಹಿತ್ ಶರ್ಮಾ ಅವರ ಅಭಿಪ್ರಾಯವನ್ನು ನಾನು ಒಪ್ಪಿಕೊಳ್ಳುತ್ತೇನೆ. ಆದರೆ ಈ ಬಾರಿ ಒಂದು ಪಂದ್ಯದ ಫೈನಲ್ ಪಂದ್ಯ ಆಸ್ಟ್ರೇಲಿಯಾ ಅದನ್ನು ಗೆದ್ದುಕೊಂಡಿದೆ ಅದನ್ನು ಒಪ್ಪಿಕೊಳ್ಳಬೇಕು. ಈ ಆಟ ಬೆಳವಣಿಗೆ ಕಾಣಬೇಕು. ನನ್ನ ಪ್ರಕಾರ ನಾಲ್ಕು ತಮಡಗಳ ಎರಡು ವಿಭಾಗಗಳ ಮೂಲಕ ಈ ಟೆಸ್ಟ್ ಚಾಂಪಿಯನ್ಸ್ ಟ್ರೋಪಿಯನ್ನು ಆಯೋಜಿಸಬೇಕು ಎಂದಿದ್ದಾರೆ ಬ್ರಾಡ್ ಹಾಜ್.

ರೋಹಿತ್ ಶರ್ಮಾ ಹೇಳಿದ್ದೇನು?

"ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯದಲ್ಲಿ ಮೂರು ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲು ನಾನು ಬಯಸುತ್ತೇನೆ. ನಾವು ಬಹಳ ಪರಿಶ್ರಮಪಟ್ಟಿದ್ದೇವೆ ಹಾಗೂ ಹೋರಾಟ ನಡೆಸಿದ್ದೇವೆ. ಆದರೆ ಇಲ್ಲಿ ಆಡಿದ್ದು ಕೇವಲ ಒಂದು ಪಂದ್ಯ ಮಾತ್ರ. ಮುಂದಿನ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಆವೃತ್ತಿಯಲ್ಲಿ ಮೂರು ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಿಸುವುದು ಸೂಕ್ತ" ಎಂದು ನಾಯಕ ರೋಹಿತ್ ಶರ್ಮಾ ಪಂದ್ಯದ ಮುಕ್ತಾಯದ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡುತ್ತಾ ಹೇಳಿಕೆ ನೀಡಿದ್ದರು.

Rohit Sharma calls for 3-match WTC Final: Australian star Brad Hogg support to Indian skipper

ಪ್ರತಿಕ್ರಿಯೆ ನೀಡಿದ್ದ ಪ್ಯಾಟ್

ಇನ್ನು ರೋಹಿತ್ ಶರ್ಮಾ ಅವರ ಈ ಅನಿಸಿಕೆಯ ಬಗ್ಗೆ ಪ್ಯಾಟ್ ಕಮ್ಮಿನ್ಸ್ ಜೊತೆಗೆ ಪ್ರಶ್ನೆಯನ್ನು ಕೇಳಲಾಯಿತು. ಇದಕ್ಕೆ ಪ್ಯಾಟ್ ಕಮ್ಮಿನ್ಸ್ ಭಿನ್ನವಾಗಿ ಉತ್ತರವನ್ನು ನೀಡಿದ್ದಾರೆ. "ನಾವು ಈಗಾಗಲೇ ಐಸಿಸಿ ಟ್ರೋಫಿಯನ್ನು ಗೆದ್ದಾಗಿದೆ. WTC ಫೈನಲ್‌ಗೆ ಕೇವಲ 3 ಪಂದ್ಯಗಳ ಸರಣಿಯನ್ನು ಮಾತ್ರವಲ್ಲ, 16 ಪಂದ್ಯಗಳ ಸರಣಿಯನ್ನಾದರೂ ಇಡಬಹುದು. ಆದರೆ ಒಲಿಂಪಿಕ್ಸ್‌ನಲ್ಲಿಯೂ ಪದಕ ಗೆಲ್ಲಲು ಕೇವಲ ಒಂದು ಆಟ ಮಾತ್ರವೇ ದೊರೆಯುತ್ತದೆ. ಆಟ ಅಂದರೆ ಅದು ಇರುವುದೇ ಹಾಗೆ" ಎಂದಿದ್ದರು ಪ್ಯಾಟ್ ಕಮ್ಮಿನ್ಸ್.

ಸುನಿಲ್ ಗವಾಸ್ಕರ್ ಹೇಳಿಕೆ

ರೋಹಿತ್ ಶರ್ಮಾ ಅವರ ಈ ಅಭಿಪ್ರಾಯದ ಬಗ್ಗೆ ಸುನಿಲ್ ಗವಾಸ್ಕರ್ ಅನಿಸಿಕೆ ವ್ಯಕ್ತಪಡಿಸಿದ್ದಾರೆ. "WTC ಆವೃತ್ತಿ ಪ್ರಾರಂಭವಾಗುವ ಮೊದಲೇ ತಂಡಗಳಿಗೆ ಒಂದು ಫೈನಲ್ ಪಂದ್ಯ ಇರಲಿದೆ ಎಂಬುದು ಗೊತ್ತಿತ್ತು. ಐಪಿಎಲ್‌ನಲ್ಲಿ ಆಟಗಾರರು "ಬೆಸ್ಟ್ ಆಫ್ ಥ್ರೀ"ಯನ್ನು ಕೇಳುತ್ತಾರೆಯೇ" ಪ್ರಶ್ನಿಸಿದ್ದಾರೆ. ಈ ಮೂಲಕ ರೋಹಿತ್ ಶರ್ಮಾ ಅಭಿಪ್ರಾಯಕ್ಕೆ ಸಮ್ಮತಿ ಸೂಚಿಸಿಲ್ಲ.

Story first published: Tuesday, June 13, 2023, 13:37 [IST]
Other articles published on Jun 13, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+