For Quick Alerts
ALLOW NOTIFICATIONS  
For Daily Alerts
 

ಟೆಸ್ಟ್ ಕ್ರಿಕೆಟ್‌ನಲ್ಲಿ ರೋಹಿತ್ ಶರ್ಮಾ ವಿರಾಟ್ ಕೊಹ್ಲಿಗಿಂತ ಅತ್ಯುತ್ತಮ ನಾಯಕನಾಗಬಹುದು: ವಾಸಿಮ್ ಜಾಫರ್

Rohit Sharma can become better captain than Virat Kohli in Test cricket said Wasim Jaffer

ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿ ಅಂತ್ಯವಾಗಿದ್ದು ಇದೀಗ ಎಲ್ಲರ ಚಿತ್ತ ಮಾರ್ಚ್ 26ರಿಂದ ಆರಂಭವಾಗಲಿರುವ ಐಪಿಎಲ್ ಟೂರ್ನಿಯತ್ತ ನೆಟ್ಟಿದೆ. ಈ ಸಂದರ್ಭದಲ್ಲಿ ಮಾಜಿ ಕ್ರಿಕೆಟಿಗ ವಾಸಿಮ್ ಜಾಫರ್ ಟೀಮ್ ಇಂಡಿಯಾದ ಟೆಸ್ಟ್ ನಾಯಕತ್ವದ ವಿಚಾರವಾಗಿ ಕುತೀಹಲಕಾರಿ ಹೇಳಿಕೆಯೊಂದನ್ನು ನೀಡಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ರೋಹಿತ್ ಶರ್ಮಾ ವಿರಾಟ್ ಕೊಹ್ಲಿಗಿಂತ ಅತ್ಯುತ್ತಮ ನಾಯಕನಾಗುವ ಅವಕಾಶವಿದೆ ಎಂದಿದ್ದಾರೆ.

ಶ್ರೀಲಂಕಾ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು ವೈಟ್‌ವಾಶ್ ಮಾಡಿ ವಶಕ್ಕೆ ಪಡೆಯುವ ಮೂಲಕ ಭಾರತ ತಂಡ ಟೆಸ್ಟ್ ಶ್ರೇಯಾಂಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೇರುವಲ್ಲಿ ಯಶಸ್ವಿಯಾಗಿದೆ. ಭಾರತ ತನ್ನ ಮುಂದಿನ ಟೆಸ್ಟ್ ಪಂದ್ಯವನ್ನು ಜುಲೈ ತಿಂಗಳಿನಲ್ಲಿ ಆಡಲಿದ್ದು ಕಳೆದ ವರ್ಷ ಬಾಕಿ ಉಳಿದಿದ್ದ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಮುಂದೂಡಿಕೆಯಾಗಿದ್ದ ಅಂತಿಮ ಪಂದ್ಯದಲ್ಲಿ ಮುಖಾಮುಖಿಯಾಗಲಿದೆ.

"ಹೌದು, ರೋಹಿತ್ ಶರ್ಮಾ ವಿರಾಟ್ ಕೊಹ್ಲಿಗಿಂತ ಉತ್ತಮ ಟೆಸ್ಟ್ ನಾಯಕನಾಗಬಹುದು. ಆತ ಎಷ್ಟು ಪಂದ್ಯಗಳಲ್ಲಿ ಭಾರತ ತಂಡವನ್ನು ಮುನ್ನಡೆಸಬಹುದು ರಂದು ಗೊತ್ತಿಲ್ಲ. ಆದರೆ ರಣತಂತ್ರದ ವಿಚಾರವಾಗಿ ರೋಹಿತ್ ಶರ್ಮಾ ಭಾರತದ ಅತ್ಯುತ್ತಮ ಟೆಸ್ಟ್ ನಾಯಕರಲ್ಲಿ ಒಬ್ಬರು ಎಂದು ನಾನು ಭಾವಿಸುತ್ತೇನೆ. ಈಗಾಗಲೇ ರರೋಹಿತ್ ಶರ್ನಾ ನೇತೃತ್ವದಲ್ಲಿ ಭಾರತ ಹೇಗೆ ಸರಣಿಗಳನ್ನು ವೈಟ್‌ವಾಶ್ ಮಾಡುತ್ತಿದೆ ಎಂಬುದನ್ನು ನೋಡುತ್ತಿದ್ದೇವೆ. ಇದನ್ನು ನೋಡಿದಾಗ ನಾಯಕತ್ವ ಸರಿಯಾದ ವ್ಯಕ್ತಿಯ ಕೈಗೆ ಹೋಗಿದೆ ಎಂಬ ಭಾವನೆ ಮೂಡುತ್ತದೆ" ಎಂದಿದ್ದಾರೆ ರೋಹಿತ್ ಶರ್ಮಾ.

ದಕ್ಷಿಣ ಆಫ್ರಿಕಾ ವಿರುದ್ಧದ ಪ್ರವಾಸದಲ್ಲಿ ಟೆಸ್ಟ್ ಸರಣಿಯಲ್ಲಿ ಸೋಲು ಅನುಭವಿಸಿದ ಬಳಿಕ ವಿರಾಟ್ ಕೊಹ್ಲಿ ಟೆಸ್ಟ್ ನಾಯಕತ್ವವನ್ನು ತೊರೆಯುವ ಘೋಷಣೆ ಮಾಡಿದ್ದರು. ಅದಕ್ಕೂ ಮುನ್ನ ಸೀಮಿತ ಓವರ್‌ಗಳ ತಮಡದ ನಾಯಕತ್ವ ರೋಹಿತ್ ಶರ್ಮಾ ವಹಿಸಿಕೊಂಡಿದ್ದರು. ಹೀಗಾಗಿ ಟೆಸ್ಟ್ ಮಾದರಿಗೂ ರೋಹಿತ್ ಶರ್ಮಾ ಅವರನ್ನೇ ನಾಯಕನನ್ನಾಗಿ ಘೋಷಣೆ ಮಾಡಲಾಗಿದೆ.

ರೋಹಿತ್ ನಾಯಕತ್ವದಲ್ಲಿ ಸತತ ಸರಣಿ ಗೆಲುವು: ಟೀಮ್ ಇಂಡಿಯಾ ರೋಹಿತ್ ಶರ್ಮಾ ನೇತೃತ್ವದಲ್ಲಿ ಸತತವಾಗಿ ಸರಣಿ ಗೆಲ್ಲುತ್ತಾ ಮುನ್ನುಗ್ಗುತ್ತಿದೆ. ಇನ್ನು ಈ ಬಾರಿಯ ತವರಿನ ಸೀಸನ್‌ನಲ್ಲಿ ಭಾರತ ಆಡಿದ ಎಲ್ಲಾ ಮಾದರಿಯ ಎಲ್ಲಾ 14 ಪಂದ್ಯಗಳಲ್ಲಿಯೂ ಗೆಲುವು ಸಾಧಿಸಿದೆ. ಇತ್ತೀಚೆಗೆ ನಡೆದ ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯನ್ನು ಕೂಡ ಭಾರತ 2-0 ಅಂತರದಿಮದ ವಶಕ್ಕೆ ಪಡೆದುಕೊಂಡಿದೆ.

ಇದೀಗ ರೋಹಿತ್ ಶರ್ಮಾ ಐಪಿಎಲ್ ಆಡಲು ಸಜ್ಜಾಗಿದ್ದು ಮುಂದಿನ ವಾರಾಂತ್ಯದಿಂದ ಆರಂಭವಾಗಲಿರುವ ಟೂರ್ನಿಯಲ್ಲಿ ಶರ್ಮಾ ಮುಂಬೈ ಇಂಡಿಯನ್ಸ್ ತಂಡವನ್ನು ಮುನ್ನಡೆಸಲಿದ್ದಾರೆ. ರೋಹಿತ್ ಶರ್ಮಾ ನೇತೃತ್ವದ ಮುಂಬೈ ಇಂಡಿಯನ್ಸ್ ಮಾರ್ಚ್ 27ರಿಂದ ಅಭಿಯಾನ ಆರಂಭಿಸಲಿದ್ದು ಮೊದಲ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಎದುರಿಸಲಿದೆ.

Story first published: Thursday, March 17, 2022, 21:18 [IST]
Other articles published on Mar 17, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+