ಯೋ ಯೋ ಟೆಸ್ಟ್ ಪಾಸಾದ ರೋಹಿತ್, ಮಾಧ್ಯಮಗಳ ಮೇಲೆ ಕಿಡಿ


ಬೆಂಗಳೂರು, ಜೂನ್ 20: ಟೀಂ ಇಂಡಿಯಾದ ಏಕದಿನ ಕ್ರಿಕೆಟ್ ತಂಡದ ಉಪ ನಾಯಕ ರೋಹಿತ್ ಶರ್ಮ ಅವರು ಯೋ ಯೋ ಟೆಸ್ಟ್ ನಲ್ಲಿ ಪಾಸಾಗಿದ್ದಾರೆ. ಬುಧವಾರ(ಜೂನ್ 20) ದಂದು ಪರೀಕ್ಷೆಯಲ್ಲಿ ಪಾಸಾದ ಬಳಿಕ ಕೆಲ ಮಾಧ್ಯಮಗಳ ವಿರುದ್ಧ ಕಿಡಿ ಕಾರಿದ್ದಾರೆ.
ಮುಂಬರುವ ಇಂಗ್ಲೆಂಡ್ ಪ್ರವಾಸಕ್ಕೆ ತಯಾರಿ ನಡೆಸಿರುವ ಭಾರತದ ಆಟಗಾರರಿಗೆ ದೈಹಿಕ ಸಾಮರ್ಥ್ಯ ಸಾಬೀತುಪಡಿಸುವ ಅಗತ್ಯ ಈ ಹಿಂದೆಗಿಂತಲೂ ಈಗ ಹೆಚ್ಚಾಗಿದೆ. ಯೋ ಯೋ ಟೆಸ್ಟ್ ಪಾಸಾಗಿರುವ ರೋಹಿತ್ ಅವರು ಜೂನ್ 23ರಂದು ಐರ್ಲೆಂಡ್ ಗೆ ಪ್ರಯಾಣ ಬೆಳೆಸುವ ಭಾರತ ತಂಡವನ್ನು ಸೇರಲಿದ್ದಾರೆ.
30 ವರ್ಷ ವಯಸ್ಸಿನ ಮುಂಬೈನ ಬಲಗೈ ಬ್ಯಾಟ್ಸ್ ಮನ್ ರೋಹಿತ್ ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ 'ಯೋ ಯೋ ಸೀ ಯು ಶಾರ್ಟ್ಲಿ ಐರ್ಲೆಂಡ್' ಎಂಬ ಅಡಿ ಬರಹ ನೀಡಿ ಪೋಸ್ಟ್ ಹಾಕಿದ್ದಾರೆ. ಮೈದಾನದಲ್ಲಿ ಬರಿ ಸಾಕ್ಸ್ ನಲ್ಲಿ ನಿಂತಿರುವ ರೋಹಿತ್ ಅವರು ತಮ್ಮ ಕೈಯಲ್ಲಿ ಶೂ ಇಟ್ಟುಕೊಂಡು ಯಾರಿಗೋ ತೋರಿಸುತ್ತಿರುವಂತಿದೆ.
ಇದಲ್ಲದೆ, ಮೈಕ್ರೋ ಬ್ಲಾಗಿಂಗ್ ತಾಣ ಟ್ವಿಟ್ಟರ್ ನಲ್ಲಿ ನೇರವಾಗಿ ಕೆಲ ಮಾಧ್ಯಮಗಳಿಗೆ ತಮ್ಮ ಪ್ರತಿಕ್ರಿಯೆಯನ್ನು ರೋಹಿತ್ ನೀಡಿದ್ದಾರೆ. 'ನಾನು ನನ್ನ ಸಮಯವನ್ನು ಹೇಗೆ ಕಳೆಯುತ್ತೇನೆ ಎಂಬುದನ್ನು ಇತರರು ತಿಳಿದುಕೊಳ್ಳುವ ಅಗತ್ಯವಿಲ್ಲ. ನಾನು ನಿಯಮಕ್ಕೆ ಬದ್ಧನಾಗಿದ್ದೇನೆ. ನನ್ನ ಸಾಮರ್ಥ್ಯ ಪರೀಕ್ಷೆಗಾಗಿ ಯೋ ಯೋ ಟೆಸ್ಟ್ ಒಮ್ಮೆ ಮಾತ್ರ ಇತ್ತು. ಅದು ಇಂದು ನಡೆಯಿತು. ಸುದ್ದಿ ಪ್ರಸಾರಕ್ಕೂ ಮೊದಲು ಪರಿಶೀಲನೆ ಮಾಡುವುದು ಒಳ್ಳೆ ಅಭ್ಯಾಸ ಎಂಬರ್ಥದಲ್ಲಿ ಟ್ವೀಟ್ ಮಾಡಿದ್ದಾರೆ.
ಐಪಿಎಲ್ ವೇಳೆಯಲ್ಲಿ ರೋಹಿತ್ ಅವರು ಎರಡು ಬಾರಿ ಯೋ ಯೋ ಟೆಸ್ಟ್ ನಲ್ಲ್ ಫೇಲ್ ಆಗಿದ್ದರು. ಹೀಗಾಗಿ ರಹಾನೆ ಅವರು ಏಕದಿನ ತಂಡದಲ್ಲಿ ಬದಲಿ ಅಟಗಾರನಾಗಿ ರೋಹಿತ್ ಬದಲಿಗೆ ಸೇರಲಿದ್ದಾರೆ. ರಹಾನೆ ಅವರನ್ನು ಬಿಸಿಸಿಐನ ಬಿಗ್ ಬಾಸ್ ಗಳು ಸರಿಯಾಗಿ ಆಡಿಸುತ್ತಿಲ್ಲ. ಉದ್ದೇಶಪೂರ್ವಕವಾಗಿ ಕಡೆಗಣಿಸುತ್ತಿದ್ದಾರೆ ಎಂಬ ವರದಿಗಳು ಬಂದಿತ್ತು.
ಬಿಸಿಸಿಐನಿಂದ ಅನುಮತಿ ಪಡೆದು, ರೋಹಿತ್ ಅವರು ರಷ್ಯಾಕ್ಕೆ ತೆರಳಿದ್ದರು. ವಾಚ್ ಬ್ರ್ಯಾಂಡ್ ರಾಯಭಾರಿಯಾಗಿರುವ ರೋಹಿತ್ ಪ್ರಚಾರ ಕಾರ್ಯದಲ್ಲಿ ನಿರತರಾಗಿದ್ದರು. ಎಲ್ಲಾ ಯೋ ಯೋ ಟೆಸ್ಟ್ ಒಂದೇ ದಿನದಂದು ಮಾಡಬೇಕು ಎಂಬ ನಿಯಮವೇನಿಲ್ಲ ಎಂದು ಬಿಸಿಸಿಐ ಅಧಿಕಾರಿ ಸಾಬಾ ಕರೀಂ ಪ್ರತಿಕ್ರಿಯಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications