ICC ODI Rankings: ರೋಹಿತ್ ಶರ್ಮಾ ನಂಬರ್ 1 ಬ್ಯಾಟರ್: ಗಿಲ್, ವಿರಾಟ್ ಸ್ಥಾನ ಕುಸಿತ
ಆಸ್ಟ್ರೇಲಿಯಾ ಸರಣಿಯಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿರುವ ರೋಹಿತ್ ಶರ್ಮಾ ಅವರಿಗೆ ಐಸಿಸಿ ಶ್ರೇಯಾಂಕದಲ್ಲಿ ಬಡ್ತಿ ಆಗಿದೆ. ಆಸ್ಟ್ರೇಲಿಯಾ ಪ್ರವಾಸಕ್ಕೂ ಮುನ್ನ ರೋಹಿತ್ ಶರ್ಮಾ ಅವರ ಕ್ಷಮತೆಯ ಮೇಲೆ ಎದ್ದಿದ್ದ ಪ್ರಶ್ನೆಗಳಿಗೆ ರೋಹಿತ್ ಮೈದಾನದಲ್ಲಿ ಉತ್ತರ ನೀಡಿದ್ದಾರೆ. ಈ ಮೂಲಕ ಮತ್ತೆ ಏಕದಿನ ಶ್ರೇಯಾಂಕದಲ್ಲಿ ತಮ್ಮ ಕಮಾಲ್ ಮುಂದುವರೆಸಿದ್ದಾರೆ. ಆಸೀಸ್‌ನಲ್ಲಿ ನೀಡಿದ ಅಮೋಘ ಬ್ಯಾಟಿಂಗ್ ಪರಿಣಾಮ ಇವರು ಶ್ರೇಯಾಂಕದಲ್ಲಿ ಭರ್ಜರಿ ಏರಿಕೆ ಕಂಡಿದ್ದಾರೆ.
ಆಸ್ಟ್ರೇಲಿಯಾ ಪ್ರವಾಸದಲ್ಲಿ ಮೊದಲ ಬಾರಿಗೆ ಏಕದಿನ ಫಾರ್ಮೆಟ್‌ನಲ್ಲಿ ತಂಡ ಮುನ್ನಡೆಸಿದ ಶುಭಮನ್ ಗಿಲ್ ಶ್ರೇಯಾಂಕದಲ್ಲಿ ಇಳಿಕೆ ಕಂಡಿದ್ದಾರೆ. ಆಸ್ಟ್ರೇಲಿಯಾದಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಅರ್ಧಶತಕ ಹಾಗೂ ಮೂರನೇ ಏಕದಿನ ಪಂದ್ಯದಲ್ಲಿ ಶತಕ ಬಾರಿಸಿದ್ದ ರೋಹಿತ್ ಶ್ರೇಯಾಂಕದಲ್ಲಿ ಏರಿಕೆ ಆಗಿದೆ. ರೋಹಿತ್ 781 ರೇಟಿಂಗ್ ಪಾಯಿಂಟ್ ಹೊಂದಿರುವ ರೋಹಿತ್ ಶರ್ಮಾ ಮೊದಲ ಬಾರಿಗೆ ಐಸಿಸಿ ಏಕದಿನ ಶ್ರೇಯಾಂಕದಲ್ಲಿ ನಂಬರ್ ಒನ್ ಸ್ಥಾನವನ್ನು ಗಳಿಸಿದ್ದಾರೆ.

ಅಫ್ಘಾನಿಸ್ತಾನ ತಂಡದ ಇಬ್ರಾಹಿಂ ಜರ್ದಾನ್ 764 ಅಂಕಗಳೊಂದೊಗೆ ಎರಡನೇ ಸ್ಥಾನದಲ್ಲಿದೆ. ಇನ್ನು ಟೀಮ್ ಇಂಡಿಯಾದ ಸ್ಟಾರ್ ಆಟಗಾರ ಶುಭಮನ್ ಗಿಲ್ 745 ರೇಟಿಂಗ್ ಪಾಯಿಂಟ್‌ಗಳೊಂದಿಗೆ 3ನೇ ಸ್ಥಾನದಲ್ಲಿದ್ದಾರೆ. ಅಲ್ಲದೆ 2 ಸ್ಥಾನ ಕುಸಿತ ಕಂಡಿದ್ದಾರೆ. ಭಾರತದ ಚೇಸಿಂಗ್ ಸ್ಟಾರ್ ವಿರಾಟ್ ಕೊಹ್ಲಿ ಸತತ ಸೊನ್ನೆ ಸುತ್ತಿದ್ದು ಅವರ ಶ್ರೇಯಾಂಕ ಒಂದು ಸ್ಥಾನ ಕುಸಿಯಲು ಕಾರಣವಾಗಿದೆ. ಸದ್ಯ ವಿರಾಟ್ 725 ಅಂಕಗಳೊಂದಿಗೆ 6ನೇ ಸ್ಥಾನದಲ್ಲಿದ್ದಾರೆ. ಆಸ್ಟ್ರೇಲಿಯಾ ಪ್ರವಾಸದಲ್ಲಿ ತಂಡದ ಉಪನಾಯಕ ಜವಾಬ್ದಾರಿಯನ್ನು ಪಡೆದಿದ್ದ ಶ್ರೇಯಸ್ ಅಯ್ಯರ್ 700 ರೇಟಿಂಗ್ ಪಾಯಿಂಟ್‌ಗಳೊಂದಿಗೆ ಒಂದು ಸ್ಥಾನ ಜಿಗಿತ ಕಂಡಿದ್ದು 9ನೇ ಸ್ಥಾನದಲ್ಲಿದ್ದಾರೆ. ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಮತ್ತೆ ಅಂಗಳಕ್ಕೆ ನವೆಂಬರ್‌ನಲ್ಲಿ ಇಳಿಯಲಿದ್ದು, ದಕ್ಷಿಣ ಆಫ್ರಿಕಾ ವಿರುದ್ಧ ಸರಣಿ ಆಡಲಿದ್ದಾರೆ.
ಬೌಲರ್‌ಗಳ ಶ್ರೇಯಾಂಕದಲ್ಲಿ ಏರಿಕೆ
ಟೀಮ್ ಇಂಡಿಯಾದ ಪರ ಉತ್ತಮ ರೇಟಿಂಗ್ ಹೊಂದಿರುವ ಬೌಲರ್ ಎಂಬ ಹಿರಿಮೆ ರಿಸ್ಟ್ ಸ್ಪಿನ್ ಬೌಲರ್ ಕುಲ್‌ದೀಪ್ ಯಾದವ್ ಅವರದ್ದಾಗಿದೆ. ಇವರು 634 ಅಂಕಗಳೊಂದಿಗೆ 1 ಸ್ಥಾನ ಕುಸಿತ ಕಂಡಿದ್ದು, 7ನೇ ಸ್ಥಾನದಲ್ಲಿದ್ದಾರೆ. ಆಸ್ಟ್ರೇಲಿಯಾ ಪ್ರವಾಸದ ಮೂಲಕ ಏಕದಿನ ಫಾರ್ಮೆಟ್‌ಗೆ ಕಂ ಬ್ಯಾಕ್ ಮಾಡಿದ್ದ ಮೊಹಮ್ಮದ್ ಸಿರಾಜ್ ಒಂದು ಸ್ಥಾನ ಏರಿಕೆ ಕಂಡಿದ್ದು, 16ನೇ ಸ್ಥಾನದಲ್ಲಿದ್ದಾರೆ. ಸ್ಟಾರ್ ಆಲ್‌ರೌಂಡರ್ ಅಕ್ಷರ್ ಪಟೇಲ್ 6 ಸ್ಥಾನ ಏರಿಕೆ ಕಂಡಿದ್ದು, 31ನೇ ಸ್ಥಾನದಲಿದ್ದಾರೆ.

ಏಕದಿನ ಫಾರ್ಮೆಟ್‌ನಲ್ಲಿ ಅಫ್ಘಾನಿಸ್ತಾನದ ರಶೀದ್ ಖಾನ್ 710 ರೇಟಿಂಗ್ ಪಾಯಿಂಟ್‌ಗಳೊಂದಿಗೆ ಅಗ್ರ ಸ್ಥಾನದಲ್ಲಿದ್ದಾರೆ. ಇನ್ನು ದಕ್ಷಿಣ ಆಫ್ರಿಕಾದ ಕೇಶವ್ ಮಹರಾಜ್ 2ನೇ ಸ್ಥಾನ, ಶ್ರೀಲಂಕಾ ಮಹೀಶ್ ತೀಕ್ಷಣ 3ನೇ ಸ್ಥಾನ ಹೊಂದಿದ್ದಾರೆ.
ಭಾರತ ತಂಡದ ಭರವಸೆಯ ಆಲ್‌ರೌಂಡರ್ ಅಕ್ಷರ್ ಪಟೇಲ್ ಸಹ 229 ರೇಟಿಂಗ್ ಪಾಯಿಂಟ್‌ಗಳೊಂದಿಗೆ 8ನೇ ಸ್ಥಾನದಲ್ಲಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications