ಆಸ್ಟ್ರೇಲಿಯಾದ ಪ್ರವಾಸದಲ್ಲಿ ಟೀಮ್ ಇಂಡಿಯಾ ಹೀನಾಯ ಪ್ರದರ್ಶನ ನೀಡಿತ್ತು. ಟೀಮ್ ಇಂಡಿಯಾದ ಸ್ಟಾರ್ ಆಟಗಾರರ ಆಟಕ್ಕೆ ಟೀಕೆಗಳು ಕೇಳಿ ಬಂದಿದ್ದವು. ಒಟ್ಟಾರೆ ಪ್ರವಾಸದಲ್ಲಿ ಟೀಮ್ ಇಂಡಿಯಾ ಬ್ಯಾಟರ್‌ಗಳು ಮಕಾಡೆ ಮಲಗಿದ್ದರು. ಇದರಲ್ಲಿ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಸೇರಿದ್ದಾರೆ. ಟೀಮ್ ಇಂಡಿಯಾದ ಸ್ಟಾರ್ ಆಟಗಾರರ ಆಟ ಕಂಡು ಮಾಜಿ ಆಟಗಾರರು ಕೆಂಡ ಕಾರಿದ್ದಾರೆ. ಈಗ ಟೀಮ್ ಇಂಡಿಯಾ ಕ್ಯಾಪ್ಟನ್ ಬಿಸಿಸಿಐಗೆ ದೂರು ನೀಡಿದ್ದಾರೆ.
ಭಾರತ ಆಸ್ಟ್ರೇಲಿಯಾದಲ್ಲಿ ಬಾರ್ಡರ್ ಗವಾಸ್ಕರ್ ಸರಣಿಯನ್ನು ಆಯೋಜಿಸಿತ್ತು. ಈ ವೇಳೆ ಐದು ಪಂದ್ಯಗಳ ಸರಣಿಯನ್ನು ಆಡಿಸಲಾಗಿತ್ತು. ಈ ಸರಣಿಯಲ್ಲಿ ಟೀಮ್ ಇಂಡಿಯಾದ ಸೂಪರ್ ಸ್ಟಾರ್ ಬ್ಯಾಟರ್‌ಗಳು ರನ್ ಬರ ಅನುಭವಿಸಿದರು. ಇವರ ಆಟವನ್ನು ಕಂಡು ಟೀಮ್ ಇಂಡಿಯಾದ ಮಾಜಿ ಆಟಗಾರ ಸುನಿಲ್ ಗವಾಸ್ಕರ್ ಕೆಂಡ ಕಾರಿದ್ದರು. ಟೀಮ್ ಇಂಡಿಯಾ ಬ್ಯಾಟರ್‌ಗಳನ್ನು ಮನ ಬಂದಂತೆ ಟೀಕಿಸಿದ್ದರು. ಈ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ, ಸುನಿಲ್ ಗವಾಸ್ಕರ್ ವಿರುದ್ಧ ಬಿಸಿಸಿಐಗೆ ದೂರು ನೀಡಿದ್ದಾರೆ.

ಕ್ರಿಕ್‌ಬ್ಲಾಗರ್ ವರದಿಯ ಪ್ರಕಾರ, ರೋಹಿತ್, ದಿಗ್ಗಜ ಆಟಗಾರ ಸುನಿಲ್ ಗವಾಸ್ಕರ್ ವಿರುದ್ಧ ದೂರು ನೀಡಿದ್ದಾರೆ. ಆಸ್ಟ್ರೇಲಿಯಾ ಪ್ರವಾಸದಲ್ಲಿ ಸುನಿಲ್ ಗವಾಸ್ಕರ್ ನೀಡಿದ ಹೇಳಿಕೆಯಿಂದ ರೋಹಿತ್ ಮನನೊಂದಿದ್ದಾರೆ. ಪ್ರವಾಸದ ವೇಳೆ ಭಾರತೀಯ ಆಟಗಾರರನ್ನು ಗವಾಸ್ಕರ್ ಹೆಚ್ಚಾಗಿ ಟೀಕಿಸಿದ್ದಾರೆ. ಇದರ ಪರಿಣಾಮ ನೇರವಾಗಿ ಆಟಗಾರರ ಆಟದ ಮೇಲೆ ಬಿದ್ದಿದೆ. ಮೈದಾನದ ಹೊರಗಿನ ಒತ್ತಡ ಸಹ ಆಟಗಾರರ ಮೇಲೆ ಪರಿಣಾಮ ಬೀರಿದೆ ಎಂದು ಬಿಸಿಸಿಐಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಟೀಮ್ ಇಂಡಿಯಾದ ಮಾಜಿ ಆಟಗಾರ ಸುನಿಲ್ ಗವಾಸ್ಕರ್ ತಮ್ಮ ಹೇಳಿಕೆಗಳಿಂದ ಹಲವು ಭಾರಿ ಸುದ್ದಿಯಾಗಿದ್ದಾರೆ. ಈಗ ಮತ್ತೊಮ್ಮೆ ತಾವು ಆಟಗಾರರನ್ನು ಟೀಕಿಸಿದ ಕಾರಣಕ್ಕೆ ಸುದ್ದಿಯಲ್ಲಿದ್ದಾರೆ. ಅಸಲಿಗೆ ಗವಾಸ್ಕರ್ ಟೀಕಿಸಿದ್ದು ಕಟುವಾಗಿರಬಹುದು. ಆದರೆ ಅದು ತಂಡದ ಹಿತದ ದೃಷ್ಟಿಯಿಂದ ಒಳ್ಳೆಯಾಗಿತ್ತು. ಸಿಡ್ನಿ ಟೆಸ್ಟ್‌ನಲ್ಲಿ ರೋಹಿತ್ ಶರ್ಮಾ ಮೈದಾನ ಪ್ರವೇಶಿಸಲಿಲ್ಲ. ಈ ಕುರಿತಾಗಿ ಆಸ್ಟ್ರೇಲಿಯಾ ಮಾಧ್ಯಮದಲ್ಲಿ ಬರೆದ ಲೇಖದಲ್ಲಿ, ರೋಹಿತ್ ಲಯ ಕಂಡುಕೊಳ್ಳಲು ಪರದಾಟ ನಡೆಸಿದ್ದರು. ಅವರ ಫಾರ್ಮ್ ಅವರ ಭವಿಷ್ಯದ ಬಗ್ಗೆ ಪ್ರಶ್ನೆಗಳನ್ನು ಹುಟ್ಟಿ ಹಾಕಿವೆ ಎಂದಿದ್ದಾರೆ.
ಸುನಿಲ್ ಗವಾಸ್ಕರ್ ಈ ರೀತಿಯಾಗಿ ಹೇಳಿಕೆ ನೀಡಿ ಪೇಚೆಗೆ ಸಿಲುಕಿಕೊಳ್ಳುತ್ತಿರುವುದು ಇದೇ ಮೊದಲನೇಲ್ಲ. ಗವಾಸ್ಕರ್ ಈ ಹಿಂದೆ ವಿರಾಟ್ ಕೊಹ್ಲಿ ಅವರ ಸ್ಟ್ರೈಕ್ ರೇಟ್ ಬಗ್ಗೆ ಮಾತನಾಡಿ, ಚರ್ಚೆಗೆ ಗ್ರಾಸವಾಗಿದ್ದರು.

ಬಾರ್ಡರ್ ಗವಾಸ್ಕರ್ ಸರಣಿಯಲ್ಲಿ ರೋಹಿತ್ ಶರ್ಮಾ ರನ್ ಕಲೆ ಹಾಕುವಲ್ಲಿ ಹಿಂದೆ ಬಿದ್ದಿದ್ದಾರೆ. ಇವರು ಮೊದಲ ಪಂದ್ಯದಲ್ಲಿ ಆಡಿರಲಿಲ್ಲ. ಆದರೆ ಮುಂದಿನ ಮೂರು ಟೆಸ್ಟ್‌ಗಳಲ್ಲಿ ಟೀಮ್ ಇಂಡಿಯಾದ ನಾಯಕರಾಗಿ ಕಾಣಿಸಿಕೊಂಡರು. ಅಲ್ಲದೆ 6ರ ಸರಾಸರಿಯಲ್ಲಿ ರನ್ ಕಲೆ ಹಾಕಿ ಟೀಕೆಗೆ ಗುರಿಯಾಗಿದ್ದರು. ಆಸ್ಟ್ರೇಲಿಯಾದಲ್ಲಿ ಕಳಪೆ ಫಾರ್ಮ್‌ನಿಂದ ಕಂಗೆಟ್ಟ ರೋಹಿತ್ ಬಳಿಕ ಫಾರ್ಮ್ ಕಂಡುಕೊಳ್ಳಲು ರಣಜಿ ಟ್ರೋಫಿಯಲ್ಲಿ ಬ್ಯಾಟ್ ಮಾಡಿದರು. ಆದರೆ ಮೊದಲ ಇನಿಂಗ್ಸ್‌ನಲ್ಲಿ ಇವರು ವಿಶೇಷವಾದದನ್ನು ಏನು ಮಾಡಲಿಲ್ಲ. ಆದರೆ ಎರಡನೇ ಇನಿಂಗ್ಸ್‌ನಲ್ಲಿ ತಮ್ಮ ನೈಜ ಆಟವಾಡಿ ಗಮನ ಸೆಳೆದಿದ್ದರು.