Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಮುಂಬೈ ಇಂಡಿಯನ್ಸ್ ಪರ 4 ಸಾವಿರ ರನ್ ಪೂರೈಸಿದ ಹಿಟ್‌ಮ್ಯಾನ್

Rohit sharma Completes 4000 runs for Mumbai indians

ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ ತಮ್ಮ ಪ್ರಾಂಚೈಸಿ ಪರವಾಗಿ ಮತ್ತೊಂದು ಮೈಲಿಗಲ್ಲು ಸಾಧಿಸಿದ್ದಾರೆ. ಐಪಿಎಲ್‌ನಲ್ಲಿ ಮುಂಬೈ ಪರವಾಗಿ 155ನೇ ಪಂದ್ಯವಾಡುತ್ತಿರುವ ರೋಹಿತ್ 4 ಸಾವಿರ ರನ್ ಪೂರೈಸಿದ್ದಾರೆ.

ಮಂಗಳವಾರ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಫೈನಲ್ ಪಂದ್ಯದಲ್ಲಿ ಅರ್ಧಶತಕ ಬಾರಿಸಿದ ರೋಹಿತ್ ಶರ್ಮಾ ಮುಂಬೈ ಇಂಡಿಯನ್ಸ್ ಪರ 4000 ರನ್ ಕ್ಲಬ್‌ಗೆ ಸೇರಿದ್ದಾರೆ.

ಐಪಿಎಲ್‌ನಲ್ಲಿ ರೋಹಿತ್ ಶರ್ಮಾ ಇದುವರೆಗೂ ಮುಂಬೈ ಇಂಡಿಯನ್ಸ್ ಮತ್ತು ಡೆಕನ್ ಚಾರ್ಜರ್ಸ್ ತಂಡದ ಪರವಾಗಿ ಆಡಿದ್ದರು. ಇಂದಿನ ಫೈನಲ್ ಪಂದ್ಯ ಹಿಟ್‌ಮ್ಯಾನ್ ಅವರ 200ನೇ ಪಂದ್ಯವಾಗಿದೆ ಎನ್ನುವುದು ವಿಶೇಷ.

2008ರಲ್ಲಿ ಐಪಿಎಲ್ ಜರ್ನಿ ಆರಂಭಿಸಿದ ರೋಹಿತ್ ಶರ್ಮಾ 38 ಅರ್ಧ ಶತಕ ಹಾಗೂ ಒಂದು ಶತಕ ಬಾರಿಸಿದ್ದಾರೆ. 200 ಪಂದ್ಯಗಳಲ್ಲಿ 5226 ರನ್ ಕಲೆ ಹಾಕಿದ್ದಾರೆ. ರೋಹಿತ್ ಶರ್ಮಾ ನಾಲ್ಕು ಬಾರಿ ಐಪಿಎಲ್ ಕಪ್ ಗೆದ್ದಿರುವ ಮುಂಬೈ ಇಂಡಿಯನ್ಸ್ ಇಂದು ಐದನೇ ಸಲ ಟ್ರೋಫಿ ಗೆಲ್ಲುವ ಸನಿಹದಲ್ಲಿದೆ.

ಅಂದ್ಹಾಗೆ, ಮುಂಬೈ ಇಂಡಿಯನ್ಸ್ 2013, 2015, 2017 ಹಾಗೂ 2019ರಲ್ಲಿ ಐಪಿಎಲ್ ಟ್ರೋಪಿ ಗೆದ್ದಿದೆ. 2009ರಲ್ಲಿ ಡೆಕ್ಕರ್ ಚಾರ್ಜರ್ಸ್ ಐಪಿಎಲ್ ಗೆದ್ದಿತ್ತು. ಆ ತಂಡದಲ್ಲಿ ರೋಹಿತ್ ಶರ್ಮಾ ಸದಸ್ಯರಾಗಿದ್ದರು.

ಐಪಿಎಲ್ 2020 ಫೈನಲ್‌ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ 7 ವಿಕೆಟ್ ಕಳೆದುಕೊಂಡು 156 ರನ್ ಕಲೆ ಹಾಕಿದ್ದರು. ಮುಂಬೈ ಇಂಡಿಯನ್ಸ್ ಪರ ಟ್ರೆಂಟ್ ಬೋಲ್ಟ್ 3 ವಿಕೆಟ್ ಪಡೆದುಕೊಂಡಿದ್ದರು.

Story first published: Tuesday, November 10, 2020, 22:39 [IST]
Other articles published on Nov 10, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+