ಸಿಡ್ನಿಯಲ್ಲಿ 2 ಬೆಡ್ ರೂಮ್‌ನ ಅಪಾರ್ಟ್ಮೆಂಟ್ ಖಾತರಿಪಡಿಸಿದ ರೋಹಿತ್

ಸಿಡ್ನಿ: ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಗಾಗಿ ಆಸ್ಟ್ರೇಲಿಯಾ ತಲುಪಿರುವ ಭಾರತದ ಆರಂಭಿಕ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ, 14 ದಿನಗಳ ಕ್ವಾರಂಟೈನ್‌ಗಾಗಿ ಸಿಡ್ನಿಯಲ್ಲಿ 2 ಬೆಡ್ ರೂಮ್‌ನ ಅಪಾರ್ಟ್ಮೆಂಟ್ ಖಾತರಿಪಡಿಸಿದ್ದಾರೆ. ಆದರೆ ಸರಿಯಾಗಿ ಅಭ್ಯಾಸ ನಡೆಸಲು ರೋಹಿತ್‌ಗೆ ಸಾಧ್ಯವಾಗುತ್ತಿಲ್ಲ.
ಇಂಡಿಯನ್ ಪ್ರೀಮಿಯರ್ ಲೀಗ್ ವೇಳೆ ಗಾಯಕ್ಕೀಡಾಗಿದ್ದ ರೋಹಿತ್ ಶರ್ಮಾ ಚೇತರಿಸಿಕೊಳ್ಳುವುದಕ್ಕಾಗಿ ಬೆಂಗಳೂರಿನಲ್ಲಿರುವ ನ್ಯಾಷನಲ್ ಕ್ರಿಕೆಟ್ ಅಕಾಡೆಮಿಗೆ (ಎನ್‌ಸಿಎ) ತೆರಳಿದ್ದರು. ಹೀಗಾಗಿ ಐಪಿಎಲ್ ಬಳಿಕ ಪ್ರವಾಸ ಸರಣಿಗಾಗಿ ಆಸ್ಟ್ರೇಲಿಯಾಕ್ಕೆ ಭಾರತ ತಂಡ ತೆರಳುವಾಗಿ ಶರ್ಮಾ ತಂಡದ ಜೊತೆಗೆ ಬಂದಿರಲಿಲ್ಲ.
ಎನ್‌ಸಿಎಯಲ್ಲಿ ಸಂಪೂರ್ಣ ಚೇತರಿಸಿಕೊಂಡ ಬಳಿಕ ರೋಹಿತ್ ಆಸ್ಟ್ರೇಲಿಯಾಕ್ಕೆ ಬಂದಿದ್ದಾರೆ. ಟೆಸ್ಟ್ ಸರಣಿಯಲ್ಲಿ 3, 4ನೇ ಪಂದ್ಯದಲ್ಲಿ ಶರ್ಮಾ ಆಡಲಿದ್ದಾರೆ. ಹೀಗಾಗಿ ಸರಣಿಯಲ್ಲಿ ಪಾಲ್ಗೊಳ್ಳುವುದಕ್ಕೂ ಮುನ್ನ ಶರ್ಮಾ ಕ್ವಾರಂಟೈನ್ ಪಾಲಿಸಬೇಕಿದೆ.
ಕ್ವಾರಂಟೈನ್ ವೇಳೆ ಶರ್ಮಾಗೆ ಹೊರಾಂಗಣ ಅಭ್ಯಾಸ ನಡೆಸಲು ಸಾಧ್ಯವಾಗುತ್ತಿಲ್ಲ. ಆದರೆ ಒಳಾಂಗಣದಲ್ಲಿ ದೈಹಿಕ ಅಭ್ಯಾಸ ನಡೆಸಲು ಶರ್ಮಾಗೆ ಅವಕಾಶವಿದೆ. ಟೆಸ್ಟ್ ಸರಣಿಯ ಆರಂಭಿಕ ಪಂದ್ಯದಲ್ಲಿ ಭಾರತ ಹೀನಾಯ ಸೋಲು ಕಂಡಿತ್ತು. ಎರಡನೇ ಪಂದ್ಯ ಡಿಸೆಂಬರ್ 26ರಂದು ಆರಂಭವಾಗಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications