ಹೆತ್ತವರಾದ ಸಂಭ್ರಮದಲ್ಲಿರುವ ವಿರಾಟ್-ಅನುಷ್ಕಾ ದಂಪತಿಗೆ ಶುಭ ಹಾರೈಸಿದ ರೋಹಿತ್ ಶರ್ಮಾ

ಟೀಮ್ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಜನವರಿ 11ರಂದು ಮಧ್ಯಾಹ್ನ ತಮ್ಮ ಪುಟ್ಟ ಕುಟುಂಬಕ್ಕೆ ಹೊಸ ಅತಿಥಿಯನ್ನು ಸ್ವಾಗತಿಸಿದ್ದಾರೆ. ಕೊಹ್ಲಿ ಅನುಷ್ಕಾ ದಂಪತಿಗೆ ಹೆಣ್ಣು ಮಗು ಜನನವಾಗಿದ್ದು ವಿರಾಟ್ ಕೊಹ್ಲಿ ಟ್ವೀಟ್ ಮೂಲಕ ಈ ಸಂಭ್ರಮವನ್ನು ಹಂಚಿಕೊಂಡಿದ್ದಾರೆ.
ವಿರಾಟ್ ಕೊಹ್ಲಿ ಹಂಚಿಕೊಂಡಿರುವ ಈ ಟ್ವೀಟ್‌ಅನ್ನು ರೀಟ್ವೀಟ್ ಮಾಡಿ ಟೀಮ್ ಇಂಡಿಯಾದ ಉಪನಾಯಕ ರೋಹಿತ್ ಶರ್ಮಾ ಕೊಹ್ಲಿ-ಅನುಷ್ಕಾ ದಂಪತಿಗೆ ಶುಭ ಹಾರೈಸಿದ್ದಾರೆ. "ಇದೊಂದು ವಿವರಿಸಲಾಗದ ಅನುಭವ. ಇಬ್ಬರಿಗೂ ಶುಭಾಶಯಗಳು. ಒಳ್ಳೆಯದಾಗಲಿ" ಎಂದು ರೋಹಿತ್ ಶರ್ಮಾ ಟ್ವೀಟ್‌ನಲ್ಲಿ ಶುಭಹಾರೈಸಿದ್ದಾರೆ.
ರೋಹಿತ್ ಶರ್ಮಾ ಮಾಡಿರುವ ಈ ಟ್ವೀಟ್ ಕ್ರಿಕೆಟ್ ಅಭಿಮಾನಿಗಳ ಸಂತಸವನ್ನು ಹೆಚ್ಚಿಸಿದೆ. ಇಬ್ಬರ ನಡುವೆ ಎಲ್ಲವೂ ಸರಿಯಿಲ್ಲವೇನೋ ಎಂಬಂತಾ ಸಂದರ್ಭಗಳು ಕಳೆದ ಕೆಲ ತಿಂಗಳುಗಳಲ್ಲಿ ಉಂಟಾಗಿರುವುದು ಇದಕ್ಕೆ ಕಾರಣ. ಆದರೆ ಸದ್ಯ ರೋಹಿತ್ ಶರ್ಮಾ ಮಾಡಿರುವ ಟ್ವೀಟ್ ಇದಕ್ಕೆ ಬ್ರೇಕ್ ಬೀಳುವಂತೆ ಮಾಡಿದೆ.
ಟೀಮ್ ಇಂಡಿಯಾದ ನಾಯಕ ಹಾಗೂ ಉಪ ನಾಯಕರಾಗಿರುವ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಸುದೀರ್ಘ ಕಾಲದಿಂದ ಟೀಮ್ ಇಂಡಿಯಾದ ಆಧಾರ ಸ್ತಂಭವಾಗಿದ್ದಾರೆ. ಆದರೆ ಕಳೆದ ಐಪಿಎಲ್ ಬಳಿಕ ನಾಯತ್ವದ ವಿಚಾರವಾಗಿ ನಡೆಯುತ್ತಿರುವ ಚರ್ಚೆಗಳು ಇಬ್ಬರ ನಡುವೆ ಬಿರುಕು ಮೂಡಿಸಿದೆಯಾ ಎಂಬಂತಾ ಅನುಮಾನಗಳನ್ನು ಹುಟ್ಟು ಹಾಕಿತ್ತು.
ಬಳಿಕ ಆಸ್ಟ್ರೇಲಿಯಾ ಪ್ರವಾಸದಲ್ಲಿ ರೋಹಿತ್ ಶರ್ಮಾ ತಡವಾಗಿ ಪ್ರವಾಸ ಕೈಗೊಂಡ ಬಗೆಗೆ ಉಂಟಾದ ಗೊಂದಲದ ವಾತಾವರಣಗಳು ಈ ಬಗ್ಗೆ ಮತ್ತಷ್ಟು ಅನುಮಾನಗಳು ಹೆಚ್ಚುವಂತೆ ಮಾಡಿತ್ತು. ಇದೀಗ ರೋಹಿತ್ ಶರ್ಮಾ ವಿರಾಟ್ ದಂಪತಿಯ ಸಂಭ್ರಮದ ಕ್ಷಣದಲ್ಲಿ ಶುಭ ಹಾರೈಸಿರುವುದು ಅಭಿಮಾನಿಗಳ ಸಂತಸ ಇಮ್ಮಡಿಗೊಳಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications