For Quick Alerts
ALLOW NOTIFICATIONS  
For Daily Alerts
 

IND vs AUS: ಟಾಸ್ ಸೋತ ರೋಹಿತ್ ಶರ್ಮಾ ಹೆಸರಿನಲ್ಲಿ ದಾಖಲೆ

ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಚಾಂಪಿಯನ್ಸ್ ಟ್ರೋಫಿ 2025ರ ಸೆಮಿಫೈನಲ್ ಪಂದ್ಯ ರೋಚಕವಾಗಿದೆ. ವಿಶ್ವದ ಎರಡನೇ ಹೈವೋಲ್ಟೇಜ್ ಪಂದ್ಯದಲ್ಲಿ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಅವರಿಗೆ ಅದೃಷ್ಟ ಕೈ ಕೊಟ್ಟಿದೆ. ಮತ್ತೊಮ್ಮೆ ಟಾಸ್ ಸಮಯದಲ್ಲಿ ನಾಣ್ಯವು ರೋಹಿತ್ ಪರವಾಗಿ ಬಿದ್ದಿಲ್ಲ. ಈ ಮೂಲಕ ರೋಹಿತ್ ಶರ್ಮಾ ತಮ್ಮ ಹೆಸರಿನಲ್ಲಿ ಅನಗತ್ಯ ದಾಖಲೆವೊಂದನ್ನು ಮಾಡಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧ ರೋಹಿತ್ ಶರ್ಮಾ ಟಾಸ್‌ ಸೋಲಬೇಕಾಯಿತು. ಟಾಸ್ ಗೆದ್ದ ಆಸ್ಟ್ರೇಲಿಯಾ ನಾಯಕ ಸ್ಟೀವ್ ಸ್ಮಿತ್ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದರು. ಇದರೊಂದಿಗೆ ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಬಾರಿ ಸತತ ಟಾಸ್ ಸೋತ ಎರಡನೇ ನಾಯಕ ಎಂಬ ದಾಖಲೆಯನ್ನು ರೋಹಿತ್ ಮಾಡಿದ್ದಾರೆ.

Rohit Sharma creates record by losing toss in India vs Australia Champions Trophy 2025 semi-final

ಐಸಿಸಿ ಟೂರ್ನಿಗಳಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳ ನಡುವೆ ಕಠಿಣ ಸ್ಪರ್ಧೆ ಇದೆ. ಎರಡೂ ತಂಡಗಳು ಪಂದ್ಯವನ್ನು ಗೆಲ್ಲಲು ತಮ್ಮ ಅತ್ಯುತ್ತಮ ಪ್ರಯತ್ನ ಮಾಡುತ್ತಿರುವುದು ಕಂಡುಬರುತ್ತದೆ. ಎರಡು ಬಾರಿ ಆಸ್ಟ್ರೇಲಿಯಾ ಭಾರತ ತಂಡದಿಂದ ಚಾಂಪಿಯನ್ ಪಟ್ಟವನ್ನು ಕಸಿದುಕೊಂಡಿದೆ. ಆದರೆ ಈ ಬಾರಿ ಭಾರತ ಸೋಲಿಗೆ ಸೇಡು ತೀರಿಸಿಕೊಳ್ಳಲು ಸಿದ್ಧವಾಗಿದೆ. ಆದರೆ ಚಾಂಪಿಯನ್ಸ್ ಟ್ರೋಫಿಯ ಸೆಮಿಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಪರವಾಗಿ ಬಿದ್ದ ಟಾಸ್ ಕೂಡ ಪ್ರಮುಖ ಪಾತ್ರವಹಿಸಿದೆ. ಇದರ ಲಾಭ ಪಡೆದ ಕಾಂಗೂರು ಪಡೆ ಸರ್ಧಾತ್ಮಕ ಮೊತ್ತ ಕಲೆ ಹಾಕಿದೆ.

ಏಕದಿನ ಕ್ರಿಕೆಟ್‌ನಲ್ಲಿ ಸತತ ಅತಿ ಹೆಚ್ಚು ಟಾಸ್ ಸೋತ ಎರಡನೇ ನಾಯಕ ಎಂಬ ಹೆಗ್ಗಳಿಕೆಗೆ ರೋಹಿತ್ ಶರ್ಮಾ ಪಾತ್ರರಾಗಿದ್ದಾರೆ. 1998 ರಿಂದ 1999 ರವರೆಗೆ ಸತತ 12 ಬಾರಿ ಏಕದಿನ ಪಂದ್ಯಗಳಲ್ಲಿ ಟಾಸ್ ಸೋತ ದಾಖಲೆ ವೆಸ್ಟ್ ಇಂಡೀಸ್ ದಿಗ್ಗಜ ಬ್ರಿಯಾನ್ ಲಾರಾ ಅವರ ಹೆಸರಿನಲ್ಲಿದೆ. ಇನ್ನೊಂದು ಹೆಸರು ನೆದರ್ಲ್ಯಾಂಡ್ಸ್ ನಾಯಕ ಪೀಟರ್ ಬ್ಯಾರನ್. ಅವರು ಮಾರ್ಚ್ 2011 ಮತ್ತು ಆಗಸ್ಟ್ 2013 ರ ನಡುವೆ 11 ಬಾರಿ ಟಾಸ್ ಸೋತಿದ್ದಾರೆ. ಈಗ ರೋಹಿತ್ ಶರ್ಮಾ ಕೂಡ ಪೀಟರ್ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ.

ಈ ಪಂದ್ಯದಲ್ಲಿ ಆಸ್ಟ್ರೇಲಿಯಾ ಟಾಸ್ ಗೆದ್ದು ಭಾರತ ತಂಡವನ್ನು ಮೊದಲು ಬೌಲಿಂಗ್ ಮಾಡಲು ಆಹ್ವಾನಿಸಿತು. ಭಾರತದ ಬೌಲರ್‌ಗಳು ಆಸ್ಟ್ರೇಲಿಯಾ ತಂಡವನ್ನು 49.3 ಓವರ್‌ಗಳಲ್ಲಿ 264 ರನ್‌ಗಳಿಗೆ ಆಲೌಟ್ ಮಾಡಿದರು. ಚಾಂಪಿಯನ್ಸ್ ಟ್ರೋಫಿಯ ಫೈನಲ್‌ಗೆ ತಲುಪಲು ಭಾರತ ಈಗ 265 ರನ್‌ಗಳನ್ನು ಗಳಿಸಬೇಕಾಗಿದೆ.

Story first published: Tuesday, March 4, 2025, 20:14 [IST]
Other articles published on Mar 4, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+