For Quick Alerts
ALLOW NOTIFICATIONS  
For Daily Alerts
 

ಟಿ20 ನಾಯಕತ್ವ ಸ್ವೀಕರಿಸುವಾಗ ರೋಹಿತ್ ಹಾಕಿದ್ದ ಆ ಷರತ್ತಿನಿಂದ ಕೊಹ್ಲಿ ಏಕದಿನ ನಾಯಕತ್ವವನ್ನೂ ಬಿಟ್ಟರು!

Rohit Sharma demanded to take charge of both ODI and T20 captaincy: Reports

ಸದ್ಯ ನ್ಯೂಜಿಲೆಂಡ್ ವಿರುದ್ಧದ ಟಿ ಟ್ವೆಂಟಿ ಮತ್ತು ಟೆಸ್ಟ್ ಸರಣಿಗಳನ್ನು ಆಡಿ ಮುಗಿಸಿ ಎರಡರಲ್ಲಿಯೂ ವಿಜಯ ಪತಾಕೆಯನ್ನು ಹಾರಿಸಿರುವ ಟೀಮ್ ಇಂಡಿಯಾ ಡಿಸೆಂಬರ್ 17ರಂದು ದಕ್ಷಿಣ ಆಫ್ರಿಕಾ ಪ್ರವಾಸವನ್ನು ಕೈಗೊಳ್ಳಲಿದ್ದು ದಕ್ಷಿಣ ಆಫ್ರಿಕಾ ತಂಡದ ವಿರುದ್ಧ 3 ಪಂದ್ಯಗಳ ಟೆಸ್ಟ್ ಸರಣಿ ಮತ್ತು 3 ಪಂದ್ಯಗಳ ಏಕದಿನ ಸರಣಿಯಲ್ಲಿ ಸೆಣಸಾಟ ನಡೆಸಲಿದೆ. ಇತ್ತಂಡಗಳ ನಡುವೆ ಮೊದಲು ಟೆಸ್ಟ್ ಸರಣಿ ನಡೆಯಲಿದ್ದು ಡಿಸೆಂಬರ್ 26ರಿಂದ ಚೊಚ್ಚಲ ಟೆಸ್ಟ್ ಪಂದ್ಯ ಆರಂಭವಾಗಲಿದೆ.

ಹೀಗಾಗಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆಯಲಿರುವ ಈ ಟೆಸ್ಟ್ ಸರಣಿಗೆ ಡಿಸೆಂಬರ್ 8ರಂದು ಬಿಸಿಸಿಐ 18 ಆಟಗಾರರನ್ನೊಳಗೊಂಡ ಭಾರತ ತಂಡವನ್ನು ಪ್ರಕಟಿಸಿತು. ಹೀಗೆ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಟೆಸ್ಟ್ ತಂಡವನ್ನು ಪ್ರಕಟಿಸುವುದಕ್ಕೂ ಮುನ್ನ ಮಹತ್ವದ ಘೋಷಣೆಯೊಂದನ್ನು ಹೊರಡಿಸಿದ ಬಿಸಿಸಿಐ ಭಾರತ ಏಕದಿನ ಕ್ರಿಕೆಟ್ ಮಾದರಿಗೆ ನೂತನ ನಾಯಕನನ್ನಾಗಿ ರೋಹಿತ್ ಶರ್ಮಾ ಅವರನ್ನು ಆಯ್ಕೆ ಸಮಿತಿ ಆಯ್ಕೆ ಮಾಡಿದೆ ಎಂದು ಹೇಳಿತು. ಬಿಸಿಸಿಐನ ಈ ದಿಢೀರ್ ನಿರ್ಧಾರ ಭಾರತ ಕ್ರಿಕೆಟ್ ತಂಡದ ಅಭಿಮಾನಿಗಳಲ್ಲಿ ಭಾರೀ ಗೊಂದಲಗಳನ್ನು ಹುಟ್ಟು ಹಾಕಿತು. ಇತ್ತೀಚೆಗಷ್ಟೇ ಭಾರತ ಟಿ ಟ್ವೆಂಟಿ ತಂಡದ ನಾಯಕತ್ವವನ್ನು ತ್ಯಜಿಸಿದ ವಿರಾಟ್ ಕೊಹ್ಲಿ ಅವರನ್ನು ಇದೀಗ ಭಾರತ ಏಕದಿನ ತಂಡದ ನಾಯಕತ್ವದಿಂದಲೂ ಕೂಡ ಬಿಸಿಸಿಐ ಕಿತ್ತು ಹಾಕಿದೆ ಎಂದು ಕೊಹ್ಲಿ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸತೊಡಗಿದರು.

ಅಷ್ಟೇ ಅಲ್ಲದೆ ವಿರಾಟ್ ಕೊಹ್ಲಿಗೆ ಭಾರತ ಏಕದಿನ ತಂಡದ ನಾಯಕತ್ವವನ್ನು ಬಿಟ್ಟುಕೊಡುವುದಕ್ಕೆ ಸ್ವಲ್ಪವೂ ಇಷ್ಟವಿರಲಿಲ್ಲ, ಆದರೂ ಸಹ ಬಿಸಿಸಿಐ ಒತ್ತಡವನ್ನು ಹೇರಿ ಈ ನಿರ್ಧಾರವನ್ನು ಕೈಗೊಂಡಿದೆ ಎಂಬ ಸುದ್ದಿ ದೊಡ್ಡಮಟ್ಟದಲ್ಲಿ ಹರಿದಾಡಿತ್ತು. ಹಾಗೂ ವಿರಾಟ್ ಕೊಹ್ಲಿ ಭಾರತ ಟಿ ಟ್ವೆಂಟಿ ತಂಡದ ನಾಯಕತ್ವವನ್ನು ಕಳೆದುಕೊಂಡಿದ್ದರಿಂದಲೇ ಇದೀಗ ಭಾರತ ಏಕದಿನ ತಂಡದ ನಾಯಕತ್ವವನ್ನು ಕಳೆದುಕೊಳ್ಳಬೇಕಾಯಿತು ಎಂಬ ಮಾತುಗಳು ಕೂಡ ಹರಿದಾಡಿದವು. ಹೀಗೆ ವಿರಾಟ್ ಕೊಹ್ಲಿಯನ್ನು ಭಾರತ ಏಕದಿನ ನಾಯಕ ಸ್ಥಾನದಿಂದ ಬಿಸಿಸಿಐ ಯಾಕೆ ಹೊರಹಾಕಿತು ಮತ್ತು ರೋಹಿತ್ ಶರ್ಮಾ ಹೆಗಲಿಗೆ ಟಿ ಟ್ವೆಂಟಿ ನಾಯಕತ್ವದ ಜೊತೆ ಏಕದಿನ ತಂಡದ ನಾಯಕತ್ವವನ್ನು ಯಾಕೆ ಹಾಕಿತು ಎಂಬುದರ ಕುರಿತು ಇದೀಗ ಮತ್ತೊಂದು ವರದಿಯೊಂದರ ಸುದ್ದಿ ಕೇಳಿ ಬರುತ್ತಿದ್ದು, ಟಿ ಟ್ವೆಂಟಿ ನಾಯಕತ್ವ ಸ್ವೀಕರಿಸುವ ವೇಳೆ ರೋಹಿತ್ ಶರ್ಮಾ ಹಾಕಿದ್ದ ಆ ಷರತ್ತಿನಿಂದ ಇದೀಗ ಕೊಹ್ಲಿ ಏಕದಿನ ನಾಯಕತ್ವವನ್ನು ಕೂಡ ಕಳೆದುಕೊಳ್ಳಬೇಕಾಗಿ ಬಂದಿದೆ ಎನ್ನಲಾಗುತ್ತಿದೆ. ಅದರ ವಿವರ ಈ ಕೆಳಕಂಡಂತಿದೆ..

ಟಿ20 ನಾಯಕನಾಗುವ ವೇಳೆ ಈ ಷರತ್ತು ಹಾಕಿದ್ರು ರೋಹಿತ್ ಶರ್ಮಾ

ಟಿ20 ನಾಯಕನಾಗುವ ವೇಳೆ ಈ ಷರತ್ತು ಹಾಕಿದ್ರು ರೋಹಿತ್ ಶರ್ಮಾ

ವರದಿಯೊಂದು ಹೇಳುವ ಪ್ರಕಾರ ರೋಹಿತ್ ಶರ್ಮಾ ಭಾರತ ಟಿ ಟ್ವೆಂಟಿ ತಂಡದ ನಾಯಕತ್ವವನ್ನು ಸ್ವೀಕರಿಸುವ ಮುನ್ನ ಆಯ್ಕೆಗಾರರ ಜತೆ ನಡೆಸಿದ ಚರ್ಚೆಯಲ್ಲಿ ಭಾರತ ಏಕದಿನ ತಂಡದ ನಾಯಕತ್ವವನ್ನು ನೀಡಿದರೆ ಮಾತ್ರ ತಾನು ಭಾರತ ಟಿ ಟ್ವೆಂಟಿ ತಂಡದ ನಾಯಕನಾಗುತ್ತೇನೆ ಎಂದಿದ್ದರು. ಹೀಗೆ ರೋಹಿತ್ ಶರ್ಮಾ ಭಾರತ ಟಿ ಟ್ವೆಂಟಿ ತಂಡದ ನಾಯಕನಾಗುವುದು ಮಾತ್ರವಲ್ಲದೇ ಭಾರತ ಏಕದಿನ ತಂಡದ ನಾಯಕತ್ವವನ್ನು ಕೂಡ ಬಯಸಿದ್ದರು ಎಂಬ ಸುದ್ದಿ ಇದೀಗ ಹೊರಬಿದ್ದು ವೈರಲ್ ಆಗಿದೆ.

2018ರ ಸಮಯದಲ್ಲಿಯೂ ನಾಯಕನಾಗುವ ಇಂಗಿತವನ್ನು ವ್ಯಕ್ತಪಡಿಸಿದ್ದರು ರೋಹಿತ್!

2018ರ ಸಮಯದಲ್ಲಿಯೂ ನಾಯಕನಾಗುವ ಇಂಗಿತವನ್ನು ವ್ಯಕ್ತಪಡಿಸಿದ್ದರು ರೋಹಿತ್!

ಸದ್ಯ ಭಾರತ ಟಿ ಟ್ವೆಂಟಿ ನಾಯಕನಾಗುವ ಸಮಯದಲ್ಲಿ ಭಾರತ ಏಕದಿನ ತಂಡದ ನಾಯಕತ್ವವನ್ನು ರೋಹಿತ್ ಬಯಸಿದ್ದರು ಎಂಬ ಸುದ್ದಿ ವೈರಲ್ ಆದ ಬೆನ್ನಲ್ಲೇ ಈ ಹಿಂದೆ ನಾಯಕತ್ವದ ಕುರಿತು ರೋಹಿತ್ ಶರ್ಮಾ ನೀಡಿದ್ದ ಹೇಳಿಕೆಯೊಂದನ್ನು ಕೂಡ ಕ್ರಿಕೆಟ್ ಅಭಿಮಾನಿಗಳು ಮೆಲುಕು ಹಾಕಿದ್ದಾರೆ. ಹೌದು, 2018ರ ಏಷ್ಯಾ ಕಪ್ ನಡೆಯುವ ವೇಳೆ ವಿರಾಟ್ ಕೊಹ್ಲಿ ಭಾರತ ತಂಡದಿಂದ ಹೊರಗುಳಿದು ವಿಶ್ರಾಂತಿ ಪಡೆಯುತ್ತಿದ್ದರು. ಈ ಸಂದರ್ಭದಲ್ಲಿ ರೋಹಿತ್ ಶರ್ಮಾ ಭಾರತ ತಂಡವನ್ನು ಮುನ್ನಡೆಸಿ ಟ್ರೋಫಿ ಗೆಲ್ಲಿಸಿದ್ದರು. ಹೀಗೆ ನಾಯಕನಾಗಿ ಭಾರತ ತಂಡವನ್ನು ಆ ಟೂರ್ನಿಯಲ್ಲಿ ಯಶಸ್ವಿಯಾಗಿ ಮುನ್ನಡೆಸಿದ್ದ ರೋಹಿತ್ ಶರ್ಮಾ ಸುದ್ದಿಗೋಷ್ಠಿಯ ವೇಳೆ ಮಾತನಾಡುವಾಗ ಮುಂದಿನ ದಿನಗಳಲ್ಲಿ ಭಾರತ ಏಕದಿನ ತಂಡದ ಪೂರ್ಣ ಪ್ರಮಾಣದ ನಾಯಕನಾಗಿ ಕೆಲಸ ನಿರ್ವಹಿಸುವ ಇಂಗಿತವನ್ನು ವ್ಯಕ್ತಪಡಿಸಿದ್ದರು.

KL Rahul ಆಟದಿಂದ ಖತಂ ಆಗುತ್ತಾ ಈ ಮೂವರ ಕ್ರಿಕೆಟ್ ಕೆರಿಯರ್? | Oneindia Kannada
ಏಕದಿನ ನಾಯಕತ್ವ ಬದಲಾವಣೆ ಕುರಿತು ಗಂಗೂಲಿ ಹೇಳಿದ್ದಿಷ್ಟು

ಏಕದಿನ ನಾಯಕತ್ವ ಬದಲಾವಣೆ ಕುರಿತು ಗಂಗೂಲಿ ಹೇಳಿದ್ದಿಷ್ಟು

ವಿರಾಟ್ ಕೊಹ್ಲಿಯನ್ನು ಭಾರತ ಏಕದಿನ ತಂಡದ ನಾಯಕತ್ವದಿಂದ ಕೆಳಗಿಳಿಸಿ ರೋಹಿತ್ ಶರ್ಮಾರನ್ನು ನೂತನ ನಾಯಕನನ್ನಾಗಿ ಆಯ್ಕೆ ಮಾಡಿದ್ದರ ಕುರಿತು ಪ್ರತಿಕ್ರಿಯಿಸಿದ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಮೊದಲಿಗೆ ವಿರಾಟ್ ಕೊಹ್ಲಿ ಭಾರತ ಟಿ ಟ್ವೆಂಟಿ ತಂಡದ ನಾಯಕತ್ವವನ್ನು ತ್ಯಜಿಸಲು ನಿರ್ಧಾರ ಕೈಗೊಂಡಾಗ ಬಿಸಿಸಿಐ ಬೇಡ ಎಂದು ಮನವಿ ಮಾಡಿಕೊಂಡಿತ್ತು ಎಂದರು. ಆದರೂ ಸಹ ಬಿಸಿಸಿಐ ಸಲಹೆಗೆ ಒಪ್ಪಿಗೆ ಸೂಚಿಸದ ಕೊಹ್ಲಿ ಟಿ ಟ್ವೆಂಟಿ ತಂಡದ ನಾಯಕತ್ವವನ್ನು ತ್ಯಜಿಸಿದರು ಮತ್ತು ಬಿಸಿಸಿಐ ಆಯ್ಕೆ ಸಮಿತಿ ವೈಟ್ ಬಾಲ್ ಕ್ರಿಕೆಟ್ ಮಾದರಿಗಳಾದ ಏಕದಿನ ಮತ್ತು ಟಿ ಟ್ವೆಂಟಿ ಎರಡೂ ತಂಡಗಳಿಗೂ ಪ್ರತ್ಯೇಕ ನಾಯಕರ ಬದಲು ಏಕೈಕ ನಾಯಕನನ್ನು ಹೊಂದುವುದು ಸೂಕ್ತ ಎನಿಸಿ ರೋಹಿತ್ ಶರ್ಮಾರನ್ನು ಭಾರತ ಏಕದಿನ ತಂಡದ ನೂತನ ನಾಯಕನನ್ನಾಗಿ ಆಯ್ಕೆ ಮಾಡಿದರು ಎಂದು ಗಂಗೂಲಿ ನಾಯಕತ್ವ ಬದಲಾವಣೆಗೆ ಸ್ಪಷ್ಟನೆ ನೀಡಿದರು.

Story first published: Saturday, December 11, 2021, 16:34 [IST]
Other articles published on Dec 11, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+