For Quick Alerts
ALLOW NOTIFICATIONS  
For Daily Alerts
 

ಒತ್ತಡ ನಿಭಾಯಿಸುವುದನ್ನು ಹೇಳಿಕೊಡಲು ಸಾಧ್ಯವಿಲ್ಲ: ಸೆಮಿಫೈನಲ್ ಸೋಲಿನ ಬಳಿಕ ರೋಹಿತ್ ಹೇಳಿಕೆ

Rohit Sharma disappointed after semi Final defeat said Dont Teach Anyone To Handle Pressure

ಟಿ20 ವಿಶ್ವಕಪ್ ಗೆಲ್ಲುವ ಟೀಮ್ ಇಂಡಿಯಾದ ಕನಸು ನುಚ್ಚುನೂರಾಗಿದೆ. ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ತಂಡದ ವಿರುದ್ಧ ನೀಡಿದ ಕಳಪೆ ಪ್ರದರ್ಶನದಿಂದಾಗಿ ಭಾರತ ತನ್ನ ಹೋರಾಟವನ್ನು ಅಂತ್ಯಗೊಳಿಸಿದ್ದು ದೊಡ್ಡ ಆಘಾತಕ್ಕೆ ಒಳಗಾಗಿದೆ. ಬ್ಯಾಟಿಂಗ್‌ಲ್ಲಿ ಕೊಹ್ಲಿ ಹಾರ್ದಿಕ್ ಪಾಂಡ್ಯ ಅವರಿಂದ ಅದ್ಭುತ ಪ್ರದರ್ಶನ ಬಂದಿದ್ದರೂ ಬೌಲಿಂಗ್‌ನಲ್ಲಿ ಒಟ್ಟಾರೆಯಾಗಿ ಭಾರತ ಕಳಪೆ ಆಟವನ್ನು ಪ್ರದರ್ಶಿಸಿತು. ಹೀಗಾಗಿ ಸವಾಲೇ ಒಡ್ಡದೆ ಭಾರತ ಸೆಮಿಫೈನಲ್ ಹಂತದಲ್ಲಿ ಶರಣಾಗಿದೆ. ಈ ಸೋಲಿನ ಬಳಿಕ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಬೇಸರದಿಂದ ಪ್ರತಿಕ್ರಿಯೆ ನೀಡಿದ್ದಾರೆ.

ಸೆಮಿಫೈನಲ್ ಹಂತದಲ್ಲಿ ಸೋಲು ಅನುಭವಿಸಿದ ಬಳಿಕ ಟೀಮ್ ಇಂಡಿಯಾ ಎಡವಿದ್ದೆಲ್ಲಿ ಎಂಬುದನ್ನು ನಾಯಕ ರೋಹಿತ್ ಶರ್ಮಾ ಹೇಳಿಕೊಂಡಿದ್ದಾರೆ. "ಇದು ಆವು ಆಡಿದ ರೀತಿಯಿಂದಾಗಿ ಬಹಳಷ್ಟು ಬೇಸರವಾಗಿದೆ. ಅಂತಿಮವಾಗಿ ಗಳಿಸಿದ ರನ್‌ಗಳನ್ನು ನೋಡಿದಾಗ ನಾವು ಬ್ಯಾಟಿಂಗ್‌ನಲ್ಲಿ ಉತ್ತಮವಾಗಿಯೇ ಪ್ರದರ್ಶನ ನೀಡಿದ್ದೇವೆ ಎನಿಸಿತ್ತು. ಆದರೆ ಬೌಲಿಂಗ್‌ನಲ್ಲಿ ಪ್ರದರ್ಶನ ನಿರೀಕ್ಷಿತ ಮಟ್ಟದಲ್ಲಿರಲಿಲ್ಲ. ಇದು ಖಂಡಿತವಾಗಿಯೂ ಕೇವಲ 16 ಓವರ್‌ಗಳಲ್ಲಿ ನಾವು ನೀಡಿದ ಗುರಿಯನ್ನು ಬೆನ್ನಟ್ಟುವ ಪಿಚ್ ಆಗಿರಲಿಲ್ಲ. ಬೌಲಿಂಗ್‌ನಲ್ಲಿ ನಾವು ವಿಫಲವಾದೆವು" ಎಂದಿದ್ದಾರೆ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ.

ಒತ್ತಡವನ್ನು ನಿಭಾಯಿಸುವುದು ಮುಖ್ಯ

ಒತ್ತಡವನ್ನು ನಿಭಾಯಿಸುವುದು ಮುಖ್ಯ

"ಸೆಮಿಫೈನಲ್‌ ಹಂತದಲ್ಲಿ ಒತ್ತಡವನ್ನು ನಿಭಾಯಿಸುವುದು ಕೂಡ ಬಹಳ ಮುಖ್ಯವಾಗುತ್ತದೆ. ಒತ್ತಡವನ್ನು ನಿಭಾಯಿಸುವ ವಿಚಾರವಾಗಿ ಹೇಳಿಕೊಡಲು ಸಾಧ್ಯವಿಲ್ಲ. ನಮ್ಮ ಆಟಗಾರರು ಐಪಿಎಲ್‌ನಲ್ಲಿ ಪ್ಲೇಆಫ್ ಆಡಿದ ಅನುಭವ ಹೊಂದಿದ್ದಾರೆ. ಅವೆಲ್ಲವೂ ಸಾಕಷ್ಟು ಒತ್ತಡವಿರುವಂತಾ ಪಂದ್ಯಗಳಾಗಿದೆ. ಹಾಗಾಗಿ ಅವರಿಗೆ ಒತ್ತಡಗಳನ್ನು ನಿಭಾಯಿಸುವ ಅನುಭವವಿದೆ. ಆದರೆ ಈ ಪಂದ್ಯದಲ್ಲಿ ನಾವು ಬೌಲಿಂಗ್ ದಾಳಿಯನ್ನು ಆರಂಭಿಸಿದ ರೀತಿಯಲ್ಲಿ ಎಡವಿದೆವು. ಅಳುಕಿನಿಂದಲೇ ನಾವು ಬೌಲಿಂಗ್ ನಡೆಸಿದೆವು. ಇದಕ್ಕೆ ಇಂಗ್ಲೆಂಡ್‌ನ ಆರಂಭಿಕರಿಗೂ ನಾವು ಶ್ರೇಯಸ್ಸು ನೀಡಬೇಕಿದೆ. ಅವರು ಅದ್ಭುತವಾಗಿ ಬ್ಯಾಟಿಂಗ್ ಪ್ರದರ್ಶಿಸಿದರು" ಎಂದಿದ್ದಾರೆ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ.

ಬೌಲಿಂಗ್ ವೈಫಲ್ಯ ಉಲ್ಲೇಖಿಸಿದ ರೋಹಿತ್

ಬೌಲಿಂಗ್ ವೈಫಲ್ಯ ಉಲ್ಲೇಖಿಸಿದ ರೋಹಿತ್

ಮುಂದುವರಿದು ಮಾತನಾಡಿದ ರೋಹಿತ್ ಶರ್ಮಾ ಬೌಲಿಂಗ್‌ನಲ್ಲಿ ಭಾರತ ಹೇಗೆ ವೈಫಲ್ಯತೆ ಅನುಭವಿಸಿತು ಎಂದಿದ್ದಾರೆ. "ಭುವಿ ಮೊದಲ ಓವರ್ ಮಾಡಿದಾಗ ಚೆಂಡು ಉತ್ತಮವಾಗಿ ಸ್ವಿಂಗ್ ಆಗುತ್ತಿತ್ತು. ಆದರೆ ಅದು ಸೂಕ್ತ ಸ್ಥಳದಲ್ಲಿ ಬೀಳುತ್ತಿರಲಿಲ್ಲ. ಇಂಥಾ ಸಂದರ್ಭದಲ್ಲಿ ನಾವು ಎದುರಾಳಿಗಳಿಗೆ ಸವಾಲಾಗುವಂತಾ ಸ್ಥಳಗಳಿಗೆ ಚೆಂಡೆಸೆಯಬೇಕಾಗಿತ್ತು. ಆದರೆ ನಾವು ಅವರಿಗೆ ರನ್‌ಗಳಿಸಲು ಅವಕಾಶ ಮಾಡಿಕೊಟ್ಟೆವು. ಕೆಲ ಭಾಗಗಳಲ್ಲಿ ಬೌಂಡರಿ ಹತ್ತಿರವಿದ್ದ ಕಾರಣ ಬ್ಯಾಟರ್‌ಗಳಿಗೆ ಸವಾಲೊಡ್ಡಬೇಕಾಗಿತ್ತು. ಹಾಗಿದ್ದರೂ ರನ್ ಬಂದಿದ್ದರೆ ಅದನ್ನು ಒಪ್ಪಬಹುದಾಗಿತ್ತು. ಆದರೆ ಅದು ಸಾಧ್ಯವಾಗಲಿಲ್ಲ" ಎಂದಿದ್ದಾರೆ ರೋಹಿತ್ ಶರ್ಮಾ

ಪೈಪೋಟಿ ನೀಡದೆಯೇ ಸೋತ ಭಾರತ

ಪೈಪೋಟಿ ನೀಡದೆಯೇ ಸೋತ ಭಾರತ

ಟಾಸ್ ಸೋತು ಮೊದಲಿಗೆ ಬ್ಯಾಟಿಂಗ್ ಮಾಡಿದ ಟೀಮ್ ಇಂಡಿಯಾ ಆರಂಭಿಕರ ವೈಫಲ್ಯದಿಂದಾಗಿ ಆರಂಭದಲ್ಲಿ ಎಡವಿದರೂ ವಿರಾಟ್ ಕೊಹ್ಲಿ ಹಾಗೂ ಹಾರ್ದಿಕ್ ಪಾಂಡ್ಯ ಟೀಮ್ ಇಂಡಿಯಾಗೆ ನೆರವಾದರು, ಇದರ ಪರಿಣಾಮವಾಗಿ ಭಾರತ ಈ ಪಂದ್ಯದಲ್ಲಿ ಸವಾಲಿನ ಮೊತ್ತ ಪೇರಿಸಲು ಸಾಧ್ಯವಾಯಿತು. ಕೊಹ್ಲಿ ಹಾಗೂ ಪಾಂಡ್ಯ ಇಬ್ಬರು ಕೂಡ ತಲಾ ಅರ್ಧ ಶತಕ ಸಿಡಿಸಿ ಮಿಂಚಿದ್ದರು. ಅದರಲ್ಲೂ ಪಾಂಡ್ಯ ಕೇವಲ 33 ಎಸೆತಗಳಲ್ಲ 63 ರನ್ ಸಿಡಿಸಿ ಭಾರತದ ಮೊತ್ತ ಹೆಚ್ಚಲು ಕಾರಣವಾದರು. ಇಂಗ್ಲೆಂಡ್‌ಗೆ 169 ರನ್‌ಗಳ ಗುರಿಯನ್ನು ಭಾರತ ನಿಗದಿಪಡಿಸಿತ್ತು. ಆದರೆ ಇದನ್ನು ಬೆನ್ನಟ್ಟಿದ ಇಂಗ್ಲೆಂಡ್ ತಂಡ ಯಾವ ಹಂತದಲ್ಲಿಯೂ ಒತ್ತಡಕ್ಕೆ ಸಿಲುಕದರೆ ವಿಕೆಟ್ ಕಳೆದುಕೊಳ್ಳದೆಯೇ ಬೆನ್ನಟ್ಟಿತು. ಜೋಸ್ ಬಟ್ಲರ್ ಹಾಗೂ ಅಲೆಕ್ಸ್ ಹೇಲ್ಸ್ ಅಜೇಯವಾಗುಳಿದು ಭಾರತಕ್ಕೆ ಸೋಲಿನ ಆಘಾತ ನೀಡಿದ್ದಲ್ಲದೆ ಕೋಟ್ಯಂತರ ಭಾರತೀಯ ಅಭಿಮಾನಿಗಳ ಕನಸನ್ನು ಭಗ್ನಗೊಳಿಸಿದರು.

Story first published: Friday, November 11, 2022, 8:46 [IST]
Other articles published on Nov 11, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+