Axar Patel Hat-Trick Miss: ಸುಲಭದ ಕ್ಯಾಚ್ ಕೈ ಚೆಲ್ಲಿದ ರೋಹಿತ್, ಅಕ್ಷರ್ ಇತಿಹಾಸ ನಿರ್ಮಿಸುವ ಅವಕಾಶ ಮಿಸ್
ಭಾರತ ಹಾಗೂ ಬಾಂಗ್ಲಾದೇಶ ನಡುವಣ ಚಾಂಪಿಯನ್ಸ್ ಟ್ರೋಫಿಯ "ಬಿ" ಗುಂಪಿನ ಪಂದ್ಯ ದುಬೈನಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಬಾಂಗ್ಲಾದೇಶ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ಆದರೆ ಬಾಂಗ್ಲಾ ನಾಯಕನ ನಿರ್ಧಾರವನ್ನು ತಪ್ಪು ಎಂದು ಭಾರತೀಯ ಬೌಲರ್‌ಗಳು ಸಾಬೀತು ಮಾಡಿದರು. ಪವರ್ ಪ್ಲೇನಲ್ಲಿ ಪವರ್ ಫುಲ್ ಬೌಲಿಂಗ್ ಪ್ರದರ್ಶನ ನೀಡಿದ ರೋಹಿತ್ ಪಡೆ ಅಬ್ಬರಿಸಿದೆ.
ಬಾಂಗ್ಲಾದೇಶದ ಟಾಪ್ ಆರ್ಡರ್ ಬ್ಯಾಟರ್‌ಗಳು ಭಾರತದ ಶಿಸ್ತು ಬದ್ಧ ದಾಳಿಯನ್ನು ಎದುರಿಸುವಲ್ಲಿ ವಿಫಲವಾಯಿತು. ಈ ವೇಳೆ ಪಂದ್ಯದ ಮೊದಲ ಓವರ್‌ನಲ್ಲಿ ಎದುರಾಳಿ ತಂಡಕ್ಕೆ ಶಾಕ್ ನೀಡುವಲ್ಲಿ ಮೊಹಮ್ಮದ್ ಶಮಿ ಯಶಸ್ವಿಯಾದರು. ಇನ್ನೊಂದು ತುದಿಯಿಂದ ಬೌಲಿಂಗ್ ಮಾಡಿದ ಹರ್ಷಿತ್ ರಾಣಾ ಸಹ ಅಬ್ಬರ ನಡೆಸಿದರು. ತಮ್ಮ ಮೊನಚಾದ ದಾಳಿಯಿಂದ ಅಬ್ಬರಿಸಿದ ರಾಣಾ, ಬಾಂಗ್ಲಾದೇಶಕ್ಕೆ ಮತ್ತೊಂದು ಶಾಕ್ ನೀಡಿದರು.

ಬಾಂಗ್ಲಾದೇಶದ ಭರವಸೆಯ ಬ್ಯಾಟರ್‌ಗಳಾದ ಸೌಮ್ಯಾ ಸರ್ಕಾರ, ನಾಯಕ ನಜ್ಮುಲ್ ಹುಸೇನ್ ಸೊನ್ನೆ ಸುತ್ತಿದರು. ಮೊಹಮ್ಮದ್ ಶಮಿ ತಮ್ಮ ಸ್ಪೆಲ್‌ನಲ್ಲಿ ಮತ್ತೊಂದು ಬ್ಯಾಟರ್‌ಗೆ ಖೆಡ್ಡಾ ತೋಡಿದರು. ಇನಿಂಗ್ಸ್‌ನ ಏಳನೇ ಓವರ್‌ನ ಎರಡನೆ ಎಸೆತದಲ್ಲಿ ಶಮಿ ಮೆಹದಿ ಹಸನ್ ಮಿರ್ಜಾ ಅವರಿಗೆ ಖೆಡ್ಡಾ ತೋಡಿದರು.
ಪವರ್ ಫುಲ್ ಆರಂಭ
ಇನಿಂಗ್ಸ್‌ನ ಒಂಬತ್ತನೇ ಓವರ್ ಮಾಡಲು ಆಲ್‌ರೌಂಡರ್ ಅಕ್ಷರ್ ಪಟೇಲ್ ಬೌಲಿಂಗ್ ಮಾಡಲು ಮುಂದಾದರು. ಈ ಓವರ್‌ನ ಮೊದಲ ಎಸೆತವನ್ನು ತಂಜಿಮ್ ಹಸನ್ ರನ್ ಪಡೆಯಲಿಲ್ಲ. ಈ ಓವರ್‌ನ ಎರಡನೇ ಎಸೆತದಲ್ಲಿ ತಂಜಿಮ್ ಹಸನ್ ಪ್ಲೇಯಡ್ ಮಾಡಲು ಹೋದಾಗ ಚೆಂಡು ಬ್ಯಾಟಿನ ಅಂಚಿಗೆ ಮುತ್ತಿಟ್ಟು, ವಿಕೆಟ್ ಕೀಪರ್ ಕೈ ಸೇರಿತು. ಇನ್ನು ಮೂರನೇ ಎಸೆತದಲ್ಲಿ ಸ್ಟಾರ್ ಆಟಗಾರ ಮುಷ್ಫೀಕರ್ ರಹೀಮ್ ಅವರ ಸಹ ಡಿಫೆಂಡ್ ಮಾಡಲು ಹೋಗಿ ವಿಕೆಟ್ ಕೀಪರ್‌ಗೆ ಕ್ಯಾಚ್ ನೀಡಿದರು.
ಹ್ಯಾಟ್ರಿಕ್ ಜಸ್ಟ್ ಮಿಸ್
ಅಕ್ಷರ್ ಪಟೇಲ್ ಹ್ಯಾಟ್ರಿಕ್ ಪಡೆಯುವ ಉತ್ಸಾಹದಲ್ಲಿದ್ದರು. ಸ್ಟೇಜ್ ಸಹ ಸಂಪೂರ್ಣ ಸೆಟ್ ಆಗಿತ್ತು. ಎರಡು ಸ್ಲಿಪ್, ಲೆಗ್ ಸ್ಲಿಪ್ ಇಟ್ಟುಕೊಂಡು ಅಕ್ಷರ್ ಬೌಲ್ ಮಾಡಿದರು. ಜಾಕೀರ್ ಅಲಿ ಬ್ಯಾಟ್‌ಗೆ ಬಡಿದ ಚೆಂಡು ನೇರವಾಗಿ ರೋಹಿತ್ ಶರ್ಮಾ ಅವರ ಕೈ ಸೇರಿತು. ಆಗ ರೋಹಿತ್ ಈ ಸುಲಭ ಕ್ಯಾಚ್‌ನ್ನು ಬಿಟ್ಟು ಬಿಟ್ಟರು. ಆಗ ಮೈದಾನದಲ್ಲಿ ಪಿನ್ ಡ್ರಾಪ್ ಸೈಲೆಂಟ್ ಆಗಿತ್ತು. ಈ ಕ್ಯಾಚ್ ಬಿಡುತ್ತಲೆ ರೋಹಿತ್ ತಮ್ಮ ಬಗ್ಗೆ ತಾವೇ ಸಿಟ್ಟಾದರು. ಅಲ್ಲದೆ ಮೈದಾನದಲ್ಲಿ ಕೈ ಹಿಡಿದು ಬಡೆದರು. ಇದರಿಂದಾಗಿ ಅಕ್ಷರ್ ಪಟೇಲ್ ಅವರ ಸೂಪರ್ ಸೆಟ್‌ಅಪ್ ಮಣ್ಣು ಪಾಲಾಯಿತು.
ಈ ಕ್ಯಾಚ್ ಕೈ ಬಿಡುತ್ತಿದ್ದಂತೆ ರೋಹಿತ್ ಶರ್ಮಾ, ಅಕ್ಷರ್ ಪಟೇಲ್ ಅವರತ್ತ ಕೈ ಬೀಸಿ ಕ್ಷಮಿಸಿ ಬಿಡು ಎನ್ನುವ ರೀತಿಯಲ್ಲಿ ಸನ್ನೆ ಮಾಡಿದರು. ಆದರೆ ಅಕ್ಷರ್ ಪಟೇಲ್ ಮುಖದಲ್ಲಿ ಇತಿಹಾಸ ನಿರ್ಮಿಸುವ ಸುವರ್ಣ ಅವಕಾಶ ಜಸ್ಟ್ ಮಿಸ್ ಆಯಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications