For Quick Alerts
ALLOW NOTIFICATIONS  
For Daily Alerts
 

IND vs NZ: ಬ್ರಿಯಾನ್ ಲಾರಾ ದಾಖಲೆ ಸರಿಗಟ್ಟಿದ ರೋಹಿತ್ ಶರ್ಮಾ

ಐಸಿಸಿ 2025ರ ಚಾಂಪಿಯನ್ಸ್ ಟ್ರೋಫಿಯ ಫೈನಲ್ ಪಂದ್ಯವು ಭಾರತ ಮತ್ತು ನ್ಯೂಜಿಲೆಂಡ್ ನಡುವೆ ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ನ್ಯೂಜಿಲೆಂಡ್ ಮೊದಲು ಬ್ಯಾಟಿಂಗ್ ಆರಂಭಿಸಿದೆ. ಭಾರತ ತಂಡ ಫೈನಲ್ ಪಂದ್ಯದಲ್ಲಿ ಗೆದ್ದರೆ, ಇದು ಮೂರನೇ ಟ್ರೋಫಿಯಾಗಲಿದೆ. ಇದಕ್ಕೂ ಮೊದಲು ಭಾರತ 2002 ಮತ್ತು 2013 ರಲ್ಲಿ ಚಾಂಪಿಯನ್ ಆಗಿತ್ತು.

ಈ ಪಂದ್ಯದಲ್ಲಿ ಟಾಸ್ ಹಾಕಿದ ವೇಳೆ ನ್ಯೂಜಿಲೆಂಡ್ ಪರವಾಗಿ ಬಿದ್ದಿತು. ಆದರೆ ಈ ದಾಖಲೆಯನ್ನು ರೋಹಿತ್ ಶರ್ಮಾ ಮಾಡಿದರು. ಭಾರತ ತಂಡದ ಪರ ಸತತ ಟಾದ್ ಸೋತ ದಾಖಲೆಯನಬ್ನು ರೋಹಿತ್ ಸೃಷ್ಟಿದ್ದಾರೆ. ಇದರೊಂದಿಗೆ ಬ್ರಿಯಾನ್ ಲಾರಾ ಅವರ ಸತತ 12 ಟಾಸ್ ಸೋತ ದಾಖಲೆಯನ್ನು ರೋಹಿತ್ ಶರ್ಮಾ ಸರಿಗಟ್ಟಿದರು.

Rohit Sharma equals Brian Lara record in India vs New Zealand Champions Trophy 2025 final

ನವೆಂಬರ್ 2023 ರಲ್ಲಿ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಏಕದಿನ ವಿಶ್ವಕಪ್‌ ಸೆಮಿಫೈನಲ್‌ ಪಂದ್ಯದಲ್ಲಿ ಭಾರತ ತಂಡ ನ್ಯೂಜಿಲೆಂಡ್ ವಿರುದ್ಧ ಕೊನೆಯ ಬಾರಿಗೆ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದಿತು. 2023ರ ವಿಶ್ವಕಪ್ ಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತದ ಟಾಸ್ ಸೋಲಿನ ಸರಣಿ ಆರಂಭವಾಯಿತು. ಅಂದಿನಿಂದ, ರೋಹಿತ್ ಶರ್ಮಾ 12 ಟಾಸ್ ಸೋತಿದ್ದಾರೆ. ನಂತರ ಕೆಎಲ್ ರಾಹುಲ್ 3 ಟಾಸ್ ಸೋತಿದ್ದಾರೆ. ಕೆಎಲ್ ರಾಹುಲ್ ನಾಯಕತ್ವದಲ್ಲಿ, ಭಾರತ ತಂಡವು 2023 ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲಿ ಮೂರು ಪಂದ್ಯಗಳಲ್ಲಿಯೂ ಟಾಸ್‌ಗಳನ್ನು ಸೋತಿತು. ಆದಾಗ್ಯೂ, ಟೀಮ್ ಇಂಡಿಯಾ ಸರಣಿಯನ್ನು 2-1 ಅಂತರದಿಂದ ಗೆದ್ದುಕೊಂಡಿತು.

ಏಕದಿನ ಕ್ರಿಕೆಟ್‌ನಲ್ಲಿ ಹೆಚ್ಚು ಬಾರಿ ಟಾಸ್ ಸೋತ ನಾಯಕ

  • ರೋಹಿತ್ ಶರ್ಮಾ- 12 ಬಾರಿ, ಭಾರತ (ನವೆಂಬರ್ 2023 - ಮಾರ್ಚ್ 2025)
  • ಬ್ರಿಯಾನ್ ಲಾರಾ- 12 ಬಾರಿ, ವೆಸ್ಟ್ ಇಂಡೀಸ್ (ಅಕ್ಟೋಬರ್ 1998 - ಮೇ 1999)
  • ಪೀಟರ್ ಬೊರೆನ್- 11 ಬಾರಿ, ನೆದರ್ಲ್ಯಾಂಡ್ಸ್ (ಮಾರ್ಚ್ 2011 - ಆಗಸ್ಟ್ 2013)

ರೋಹಿತ್ ಹೇಳಿದ್ದೇನು?

ಟಾಸ್ ಸೋತ ನಂತರ ಮಾತನಾಡಿದ ರೋಹಿತ್ ಶರ್ಮಾ, 'ನಾವು ಇಲ್ಲಿ ಬಹಳ ಸಮಯದಿಂದ ಆಡುತ್ತಿದ್ದೇವೆ. ಮೊದಲು ಬ್ಯಾಟಿಂಗ್ ಮಾಡಿ ಬೌಲಿಂಗ್ ಮಾಡಿದ್ದೇವೆ. ಈಗ ನಂತರ ಬ್ಯಾಟಿಂಗ್ ಮಾಡಲು ಯಾವುದೇ ಸಮಸ್ಯೆ ಇಲ್ಲ. ಪಿಚ್‌ನಲ್ಲಿ ಹೆಚ್ಚಿನ ಬದಲಾವಣೆಗಳಾಗಿಲ್ಲ, ನಾವು ಗುರಿಯನ್ನು ಬೆನ್ನಟ್ಟಿದ್ದೇವೆ ಮತ್ತು ಗೆದ್ದಿದ್ದೇವೆ. ಇದು ನಿಮಗೆ ಹೆಚ್ಚಿನ ಆತ್ಮವಿಶ್ವಾಸವನ್ನು ತಂದು ಕೊಟ್ಟಿದೆ. ಆಟದಿಂದ ಟಾಸ್ ಸಮಸ್ಯೆಯನ್ನು ತೆಗೆದುಹಾಕುತ್ತದೆ. ನೀವು ಎಷ್ಟು ಚೆನ್ನಾಗಿ ಆಡಲು ಬಯಸುತ್ತೀರಿ ಎಂಬುದು ಮುಖ್ಯ. ನಾವು ಡ್ರೆಸ್ಸಿಂಗ್ ರೂಮ್‌ನಲ್ಲಿ ಟಾಸ್ ಬಗ್ಗೆ ಚಿಂತಿಸಬೇಡಿ, ಚೆನ್ನಾಗಿ ಆಡಿ ಎಂದು ಹೇಳಿದ್ದೇವೆ. ಇದನ್ನೇ ನಾವು ಮಾಡಿದ್ದೇವೆ. ಇಂದು ಸಹ ನಾವು ಅದನ್ನೇ ಮಾಡಬೇಕು ಎಂದಿದ್ದಾರೆ.

ಉಭಯ ತಂಡಗಳ ಪ್ಲೇಯಿಂಗ್-11

ನ್ಯೂಜಿಲೆಂಡ್: ವಿಲ್ ಯಂಗ್, ರಾಚಿನ್ ರವೀಂದ್ರ, ಕೇನ್ ವಿಲಿಯಮ್ಸನ್, ಡ್ಯಾರಿಲ್ ಮಿಚೆಲ್, ಟಾಮ್ ಲ್ಯಾಥಮ್ (ವಿಕೆಟ್ ಕೀಪರ್), ಗ್ಲೆನ್ ಫಿಲಿಪ್ಸ್, ಮೈಕೆಲ್ ಬ್ರೇಸ್‌ವೆಲ್, ಮಿಚೆಲ್ ಸ್ಯಾಂಟ್ನರ್ (ನಾಯಕ), ಕೈಲ್ ಜೇಮಿಸನ್, ವಿಲಿಯಂ ಒ'ರೂರ್ಕ್, ನಾಥನ್ ಸ್ಮಿತ್.

ಭಾರತ: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಅಕ್ಷರ್ ಪಟೇಲ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜ, ಮೊಹಮ್ಮದ್ ಶಮಿ, ಕುಲದೀಪ್ ಯಾದವ್, ವರುಣ್ ಚಕ್ರವರ್ತಿ.

Story first published: Sunday, March 9, 2025, 17:31 [IST]
Other articles published on Mar 9, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+