ಪಾಕ್ ವಿರುದ್ಧ ಗೆಲ್ಲುತ್ತಿದ್ದಂತೆ ಕಪಿಲ್ ದೇವ್ ದಾಖಲೆಯ ಸಮಕ್ಕೆ ನಿಂತ ರೋಹಿತ್
ಟೀಮ್ ಇಂಡಿಯಾ ಸದ್ಯ ಚಾಂಪಿಯನ್ಸ್ ಟ್ರೋಫಿಯಲ್ಲಿ ಆಡುತ್ತಿದೆ. ಈ ಟೂರ್ನಿಯಲ್ಲಿ ಸ್ಥಿರ ಪ್ರದರ್ಶನ ನೀಡಿ ಅಭಿಮಾನಿಗಳ ಮನ ಗೆಲ್ಲುತ್ತಿದೆ. ಫಾರ್ಮ್‌ಗೆ ಪರದಾಡುತ್ತಿರುವ ಸ್ಟಾರ್ ಪ್ಲೇಯರ್‌ಗಳು ಸಹ ಅಮೋಘ ಫಾರ್ಮ್‌ಗೆ ಮರಳಿದ್ದಾರೆ. ದುಬೈನಲ್ಲಿ ಟೀಮ್ ಇಂಡಿಯಾ ಎರಡನೇ ಗೆಲುವಿನ ನಗೆ ಬೀರಿದ್ದು, ಚಾಂಪಿಯನ್ಸ್ ಟ್ರೋಫಿಯ "ಎ" ಗುಂಪಿನಲ್ಲಿ ನಾಲ್ಕು ಅಂಕಗಳೊಂದಿಗೆ ಅಂಕ ಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೆ ಬಡ್ತಿ ಪಡೆದಿದೆ. ಈ ಗೆಲುವು ನಿಶ್ಚಿತವಾಗಿ ಟೀಮ್ ಇಂಡಿಯಾದ ಮನೋಬಲವನ್ನು ಹೆಚ್ಚಿಸುತ್ತದೆ.
ಸಾಂಪ್ರದಾಯಿಕ ಎದುರಾಳಿ ಪಾಕ್ ವಿರುದ್ಧ ರೋಹಿತ್ ಶರ್ಮಾ ಪಡೆ ಆಡಿದ ಆಟಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ದುಬೈನಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿಯ "ಎ" ಗುಂಪಿನ ಪಂದ್ಯದಲ್ಲಿ ಪಾಕಿಸ್ತಾನ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿ 49.4 ಓವರ್‌ಗಳಲ್ಲಿ 241 ರನ್‌ಗಳಿಗೆ ಸರ್ವಪತನ ಕಂಡಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಭಾರತ 42.3 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 244 ರನ್ ಸಿಡಿಸಿ ಜಯ ದಾಖಲಿಸಿದೆ. ಈ ಮೂಲಕ ರೋಹಿತ್ ಶರ್ಮಾ ಪಡೆಯ ಖಾತೆಗೆ ಮತ್ತೊಂದು ಗೆಲುವು ಸಂದಿದೆ. ಈ ಗೆಲುವಿನ ಬಳಿಕ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಮತ್ತೊಂದು ದಾಖಲೆ ಬರೆದಿದ್ದಾರೆ.

ಕಪಿಲ್ ದಾಖಲೆ ಸಮ
ಟೀಮ್ ಇಂಡಿಯಾದ ಪರ ಏಕದಿನ ಫಾರ್ಮೆಟ್‌ನಲ್ಲಿ ಅತಿ ಹೆಚ್ಚು ಪಂದ್ಯಗಳನ್ನು ಗೆದ್ದ ಕಪಿಲ್ ದೇವ್ ದಾಖಲೆ ಸಮಕ್ಕೆ ರೋಹಿತ್ ಶರ್ಮಾ ನಿಂತಿದ್ದಾರೆ. ಅಸಲಿಗೆ ಶೇಕಡಾ ವಾರು ಲೆಕ್ಕಾಚಾರದಲ್ಲಿ ಅದಾಗಲೇ ಅವರು ಕಪಿಲ್ ಅವರನ್ನು ಹಿಂದಿಕ್ಕಿದ್ದರು. ಆದರೆ ಗೆಲುವಿನ ಲೆಕ್ಕಾಚಾರದಲ್ಲಿ ಈಗ ಸಮಕ್ಕೆ ನಿಂತಿದ್ದಾರೆ. ಭಾರತದ ಪರ ಕಪಿಲ್ ದೇವ್ 74 ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದ್ದು, 39ರಲ್ಲಿ ತಂಡವನ್ನು ಗೆಲುವಿನ ದಡಕ್ಕೆ ಸೇರಿಸಿದ್ದಾರೆ. ಈ ವೇಳೆ ಅವರ ಗೆಲುವಿನ ಸರಾಸರಿ 54.56 ಆಗಿದೆ.
ಟೀಮ್ ಇಂಡಿಯಾದ ಹಾಲಿ ನಾಯಕ ರೋಹಿತ್ ಶರ್ಮಾ 53 ಪಂದ್ಯಗಳಲ್ಲಿ ನಾಯಕರಾಗಿ ತಂಡವನ್ನು ಮುನ್ನಡೆಸಿದ್ದು, 39 ರನ್ ಜಯ ದಾಖಲಿಸಿದ್ದಾರೆ. ಈ ವೇಳೆ ರೋಹಿತ್ ಸರಾಸರಿ 75.96 ಆಗಿದೆ.

ಭಾರತದ ಪರ ಅತಿ ಹೆಚ್ಚು ಪಂದ್ಯ ಗೆದ್ದ ನಾಯಕರು
- ಎಂಎಸ್ ಧೋನಿ, 200 ಪಂದ್ಯ, 110 ಗೆಲುವು
- ಮೊಹಮ್ಮದ್ ಅಜರುದ್ಧಿನ್, 174 ಪಂದ್ಯ, 90 ಗೆಲುವು
- ಸೌರವ್ ಗಂಗೂಲಿ, 146 ಪಂದ್ಯ, 76 ಗೆಲುವು
- ವಿರಾಟ್ ಕೊಹ್ಲಿ, 95 ಪಂದ್ಯ, 65 ಗೆಲುವು
- ರಾಹುಲ್ ದ್ರಾವಿಡ್, 79 ಪಂದ್ಯ, 33 ಗೆಲುವು
ಚಾಂಪಿಯನ್ಸ್ ಟ್ರೋಫಿಯಲ್ಲಿ ರೋಹಿತ್ ಶರ್ಮಾ ಬಿಗ್ ಇನಿಂಗ್ಸ್ ಕಟ್ಟುವಲ್ಲಿ ವಿಫಲರಾಗಿರಬಹುದು. ಆದರೆ ತಂಡಕ್ಕೆ ಬೇಕಿದ್ದ ವೇಗದ ಆರಂಭವನ್ನು ಎರಡೂ ಪಂದ್ಯಗಳಲ್ಲಿ ನೀಡಿದ್ದಾರೆ. ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ರೋಹಿತ್ ಶರ್ಮಾ ಪಾಕ್ ವಿರುದ್ಧ ಆಡಿದ 15 ಎಸೆತಗಳಲ್ಲಿ 3 ಬೌಂಡರಿ, 1 ಸಿಕ್ಸರ್ ಸಹಾಯದಿಂದ 20 ರನ್ ಸಿಡಿಸಿ ತಂಡಕ್ಕೆ ಆಧಾರವಾಗಿದ್ದರು. ಬಾಂಗ್ಲಾದೇಶ ವಿರುದ್ಧವೂ ರೋಹಿತ್ ಇಂತಹದ್ದೇ ಒಂದು ಇನಿಂಗ್ಸ್ ಕಟ್ಟಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications