ರೋಹಿತ್ ಶರ್ಮಾ 2027ರ ಏಕದಿನ ವಿಶ್ವಕಪ್ ಆಡಬೇಕು: ಆಸೀಸ್ ಬ್ಯಾಟರ್ ಹೇಳಿಕೆ
ಟೀಮ್ ಇಂಡಿಯಾದ ಮಾಜಿ ನಾಯಕ ರೋಹಿತ್ ಶರ್ಮಾ 7 ತಿಂಗಳುಗಳ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್ ಆಡಲು ಸಿದ್ಧರಾಗುತ್ತಿದ್ದಾರೆ. ಇದೇ ವೇಳೆ ಇವರು ಏಕದಿನ ಕ್ರಿಕೆಟ್‌ನಿಂದಲೂ ನಿವೃತ್ತಿ ಹೊಂದಬಹುದು ಎಂಬ ಚರ್ಚೆಗಳು ಆರಂಭವಾಗಿವೆ. ಇನ್ನು ಆಸ್ಟ್ರೇಲಿಯಾ ಸರಣಿಯೇ ಇವರಿಗೆ ಕೊನೆಯ ಏಕದಿನ ಸರಣಿ ಎಂಬ ಊಹಾಪೋಹಗಳು ಎದ್ದಿವೆ. ಈ ಬಗ್ಗೆ ಹಲವು ಆಟಗಾರರು ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದಾರೆ. ಆಸ್ಟ್ರೇಲಿಯಾದ ಸ್ಫೋಟಕ ಬ್ಯಾಟರ್ ಸಹ ಇದಕ್ಕೆ ತಮ್ಮ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.
ರೋಹಿತ್ ಶರ್ಮಾ ಅವರು ಬ್ಯಾಟಿಂಗ್ ಮಾಡುವುದನ್ನು ನೋಡುವುದೇ ಆನಂದ. ಅವರು ವೈಟ್ ಬೌಲ್‌ನಲ್ಲಿ ಆಡುವ ಧಾಟಿ ನನಗೆ ಇಷ್ಟ. ಅವರನ್ನು ನಾನು ಎಂದಿಗೂ ವೈಯಕ್ತಿಕವಾಗಿ ಭೇಟಿ ಮಾಡಿಲ್ಲ. ಅಲ್ಲದೆ ಅವರಿಂದ ನಾನು ಸಲಹೆಯನ್ನು ಪಡೆದಿಲ್ಲ. ಮುಂದೊಂದು ದಿನ ದಿಗ್ಗಜ ಆಟಗಾರನೊಂದಿಗೆ ಡ್ರೆಸ್ಸಿಂಗ್ ರೂಮ್ ಶೇರ್ ಮಾಡಿಕೊಳ್ಳುವ ಆಸೆ ಹೊಂದಿದ್ದೇನೆ ಎಂದು ಸ್ಫೋಟಕ ಬ್ಯಾಟರ್ ಟ್ರಾವಿಸ್ ಹೆಡ್ ತಿಳಿಸಿದ್ದಾರೆ.

ಪರ್ತ್‌ನಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯ ನಡೆಯಲಿದೆ. ಈ ಪಂದ್ಯಕ್ಕೂ ಮೊದಲು ಟ್ರಾವಿಸ್ ಹೆಡ್ ಹಲವು ವಿಚಾರಗಳ ಬಗ್ಗೆ ಬೆಳಕು ಚೆಲ್ಲಿದ್ದಾರೆ. ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಏಕದಿನ ಫಾರ್ಮೆಟ್ ಸ್ಟಾರ್ ಆಟಗಾರರು. ವಿರಾಟ್ ಗ್ರೇಟೆಸ್ಟ್ ಆದರೆ, ರೋಹಿತ್ ಅವರ ಹಿಂದೆಯೇ ನಿಂತಿರುತ್ತಾರೆ. ಅವರ ಆಟವನ್ನು ತಂಡ ಒಂದು ಹಂತದಲ್ಲಿ ಮಿಸ್ ಮಾಡಿಕೊಳ್ಳಲಿದೆ. ನನಗೆ ಅನಿಸಿದ ಮಟ್ಟಿಗೆ ಈ ಇಬ್ಬರೂ ಸ್ಟಾರ್ ಆಟಗಾರರಿಗೂ 2027ರ ಏಕದಿನ ವಿಶ್ವಕಪ್‌ನಲ್ಲಿ ಆಡುವ ಅವಕಾಶವನ್ನು ನೀಡಬೇಕು. ಇವರಿಬ್ಬರ ಉಪಸ್ಥಿತಿಯಲ್ಲಿ ತಂಡ ವಿಶ್ವಕಪ್ ಗೆಲ್ಲಲು ಪ್ರಯತ್ನಿಸಬೇಕು. ಅವರಿಬ್ಬರು ಇನ್ನು ಕ್ರಿಕೆಟ್ ಆಡುತ್ತಿರುವುದು ಖುಷಿಯ ವಿಚಾರ ಎಂದು ಟ್ರಾವಿಸ್ ಹೆಡ್ ತಿಳಿಸಿದ್ದಾರೆ.
ಆಸೀಸ್ ಆಟಗಾರ ರೋಹಿತ್ ಬಗ್ಗೆ ಹೇಳಿದ್ದೇನು?
ನಾನು ರೋಹಿತ್ ಅವರ ವಿರುದ್ಧ ಅಂತಾರಾಷ್ಟ್ರೀಯ ಹಾಗೂ ಐಪಿಎಲ್‌ನಲ್ಲಿ ಸಾಕಷ್ಟು ಪಂದ್ಯಗಳನ್ನು ಆಡಿದ್ದೇನೆ. ಆದರೆ ನಾನು ಎಂದಿಗೂ ಅವರೊಂದಿಗೆ ಆಡುವ ಅವಕಾಶವನ್ನೇ ಪಡೆಯಲಿಲ್ಲ. ಒಂದು ವೇಳೆ ಅವರು ಇನ್ನಷ್ಟು ವರ್ಷ ಆಡಿದಲ್ಲಿ ಅವಕಾಶಗಳು ಸಿಗಬಹುದು ಎಂದಿದ್ದಾರೆ. ಆ ಅವಕಾಶಕ್ಕಾಗಿ ಕಾಯುತ್ತಿರುವೆ. ರೋಹಿತ್ ಬ್ಯಾಟಿಂಗ್ ಆರಂಭಿಸುವುದನ್ನು ನೋಡಿ ಕಲಿಯಲು ನಾನು ಉತ್ಸುಕನಾಗಿದ್ದೇನೆ ಎಂದು ಟ್ರಾವಿಸ್ ಹೆಡ್ ಹೇಳಿದ್ದಾರೆ.

38 ವರ್ಷದ ರೋಹಿತ್ ಶರ್ಮಾ ಆಸ್ಟ್ರೇಲಿಯಾದಲ್ಲಿ ಅಭ್ಯಾಸ ನಡೆಸಿದರು. ಈ ವೇಳೆ ಅವರು ಯುವ ಆಟಗಾರರು ನಾಚುವಂತೆ ಬ್ಯಾಟ್ ಮಾಡಿದರು. ಐಪಿಎಲ್ ಬಳಿಕ ಟೀಮ್ ಇಂಡಿಯಾ ಮಾಜಿ ನಾಯಕ ರೋಹಿತ್ ಶರ್ಮಾ ದೇಹದ ತೂಕವನ್ನು 10 ಕೆಜಿ ಇಳಿಸಿಕೊಂಡಿದ್ದಾರೆ. ಈ ಆಸ್ಟ್ರೇಲಿಯಾ ಪ್ರವಾಸದಲ್ಲಿ ರೋಹಿತ್ ಬಿಗ್ ಇನಿಂಗ್ಸ್ ಕಟ್ಟುವ ಮೂಲಕ ಹಲವು ದಾಖಲೆಗಳನ್ನು ನಿರ್ಮಿಸಲು ಎದುರು ನೋಡುತ್ತಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications