ಪಾಕಿಸ್ತಾನ ಆಯೋಜಿತ ಚಾಂಪಿಯನ್ಸ್ ಟ್ರೋಫಿ ರೋಚಕ ಘಟ್ಟದ ಮುಖ ಮಾಡಿದೆ. ಈ ಟೂರ್ನಿಯಲ್ಲಿ ಟೀಮ್ ಇಂಡಿಯಾ ಸಹ ಭಾಗವಹಿಸಿದ್ದು, ಆಡಿದ ಎರಡೂ ಪಂದ್ಯಗಳಲ್ಲೂ ಜಯ ಸಾಧಿಸಿವೆ. ಈಗ ಲೀಗ್ ಹಂತದ ಮೂರನೇ ಪಂದ್ಯ ನ್ಯೂಜಿಲೆಂಡ್ ವಿರುದ್ಧ ಮಾರ್ಚ್ 2 ರಂದು ನಡೆಯಲಿದೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್ ರೋಹಿತ್ ಶರ್ಮಾ ಅವರ ಮೇಲೆ ಎಲ್ಲರ ಕಣ್ಣು ನೆಟ್ಟಿರಲಿವೆ. ಈ ಪಂದ್ಯದಲ್ಲಿ ಇವರು ಕ್ರಿಸ್ ಗೇಲ್ ದಾಖಲೆಯ ಮೇಲೆ ಕಣ್ಣು ನೆಟ್ಟಿದ್ದಾರೆ.
ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಸದ್ಯ ಸ್ಥಿರ ಪ್ರದರ್ಶನ ನೀಡುತ್ತಿದ್ದಾರೆ. ಚಾಂಪಿಯನ್ಸ್ ಟ್ರೋಫಿಯಲ್ಲಿ ಇವರು ಬಿಗ್ ಇನಿಂಗ್ಸ್ ಆಡದೇ ಇದ್ದರೂ ತಮ್ಮ ನೈಜ್ಯ ಆಟವನ್ನು ಆಡುತ್ತಿದ್ದಾರೆ. ಆಡಿದ ಎರಡೂ ಪಂದ್ಯಗಳಲ್ಲಿ ತಂಡಕ್ಕೆ ಉತ್ತಮ ಅಡಿಪಾಯ ಹಾಕಿಕೊಡುವಲ್ಲಿ ಇವರು ಶ್ರಮಿಸಿದ್ದಾರೆ. ಈಗ ನ್ಯೂಜಿಲೆಂಡ್ ವಿರುದ್ಧವೂ ಇದೇ ಕೆಲಸವ ಮಾಡುವ ವಿಶ್ವಾಸದಲ್ಲಿದ್ದಾರೆ. ಈ ಪಂದ್ಯದಲ್ಲಿ ಇವರು 13 ರನ್ ಬಾರಿಸಿದರೆ ವಿಶಿಷ್ಠ ದಾಖಲೆಯನ್ನು ನಿರ್ಮಿಸಲಿದ್ದಾರೆ.

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಇವರು ಅತಿ ಹೆಚ್ಚು ರನ್ ಬಾರಿಸಿದ ಲೆಕ್ಕಾಚಾರದಲ್ಲಿ ಕ್ರಿಸ್ ಗೇಲ್ ಅವರ ದಾಖಲೆಯನ್ನು ಅಳಿಸಿ ಹಾಕಬಹುದು. ರೋಹಿತ್ ಶರ್ಮಾ ಒಟ್ಟಾರೆ 496 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 19581 ರನ್ ಸಿಡಿಸಿದ್ದಾರೆ. ಇದರಲ್ಲಿ 49 ಶತಕಗಳು ಹಾಗೂ 105 ಅರ್ಧಶತಗಳು ಸೇರಿವೆ. ಇನ್ನು 13 ರನ್ ಬಾರಿಸುವಲ್ಲಿ ಸಫಲರಾದರೆ, ಗೇಲ್ ದಾಖಲೆಯನ್ನು ಅಳಿಸಿ ಹಾಕಲಿದ್ದಾರೆ. ವೆಸ್ಟ್ ಇಂಡೀಸ್‌ನ ದೈತ್ಯ ಆಟಗಾರ ಕ್ರಿಸ್ ಗೇಲ್ 483 ಪಂದ್ಯಗಳಲ್ಲಿ 19593 ರನ್ ಸಿಡಿಸಿದ್ದಾರೆ. ಈ ವೇಳೆ 42 ಶತಕಗಳು, 105 ಅರ್ಧಶತಕಗಳು ಸೇರಿವೆ.
ಸಚಿನ್ ತೆಂಡೂಲ್ಕರ್, 664 ಪಂದ್ಯ, 34357 ರನ್
ವಿರಾಟ್ ಕೊಹ್ಲಿ, 547 ಪಂದ್ಯ, 27503 ರನ್
ರಾಹುಲ್ ದ್ರಾವಿಡ್, 509 ಪಂದ್ಯ, 24208 ರನ್
ರೋಹಿತ್ ಶರ್ಮಾ, 496 ಪಂದ್ಯ, 19581 ರನ್
ಸೌರವ್ ಗಂಗೂಲಿ, 424 ಪಂದ್ಯ, 18575

ಸಚಿನ್ ತೆಂಡೂಲ್ಕರ್, 664 ಪಂದ್ಯ, 34357 ರನ್
ಕುಮಾರ್ ಸಂಗಾಕ್ಕರ್, 594 ಪಂದ್ಯ, 28016 ರನ್
ವಿರಾಟ್ ಕೊಹ್ಲಿ, 547 ಪಂದ್ಯ, 27503 ರನ್
ರಿಕ್ಕಿ ಪಾಂಟಿಂಗ್, 560 ಪಂದ್ಯ, 27483 ರನ್
ಮಹೇಲ್ ಜಯವರ್ಧನೆ, 652 ಪಂದ್ಯ, 25957 ರನ್
ರೋಹಿತ್ ಶರ್ಮಾ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅಮೋಘ ದಾಖಲೆ ಹೊಂದಿದ್ದಾರೆ. ಇವರು 67 ಟೆಸ್ಟ್ ಪಂದ್ಯಗಳಲ್ಲಿ 4301 ರನ್, 270 ಏಕದಿನ ಪಂದ್ಯಗಳಲ್ಲಿ 11049 ರನ್, 159 ಟಿ20 ಪಂದ್ಯಗಳಲ್ಲಿ 4231 ರನ್ ದಾಖಲಿಸಿದ ಹಿರಿಮೆ ತಮ್ಮದಾಗಿಸಿಕೊಂಡಿದ್ದಾರೆ.