Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Rohit Sharma: ಕಿವೀಸ್‌ ವಿರುದ್ಧ 3 ರನ್‌ ಬಾರಿಸುತ್ತಿದ್ದಂತೆ ಎಲೈಟ್‌ ಕ್ಲಬ್‌ಗೆ ರೋಹಿತ್‌ ಶರ್ಮಾಗೆ ಎಂಟ್ರಿ

ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳ ನಡುವಿನ ಹೈವೋಲ್ಟೇಜ್‌ ಚಾಂಪಿಯನ್ಸ್‌ ಟ್ರೋಫಿಯ ಫೈನಲ್‌ ಫೈಟ್ ಭಾನುವಾರ ನಡೆಯಲಿದೆ. ಈ ಪಂದ್ಯಕ್ಕೆ ದುಬೈನ ಅಂತಾರಾಷ್ಟ್ರೀಯ ಕ್ರೀಡಾಂಗಣ ಸಾಕ್ಷಿಯಾಗಲಿದೆ. ಈ ಪಂದ್ಯದಲ್ಲಿ ಅಮೋಘ ಪ್ರದರ್ಶನ ನೀಡಿ ಚಾಂಪಿಯನ್‌ ಪಟ್ಟವನ್ನು ಅಲಂಕರಿಸಲು ಎರಡೂ ತಂಡಗಳು ಜಿದ್ದಾಜಿದ್ದಿನ ಫೈಟ್‌ ನಡೆಸಲಿವೆ. ಈ ವೇಳೆ ಟೀಮ್ ಇಂಡಿಯಾದ ಸೂಪರ್ ಸ್ಟಾರ್ ಬ್ಯಾಟರ್‌ ರೋಹಿತ್ ಶರ್ಮಾ ದೊಡ್ಡ ದಾಖಲೆಯ ಮೇಲೆ ಕಣ್ಣು ನೆಟ್ಟಿದ್ದಾರೆ.

ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳು ಕಳೆದ ಭಾನುವಾರ ಲೀಗ್‌ ಹಂತದ ಕೊನೆಯ ಪಂದ್ಯದಲ್ಲಿ ಮುಖಾಮುಖಿ ಅಗಿದ್ದವು. ಐಸಿಸಿ ಟೂರ್ನಿಗಳಲ್ಲಿ ನ್ಯೂಜಿಲೆಂಡ್‌ ಉತ್ತಮ ಅಂಕಿ ಅಂಶಗಳನ್ನು ಹೊಂದಿದೆ. ಹೀಗಾಗಿ ಭಾರತಕ್ಕೆ ಭಾನುವಾರದ ಪಂದ್ಯ ಜಿದ್ದಿನಿಂದ ಕೂಡಿರಲಿದೆ. ಉಭಯ ತಂಡಗಳು "ಎ" ಗುಂಪಿನಲ್ಲಿ ಪ್ರತಿನಿಧಿಸಿದ್ದವು. ಈಗ ಫೈನಲ್‌ನಲ್ಲಿ ಫೈಟ್‌ ನಡೆಸಲಿವೆ. ಈ ಪಂದ್ಯದಲ್ಲಿ ರೋಹಿತ್ ಶರ್ಮಾ ದೊಡ್ಡ ರೆಕಾರ್ಡ್ ಮಾಡುವ ಸೂಚನೆ ನೀಡಿದ್ದಾರೆ.

Rohit Sharma Eyes Historic Milestone in Champions Trophy Final Against New Zealand

ನ್ಯೂಜಿಲೆಂಡ್‌ ವಿರುದ್ಧ ಫೈನಲ್ ಪಂದ್ಯದಲ್ಲಿ ರೋಹಿತ್ ಶರ್ಮಾ 3 ರನ್‌ಗಳನ್ನು ಗಳಿಸುವಲ್ಲಿ ಸಫಲರಾದರೆ, ದೊಡ್ಡ ಇತಿಹಾಸವನ್ನು ಬರೆಯಲಿದ್ದಾರೆ. ಕಿವೀಸ್‌ ತಂಡದ ವಿರುದ್ಧ ರೋಹಿತ್‌ ಒಂದು ಸಾವಿರ ರನ್‌ಗಳನ್ನು ಕಲೆ ಹಾಕಿದ ಕೀರ್ತಿಯನ್ನು ತಮ್ಮದಾಗಿಸಿಕೊಳ್ಳಲಿದ್ದಾರೆ. ಈ ಮೂಲಕ ರೋಹಿತ್ ಶರ್ಮಾ ಎಲೈಟ್‌ ಕ್ಲಬ್‌ ಸೇರಲಿದ್ದಾರೆ. ರೋಹಿತ್ ಶರ್ಮಾ ಕಿವೀಸ್‌ ವಿರುದ್ಧ ಆಡಿದ 30 ಪಂದ್ಯಗಳಲ್ಲಿ 36ರ ಸರಾಸರಿಯಲ್ಲಿ 997 ರನ್‌ ಸಿಡಿಸಿದ್ದಾರೆ. ಇದ್ರಲ್ಲಿ 2 ಶತಕ ಹಾಗೂ 5 ಅರ್ಧಶತಕಗಳು ಸೇರಿವೆ.

Take a Poll

ಕಿವೀಸ್‌ ವಿರುದ್ಧ ಸಚಿನ್‌ ಅಬ್ಬರ

ನ್ಯೂಜಿಲೆಂಡ್ ವಿರುದ್ಧ ಅತಿ ಹೆಚ್ಚು ರನ್ ಸಾಧನೆ ಮಾಡಿದ ಕೀರ್ತಿ ಟೀಮ್ ಇಂಡಿಯಾದ ದಿಗ್ಗಜ ಆಟಗಾರ ಸಚಿನ್ ತೆಂಡೂಲ್ಕರ್ ಅವರಿಗೆ ಸಲ್ಲುತ್ತದೆ. ಇವರು ಆಡಿದ 42 ಪಂದ್ಯಗಳಲ್ಲಿ 1750 ರನ್‌ ಕಲೆ ಹಾಕಿದ್ದಾರೆ. ಈ ವೇಳೆ 5 ಶತಕ ಹಾಗೂ 8 ಅರ್ಧಶತಕಗಳು ಸೇರಿವೆ. ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿ ವಿರಾಟ್‌ ಕೊಹ್ಲಿ ಇದ್ದಾರೆ. ಇವರು ಆಡಿದ 32 ಪಂದ್ಯಗಳಲ್ಲಿ 57ರ ಸರಾಸರಿಯಲ್ಲಿ 1656 ರನ್‌ ಕಲೆ ಹಾಕಿದ್ದಾರೆ. ಈ ವೇಳೆ 6 ಶತಕ ಹಾಗೂ 9 ಅರ್ಧಶತಕಗಳಿವೆ.

Rohit Sharma Eyes Historic Milestone in Champions Trophy Final Against New Zealand

ಈ ಪಟ್ಟಿಯಲ್ಲಿ ಮೂರನೇ ಸ್ಥಾನವನ್ನು ವೀರೇಂದ್ರ ಸೆಹ್ವಾಗ್‌ ಅವರು ಪಡೆದಿದ್ದಾರೆ. ಇವರು ಆಡಿದ 23 ಪಂದ್ಯಗಳಲ್ಲಿ 1157 ರನ್‌ ಕಲೆ ಹಾಕಿದ್ದಾರೆ. ಈ ವೇಳೆ ಇವರ ಸರಾಸರಿ 52 ಆಗಿದೆ. ಈ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿ ಮೊಹಮ್ಮದ್‌ ಅಜರುದ್ಧಿನ್‌ ಇದ್ದು, ಇವರು ಆಡಿದ 40 ಪಂದ್ಯಗಳಲ್ಲಿ 1118 ರನ್‌ ಕಲೆ ಹಾಕಿದ್ದಾರೆ. ಫೈನಲ್‌ ಪಂದ್ಯದಲ್ಲಿ ರೋಹಿತ್ ಶರ್ಮಾ ದೊಡ್ಡ ಇನಿಂಗ್ಸ್ ಕಟ್ಟುವಲ್ಲಿ ಸಫಲರಾದರೆ, ಸೌರವ್ ಗಂಗೂಲಿ (1079 ರನ್‌) ಹಾಗೂ ರಾಹುಲ್ ದ್ರಾವಿಡ್ (1032 ರನ್‌) ದಾಖಲೆಯನ್ನು ಅಳಿಸಿ ಹಾಕಬಹುದಾಗಿದೆ.

1
7-2025

Story first published: Saturday, March 8, 2025, 8:10 [IST]
Other articles published on Mar 8, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+