For Quick Alerts
ALLOW NOTIFICATIONS  
For Daily Alerts
 

Rohit Sharma: ರೋಹಿತ್ ಶರ್ಮಾ 24 ರನ್‌ ಗಳಿಸಿದರೆ ಹೊಸ ದಾಖಲೆ

ಟೀಮ್ ಇಂಡಿಯಾ ಫೆಬ್ರವರಿ 6ರಿಂದ ಇಂಗ್ಲೆಂಡ್ ವಿರುದ್ಧ ಏಕದಿನ ಸರಣಿ ಆಡಲು ಸಿದ್ಧತೆ ನಡೆಸಿದೆ. ಈ ಸರಣಿ ವಶಕ್ಕೆ ಪಡೆದು ಚಾಂಪಿಯನ್ಸ್ ಟ್ರೋಫಿಗೆ ಆತ್ಮವಿಶ್ವಾಸದಿಂದ ಹೋಗುವ ಪ್ಲ್ಯಾನ್ ಭಾರತ ತಂಡದ್ದಾಗಿದೆ. ಈ ಟೂರ್ನಿಯನ್ನು ಆಡಲು ಟೀಮ್ ಇಂಡಿಯಾದ ಸೂಪರ್ ಸ್ಟಾರ್‌ಗಳು ಅಂಗಳ ಪ್ರವೇಶಿಸಲಿದ್ದಾರೆ. ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಜಡೇಜಾ ಸಹ ಇಂಗ್ಲೆಂಡ್ ವಿರುದ್ಧ ಏಕದಿನ ಸರಣಿಯಲ್ಲಿ ಆಡುವುದನ್ನು ನಾವು ನೋಡಬಹುದಾಗಿದೆ.

ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್‌ ಗವಾಸ್ಕರ್‌ ಸರಣಿಯಲ್ಲಿ ರನ್‌ ಕಲೆ ಹಾಕುವಲ್ಲಿ ವಿಫಲರಾಗಿದ್ದ ಸ್ಟಾರ್ ಆಟಗಾರರ ಆಟದ ಮೇಲೆ ಹಲವು ಪ್ರಶ್ನೆಗಳು ಎದ್ದಿದ್ದವು. ಹೀಗಾಗಿ ಬಿಸಿಸಿಐ ಈ ಆಟಗಾರರಿಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನೀಡಿದಷ್ಟೇ ಮನ್ನಣೆಯನ್ನು ದೇಶೀಯ ಟೂರ್ನಿಗಳಿಗೂ ನೀಡುವಂತೆ ತಿಳಿಸಿತ್ತು. ಅದರಂತೆ ವಿರಾಟ್ ಕೊಹ್ಲಿ ಹಾಗೂ ರೋಹಿತ್‌ ಶರ್ಮಾ ಸೇರಿದಂತೆ ಟೀಮ್ ಇಂಡಿಯಾದ ಸ್ಟಾರ್ ಆಟಗಾರರು ದೇಶೀಯ ಟೂರ್ನಿಯಲ್ಲಿ ಪ್ರದರ್ಶನ ನೀಡಿದ್ದಾರೆ. ಈಗ ಈ ಆಟಗಾರರು ಏಕದಿನ ಸರಣಿಗೆ ಸಿದ್ಧರಾಗಿದ್ದಾರೆ. ಇದೇ ವೇಳೆ ಟೀಮ್ ಇಂಡಿಯಾದ ನಾಯಕ ರೋಹಿತ್ ಶರ್ಮಾ, ಮೊದಲ ಪಂದ್ಯದಲ್ಲಿ ದೊಡ್ಡ ದಾಖಲೆಯನ್ನು ಬರೆಯುವ ಕನಸಿನಲ್ಲಿದ್ದಾರೆ.

Rohit Sharma Eyes Historic Milestone in ODI Series Against England

ದೊಡ್ಡ ದಾಖಲೆಯ ಮೇಲೆ ರೋಹಿತ್ ಕಣ್ಣು

ಭಾರತ ಹಾಗೂ ಇಂಗ್ಲೆಂಡ್ ನಡುವಣ 3 ಪಂದ್ಯಗಳ ಏಕದಿನ ಸರಣಿ ಫೆಬ್ರವರಿ 6 ರಿಂದ ಆರಂಭವಾಗಲಿದೆ. ಈ ಪಂದ್ಯಕ್ಕೆ ನಾಗ್ಪುರದ ಅಂಗಳ ಸಾಕ್ಷಿಯಾಗಲಿದೆ. ಚಾಂಪಿಯನ್ಸ್‌ ಟ್ರೋಫಿಗೂ ಮುನ್ನ ನಡೆಯಲಿರುವ ಈ ಪಂದ್ಯಗಳು ಟೀಮ್ ಇಂಡಿಯಾದ ಪ್ರದರ್ಶನವನ್ನು ಸುಧಾರಿಸುವ ನಿಟ್ಟಿನಲ್ಲಿ ಸಹಾಯ ಮಾಡಲಿದೆ. ಈ ಸರಣಿಯ ಮೊದಲ ಪಂದ್ಯದಲ್ಲಿ ರೋಹಿತ್ ಶರ್ಮಾ ದೊಡ್ಡ ದಾಖಲೆಗೆ ತಮ್ಮ ಹೆಸರನ್ನು ನಮೂದಿಸುವ ಪ್ಲ್ಯಾನ್ ಮಾಡಿಕೊಂಡಿದ್ದಾರೆ.

ಏಕದಿನ ಕ್ರಿಕೆಟ್‌ನಲ್ಲಿ ರೋಹಿತ್ ಶರ್ಮಾ ಮಾಸ್ಟರ್‌ ಕ್ಲಾಸ್ ಬ್ಯಾಟರ್‌ ಎಂಬುದರಲ್ಲಿ ಎರಡು ಮಾತಿಲ್ಲ. ಇವರು ಏಕದಿನ ಕ್ರಿಕೆಟ್‌ನಲ್ಲಿ 10000 ಕ್ಕೂ ಹೆಚ್ಚು ರನ್‌ಗಳನ್ನು ಕಲೆ ಹಾಕಿದ್ದರೆ. ಇವರು ಟೀಮ್ ಇಂಡಿಯಾ ಪರ 265 ಏಕದಿನ ಪಂದ್ಯ ಆಡಿದ್ದು 10866 ರನ್‌ಗಳನ್ನು 49.16ರ ಸರಾಸರಿಯಲ್ಲಿ ಕಲೆ ಹಾಕಿದ್ದಾರೆ. ಇದರಲ್ಲಿ 31 ಶತಕ ಹಾಗೂ 57 ಅರ್ಧಶತಕಗಳು ಸೇರಿವೆ. ಈ ಸರಣಿಯ ಮೊದಲ ಪಂದ್ಯದಲ್ಲಿ ರೋಹಿತ್ 24 ರನ್‌ ಬಾರಿಸುತ್ತಿದ್ದಂತೆ ದೊಡ್ಡ ಇತಿಹಾಸ ನಿರ್ಮಿಸಲಿದ್ದಾರೆ.

Rohit Sharma Eyes Historic Milestone in ODI Series Against England

ನಾಗ್ಪುರ್‌ದಲ್ಲಿ ರೋಹಿತ್‌ 24 ರನ್‌ ಸಿಡಿಸುತ್ತಿದ್ದಂತೆ ಟೀಮ್ ಇಂಡಿಯಾದ ದಿಗ್ಗಜ ಬ್ಯಾಟರ್‌ ರಾಹುಲ್‌ ದ್ರಾವಿಡ್‌ ಅವರ ರನ್‌ಗಳ ದಾಖಲೆಯನ್ನು ಅಳಿಸಿ ಹಾಕಲಿದ್ದಾರೆ. ದ್ರಾವಿಡ್ ಬುಟ್ಟಿಯಲ್ಲಿ ಒಟ್ಟು 10,889 ಏಕದಿನ ರನ್‌ಗಳಿವೆ. ಈ ದಾಖಲೆಯ ಮೇಲೆ ರೋಹಿತ್ ಕಣ್ಣು ನೆಟ್ಟಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ ಅಧಿಕ ರನ್‌ ಬಾರಿಸಿದ ಆಟಗಾರರ ಪಟ್ಟಿಯಲ್ಲಿ ಸಚಿನ್ ತೆಂಡೂಲ್ಕರ್ ಟಾಪ್ ಸ್ಥಾನದಲ್ಲಿದ್ದಾರೆ. ಇವರ ನಂತರದ ಸ್ಥಾನದಲ್ಲಿ ವಿರಾಟ್ ಕೊಹ್ಲಿ, ಸೌರವ್ ಗಂಗೂಲಿ ಮತ್ತು ರಾಹುಲ್ ದ್ರಾವಿಡ್ ಸೇರಿದ್ದಾರೆ. ರೋಹಿತ್ 24 ರನ್ ಗಳಿಸಿದ ತಕ್ಷಣ, ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಪಟ್ಟಿಯಲ್ಲಿ ರಾಹುಲ್ ದ್ರಾವಿಡ್ ದಾಖಲೆ ಅಳಿಸಿ ಹಾಕಲಿದ್ದಾರೆ.

Story first published: Tuesday, February 4, 2025, 9:01 [IST]
Other articles published on Feb 4, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+