For Quick Alerts
ALLOW NOTIFICATIONS  
For Daily Alerts
 

Rohit Sharma: ಧೋನಿ ಸಾಧನೆಯ ಮೇಲೆ ಕಣ್ಣು ನೆಟ್ಟಿರುವ ರೋಹಿತ್ ಶರ್ಮಾ

ಭಾರತ ಹಾಗೂ ಇಂಗ್ಲೆಂಡ್ ನಡುವಣ ಮೂರನೇ ಏಕದಿನ ಪಂದ್ಯ ಅಹಮದಾಬಾದ್‌ನಲ್ಲಿ ನಡೆಯಲಿದೆ. ಇದು ಸರಣಿಯ ಕೊನೆಯ ಪಂದ್ಯವಾಗಿದ್ದು, ಈ ಪಂದ್ಯದ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಈ ಪಂದ್ಯವನ್ನು ಗೆದ್ದು ಚಾಂಪಿಯನ್ಸ್‌ ಟ್ರೋಫಿಗೆ ಆತ್ಮವಿಶ್ವಾಸದಿಂದ ಹೋಗುವ ಪ್ಲ್ಯಾನ್‌ ಟೀಮ್ ಇಂಡಿಯಾದ್ದಾಗಿದೆ. ಮೂರನೇ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ಗೆಲುವು ಸಾಧಿಸಿ ಸಾಧನೆ ಮಾಡುವ ಇರಾದೆಯನ್ನು ಹೊಂದಿದೆ. ಈ ಮೂಲಕ ರೋಹಿತ್ ಶರ್ಮಾ ಪಡೆ, ಎಂಎಸ್‌ ಧೋನಿ ಅವರ ದಾಖಲೆಯ ಸಮಕ್ಕೆ ನಿಲ್ಲುವ ಪ್ಲ್ಯಾನ್ ಮಾಡಿಕೊಂಡಿದೆ.

ಭಾರತ ಪ್ರವಾಸದಲ್ಲಿ ಇಂಗ್ಲೆಂಡ್‌ ನಿರಾಸೆಯ ಕಡಲಿನಲ್ಲಿ ಪಯಾಣವನ್ನು ಮಾಡಿದೆ. ಆರಂಭದಲ್ಲಿ ಆಡಿದ ಐದು ಪಂದ್ಯಗಳ ಟಿ20 ಸರಣಿಯಲ್ಲಿ 4-1 ರಿಂದ ಸೋಲು ಕಂಡಿತ್ತು. ಈಗಾಗಲೇ ಟೀಮ್ ಇಂಡಿಯಾ ಏಕದಿನ ಪಂದ್ಯವನ್ನು 2-0ಯಿಂದ ಸರಣಿಯನ್ನು ತನ್ನ ವಶಕ್ಕೆ ಪಡೆದುಕೊಂಡಿದೆ. ಇನ್ನು ಮೂರನೇ ಏಕದಿನ ಪಂದ್ಯದಲ್ಲಿ ಗೆಲುವು ಸಾಧಿಸಿ ಕ್ಲೀನ್ ಸ್ವೀಪ್ ಸಾಧನೆ ಮಾಡುವ ಪ್ಲ್ಯಾನ್ ಮಾಡಿಕೊಂಡಿದೆ. ಈ ಮೂಲಕ ರೋಹಿತ್ ಶರ್ಮಾ ದೊಡ್ಡ ದಾಖಲೆಯನ್ನು ನಿರ್ಮಿಸುವ ಕನಸು ಕಾಣುತ್ತಿದ್ದಾರೆ.

Rohit Sharma Eyes Historic Whitewash as India Takes on England in Final ODI at Ahmedabad

ದಾಖಲೆ ಟಾರ್ಗೆಟ್

ಇಂಗ್ಲೆಂಡ್ ವಿರುದ್ಧದ ಕೊನೆಯ ಏಕದಿನ ಪಂದ್ಯದಲ್ಲಿ ರೋಹಿತ್ ಶರ್ಮಾ ಇತಿಹಾಸ ನಿರ್ಮಿಸುವ ಅವಕಾಶವನ್ನು ಹೊಂದಿದ್ದಾರೆ. 2008 ರಲ್ಲಿ ಮತ್ತು ನಂತರ 2011 ರಲ್ಲಿ ಅಂದಿನ ನಾಯಕ ಮಹೇಂದ್ರ ಸಿಂಗ್‌ ಧೋನಿ ಮಾಡಿದ್ದ ಸಾಧನೆಯನ್ನು ರೋಹಿತ್ ಶರ್ಮಾ ಮತ್ತೆ ಮಾಡುವ ಸಾಧ್ಯತೆ ಇದೆ. ಈ ಸಾಧನೆಯನ್ನು ರೋಹಿತ್ ಮಾಡುತ್ತಾರಾ ಎಂಬುದನ್ನು ನೋಡಲು ಬುಧವಾರ ರಾತ್ರಿಯ ವರೆಗೆ ಕಾಯ ಬೇಕು. ಫೆ.12 ರಂದು ನಡೆಯುವ ಪಂದ್ಯದಲ್ಲಿ ಟೀಮ್ ಇಂಡಿಯಾ ಗೆಲುವು ಸಾಧಿಸಿದರೆ, 2011 ರಲ್ಲಿ ಎಂಎಸ್ ಧೋನಿ ನಾಯಕತ್ವದಲ್ಲಿ ಟೀಮ್ ಇಂಡಿಯಾ ಮಾಡಿದ್ದನ್ನೇ ರೋಹಿತ್ ಶರ್ಮಾ ಮಾಡಿದ ಸಾಧನೆಯನ್ನು ತನ್ನದಾಗಿಸಿಕೊಳ್ಳಲಿದೆ.

2011 ರಲ್ಲಿ ಭಾರತ ಪ್ರವಾಸವನ್ನು ಬೆಳೆಸಿದ್ದ ಇಂಗ್ಲೆಂಡ್ ಐದು ಪಂದ್ಯಗಳ ಏಕದಿನ ಸರಣಿಯಲ್ಲಿ ವೈಟ್ ವಾಶ್ ಮುಖಭಂಗ ಅನುಭವಿಸಿತ್ತು. ಈ ಸರಣಿಯ ಬಳಿಕ ಭಾರತ ಹಾಗೂ ಇಂಗ್ಲೆಂಡ್ ನಡುವೆ ಈಗಾಗಲೇ ಬಹಳಷ್ಟು ಪಂದ್ಯಗಳು ನಡೆದಿವೆ. ಆದರೆ ಟೀಮ್ ಇಂಡಿಯಾ ಕ್ಲೀನ್ ಸ್ವೀಪ್ ಸಾಧನೆಯನ್ನು ಮಾಡಿದೆ. 2013ರಲ್ಲಿ ಇಂಗ್ಲೆಂಡ್‌ ಭಾರತ ಪ್ರವಾಸದಲ್ಲಿ 3-2 ರಿಂದ ಸರಣಿ ಸೋತಿತ್ತು. 2017 ರಲ್ಲಿ ಮೂರು ಏಕದಿನ ಪಂದ್ಯಗಳ ಸರಣಿ ನಡೆದಾಗ ಭಾರತ 2-1 ರಿಂದ ವಶಕ್ಕೆ ಪಡೆದಿತ್ತು. ಇನ್ನು 2021ರಲ್ಲೂ ಉಭಯ ದೇಶಗಳ ನಡುವೆ ಒಟ್ಟು ಮೂರು ಏಕದಿನ ಪಂದ್ಯಗಳು ಭಾರತದಲ್ಲಿ ನಡೆದಿದ್ದವು. ಆಗ ಆತಿಥೇಯ ತಂಡ 2-1 ರಿಂದ ಸರಣಿ ಗೆದ್ದಿತ್ತು.

Rohit Sharma Eyes Historic Whitewash as India Takes on England in Final ODI at Ahmedabad

ಮೂರನೇ ಏಕದಿನ ಪಂದ್ಯವನ್ನು ಟೀಮ್ ಇಂಡಿಯಾ ಗೆಲ್ಲುವುದು ಅನಿವಾರ್ಯ. ಈ ಸರಣಿ ಗೆಲುವು ಟೀಮ್ ಇಂಡಿಯಾದ ಹಿಂದಿನ ಸರಣಿಗಳ ಸಾಲು ಸಾಲು ಸೋಲುಗಳನ್ನು ಮರೆಸುತ್ತವೆ. ಹೀಗಾಗಿ ಈ ಗೆಲುವು ತಂಡಕ್ಕೆ ಅವಶ್ಯಕ.

Story first published: Tuesday, February 11, 2025, 14:31 [IST]
Other articles published on Feb 11, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+