For Quick Alerts
ALLOW NOTIFICATIONS  
For Daily Alerts
 

Champions Trophy 2025: ರೋಹಿತ್ ಶರ್ಮಾ 25 ರನ್ ಬಾರಿಸುತ್ತಿದ್ದಂತೆ ರೆಕಾರ್ಡ್ ನಿರ್ಮಾಣ

ಇನ್ನೇನು ಎರಡು ದಿನಗಳಲ್ಲಿ ವಿಶ್ವದಲ್ಲಿ ಚಾಂಪಿಯನ್ಸ್ ಟ್ರೋಫಿ ರಂಗು ಆವರಿಸಿಕೊಳ್ಳಲಿದೆ. ಮೊದಲ ಪಂದ್ಯದಲ್ಲಿ ಆತಿಥೇಯ ಪಾಕಿಸ್ತಾನ ಹಾಗೂ ನ್ಯೂಜಿಲೆಂಡ್ ತಂಡಗಳು ಕಾದಾಟ ನಡೆಸಲಿವೆ. ಫೆಬ್ರವರಿ 20 ರಂದು ಟೀಮ್ ಇಂಡಿಯಾ ಅಖಾಡ ಪ್ರವೇಶಿಸಲಿದೆ. ಈ ವೇಳೆ ಟೀಮ್ ಇಂಡಿಯಾ ಬಾಂಗ್ಲಾದೇಶವನ್ನು ಎದುರಿಸಲಿದೆ. ಈ ಪಂದ್ಯದಲ್ಲಿ ಹಿಟ್‌ ಮ್ಯಾನ್‌ ಖ್ಯಾತಿಯ ರೋಹಿತ್ ಶರ್ಮಾ ಅವರ ಮೇಲೆ ಎಲ್ಲರ ಕಣ್ಣು ನೆಟ್ಟಿದೆ.

ರೋಹಿತ್ ಶರ್ಮಾ ಫಾರ್ಮ್‌ ಇಲ್ಲದೆ ಪರದಾಡುತ್ತಿದ್ದರು. ಆದರೆ ಇಂಗ್ಲೆಂಡ್‌ ವಿರುದ್ಧದ ಎರಡನೇ ಪಂದ್ಯದಲ್ಲಿ ಅಮೋಘ ಪ್ರದರ್ಶನ ನೀಡಿ ಲಯಕ್ಕೆ ಮರಳಿದರು. ಕಟಕ್‌ನಲ್ಲಿ ರೋಹಿತ್‌ ಆರ್ಭಟ ಕಂಡು ಎದುರಾಳಿಗಳು ಸ್ಟನ್‌ ಆಗಿರುವುದ್ರಲ್ಲಿ ಸಂಶಯವೇ ಇಲ್ಲ. ಈಗ ರೋಹಿತ್‌ ಶರ್ಮಾ ದುಬೈನಲ್ಲಿ ಮತ್ತೊಂದು ದಾಖಲೆ ಬರೆಯುವ ಕನಸಿನಲ್ಲಿದ್ದಾರೆ. ಹಾಗಿದ್ದರೆ ರೋಹಿತ್ ಬರೆಯಲಿರುವ ದಾಖಲೆ ಏನು ಎಂಬ ಬಗ್ಗೆ ವರದಿ ಇಲ್ಲಿದೆ.

Rohit Sharma Eyes Record-Breaking Feat in Champions Trophy 2025 India Ready for Bangladesh Clash

ಚಾಂಪಿಯನ್ಸ್ ಟ್ರೋಫಿಯಲ್ಲಿ ಸ್ಥಿರ ಪ್ರದರ್ಶನ ನೀಡಿ ದಾಖಲೆಯ ಪುಟಕ್ಕೆ ಕೆಲಸವನ್ನು ನೀಡುವ ಕಾರ್ಯವನ್ನು ರೋಹಿತ್ ಶರ್ಮಾ ಮಾಡುವ ಪ್ಲ್ಯಾನ್ ಮಾಡುವತ್ತ ಚಿತ್ತ ನೆಟ್ಟಿದ್ದಾರೆ. ಇನ್ನು ರೋಹಿತ್ ಶರ್ಮಾ ಒಬ್ಬ ಬಿಗ್ ಮ್ಯಾಚ್ ಪ್ಲೇಯರ್ ಎಂಬುದರಲ್ಲಿ ಎರಡು ಮಾತಿಲ್ಲ. ಈ ಸರಣಿಯಲ್ಲಿ ರೋಹಿತ್‌ ಇನ್ನು 220 ರನ್‌ ಸಿಡಿಸಿದರೆ, ಭಾರತದ ಪರ ಈ ಟೂರ್ನಿಯಲ್ಲಿ ಹೆಚ್ಚು ರನ್‌ ಸಾಧನೆ ಮಾಡುವ ಕನಸು ಹೊಂದಿದ್ದಾರೆ. ಇದರ ಜೊತೆಗೆ ಇನ್ನೊಂದು ದಾಖಲೆಯ ಮೇಲೆ ರೋಹಿತ್ ಕಣ್ಣು ನೆಟ್ಟಿದ್ದಾರೆ.

ದೊಡ್ಡ ದಾಖಲೆಯ ಮೇಲೆ ಕಣ್ಣು

ದುಬೈ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ಟೀಮ್ ಇಂಡಿಯಾ ಪರ ಗರಿಷ್ಠ ರನ್‌ ಸಾಧನೆ ಮಾಡಿರುವ ದಾಖಲೆ ಗಬ್ಬರ್ ಖ್ಯಾತಿಯ ಶಿಖರ್ ಧವನ್‌ ಅವರದ್ದಾಗಿದೆ. ಇವರು ಈ ಮೈದಾನದಲ್ಲಿ ಆಡಿದ 5 ಇನ್ನಿಂಗ್ಸ್‌ಗಳಲ್ಲಿ 68.40 ಸರಾಸರಿಯಲ್ಲಿ 342 ರನ್ ಸಿಡಿಸಿದ್ದಾರೆ. ಈ ವೇಳೆ 2 ಶತಕ ಸಹ ಸೇರಿವೆ. ಈ ಪಟ್ಟಿಯಲ್ಲಿ ರೋಹಿತ್ ಶರ್ಮಾ ಅವರಿಗೆ ಎರಡನೇ ಸ್ಥಾನ. ರೋಹಿತ್‌ 5 ಪಂದ್ಯಗಳಲ್ಲಿ 105.66 ಸರಾಸರಿಯಲ್ಲಿ 317 ರನ್ ಗಳಿಸಿದ್ದಾರೆ. ಈ ವೇಳೆ 1 ಶತಕ, 2 ಅರ್ಧಶತಕ ಗಳಿಸಿದ್ದಾರೆ. ಟೀಮ್ ಇಂಡಿಯಾದ ನಾಯಕನಿಗೆ ಚಾಂಪಿಯನ್ಸ್ ಟ್ರೋಫಿಯಲ್ಲಿ ದೊಡ್ಡ ಸಾಧನೆ ಮಾಡುವ ಕನಸಿನಲ್ಲಿದ್ದಾರೆ.

Rohit Sharma Eyes Record-Breaking Feat in Champions Trophy 2025 India Ready for Bangladesh Clash

ಫೆಬ್ರವರಿ 20 ರಂದು ಬಾಂಗ್ಲಾದೇಶ ವಿರುದ್ಧದ ಪಂದ್ಯಕ್ಕಾಗಿ ಟೀಮ್ ಇಂಡಿಯಾ ಈಗಾಗಲೇ ದುಬೈ ತಲುಪಿದೆ. ಟೀಮ್ ಇಂಡಿಯಾದ ಆಟಗಾರರು ದುಬೈ ಅಂಗಳದಲ್ಲಿ ಸಮರಾಭ್ಯಾಸ ನಡೆಸಿದರು. ಟೀಮ್ ಇಂಡಿಯಾದ ಸೂಪರ್‌ ಸ್ಟಾರ್ ಆಟಗಾರರು ಭರ್ಜರಿ ತಾಲೀಮು ನಡೆಸಿದರು. ಇನ್ನು ಭಾರತ ಈ ಟೂರ್ನಿಯ ಎರಡನೇ ಪಂದ್ಯದಲ್ಲಿ ಪಾಕಿಸ್ತಾನ ತಂಡವನ್ನು ಎದುರಿಸಲಿದೆ. ಈ ಪಂದ್ಯಕ್ಕೆ ಫೆಬ್ರವರಿ 23 ಭಾನುವಾರ ನಡೆಯಲಿದ್ದು ಎಲ್ಲರ ಚಿತ್ತ ಕದ್ದಿದೆ. ಮಾರ್ಚ್ 2 ರಂದು ಭಾರತ, ನ್ಯೂಜಿಲೆಂಡ್ ವಿರುದ್ಧ ಕಾದಾಟ ನಡೆಸಲಿದೆ.

Story first published: Wednesday, February 19, 2025, 9:10 [IST]
Other articles published on Feb 19, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+