ಟೀಮ್ ಇಂಡಿಯಾ ಹಾಗೂ ಆಸ್ಟ್ರೇಲಿಯಾ ನಡುವಣ ಬಾರ್ಡರ್ ಗವಾಸ್ಕರ್ ಸರಣಿ ನಡೆಯುತ್ತಿದೆ. ಈ ಸರಣಿಯ ಐದನೇ ಪಂದ್ಯ ಸಿಡ್ನಿಯಲ್ಲಿ ನಡೆಯಲಿದೆ. ಈ ಪಂದ್ಯದ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಬದಲಾವಣೆಗಳಿಂದ ಕಣಕ್ಕೆ ಇಳಿಯುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ಟೀಮ್ ಮ್ಯಾನೇಜ್ಮೆಂಟ್ ಬಲಿಷ್ಠ ತಂಡವನ್ನು ಕಟ್ಟುವ ನಿಟ್ಟಿನಲ್ಲಿ ಶ್ರಮಿಸುತ್ತಿದೆ. ಈ ಟೆಸ್ಟ್ ಪಂದ್ಯದಲ್ಲಿ ರೋಹಿತ್ ಶರ್ಮಾ ಅವರ ಮೇಲೆ ಎಲ್ಲರ ಚಿತ್ತ ನೆಟ್ಟಿರಲಿದೆ.
ಟೀಮ್ ಇಂಡಿಯಾದ ನಾಯಕ ರೋಹಿತ್ ಶರ್ಮಾ ಪ್ರಸಕ್ತ ಸರಣಿಯಲ್ಲಿ ರನ್ ಕಲೆ ಹಾಕುವಲ್ಲಿ ಪರದಾಟ ನಡೆಸುತ್ತಿದ್ದಾರೆ. ಈ ವೇಳೆ ಅವರು ಸರಣಿಯಲ್ಲಿ ಒಮ್ಮೆಯೂ ಅರ್ಧಶತಕ ಬಾರಿಸಿಲ್ಲ. ಆದರೆ ಇವರ ಮೇಲೆ ಅಭಿಮಾನಿಗಳಿಗೆ ಅಪಾರ ಭರವಸೆ ಇದೆ. ತಂಡವನ್ನು ಮುನ್ನಡೆಸುವ ಹೊಣೆಗಾರಿಕೆ ಹೊತ್ತುಕೊಂಡಿರುವ ರೋಹಿತ್ ಬ್ಯಾಟ್ ಮೌನಕ್ಕೆ ಶರಣಾಗಿರುವುದು ಹಲವು ಪ್ರಶ್ನೆಗಳು ಹುಟ್ಟುವಂತೆ ಮಾಡಿವೆ.

ಬಾರ್ಡರ್ ಗವಾಸ್ಕರ್ ಸರಣಿಯ ಮೊದಲ ಪಂದ್ಯದಲ್ಲಿ ರೋಹಿತ್ ಶರ್ಮಾ ಕೌಟುಂಬಿಕ ಕಾರಣಗಳಿಂದ ಅಲಭ್ಯರಾಗಿದ್ದರು. ಈ ಪಂದ್ಯದಲ್ಲಿ ತಂಡವನ್ನು ಜಸ್ಪ್ರಿತ್ ಬುಮ್ರಾ ಮುನ್ನಡೆಸಿದ್ದರು. ಪರ್ತ್ ಪಂದ್ಯವನ್ನು ಟೀಮ್ ಇಂಡಿಯಾ ಗೆದ್ದು ಕೊಂಡಿತ್ತು. ರೋಹಿತ್ ಎರಡನೇ ಟೆಸ್ಟ್‌ನಿಂದ ತಂಡವನ್ನು ಸೇರಿಕೊಂಡರು. ಈ ವೇಳೆ ಅವರು ಸ್ಥಿರ ಪ್ರದರ್ಶನ ನೀಡುವಲ್ಲಿ ಹೆಣಗಾಟ ನಡೆಸಿದ್ದಾರೆ. ರೋಹಿತ್ ಶರ್ಮಾ ಈ ಸರಣಿಯಲ್ಲಿ ಆಡಿದ 3 ಪಂದ್ಯಗಳ 5 ಇನಿಂಗ್ಸ್‌ಗಳಲ್ಲಿ 31 ರನ್ ಸಿಡಿಸಿದ್ದಾರೆ. ಈ ವೇಳೆ ಇವರ ಎಕಾನಮಿ 6.20 ಆಗಿದೆ. ಇನ್ನೊಂದು ವಿಶೇಷ ಅಂದರೆ ರೋಹಿತ್ ಈ ಸರಣಿಯಲ್ಲಿ ಒಂದೇ ಒಂದು ಸಿಕ್ಸರ್ ಸಹ ಬಾರಿಸಿಲ್ಲ.
ಸಾಮಾನ್ಯವಾಗಿ ರೋಹಿತ್ ಶರ್ಮಾ ಬಿಗ್ ಇನಿಂಗ್ಸ್ ಕಟ್ಟಿದ್ರೆ ಅಲ್ಲಿ ಸಿಕ್ಸರ್‌ಗಳು ಯಥೇಚ್ಛವಾಗಿ ಇರುತ್ತವೆ. ಆದರೆ ಆಸ್ಟ್ರೇಲಿಯಾ ಪ್ರವಾಸದಲ್ಲಿ ಮಂಕಾಗಿರುವುದು ಹಲವು ಪ್ರಶ್ನೆಗಳು ಏಳುವಂತೆ ಮಾಡಿದೆ. ಸಿಡ್ನಿಯಲ್ಲಿ ನಡೆಯಲಿರುವ ಟೆಸ್ಟ್‌ನಲ್ಲಿ ರೋಹಿತ್ ಫಾರ್ಮ್‌ಗೆ ಮರಳಿ 4 ಸಿಕ್ಸರ್ ಬಾರಿಸಿದರೆ ದೊಡ್ಡ ದಾಖಲೆಯನ್ನು ನಿರ್ಮಿಸಬಹುದು.

ಸಿಡ್ನಿಯಲ್ಲಿ ರೋಹಿತ್ ಶರ್ಮಾ ಅವರಿಗೆ ವೀರೇಂದ್ರ ಸೆಹ್ವಾಗ್ ಅವರ ದಾಖಲೆಯನ್ನು ಅಳಿಸಿ ಹಾಕುವ ಅವಕಾಶ ಇದೆ. ಟೀಮ್ ಇಂಡಿಯಾದ ಪರ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಕೀರ್ತಿ ವೀರೇಂದ್ರ ಸೆಹ್ವಾಗ್ ಅವರಿಗೆ ಸಲ್ಲುತ್ತದೆ. ವೀರೇಂದ್ರ ಸೆಹ್ವಾಗ್ 91 ಸಿಕ್ಸರ್ ಬಾರಿಸಿ ಇತಿಹಾಸದ ಪುಟದಲ್ಲಿ ಸ್ಥಾನ ಪಡೆದಿದ್ದಾರೆ. ಈಗ ರೋಹಿತ್ ಶರ್ಮಾ ಅವರಿಗೆ ಈ ದಾಖಲೆ ಅಳಿಸುವ ಅವಕಾಶ ಇದೆ. ರೋಹಿತ್ ನಾಲ್ಕು ಸಿಕ್ಸರ್ ಬಾರಿಸಿದರೆ ಇವರ ದಾಖಲೆಯನ್ನು ಅಳಿಸಿ ಹಾಕಬಹುದು. ರೋಹಿತ್ ಬುಟ್ಟಿಯಲ್ಲಿ 88 ಸಿಕ್ಸರ್‌ಗಳು ಇವೆ.
ವೀರೇಂದ್ರ ಸೆಹ್ವಾಗ್- 91 ಸಿಕ್ಸರ್
ರೋಹಿತ್ ಶರ್ಮಾ- 88 ಸಿಕ್ಸರ್
ಮಹೇಂದ್ರ ಸಿಂಗ್ ಧೋನಿ- 78 ಸಿಕ್ಸರ್
ರವೀಂದ್ರ ಜಡೇಜಾ- 69 ಸಿಕ್ಸರ್
ಸಚಿನ್ ತೆಂಡೂಲ್ಕರ್- 69 ಸಿಕ್ಸರ್