For Quick Alerts
ALLOW NOTIFICATIONS  
For Daily Alerts
 

Rohit Sharma: 2 ದೊಡ್ಡ ದಾಖಲೆಗಳ ಮೇಲೆ ರೋಹಿತ್‌ ಶರ್ಮಾ ಕಣ್ಣು

ದಕ್ಷಿಣ ಆಫ್ರಿಕಾ ವಿರುದ್ಧ ಏಕದಿನ ಸರಣಿ ಭಾನುವಾರದಿಂದ ಆರಂಭವಾಗಲಿದೆ. ಈ ಸರಣಿಯಲ್ಲಿ ಟೀಮ್ ಇಂಡಿಯಾದ ಸೂಪರ್ ಸ್ಟಾರ್ ಆಟಗಾರ ರೋಹಿತ್ ಶರ್ಮಾ ಮೈದಾನ ಪ್ರವೇಶಿಸಲಿದ್ದಾರೆ. ಈ ವೇಳೆ ಎಲ್ಲರ ಕಣ್ಣುಗಳು ಹಿಟ್‌ ಮ್ಯಾನ್‌ ಮೇಲೆ ನೆಟ್ಟಿವೆ. ಆಸ್ಟ್ರೇಲಿಯಾ ಪ್ರವಾಸದಲ್ಲಿ ರೋಹಿತ್ ಶರ್ಮಾ ನೀಡಿದ ಪ್ರದರ್ಶನವನ್ನು, ಭಾರತದಲ್ಲೂ ಮುಂದುವರೆಸುತ್ತಾರಾ? ಎಂಬ ಪ್ರಶ್ನೆಗಳು ಉದ್ಭವಿಸಿದ್ದು, ಇವರ ಆಟವನ್ನು ಕಣ್ಣು ತುಂಬಿಕೊಳ್ಳಲು ರಾಂಚಿ ಅಭಿಮಾನಿಗಳು ಸಹ ಕಾತುರದಿಂದ ಕಾಯುತ್ತಿದ್ದಾರೆ.

ರಾಂಚಿಯಲ್ಲಿ ನಡೆಯಲಿರುವ ಪಂದ್ಯದಲ್ಲಿ ರೋಹಿತ್ ಶರ್ಮಾ ಅವರ ಕಣ್ಣುಗಳು ಎರಡು ಪ್ರಮುಖ ದಾಖಲೆಯ ಮೇಲೆ ನೆಟ್ಟಿರಲಿವೆ. ದಕ್ಷಿಣ ಆಫ್ರಿಕಾ ವಿರುದ್ಧ ಬಿಗ್‌ ಇನಿಂಗ್ಸ್ ಕಟ್ಟಿದ್ದೇ ಆದಲ್ಲಿ ಈ ಎರಡೂ ದಾಖಲೆಗಳು ನಿರ್ಮಾಣ ಆಗಲಿವೆ. ಹಾಗಿದ್ದರೆ ರೋಹಿತ್ ಶರ್ಮಾ ನಿರ್ಮಿಸಲಿರುವ ಆ ದಾಖಲೆಗಳು ಯಾವವು ಎಂಬ ಬಗ್ಗೆ ವರದಿ ಇಲ್ಲಿದೆ.

Rohit Sharma Eyes Two Massive Records in ODI Series Against South Africa 20k Runs amp amp Sixes King

ರೋಹಿತ್‌ ಶರ್ಮಾ 2027 ಏಕದಿನ ವಿಶ್ವಕಪ್‌ ಆಡುವ ಬಯಕೆ ಹೊಂದಿದ್ದಾರೆ. ಈ ನಿಟ್ಟಿನಲ್ಲಿ ಇವರು ಮೈದಾನದಲ್ಲಿ ಬೆವರು ಹರಿಸುತ್ತಿದ್ದಾರೆ. ಇವರು ಮೂರು ಸ್ವರೂಪದಲ್ಲಿ ಭಾರತದ ಪರ 502 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದು, 50 ಶತಕ ಮತ್ತು 109 ಅರ್ಧಶತಕ ಬಾರಿಸಿದ್ದಾರೆ. ರೋಹಿತ್‌ ಮೊದಲ ಪಂದ್ಯದಲ್ಲಿ 98 ರನ್ ಬಾರಿಸಿದರೆ, ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 20,000 ರನ್ ಗಳಿಸಿದ ನಾಲ್ಕನೇ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. ಇದಕ್ಕೂ ಮೊದಲು ಈ ಸಾಧನೆಯನ್ನು ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ ಮತ್ತು ರಾಹುಲ್ ದ್ರಾವಿಡ್ ಮಾಡಿದ್ದರು.

ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಭಾರತದ ಪರ ಅತಿ ಹೆಚ್ಚು ರನ್ ಬಾರಿಸಿದ ಬ್ಯಾಟ್ಸ್‌ಮನ್ಸ್‌

ಸಚಿನ್ ತೆಂಡೂಲ್ಕರ್ - 664 ಪಂದ್ಯಗಳು - 34,357 ರನ್‌ಗಳು
ವಿರಾಟ್ ಕೊಹ್ಲಿ - 553 ಪಂದ್ಯಗಳು - 27,673 ರನ್‌ಗಳು
ರಾಹುಲ್ ದ್ರಾವಿಡ್ - 509 ಪಂದ್ಯಗಳು - 24,208 ರನ್‌ಗಳು
ರೋಹಿತ್ ಶರ್ಮಾ - 502 ಪಂದ್ಯಗಳು - 19,902 ರನ್‌ಗಳು

ಇನ್ನು ರೋಹಿತ್‌ ಶರ್ಮಾ ಈ ಪಂದ್ಯದಲ್ಲಿ ಮತ್ತೊಂದು ದಾಖಲೆಯನ್ನು ನಿರ್ಮಿಸುವ ಕನಸು ಕಾಣುತ್ತಿದ್ದಾರೆ. ಅಂತಾರಾಷ್ಟ್ರೀಯ ಏಕದಿನ ಪಂದ್ಯಗಳಲ್ಲಿ ರೋಹಿತ್‌ ಶರ್ಮಾ ಈಗಾಗಲೇ 268 ಇನ್ನಿಂಗ್ಸ್‌ಗಳಲ್ಲಿ 349 ಸಿಕ್ಸರ್‌ ಬಾರಿಸಿದ್ದಾರೆ. ಇವರು ಮೊದಲ ಪಂದ್ಯದಲ್ಲಿ ಇನ್ನು ಮೂರು ಸಿಕ್ಸರ್ ಬಾರಿಸುವಲ್ಲಿ ಸಫಲರಾದರೆ, ಶಾಹಿದ್ ಅಫ್ರಿದಿ ದಾಖಲೆಯನ್ನು ಮೀರಿ ನಿಲ್ಲಲಿದ್ದಾರೆ. ಅಫ್ರಿದಿ 369 ಇನ್ನಿಂಗ್ಸ್‌ಗಳಲ್ಲಿ 351 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. ರೋಹಿತ್‌ ಒಂದು ಸಿಕ್ಸರ್ ಬಾರಿಸುತ್ತಲೇ ವಿಶ್ವ ಕ್ರಿಕೆಟ್‌ನಲ್ಲಿ 350 ಸಿಕ್ಸರ್‌ ಬಾರಿಸಿದ ಎರಡನೇ ಬ್ಯಾಟರ್ ಎಂಬ ಹೆಗ್ಗಳಿಕೆ ತಮ್ಮದಾಗಿಸಿಕೊಳ್ಳಲಿದ್ದಾರೆ.

2 ಸಿಕ್ಸರ್‌ಗೆ ದಾಖಲೆ

ರೋಹಿತ್ ಶರ್ಮಾ 268 ಇನ್ನಿಂಗ್ಸ್‌ಗಳಲ್ಲಿ 349 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. ಮುಂದಿನ ಪಂದ್ಯದಲ್ಲಿ ರೋಹಿತ್ ಇನ್ನೂ ಮೂರು ಸಿಕ್ಸರ್‌ಗಳನ್ನು ಬಾರಿಸಿದರೆ, ಅವರು ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ ಬ್ಯಾಟ್ಸ್‌ಮನ್ ಆಗುತ್ತಾರೆ. ಕ್ರಿಸ್ ಗೇಲ್ ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಗೇಲ್ 294 ಇನ್ನಿಂಗ್ಸ್‌ಗಳಲ್ಲಿ 331 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. ಸನತ್ ಜಯಸೂರ್ಯ 270 ಸಿಕ್ಸರ್‌ಗಳೊಂದಿಗೆ ಈ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ.

Rohit Sharma Eyes Two Massive Records in ODI Series Against South Africa 20k Runs amp amp Sixes King

ರೋಹಿತ್ ಶರ್ಮಾ ಈ ಸರಣಿಯಲ್ಲಿ ಇನ್ನು 8 ಸಿಕ್ಸರ್ ಬಾರಿಸುವಲ್ಲಿ ಯಶಸ್ವಿ ಯಾದರೆ, ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮತ್ತೊಂದು ಮೈಲಿಗಲ್ಲು ತಲುಪಬಹುದಾಗಿದೆ. ರೋಹಿತ್‌ 502 ಪಂದ್ಯಗಳ 535 ಇನ್ನಿಂಗ್ಸ್‌ಗಳಲ್ಲಿ 642 ಸಿಕ್ಸರ್‌ ಬಾರಿಸಿದ್ದಾರೆ. ಎಂಟು ಸಿಕ್ಸರ್‌ಗಳನ್ನು ಬಾರಿಸಿದರೆ, ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 650 ಸಿಕ್ಸರ್‌ಗಳನ್ನು ಬಾರಿಸಿದ ವಿಶ್ವದ ಮೊದಲ ಕ್ರಿಕೆಟಿಗ ಎಂಬ ಹಿರಿಮೆ ತಮ್ಮದಾಗಿಸಿಕೊಳ್ಳಲಿದ್ದಾರೆ.

Story first published: Sunday, November 30, 2025, 9:15 [IST]
Other articles published on Nov 30, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+