9 ವರ್ಷಗಳ ಬಳಿಕ ಈ ಸಾಧನೆ ಮಾಡಿದ ಟೀಮ್ ಇಂಡಿಯಾ ಕ್ಯಾಪ್ಟನ್
ಭಾರತ ಹಾಗೂ ನ್ಯೂಜಿಲೆಂಡ್ ನಡುವಣ ಎರಡನೇ ಟೆಸ್ಟ್ ಪುಣೆಯಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾದ ಸ್ಪಿನ್ ಬೌಲರ್ಸ್ ಅಮೋಘ ಪ್ರದರ್ಶನ ನೀಡಿದ್ದಾರೆ. ನ್ಯೂಜಿಲೆಂಡ್ ತಂಡವನ್ನು ಭಾರತದ ಸ್ಪಿನ್ ಬೌಲರ್ಸ್ 259 ರನ್‌ಗಳಿಗೆ ಕಟ್ಟಿ ಹಾಕಿದ್ದಾರೆ. ಇನ್ನು ಬ್ಯಾಟಿಂಗ್ ವೇಳೆ ಟೀಮ್ ಇಂಡಿಯಾದ ನಾಯಕ ರೋಹಿತ್ ಶರ್ಮಾ ಅವರ ಮ್ಯಾಜಿಕ್ ನೋಡಬಹುದು ಎಂದೇ ಎಲ್ಲರೂ ಭಾವಿಸಿದ್ದರು. ಆದರೆ ಆ ಆಸೆ ಮಣ್ಣು ಪಾಲಾಗಿದೆ.
ನ್ಯೂಜಿಲೆಂಡ್ ತಂಡ ಆಲೌಟ್ ಆಗುತ್ತಿದ್ದಂತೆ ಅಂಗಳಕ್ಕೆ ಇಳಿದ ಟೀಮ್ ಇಂಡಿಯಾ ಬ್ಯಾಟರ್ಸ್‌ಗಳ ಆರ್ಭಟವನ್ನು ನೋಡಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದರು. ಆದರೆ ಟೀಮ್ ಇಂಡಿಯಾದ ನಾಯಕ ರೋಹಿತ್ ಶರ್ಮಾ ನಿರಾಸೆ ಅನುಭವಿಸಿದರು. ರೋಹಿತ್ ಶರ್ಮಾ ಡಿಫೆನ್ಸಿವ್ ಮೂಡ್‌ನಲ್ಲಿ ಕಾಣಿಸಿಕೊಂಡಂತೆ ಬ್ಯಾಟ್ ಮಾಡಿದರು. ಎಂಟು ಎಸೆತ ಎದುರಿಸಿ ಖಾತೆ ತೆರೆಯುವ ಸೂಚನೆ ನೀಡಿದ್ದರು. ಆದರೆ ರೋಹಿತ್ 9 ಎಸೆತದಲ್ಲಿ ಔಟ್ ಆದರು.

ಸೊನ್ನೆ ಸುತ್ತಿ ದಾಖಲೆ
ರೋಹಿತ್ ಶರ್ಮಾ ಸುಮಾರು 9 ವರ್ಷಗಳ ಬಳಿಕ ತವರಿನಲ್ಲಿ ಇಂತಹ ದಿನವನ್ನು ಮತ್ತೊಮ್ಮೆ ನೋಡಬೇಕಾಯಿತು. ಖಂಡಿತವಾಗಿಯೂ ಹಿಟ್ ಮ್ಯಾನ್ ಎಂದೇ ಕರಿಸಿಕೊಳ್ಳುವ ರೋಹಿತ್ ಶರ್ಮಾ ಡಕ್‌ಔಟ್‌ಗೆ ಬಲಿಯಾದರೆ, ಆ ಪಂದ್ಯವನ್ನೇ ನೋಡಲು ಆಗದು. ಅಂತಹ ಮತ್ತೊಂದು ದಿನಕ್ಕೆ ಗುರುವಾರ ಸಾಕ್ಷಿಆಗಿದೆ.
2015ರಲ್ಲಿ ದೆಹಲಿಯ ಫಿರೋಜ್‌ಶಾ ಕೋಟ್ಲಾ ಸ್ಟೇಡಿಯಂನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿ ಸೊನ್ನೆ ಸುತ್ತಿದ್ದರು. ಅದರ ನಂತರ, ಈಗ ರೋಹಿತ್ ಶರ್ಮಾ ತವರಿನಲ್ಲಿ ಟೆಸ್ಟ್ ಆಡುವಾಗ ಸೊನ್ನೆ ಸುತ್ತಿದರು. ಇವರು ನಿರಾಸೆ ಅನುಭವಿಸಿದ್ದರಿಂದ ಭಾರತಕ್ಕೆ ಆರಂಭಿಕ ಹಿನ್ನಡೆ ಆಗಿದೆ.
ಕಪಿಲ್ ದಾಖಲೆ ಅಳಿಸಿದ ರೋಹಿತ್
ನಾಯಕನಾಗಿ ಔಟಾಗುವ ವಿಚಾರದಲ್ಲಿ ರೋಹಿತ್ ಶರ್ಮಾ ಕಪಿಲ್ ದೇವ್ ಅವರನ್ನು ದಾಖಲೆಯನ್ನು ಹಿಂದೆ ಬಿಟ್ಟಿದ್ದಾರೆ. ಈ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಹೆಸರು ನಂಬರ್ ಒನ್ ಸ್ಥಾನದಲ್ಲಿದೆ. ಇಲ್ಲಿಯವರೆಗೆ, ಅವರು ನಾಯಕನಾಗಿ 16 ಬಾರಿ ಅಂತಾರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಡಕ್ ಔಟ್ ಆಗಿದ್ದಾರೆ. ಸೌರವ್ ಗಂಗೂಲಿ 13 ಬಾರಿ ಮತ್ತು ಎಂಎಸ್ ಧೋನಿ 11 ಬಾರಿ ಇಂತಹ ಕರಾಳ ದಿನಕ್ಕೆ ಸಾಕ್ಷಿಯಾಗಿದ್ದಾರೆ. ಈಗ ರೋಹಿತ್ ಶರ್ಮಾ ಕೂಡ ಧೋನಿ ಸಾಲಿಗೆ ನಿಂತಿದ್ದಾರೆ. ರೋಹಿತ್ ಟೆಸ್ಟ್ ಕ್ರಿಕೆಟ್‌ನಲ್ಲಿ 11 ಬಾರಿ ಸೊನ್ನೆ ಸುತ್ತಿದ್ದಾರೆ. ನಾಯಕನಾಗಿ ಕಪಿಲ್ ದೇವ್ 10 ಬಾರಿ ಶೂನ್ಯ ಸಂಪಾದಿಸಿದ್ದಾರೆ.
ಪಂದ್ಯ ಹೇಗಿತ್ತು?
ನ್ಯೂಜಿಲೆಂಡ್ ಮೊದಲ ಇನಿಂಗ್ಸ್‌ನಲ್ಲಿ 259 ರನ್‌ಗಳಿಗೆ ಆಲೌಟ್ ಆಯಿತು. ಮೊದಲ ಇನಿಂಗ್ಸ್ ಆರಂಭಿಸಿರುವ ಭಾರತ 1 ವಿಕೆಟ್ ನಷ್ಟಕ್ಕೆ 16 ರನ್ ಕಲೆ ಹಾಕಿದೆ. ಭಾರತದ ಪರ ಯಶಸ್ವಿ ಜೈಸ್ವಾಲ್ ಹಾಗೂ ಶುಭಮನ್ ಗಿಲ್ ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದೆ. ಇನಿಂಗ್ಸ್ ಮುನ್ನಡೆ ಸಾಧಿಸಲು ಇನ್ನು ಭಾರತಕ್ಕೆ 243 ರನ್‌ಗಳ ಅವಶ್ಯಕತೆ ಇದೆ. ಗಿಲ್ ಹಾಗೂ ಜೈಸ್ವಾಲ್ ಸಮಯೋಚಿತ ಬ್ಯಾಟಿಂಗ್ ನಡೆಸಿ ದೊಡ್ಡ ಜೊತೆಯಾಟದ ಕಾಣಿಕೆ ನೀಡಬೇಕಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications