For Quick Alerts
ALLOW NOTIFICATIONS  
For Daily Alerts
 

IPL 2025 Auction: ಬಿಡ್ ಅಂಗಳಕ್ಕೆ ರೋಹಿತ್ ಕಾಲಿಟ್ಟರೆ ದಾಖಲೆಗಳೆಲ್ಲಾ ಉಡೀಸ್‌: ಎಷ್ಟು ಕೋಟಿಗೆ ಸೇಲ್ ಆಗ್ತಾರೆ ಗೊತ್ತಾ ಶರ್ಮಾ?

ಟೀಮ್ ಇಂಡಿಯಾ ಹಾಗೂ ಮುಂಬೈ ಇಂಡಿಯನ್ಸ್‌ ತಂಡದ ನಾಯಕ ರೋಹಿತ್ ಶರ್ಮಾ.. ಇತ್ತೀಚಿಗೆ ವೆಸ್ಟ್‌ ಇಂಡೀಸ್ ಹಾಗೂ ಅಮೆರಿಕದಲ್ಲಿ ನಡೆದ ಟಿ20 ವಿಶ್ವಕಪ್‌ನಲ್ಲಿ ಭಾರತ, 13 ವರ್ಷಗಳ ಬಳಿಕ ಟಿ20 ಟ್ರೋಫಿ ಎತ್ತುವಲ್ಲಿ ಪ್ರಮುಖ ಪಾತ್ರವಹಿಸಿದ ಆಟಗಾರ. ಇವರ ಮುಂದಾಳತ್ವದಲ್ಲೇ ಟೀಮ್ ಇಂಡಿಯಾ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದೆ. ಈ ಮೂಲಕ ರೋಹಿತ್‌ ಶರ್ಮಾ ತಮ್ಮಲ್ಲಿ ಇನ್ನು ಸಾಕಷ್ಟು ನಾಯಕತ್ವದ ಗುಣಗಳು ಇವೆ ಎಂಬುದನ್ನು ಸಾರಿ ಹೇಳಿದ್ದಾರೆ.

ಮುಂಬೈ ಇಂಡಿಯನ್ಸ್‌ ತಂಡದ ನಾಯಕರಾಗಿಯೂ ರೋಹಿತ್ ಶರ್ಮಾ ಅವೋಘ ಪ್ರದರ್ಶನ ನೀಡಿದ್ದಾರೆ. ಇವರ ಮುಂದಾಳತ್ವದಲ್ಲಿ ಮುಂಬೈ ಐದು ಬಾರಿ ಐಪಿಎಲ್‌ನಲ್ಲಿ ಚಾಂಪಿಯನ್‌ ಪಟ್ಟವನ್ನು ಅಲಂಕರಿಸಿದೆ. ಇವರಿಗೆ ಈಗ ವಯಸ್ಸು ಆಗುತ್ತಿದೆ. ಆದರೆ ಆಟದಲ್ಲಿನ ಪಕ್ವತೆ ದಿನಕಳೆದಂತೆ ಹೆಚ್ಚಾಗುತ್ತಿದೆ. ಇವರಲ್ಲಿನ ಛಲವನ್ನು ಅರಿಯುವಲ್ಲಿ ವಿಫಲವಾಗಿದ್ದ ಮುಂಬೈ 2024ರ ಐಪಿಎಲ್‌ನಲ್ಲಿ ತಂಡದ ನಾಯಕತ್ವದಿಂದ ಕೆಳಗಿಳಿಸಿತು.

Rohit Sharma Fetches 50 Crore in IPL 2025 Auction Delhi vs Lucknow Showdown

ಮುಂಬೈ ನಡೆ ಏನು?

ಮುಂಬೈ ಇಂಡಿಯನ್ಸ್‌ ತಂಡಕ್ಕೆ ಐದು ಬಾರಿ ಚಾಂಪಿಯನ್‌ ಪಟ್ಟಕ್ಕೇರಿಸಿದ ಆಟಗಾರನ ಅವಶ್ಯಕತೆ ಮುಂಬೈ ಮಾಲೀಕರಿಗೆ ಬೇಡವಾಯಿತು ಎಂದು ಅಭಿಮಾನಿಗಳು ಸಹ ಕಿಡಿ ಕಾರಿದರು. ಗುಜರಾತ್‌ ಟೈಟನ್ಸ್‌ ತಂಡದಿಂದ ಹಾರ್ದಿಕ್ ಪಾಂಡ್ಯ ಅವರನ್ನು ಮುಂಬೈ ದಾಖಲೆಯ ಮೊತ್ತಕ್ಕೆ ಟ್ರೇಡ್ ಮಾಡಿ ತಂಡಕ್ಕೆ ಬರಮಾಡಿಕೊಂಡಿತ್ತು. ಅಲ್ಲದೆ ಅವರಿಗೆ ತಂಡದ ನಾಯಕತ್ವವನ್ನು ಸಹ ನೀಡಿತ್ತು. ಇದರಿಂದ ಮುಂಬೈ ಛಾವಣಿಯಲ್ಲಿ ಅಸಮಾಧಾನದ ಹೊಗೆ ಆಡತೊಡಗಿತು.

ಐಪಿಎಲ್‌ 2024ರ ಆವೃತ್ತಿಯಲ್ಲಿ ಮುಂಬೈ ಪ್ಲೇ ಆಫ್‌ ಪ್ರವೇಶಿಸುವಲ್ಲೂ ವಿಫಲವಾಯಿತು. ಇದಕ್ಕೆ ಅಭಿಮಾನಿಗಳು ಮ್ಯಾನೇಜ್ಮೆಂಟ್ ವಿರುದ್ಧ ಕೆಂಡ ಕಾರಿದರು. ಈ ಮಧ್ಯೆ ರೋಹಿತ್‌ ಶರ್ಮಾ ಬೇರೆ ತಂಡಗಳಿಗೆ ನಾಯಕರಾಗಿ ಹೋಗುತ್ತಾರೆ ಎಂಬ ಊಹಾಪೋಹಗಳು ಸಹ ಕೇಳಿ ಬಂದಿದ್ದವು. ಆದರೆ ಅದು ನಿಜವಾಗಲಿಲ್ಲ.

Rohit Sharma Fetches 50 Crore in IPL 2025 Auction Delhi vs Lucknow Showdown

ಮುಂಬೈ ಕೈ ಬಿಟ್ಟರೆ..

ಮುಂಬೈ ಇಂಡಿಯನ್ಸ್‌ ತಂಡದ ಭಾಗವಾಗಿರುವ ರೋಹಿತ್ ಶರ್ಮಾ ಅವರನ್ನು ಮುಂಬೈ ರಿಟೇನ್ ಮಾಡಿಕೊಳ್ಳುತ್ತದೆಯೋ, ಇಲ್ಲವೋ ಇನ್ನು ತಿಳಿದಿಲ್ಲ. ಒಂದು ವೇಳೆ ಮುಂಬೈ ಇಂಡಿಯನ್ಸ್ ರೋಹಿತ್ ಶರ್ಮಾ ಅವರನ್ನು ಕೈ ಬಿಟ್ಟಿದ್ದೇ ಆದಲ್ಲಿ, ಹಾರುಜು ಅಂಗಳದಲ್ಲಿ ರೋಹಿತ್‌ ಶರ್ಮಾ ಅವರಿಗೆ ರೆಡ್‌ ಕಾರ್ಪೆಟ್‌ ಸ್ವಾಗತ ಸಿಗುವುದಂತೂ ಪಕ್ಕಾ.

ದಾಖಲೆಗಳೆಲ್ಲಾ ಉಡೀಸ್‌

ಐಪಿಎಲ್‌ ಹರಾಜು ಅಂಗಳಕ್ಕೆ ರೋಹಿತ್ ಶರ್ಮಾ ಎಂಟ್ರಿ ನೀಡಿದ್ದೇ ಆದಲ್ಲಿ, ಹಳೆಯ ದಾಖಲೆಗಳೆಲ್ಲಾ ಪೀಸ್‌ ಪೀಸ್‌ ಆಗುತ್ತವೆ. ಇವರ ಸ್ಟಾರ್ ವ್ಯಾಲ್ಯೂ ಹಾಗೂ ಇವರ ನಾಯಕತ್ವದ ಗುಣಗಳ ಉಪಯೋಗ ಪಡೆಯಲು ತಂಡಗಳು ಸಹ ಪ್ಲ್ಯಾನ್ ಮಾಡಿಕೊಂಡಿವೆ. ಒಂದು ವೇಳೆ ರೋಹಿತ್‌ ಅವರಿಗೆ ಹರಾಜು ಅಂಗಳಕ್ಕೆ ಬಿಟ್ಟಿದ್ದೇ ಆದಲ್ಲಿ, ಡೆಲ್ಲಿ ಹಾಗೂ ಲಕ್ನೋ ಮಧ್ಯೆ ಈ ಪ್ಲೇಯರ್ ಕೊಂಡುಕೊಳ್ಳಲು ಭಾರೀ ಫೈಟ್‌ ನಡೆಯಲಿದೆ.

Rohit Sharma Fetches 50 Crore in IPL 2025 Auction Delhi vs Lucknow Showdown

ರೋಹಿತ್‌ ಶರ್ಮಾ ಅವರನ್ನು ತಮ್ಮ ತಂಡಕ್ಕೆ ಸೇರಿಸಿಕೊಳ್ಳಲು ಡೆಲ್ಲಿ ಕ್ಯಾಪಿಟಲ್ಸ್‌, ಲಕ್ನೋ ಸೂಪರ್‌ ಜೈಂಟ್ಸ್ ತಂಡದ ಮಾಲೀಕರು ಭರ್ಜರಿ ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಬಿಡ್ ಅಂಗಳಕ್ಕೆ ಹಿಟ್‌ ಮ್ಯಾನ್‌ ಎಂಟ್ರಿ ಕೊಟ್ಟಲ್ಲಿ ಇವರಿಗಾಗಿ 50 ಕೊಟಿ ರೂಪಾಯಿಗಳನ್ನು ಎತ್ತಿಡಲು ಡೆಲ್ಲಿ, ಲಕ್ನೋ ತಂಡಗಳಯ ಯೋಜನೆ ರೂಪಿಸಿಕೊಂಡಿವೆ ಎಂದು ಮೂಲಗಳು ತಿಳಿಸಿವೆ.

ಉಭಯ ತಂಡಕ್ಕೂ ಬೇಕು ಕ್ಯಾಪ್ಟನ್‌

ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಲಕ್ನೋ ಸೂಪರ್ ಜೆಂಟ್ಸ್ ತಂಡಗಳಿಗೆ ನಾಯಕನ ಅವಶ್ಯಕತೆ ಇದೆ. ಓಪನಿಂಗ್ ಬ್ಯಾಟಿಂಗ್ ಹಾಗೂ ನಾಯಕ ಸಿಗುವುದಾದರೆ ತಂಡಗಳು ಹಣದ ಹೊಳೆಯನ್ನು ಹರಿಸುವ ಸಾಧ್ಯತೆ ಇದೆ. ಬರೀ ಈ ಎರಡು ತಂಡಗಳು ಅಷ್ಟೇ ಅಲ್ಲಾ ಆರ್‌ಸಿಬಿ ಸೇರಿದಂತೆ ಎಲ್ಲ ತಂಡಗಳು ಭಾಜಿ ಅಂಗಳದಲ್ಲಿ ಹಣದ ಹೊಳೆಯನ್ನು ಹರಿಸಲಿವೆ.

Story first published: Sunday, August 25, 2024, 8:04 [IST]
Other articles published on Aug 25, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+