Rohit Sharma ದೇಶಕ್ಕಾಗಿ ಏಕದಿನ ವಿಶ್ವಕಪ್ ಗೆಲ್ಲುವುದೇ ಗುರಿ ಎಂದು ರೋಹಿತ್ ಶರ್ಮಾ
ಟೀಮ್ ಇಂಡಿಯಾ ಸದ್ಯ ಟಿ20 ವಿಶ್ವಕಪ್‌ನಲ್ಲಿ ಆಡುತ್ತಿದೆ. ಆಡಿದ ಮೊದಲ ಪಂದ್ಯದಲ್ಲಿ ಭರ್ಜರಿ ಜಯ ದಾಖಲಿಸಿರುವ ಭಾರತ, ಗುರುವಾರ ನಮೀಬಿಯಾ ವಿರುದ್ಧ ಪಂದ್ಯವನ್ನು ಆಡಲಿದೆ. ಈ ಮೂಲಕ ವಿಶ್ವಕಪ್‌ನಲ್ಲಿ ತನ್ನ ಅಭಿಯಾನವನ್ನು ಭರ್ಜರಿಯಾಗಿ ಆರಂಭಿಸಲು ಪ್ಲ್ಯಾನ್ ಮಾಡಿಕೊಂಡಿದೆ. ಟೀಮ್ ಇಂಡಿಯಾ ಹಾಲಿ ಚಾಂಪಿಯನ್ ಪಟ್ಟದೊಂದಿಗೆ ಕಣಕ್ಕೆ ಇಳಿಯಲಿದೆ. ಭಾರತಕ್ಕೆ ಚಾಂಪಿಯನ್ ಪಟ್ಟವನ್ನು ತೊಡಿಸಿದ ನಾಯಕ ರೋಹಿತ್ ಶರ್ಮಾ, ಟಿ20 ಕ್ರಿಕೆಟ್‌ಗೆ ಗುಡ್ ಬಾಯ್ ಹೇಳಿದ್ದಾರೆ. ಆದರೆ ಇವರು ಭಾರತದ ಪರ ಏಕದಿನ ಕ್ರಿಕೆಟ್ ಆಡುತ್ತಿದ್ದಾರೆ.
ರೋಹಿತ್ ಶರ್ಮಾ 2027ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್‌ನಲ್ಲಿ ಭಾರತ ತಂಡದಲ್ಲಿ ಸ್ಥಾನ ಪಡೆಯುವ ಕನಸು ಕಾಣುತ್ತಿದ್ದಾರೆ. ಈ ಮಧ್ಯೆ ಇವರು ಈ ಫಾರ್ಮೆಟ್‌ಗೂ ನಿವೃತ್ತಿ ಹೊಂದುತ್ತಾರೆ ಎಂಬು ಊಹಾಪೋಹಗಳು ಇದ್ದವು. ಈ ಎಲ್ಲದಕ್ಕೂ ರೋಹಿತ್ ತೆರೆ ಎಳೆದಿದ್ದಾರೆ. ಏಕದಿನ ವಿಶ್ವಕಪ್‌ನಲ್ಲಿ ಭಾಗವಹಿಸುವ ಬಗ್ಗೆ ರೋಹಿತ್ ದೊಡ್ಡ ಹೇಳಿಕೆ ನೀಡಿದ್ದಾರೆ.

ಮುಂದಿನ ಬಾರಿಯ ಏಕದಿನ ವಿಶ್ವಕಪ್‌ನ್ನು ದಕ್ಷಿಣ ಆಫ್ರಿಕಾ, ಜಿಂಬಾಬ್ವೆ ಮತ್ತು ನಮೀಬಿಯಾ ಆಯೋಜಿಸಲಿವೆ. ಈ ವಿಶ್ವಕಪ್ ಹೊತ್ತಿಗೆ ರೋಹಿತ್‌ಗೆ 40 ವರ್ಷ ಆಗಿರುತ್ತದೆ. ಆದಾಗ್ಯೂ ರೋಹಿತ್ ತಂಡದೊಂದಿಗೆ ಇರಲು ಬಯಸಿದ್ದು, ವಿಶ್ವಕಪ್ ಟ್ರೋಫಿಯನ್ನು ಎತ್ತುವುದು ತಮ್ಮ ಗುರಿ ಎಂದು ಸ್ಪಷ್ಟಪಡಿಸಿದ್ದಾರೆ. ಮತ್ತು ಅದಕ್ಕಾಗಿ ಫಿಟ್ ಆಗಿರಲು ಅವರು ಶ್ರಮಿಸಲು ಸಿದ್ಧರಿದ್ದಾರೆ ಎಂದು ತಿಳಿಸಿದ್ದಾರೆ.
ಕಾಡುವ ಕನಸು
ನಾನು ಏಕದಿನ ವಿಶ್ವಕಪ್ ನೋಡುತ್ತಾ ಬೆಳೆದಿದ್ದೇನೆ. ಆಗ ಟಿ20 ವಿಶ್ವಕಪ್ ಅಥವಾ ಐಪಿಎಲ್ ಇರಲಿಲ್ಲ. ಏಕದಿನ ವಿಶ್ವಕಪ್ ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ನಡೆಯುತ್ತದೆ. ನಾನು ಖಂಡಿತವಾಗಿಯೂ ಭಾರತ ತಂಡದೊಂದಿಗೆ ಏಕದಿನ ವಿಶ್ವಕಪ್‌ಗೆ ಪ್ರಯಾಣ ಬೆಳೆಸುವೆ. ಅಲ್ಲದೆ ದೇಶಕ್ಕಾಗಿ ವಿಶ್ವಕಪ್ ಗೆಲ್ಲಲು ಬಯಸುತ್ತೇನೆ. ಅದು ನನ್ನ ಕನಸು ಎಂದು ರೋಹಿತ್ ತಿಳಿಸಿದ್ದಾರೆ.
ಚಿಕ್ಕ ವಯಸ್ಸಿನಿಂದಲೂ ನಾನು 50 ಓವರ್‌ಗಳ ವಿಶ್ವಕಪ್ ಗೆಲ್ಲುವ ಕನಸು ಕಂಡಿದ್ದೆ. ಆ ಒಂದು ಟ್ರೋಫಿಗಾಗಿ ನಾನು ಕಾಯುತ್ತಿರುವೆ. ನನಗೆ ಆ ಟ್ರೋಫಿ ಬೇಕು. ಅದಕ್ಕಾಗಿ ಶ್ರಮಿಸಲು ಸಿದ್ಧ ಎಂದು ಹೇಳಿದ್ದಾರೆ. ರೋಹಿತ್ ಶರ್ಮಾ ಅವರು ಭಾರತ ಹಾಗೂ ಶ್ರೀಲಂಕಾದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್‌ನ ರಾಯಭಾರಿ ಆಗಿದ್ದಾರೆ.
ಟೀಮ್ ಇಂಡಿಯಾದ ಇಬ್ಬರು ಸೂಪರ್ ಸ್ಟಾರ್‌ಗಳಾದ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಟಿ20 ಹಾಗೂ ಟೆಸ್ಟ್ ಪಂದ್ಯಗಳಲ್ಲಿ ಆಡದಿರುವುದರಿಂದ ಅವರನ್ನು ಬಿಸಿಸಿಐ ಕೇಂದ್ರ ಗುತ್ತಿಗೆ ಒಪ್ಪಂದದಲ್ಲಿ ಹಿಂಬಡ್ತಿ ನೀಡಿತ್ತು. ಈ ಹಿಂದೆ ಈ ಇಬ್ಬರೂ ಆಟಗಾರರು ಎ ಪ್ಲಸ್ ಕ್ಯಾಟಗಿರಿಯಲ್ಲಿ ಇದ್ದರು. ನೂತನ ಒಪ್ಪಂದದಲ್ಲಿ ಇವರನ್ನು ಬಿ ಗ್ರೇಡ್‌ಗೆ ಇಳಿಸಲಾಗಿದೆ. ಮಂಡಳಿಯು ಒಟ್ಟು 30 ಪುರುಷ ಮತ್ತು 21 ಮಹಿಳಾ ಕ್ರಿಕೆಟಿಗರಿಗೆ ಒಪ್ಪಂದಗಳನ್ನು ನೀಡಿದೆ. ಅಲ್ಲದೆ ಈ ಆಟಗಾರರನ್ನು ಬಿಸಿಸಿಐ ಎ, ಬಿ, ಸಿ ಎಂದ ವಿಭಾಗಗಳಲ್ಲಿ ವಿಂಗಡಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications