ಭಾರತ vs ಆಸ್ಟ್ರೇಲಿಯಾ: ಸಿಡ್ನಿಯಲ್ಲಿ ಅಭ್ಯಾಸ ಆರಂಭಿಸಿದ ರೋಹಿತ್ ಶರ್ಮಾ

ಸಿಡ್ನಿ: ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಟೀಮ್ ಇಂಡಿಯಾಕ್ಕೀಗ ಆನೆ ಬಲ ಬಂದಂತಾಗಿದೆ. ಭಾರತದ ಪ್ರಮುಖ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ ಅವರು ಮೂರನೇ ಟೆಸ್ಟ್ ಸಲುವಾಗಿ ಅಭ್ಯಾಸ ಆರಂಭಿಸಿದ್ದಾರೆ. ಸಿಡ್ನಿಯಲ್ಲಿ ನಡೆದ ತಂಡದ ಮೊದಲ ಅಭ್ಯಾಸದಲ್ಲಿ ರೋಹಿತ್ ಪಾಲ್ಗೊಂಡಿದ್ದಾರೆ.
ಡಿಸೆಂಬರ್ 30ರ ಬುಧವಾರಕ್ಕೆ ರೋಹಿತ್ ಅವರ 14 ದಿನಗಳ ಕ್ವಾರಂಟೈನ್ ಮುಕ್ತಾಯಗೊಂಡಿದೆ. ಹೀಗಾಗಿ ಬುಧವಾರವೇ ಹಿಟ್‌ಮ್ಯಾನ್ ರೋಹಿತ್ ಅವರು ತಂಡದ ಆಟಗಾರರನ್ನು ಜೊತೆ ಸೇರಿದ್ದರು. ಮರುದಿನದಿಂದ ರೋಹಿತ್ ಅಭ್ಯಾಸ ಆರಂಭವಾಗಿದೆ. ಐಪಿಎಲ್ ವೇಳೆ ಗಾಯಕ್ಕೀಡಾಗಿದ್ದ ರೋಹಿತ್, ಆಸ್ಟ್ರೇಲಿಯಾ ಪ್ರವಾಸದಿಂದ ಹೊರಗಿದ್ದರು.
ರೋಹಿತ್ ಅಭ್ಯಾಸ ನಡೆಸುತ್ತಿರುವ ಫೋಟೋ ಹಂಚಿಕೊಂಡಿದ್ದ ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ), 'ಇಂಜಿನ್ ಈಗಷ್ಟೇ ಚಾಲೂ ಆಗಿದೆ. ಅದರ ಒಂದಿಷ್ಟು ಚಿತ್ರಣ ಇಲ್ಲಿದೆ,' ಎಂದು ಬರೆದುಕೊಂಡಿತ್ತು.
ನಾಲ್ಕು ಪಂದ್ಯಗಳ ಟೆಸ್ಟ್ ಸರಣಿ 1-1ರಿಂದ ಸಮಬಲಗೊಂಡಿರುವುದರಿಂದ ಸರಣಿ ಕುತೂಹಲ ಮೂಡಿಸಿದೆ. ತೃತೀಯ ಪಂದ್ಯ ಜನವರಿ 7ರ ಗುರುವಾರ ಸಿಡ್ನಿ ಕ್ರಿಕೆಟ್ ಗ್ರೌಂಡ್‌ನಲ್ಲಿ 5 AMಗೆ ಆರಂಭಗೊಳ್ಳಲಿದೆ. ಮೂರನೇ ಪಂದ್ಯದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಪ್ರಮುಖ ಬದಲಾವಣೆಗಳನ್ನು ಮಾಡಿಕೊಳ್ಳಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications