For Quick Alerts
ALLOW NOTIFICATIONS  
For Daily Alerts
 

Rohit Sharma: ಬಾಂಗ್ಲಾ ಆಟಗಾರನಿಗೆ ಅವರದ್ದೇ ಧಾಟಿಯಲ್ಲಿ ಕಾಲೆಳೆದ ಹಿಟ್ ಮ್ಯಾನ್

ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ತಮ್ಮ ತಮಾಷೆಯ ಸ್ವಭಾವದಿಂದಾಗಿ ಆಗಾಗ್ಗೆ ವೈರಲ್ ಆಗುತ್ತಿರುತ್ತಾರೆ.ಹಲವು ದಿನಗಳಿಂದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ನಡುವಿನ ಗೆಳೆತನದ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದೆ. ಈಗ ಕೊಹ್ಲಿ ಸಹವಾಸದ ಪರಿಣಾಮ ಹಿಟ್‌ಮ್ಯಾನ್‌ನಲ್ಲೂ ಕಾಣಿಸುತ್ತಿದೆ. ಬಾಂಗ್ಲಾದೇಶದ ಆಟಗಾರನಿಗೆ ಕೊಹ್ಲಿ ರೀತಿಯಲ್ಲಿ ರೋಹಿತ್ ಶರ್ಮಾ ಕಾಲೆಳೆದಿರುವ ವಿಡಿಯೋ ವೈರಲ್ ಆಗುತ್ತಿದೆ.

ವಿಶ್ವ ಕ್ರಿಕೆಟ್‌ನಲ್ಲಿ ವಿರಾಟ್ ಕೊಹ್ಲಿಯಷ್ಟು ಆಕ್ರಮಣಕಾರಿ ಆಟಗಾರ ಮತ್ತೊಬ್ಬರಿಲ್ಲ. ಮೈದಾನದಲ್ಲಿ ಕೊಹ್ಲಿ ಯಾವಾಗಲೂ ಆಕ್ರಮಣಕಾರಿ ಮನೋಭಾವದಿಂದ ಆಡುತ್ತಾರೆ. ಅವರ ವಿರುದ್ಧ ಬೌಲಿಂಗ್ ಮಾಡುವ ಬೌಲರ್‌ಗಳು ವಿಕೆಟ್ ಪಡೆದಾಗಲೂ ಸಂಭ್ರಮಿಸಲು ಹಿಂದೆ-ಮುಂದೆ ನೋಡುತ್ತಾರೆ. ಏಕೆಂದರೆ ಕೊಹ್ಲಿ ಕೆಣುಕುವುದು ಸರಿಯಲ್ಲ ಎಂಬುದು ಎದುರಾಳಿ ತಂಡದ ಆಟಗಾರರಿಗೆ ತಿಳಿದಿದೆ.

Rohit Sharma gets revenge against Mehidi Hasan Mirage

ಆಗಿದ್ದೇನು?

ಕಾನ್ಪುರದಲ್ಲಿ ಬಾಂಗ್ಲಾದೇಶ ವಿರುದ್ಧ ಎರಡನೇ ಟೆಸ್ಟ್ ಪಂದ್ಯದ ವೇಳೆ ಕೊಹ್ಲಿಯಂತೆ ರೋಹಿತ್ ವರ್ತಿಸಿದ್ದಾರೆ. ಅಷ್ಟಕ್ಕೂ ಅವರು ಕೊಹ್ಲಿಯಂತೆ ವರ್ತಿಸಲು ಮುಖ್ಯ ಕಾರಣವೂ ಇದೆ. ಕಾನ್ಪುರ ಟೆಸ್ಟ್‌ನ ನಾಲ್ಕನೇ ದಿನ ಭಾರತದ ಬ್ಯಾಟರ್‌ಗಳು ಮೊದಲನೇ ಇನ್ನಿಂಗ್ಸ್‌ನಲ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡುವ ಮೂಲಕ ದಾಖಲೆಗಳನ್ನು ಬರೆದಿದ್ದರು.

ಈ ವೇಳೆ ರೋಹಿತ್ ಶರ್ಮಾ ಭಾರತ ತಂಡಕ್ಕೆ ಉತ್ತಕ ಆರಂಭ ನೀಡಿದ್ದರು. ಹಿಟ್‌ ಮ್ಯಾನ್ 11 ಎಸೆತಗಳಲ್ಲಿ 1 ಬೌಂಡರಿ ಹಾಗೂ 3 ಸಿಕ್ಸರ್ ನೆರವಿನಿಂದ 23 ರನ್ ಗಳಿಸಿ ಅದ್ಭುತವಾಗಿ ಆಡುತ್ತಿದ್ದರು. ಆದರೆ ಮೆಹಿದಿ ಹಸನ್ ಮಿರಾಜ್ ಸ್ಪಿನ್ ಬೌಲಿಂಗ್‌ನಲ್ಲಿ ಚೆಂಡನ್ನು ತಪ್ಪಿಸಿಕೊಂಡ ರೋಹಿತ್ ಅವರು ಕ್ಲೀನ್ ಬೌಲ್ಡ್ ಆದರು. ಇತ್ತ ರೋಹಿತ್ ವಿಕೆಟ್ ಪಡೆಯುವುದತ್ತಿದ್ದಂತೆ ಅವರತ್ತ ಮೆಹದಿ ಬೆರಳು ತೋರಿಸಿ ಸಂಭ್ರಮಿಸಿದರು. ಈ ಸಂಭ್ರಮಾಚರಣೆ ಹಿಟ್‌ಮ್ಯಾನ್‌ ಸಿಡಿಮಿಡಿಗೊಳ್ಳುವಂತೆ ಮಾಡಿತ್ತು.

ಇದಾದ ಬಳಿಕ ಎರಡನೇ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್‌ಗೆ ಬಂದ ಮೆಹಿದಿ ಹಸನ್ ಮಿರಾಜ್ ಅವರನ್ನು ಟೀಮ್ ಇಂಡಿಯಾ ವೇಗಿ ಜಸ್ಪ್ರೀತ್ ಬುಮ್ರಾ ಔಟ್ ಮಾಡಿದರು. ಈ ಸಂದರ್ಭದಲ್ಲಿ ಮೆಹಿದಿ ಹಸನ್ ಮಿರಾಜ್‌ಗೆ ಅವರದ್ದೇ ಧಾಟಿಯಲ್ಲಿ ಹಿಟ್ ಮ್ಯಾನ್ ಕಾಲೆಳೆದಿದರು. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ರೋಹಿತ್ ಶರ್ಮಾ ಆಕ್ರಮಣಕಾರಿ ಸಂಭ್ರಮಾಚರಣೆಗೆ ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಅಭಿಮಾನಿಗಳು ಕೊಹ್ಲಿ ಸಹವಾಸದಿಂದ ರೋಹಿತ್ ಶರ್ಮಾ ಅವರಂತೆ ಆಕ್ರಮಣಕಾರಿಯಾಗಿದ್ದಾರೆ ಎಂದು ಕಮೆಂಟ್‌ಗಳನ್ನು ಮಾಡುತ್ತಿದ್ದಾರೆ.

ಕ್ಲೀನ್ ಸ್ವೀಪ್

ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಯನ್ನು ಟೀಮ್ ಇಂಡಿಯಾ 2-0 ಅಂತರದಲ್ಲಿ ವಶಪಡಿಸಿಕೊಂಡಿದೆ. ಸ್ಪಿನ್ ಮಾಸ್ಟರ್ ರವಿಚಂದ್ರನ್ ಅಶ್ವಿನ್ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದರು. ಅಶ್ವಿನ್ 2 ಟೆಸ್ಟ್ ಪಂದ್ಯಗಳಲ್ಲಿ 11 ವಿಕೆಟ್‌ಗಳನ್ನು ಕಬಳಿಸುವ ಮೂಲಕ ಅದ್ಭುತ ಪ್ರದರ್ಶನ ನೀಡಿದರು. ಇದಲ್ಲದೇ ಅಶ್ವಿನ್ ಮೊದಲ ಇನ್ನಿಂಗ್ಸ್ ನಲ್ಲಿ ಶತಕ ಸಿಡಿಸುವ ಮೂಲಕ ಟೀಮ್ ಇಂಡಿಯಾವನ್ನು ಸಂಕಷ್ಟದಿಂದ ಹೊರ ತಂದಿದ್ದರು. ಇವರೊಂದಿಗೆ ಯಶಸ್ವಿ ಜೈಸ್ವಾಲ್, ಶುಭಮನ್ ಗಿಲ್, ರವೀಂದ್ರ ಜಡೇಜಾ, ಜಸ್ಪ್ರೀತ್ ಬುಮ್ರಾ ಮತ್ತು ರಿಷಬ್ ಪಂತ್ ಟೀಮ್ ಇಂಡಿಯಾ ಗೆಲುವಿಗೆ ಕೊಡುಗೆ ನೀಡಿದರು.

Story first published: Thursday, October 3, 2024, 17:53 [IST]
Other articles published on Oct 3, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+