T20 World Cup 2024: ಒಂದು ಅವಕಾಶಕ್ಕಾಗಿ ಬೆಂಚ್ ಕಾಯುತ್ತಿರುವ ಟೀಮ್ ಇಂಡಿಯಾ ಪ್ರತಿಭೆ; ಚಾನ್ಸ್ ಕೊಡ್ತಾರಾ ರೋಹಿತ್ ಶರ್ಮಾ?
ಜೂನ್ 13 ಗುರುವಾರ, ರೋಹಿತ್ ಶರ್ಮಾ ನಾಯಕತ್ವದ ಟೀಮ್ ಇಂಡಿಯಾ ಟಿ20 ವಿಶ್ವಕಪ್ 2024ರ ಗುಂಪು ಹಂತದಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿಸಿದೆ. ಬುಧವಾರ ನಡೆದ ಟಿ20 ವಿಶ್ವಕಪ್ ಪಂದ್ಯದಲ್ಲಿ ಭಾರತ ತಂಡ 10 ಎಸೆತಗಳು ಬಾಕಿ ಇರುವಂತೆಯೇ ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾ (ಯುಎಸ್‌ಎ) ವಿರುದ್ಧ 7 ವಿಕೆಟ್‌ಗಳಿಂದ ಜಯಗಳಿಸಿತು.
ಈ ಗೆಲುವಿನೊಂದಿಗೆ ಟೀಮ್ ಇಂಡಿಯಾ ಸೂಪರ್-8 ಗೆ ಅಧಿಕೃತವಾಗಿ ಅರ್ಹತೆ ಪಡೆದಿದೆ. ಆದರೆ ಈ ಒಂದು ದೊಡ್ಡ ದೌರ್ಬಲ್ಯವು ಮುಂಬರುವ ಪಂದ್ಯಗಳಲ್ಲಿ ಟೀಮ್ ಇಂಡಿಯಾಕ್ಕೆ ದುಬಾರಿಯಾಗಬಹುದು. ಬಲಿಷ್ಠ ತಂಡಗಳ ವಿರುದ್ಧದ ಪಂದ್ಯಗಳಲ್ಲಿ ಭಾರತ ತಂಡವು ಈ ದೌರ್ಬಲ್ಯದಿಂದ ಪಂದ್ಯವನ್ನು ಕಳೆದುಕೊಳ್ಳಬೇಕಾಗಬಹುದು.

ಟೀಮ್ ಇಂಡಿಯಾದ ಆಟಗಾರನೊಬ್ಬನ ಪ್ರತಿಭೆ ಕೇವಲ ಬೆಂಚ್ ಮೇಲೆ ಕುಳಿತು ವ್ಯರ್ಥವಾಗುತ್ತಿದೆ. ನಾಯಕ ರೋಹಿತ್ ಶರ್ಮಾ ಇಲ್ಲಿಯವರೆಗೆ 2024ರ ಟಿ 20 ವಿಶ್ವಕಪ್‌ನಲ್ಲಿ ಆಡಿದ ಮೂರು ಪಂದ್ಯಗಳಲ್ಲಿ ಪ್ಲೇಯಿಂಗ್-11 ನಿಂದ ಈ ಸ್ಪೋಟಕ ಬ್ಯಾಟರ್‌ನನ್ನು ಹೊರಗಿಟ್ಟಿದ್ದಾರೆ.
ಸ್ಫೋಟಕ ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್ ಅವರು ಮೊದಲ 6 ಓವರ್‌ಗಳಲ್ಲಿ (ಪವರ್ ಪ್ಲೇ) ಪಂದ್ಯವನ್ನು ತಿರುವಿ ಹಾಕುವಲ್ಲಿ ಹೆಸರುವಾಸಿಯಾಗಿದ್ದಾರೆ. ಆದರೆ ಪ್ರಸ್ತುತ ಟಿ20 ವಿಶ್ವಕಪ್‌ನಲ್ಲಿ ನಾಯಕ ರೋಹಿತ್ ಶರ್ಮಾ ಜೈಸ್ವಾಲ್ ಅವರನ್ನು ಪ್ಲೇಯಿಂಗ್-11 ನಲ್ಲಿ ಇನ್ನೂ ಆಡುವ ಅವಕಾಶ ನೀಡಿಲ್ಲ. ಇದೀಗಾ ಏಕೆ ರೋಹಿತ್ ಶರ್ಮಾ ಜೈಸ್ವಾಲ್‌ಗೆ ಅವಕಾಶ ನೀಡಿಲ್ಲ ಎಂಬುದು ಚರ್ಚೆಗೆ ದಾರಿ ಮಾಡಿ ಕೊಟ್ಟಿದೆ.

ಟಿ20 ವಿಶ್ವಕಪ್‌ನಲ್ಲಿ ಇಲ್ಲಿಯವರೆಗೆ ಆಡಿದ ಮೂರು ಪಂದ್ಯಗಳಲ್ಲಿ ರೋಹಿತ್ ಶರ್ಮಾ ಅವರೊಂದಿಗೆ ಅನುಭವಿ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಆರಂಭಿಕನಾಗಿ ಕಣಕ್ಕೀಳಿಯುತ್ತಿದ್ದಾರೆ.
ವಿರಾಟ್ ಕೊಹ್ಲಿ ಇದುವರೆಗಿನ ಆರಂಭಿಕನಾಗಿ ಫ್ಲಾಪ್ ಆಗಿದ್ದಾರೆ. ವಿರಾಟ್ ಕೊಹ್ಲಿ ಮೂರು ಇನ್ನಿಂಗ್ಸ್‌ಗಳಲ್ಲಿ 1, 4 ಮತ್ತು 0 ರನ್ ಗಳಿಸಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಯಶಸ್ವಿ ಜೈಸ್ವಾಲ್ ಬೆಂಚ್‌ನಲ್ಲಿ ಕುಳಿತು ಪಂದ್ಯ ನೋಡುತ್ತಿದ್ದಾರೆ.
ಇನ್ನಾದರೂ ರೋಹಿತ್ ಶರ್ಮಾ ಎಚ್ಚೆತ್ತುಕೊಂಡು ಸೂಪರ್-8ರಲ್ಲಿ ಬಲಿಷ್ಠ ತಂಡಗಳ ವಿರುದ್ಧದ ಪಂದ್ಯಗಳಲ್ಲಿ ಯಶಸ್ವಿ ಜೈಸ್ವಾಲ್ ಅವರನ್ನು ಆರಂಭಿಕರಾಗಿ ಕಣಕ್ಕಿಳಿಸಬೇಕು. ಇಲ್ಲದಿದ್ದರೆ ಟೀಮ್ ಇಂಡಿಯಾ ದೊಡ್ಡ ಬೆಲೆ ತೆರಬೇಕಾಗಬಹುದು.
ವಿರಾಟ್ ಕೊಹ್ಲಿ 3ನೇ ಕ್ರಮಾಂಕದಲ್ಲಿ ಆಡಬೇಕು
ಸೂಪರ್-8ರಲ್ಲಿ ದೊಡ್ಡ ತಂಡಗಳ ವಿರುದ್ಧದ ಪಂದ್ಯದಲ್ಲಿ ಯಶಸ್ವಿ ಜೈಸ್ವಾಲ್ ಅವರನ್ನು ಆರಂಭಿಕರಾಗಿ ಕಣಕ್ಕಿಳಿಸುವುದಲ್ಲದೆ, ರೋಹಿತ್ ಶರ್ಮಾ ಮತ್ತೊಮ್ಮೆ ವಿರಾಟ್ ಕೊಹ್ಲಿಗೆ 3ನೇ ಸ್ಥಾನದಲ್ಲಿ ಅವಕಾಶ ನೀಡಬೇಕಾಗಿದೆ.
ಮತ್ತೊಂದೆಡೆ ಶಿವಂ ದುಬೆ ಅಥವಾ ರವೀಂದ್ರ ಜಡೇಜಾ ಅವರನ್ನು ಟೀಮ್ ಇಂಡಿಯಾದ ಪ್ಲೇಯಿಂಗ್-11 ನಿಂದ ಕೈಬಿಡಬೇಕಾಗುತ್ತದೆ. ಅಕ್ಷರ್ ಪಟೇಲ್ ಸ್ಪಿನ್ ಆಲ್ ರೌಂಡರ್ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ.
ಯಶಸ್ವಿ ಜೈಸ್ವಾಲ್ ಓಪನಿಂಗ್ ಬಂದರೆ ಮೊದಲ ಎಸೆತದಿಂದಲ್ಲೇ ಬೌಲರ್ ಮೇಲೆ ಒತ್ತಾಡ ಹೇರಬಹುದು. ಇಂತಹ ಪರಿಸ್ಥಿತಿಯಲ್ಲಿ ರೋಹಿತ್ ಶರ್ಮಾಗೆ ಇನ್ನೊಂದು ತುದಿಯಲ್ಲಿ ಸೆಟ್ ಹಾಕುವ ಅವಕಾಶ ಸಿಗಲಿದೆ.
ಜೈಸ್ವಾಲ್ ಪಂದ್ಯದ ದಿಕ್ಕನ್ನೇ ಬದಲಿಸಬಲ್ಲರು
ಯಶಸ್ವಿ ಜೈಸ್ವಾಲ್ ಅವರು ಶುರುವಿನಿಂದಲ್ಲೇ ಅಬ್ಬರಿಸುವುದರಿಂದ ರೋಹಿತ್ ಶರ್ಮಾ ಅವರ ಮೇಲೆ ಇರುವ ಒತ್ತಡವನ್ನು ತೆಗೆದುಹಾಕುತ್ತಾರೆ. ಇದರೊಂದಿಗೆ ವಿರಾಟ್ ಕೊಹ್ಲಿ ಮತ್ತೆ 3ನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡುವ ಮೂಲಕ ಫಾರ್ಮ್‌ಗೆ ಮರಳಬಹುದು.
ಭಾರತದ ಪರ ಟಿ20 ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ವಿರಾಟ್ ಕೊಹ್ಲಿ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವಾಗ ಸಾಕಷ್ಟು ರನ್ ಗಳಿಸಿದ್ದಾರೆ. ವಿರಾಟ್ ಕೊಹ್ಲಿ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಭಾರತ ಪರ 4042 ರನ್ ಗಳಿಸಿದ್ದಾರೆ. ಈ ಅವಧಿಯಲ್ಲಿ ವಿರಾಟ್ ಕೊಹ್ಲಿ 1 ಶತಕ ಮತ್ತು 37 ಅರ್ಧಶತಕಗಳನ್ನು ಗಳಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications